ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೆಣ್ಣು........ಪದಗಳೇ ಸಿಗುತ್ತಿಲ್ಲಾ..

'ಅ'ದಿಂದ 'ಆಹಾ'ದವರೆಗೆ ಅಡಿಯಿಂದ ಮುಡಿಯವರೆಗೆ ಚಲುವು ತುಂಬಿ ತುಳುಕಾಡುವುದು ಹೆಣ್ಣಲ್ಲಿ ಮಾತ್ರ. ಹೆಣ್ಣಿನ ಬಗ್ಗೆ ಪುರಾಣಕಾಲದಿಂದ ಇದುವರಿಗಿನ ಕವಿಗಳು ವರ್ಣಿಸಿ,ವರ್ಣಿಸಿ ನಮ್ಮಂತಹ ಸಾಮಾನ್ಯರಿಗೆ ಹೊಗಳಲು ಬಾಕಿ ಏನೂ ಉಳಿಸಿಲ್ಲ.ಹೆಣ್ಣಿನ ನೋಟ,ನಗು,ನಡು,ನಡೆ ಎಲ್ಲಾ ಸುಂದರ..ತೀರಾ ಸಪ್ಪೆಯಾಯಿತು ಅಲ್ಲವಾ? 'ಸುಂದರ' ಪದವೇ ಹೆಣ್ಣಿನ ವರ್ಣನೆಗೆ ಸಪ್ಪೆ.

ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?

ಸಂಪದದ ಒಳಹೊರಗೆ ಕನ್ನಡದ ಬಗ್ಗೆ ಕಾಳಜಿ ಇರುವ ( ಅರಿವಿನ ಜೊತೆಗೆ :-)) ಜನರಲ್ಲಿ ಉಂಟಾಗುವ ವಾದವಿವಾದಗಳು ನನಗೆ ಒಮ್ಮೊಮ್ಮೆ ಅಚ್ಚರಿಯನ್ನು ಕೆಲವೊಮ್ಮೆ ಬೇಜಾರನ್ನು ಉಂಟು ಮಾಡುತ್ತವೆ.ಈ ಗಲಾಟೆ ಲಟಾಪಟಿಗಳು ವ್ಯಕ್ತಿ, ಜಾತಿಗಳನ್ನು ತೆಗೆಳುವದರಲ್ಲೋ ಅಥವಾ ಒಣ ಪಾಂಡಿತ್ಯ ತೋರುವುದರಲ್ಲೋ ಮುಗಿಯುತ್ತದೆ. ಇವುಗಳಲ್ಲಿ ನಾನು ಕಂಡ ಸಾಮಾನ್ಯ ಸಂಗತಿಗಳು ಇಂತಿವೆ.

ಅತ್ಯತಿಷ್ಠದ್ದಶಾನ್ಗುಲ ಅಂದ್ರೆ ಏನು ?

ವೇದಗಳಲ್ಲಿ ಎಲ್ಲ್ಲೋ ( ಎಲ್ಲಿ ಅಂತ ಗೊತ್ತಿಲ್ಲ) ಈ ವಾಕ್ಯ ಬರುತ್ತೆ.

ಅತ್ಯತಿಷ್ಠದ್ದಶಾನ್ಗುಲ ಅಂದ್ರೆ ಏನು ?

ಈ ವಚನ ಬಿಡಿಸ್ತೀರಾ?

ಬಯಲ ರೂಪ ಮಾಡಬಲ್ಲಾತನೆ ಶರಣನು,
ಅ ರೂಪ ಬಯಲ ಮಾಡ ಬಲ್ಲಾತನೇ ಲಿಂಗಾನುಭಾವಿ.
ಬಯಲ ರೂಪ ಮಾಡಲರಿಯದಿದ್ದಡೆ ಎಂತು ಶರಣನೆಂಬೆ
ಆ ರೂಪ ಬಯಲು ಮಾಡಲರಿಯದಿದ್ದಡೆ ಎಂತು ಲಿಂಗಾನುಭಾವಿ ಎಂಬೆ
ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುನ್ಟೆ ಕೂಡಲಸಂಗಮದೇವ !

ಪ್ರಸವ ವೇದನೆ?!

ಈ ಲೇಖನ ಒಂದು ರೀತಿಯ ಸ್ವಗತ! ಈ ಸಂದರ್ಭವನ್ನು ಒಂದು ಕಡೆ "ದಾಖಲಿಸುವ".. ಅದರಿಂದ ಮುಂದೆ ಯಾವಗಲೋಮ್ಮೆ ಈ struggle ನ ನೆನೆಯುವ ಒಂದು ಪ್ರಯತ್ನ.

ಈ ಒಂದು ತಿಂಗಳು ಪೂರ್ತಿ tensions , pressures...ಹೀಗೆ. ಇವತ್ತು ಸಲ್ಪ ಆರಾಮು ಅನ್ನಿಸುತ್ತ ಇದೆ.

ಕಾಲೇ ಇಲ್ಲ!

ಅಣು ಒಪ್ಪಂದದ ಅವಾಂತರದಲ್ಲಿ ಕೇಂದ್ರದ ಯುಪಿಎ ಸರ್ಕಾರ ಘಾಸಿಗೊಂಡಿರುವ ಸಂದರ್ಭದಲ್ಲಿಯೇ ಮುಳುಗುತ್ತಿರುವ ಮನಮೋಹನ ಸಿಂಗ್, `ಕಮ್ಯುನಿಸ್ಟರಿಗೆ ಕಾಲೆಳೆಯಲು ಕಾಲೆ ಸಿಗ್ತಿಲ್ಲ' ಎಂದು ಖುಶಿಯಲ್ಲಿದ್ದಾರಂತೆ.
ಯಾಕೆಂದರೆ, ಮನಮೋಹನ್ ಸಿಂಗ್ ಜೊತೆ ಅವರೂ ಮುಳುಗುತ್ತಿದ್ದಾರಲ್ಲ!

Tiger Vs Leopard

ಹಮ್, ಸರಿಯಾಗಿ ಊಹಿಸಿದ್ದೀರಾ. ನಾನು ಹೇಳುತ್ತಿರುವುದು Mac OSX ಬಗ್ಗೆ. ಆದರೆ ಎಲ್ಲರೂ ಅಂತ ದಾಯದಿ ಜಗಳ, Windows Vs Mac ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದರೆ ಇದೇನಿದು? ನೀವು Apple ಒಳಗೇ 10.4/10.5 ಎಂದು ಗುದ್ದಾಡುತ್ತೀದ್ದಿರಾ, ಎಂದಿರಾ?

ಆಗಸದಲ್ಲೊಬ್ಬ ಹೊಸ ಅತಿಥಿ!

ಆಗಸದಲ್ಲೊಬ್ಬ ಹೊಸ ಅತಿಥಿ ಕಾಣಿಸಿಕೊಂಡಿದ್ದಾನೆ! ಹೋಮ್ಸ್ ಧೂಮಕೇತು ಒಂದೆರಡು ದಿವಸದಲ್ಲಿ ಪ್ರಕಾಶದಲ್ಲಿ ಸುಮಾರು ಹತ್ತುಲಕ್ಷ ಪಟ್ಟು ಹೆಚ್ಚಾಗಿ, ಬರಿಕಣ್ಣಿಗೆ ಸುಲಭವಾಗಿ ಕಾಣುವ ನಕ್ಷತ್ರದಂತಾಗಿದೆ. ಇನ್ನೂ ಮುಂದೆ ಇದರ ಬೆಳವಣಿಗೆ ಹೇಗಾಗಿತ್ತೋ ಕಾದು ನೋಡಬೇಕಾದ ಸಂಗತಿ.

ಇನ್ನೂ ಸದ್ಯಕ್ಕೆ ಬಾಲ ಏನೂ ಕಾಣದಿದ್ದರೂ, ಸುಮಾರು ಇಪ್ಪತ್ತೈದು ವರ್ಷಗಳಿಂದ ಬಂದಿರುವ ಧೂಮಕೇತುಗಳಲ್ಲೆಲ್ಲ ಇದು ಅತೀ ಪ್ರಕಾಶಮಾನವಾದದ್ದು ಅನ್ನುವುದು ಮಹತ್ವದ ಸಂಗತಿ.

ಇದು ಈಗ ಪರ್ಸಿಯಸ್ ತಾರಾಪುಂಜದಲ್ಲಿದೆ. ಆಕಾಶದ ರಾಶಿಗಳ ಪರಿಚಯವಿದ್ದವರಿಗೆ, ಇದು ಒಂದು ಹೊಸ ಹಳದಿ ಬಣ್ಣದ ನಕ್ಷತ್ರದಂತೆ ತೋರುತ್ತದೆ. ಇಲ್ಲದವರಿಗೆ ಇದರಲ್ಲೇಪ್ಪ ಹೆಚ್ಚುಗಾರಿಕೆ ಎನ್ನಿಸಬಹುದು. ಆದರೆ, ಮುಂಬರುವ ದಿನಗಳಲ್ಲಿ ಇದು ಯಾವ ರೀತಿ ಬದಲಾಗಬಹುದು ಎನ್ನುವುದರ ಮೇಲೆ, ಇದು ಜನಮನದಲ್ಲಿ ಉಳಿಯುತ್ತೋ ಇಲ್ಲವೋ ಅನ್ನೋದು ನಿರ್ಧಾರವಾಗುತ್ತೆ.

ಬೆಂಗಳೂರಿನಿಂದ (ಅಥವಾ ಭಾರತದಲ್ಲಿ ಸುಮಾರು ಎಲ್ಲೇ ಆಗಲಿ) ನೋಡುವವರಿಗೆ, ಪರ್ಸಿಯಸ್ ಈಗ ಸಂಜೆ ಸೂರ್ಯ ಮುಳುಗಿ ಎರಡು ಮೂರು ಗಂಟೆಗಳಲ್ಲಿ ಉತ್ತರ-ವಾಯುವ್ಯ ದಿಸೆಯಲ್ಲಿ ಹುಟ್ಟುತ್ತೆ. ನಡು ರಾತ್ರಿಯ ಹೊತ್ತಿಗೆ ಉತ್ತರಾಕಾಶದಲ್ಲಿ, ಧ್ರುವ ನಕ್ಷತ್ರದ ಮೇಲೆ ನೋಡಲು ಅನುಕೂಲವಾದ ಸ್ಥಾನದಲ್ಲಿರುತ್ತೆ. (ಇದು ನನ್ನ ಅಂದಾಜು).

ನೆನ್ನೆ ರಾತ್ರಿ ಚಂದ್ರನ ಅಬ್ಬರದ ಬೆಳಕಿನಲ್ಲೇ ಇದು ಸೊಗಸಾಗಿ ಬರಿಗಣ್ಣಿಗೇ ಕಂಡಿತು. ಹಾಗಾಗಿ ಇನ್ನು ಮುಂದಿನ ದಿನಗಳಲ್ಲಿ ಇದರಿಂದ ಒಳ್ಳೇ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದೇನೆ. ಕಳೆದ ೪೮ ಗಂಟೆಗಳಲ್ಲಾದ ಬದಲಾವಣೆ ಮುಂದುವರೆದರೆ, ಇದು ಬಹಳ ಪ್ರಕಾಶಮಾನ ಧೂಮಕೇತುವಾಗಬಹುದೆಂಬ ಊಹೆ ಇದೆ.

ವಿವೇಕ್ ಶಾನಭಾಗ್ ಸಂದರ್ಶನ

ಇಂಡಿಯನ್ ಫೌಂಡೇಶನ್ ಫರ್ ಆರ್ಟ್ಸ್ ಸಂಸ್ಥೆ ತನ್ನ ತ್ರೈಮಾಸಿಕದ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಿರುವ ನಮ್ಮ ಖ್ಯಾತ ಕತೆಗಾರ, ದೇಶಕಾಲ ಪತ್ರಿಕೆಯ ಸಂಪಾದಕ ವಿವೇಕ್ ಶಾನಭಾಗರ ಸಂದರ್ಶನದ ಕನ್ನಡ ಅನುವಾದ ಇಲ್ಲಿದೆ: ದೇಶಕಾಲದ ಸ್ಥೂಲ ಪರಿಚಯ "ದೇಶಕಾಲಕ್ಕೆ ಮೂರುವರ್ಷ" ಎಂಬ ಲೇಖನದಲ್ಲಿ ಲಭ್ಯವಿದೆ.

ಬರಹಗಾರ ಮತ್ತು ದೇಶಕಾಲದ ಸಂಪಾದಕ ವಿವೇಕ್ ಶಾನಭಾಗ್ ಇಲ್ಲಿ ಕನ್ನಡ ಸಾಹಿತ್ಯಕ್ಕೆ ಸಣ್ಣ ಪತ್ರಿಕೆಗಳ ಕೊಡುಗೆ ಮತ್ತು ತನ್ನ ಪತ್ರಿಕೆ ಹೇಗೆ ತನ್ನದೇ ಆದ ಒಂದು ಸ್ಥಾನ ಕಲ್ಪಿಸಿಕೊಂಡಿದೆ ಎಂಬ ಬಗ್ಗೆ ಮಾತನಾಡಿದ್ದಾರೆ:

ಪ್ರಶ್ನೆ: ಕನ್ನಡದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಪತ್ರಿಕೆಗಳ ಒಂದು ಒಟ್ಟಾರೆ ಚಿತ್ರಣವನ್ನು ನಮ್ಮ ಓದುಗರಿಗೆ ನೀಡಬಹುದೆ?

ಸಾಹಿತ್ಯಿಕ ಪತ್ರಿಕೆಗಳ ಒಂದು ದೊಡ್ಡ ಪರಂಪರೆಯೇ ಕನ್ನಡಕ್ಕಿದೆ. ಮಾಸ್ತಿ, ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಯು.ಆರ್.ಅನಂತಮೂರ್ತಿ ಮತ್ತು ಇನ್ನೂ ಹಲವು ಪ್ರಮುಖ ಬರಹಗಾರರು ಸಾಹಿತ್ಯಿಕ ಪತ್ರಿಕೆಗಳನ್ನು ಸಂಪಾದಿಸಿ ಪ್ರಕಟಿಸಿದ್ದರು. ಹೆಚ್ಚಿನವು ದೀರ್ಘಕಾಲ ಉಳಿಯಲಿಲ್ಲ ಎಂಬುದು ನಿಜವಾದರೂ ಹೊಸ ಬರಹಗಾರರನ್ನು ಉತ್ತೇಜಿಸುವ ಮೂಲ ಉದ್ದೇಶವನ್ನು ಅವು ಈಡೇರಿಸಿವೆ. ನಮ್ಮ ಹೆಚ್ಚಿನ ಹೆಚ್ಚಿನ ಸಾಹಿತ್ಯಿಕ ಬೆಳವಣಿಗೆಗಳು, ಬದಲಾವಣೆಗಳು ಈ ವಲಯದಿಂದ ಸ್ಪೂರ್ತಿ ಪಡೆದಿವೆ.

ಸುವಿಚಾರ

ಮರದ ಕೊಂಬೆ ಮೇಲೆ ಕೂತ ಪಕ್ಷಿ ಅಲುಗಾಡುವ ಕೊಂಬೆ ಕಂಡು ಹೆದರುವುದಿಲ್ಲ. ಯಾಕೆಂದರೆ, ಪಕ್ಷಿ ನಂಬಿರುವುದು ಕೊಂಬೆಯನ್ನಲ್ಲ; ತನ್ನ ರೆಕ್ಕೆಗಳನ್ನು.