ಸಂವಾದ-----------(?) ತಾಯಿಯೊಂದಿಗೆ

ಸಂವಾದ-----------(?) ತಾಯಿಯೊಂದಿಗೆ

ನಾನು ಅಲ್ಲಿಂದ ಹೊದಡುವುದಕ್ಕೂ ಆ ಹೆಂಗಸು ಹೆಲ್ಪ್ ಮಿ ಅಂತ ಬರುವುದಕ್ಕೂ ಒಂದೇ ಸಮಯವಯಿತು
ವಿಚಿತ್ರವಾದ ಹೆಂಗಸು
ಪ್ಯಾಂಟ್ ಮೆಲೆ ಹರಿದಿರುವ ಸೀರೆ ಬಾಬ್ ಮಾಡಿ ಕೆದರಿರುವ ಕೂದಲು ಸ್ಟಲ್‌ಗೆಂದು ಧರಿಸಿದ್ದ ಕನ್ನಡಕದಲ್ಲಿ ಗಾಜೇ ಇಲ್ಲ ಕೈನಲ್ಲೊಂದು ಮೊಬೈಲ್. ಒಂದು ಕೈನಲ್ಲಿ ತುಕ್ಕು ಹಿಡಿದಿರುವ ತ್ರಿಶೂಲ. ಹಣೆಯಲ್ಲಿ ಅಳಿಸುತ್ತಿರುವ ಕುಂಕುಮ .
"ಯಾರಮ್ಮ ನೀನು ಯಾಕೆ ಹೀಗೆ ಓಡಿಬರ್ತೀದೀಯ."
"ಅಯ್ಯೊ ಅವರು ನಾನು ಸಿಕ್ಕರೆ ಸಾಕು ನನ್ನ ತಲೆ ಅವರದು ಕಾಲು ಇವರದು ಕಿತ್ತುಕೊಂಡು ತಿಂತಾರೆ "
"ಯಾರಮ್ಮ ಅದು......... ರಾಕ್ಷಸರಾ?"

"ಅಲ್ಲ ಅವರು ನನ್ನ ಅಕ್ಕ ತಂಗಿಯರ ಮಕ್ಕಳು."

"ಅಕ್ಕ ತಂಗಿಯರ ಮಕ್ಕಳ್ಯಾಕೆ ಹೀಗೆ ಮಾಡ್ತಾರೆ?"

ಆಕೆ ಬೆಂಚಿನ ಮೇಲೆ ಕುಳಿತುಕೊಂಡಳು
"ಒಂದು ಕಾಲಕ್ಕೆ ನಾವೆಲ್ಲಾ ಅಕ್ಕ ತಂಗಿಯರು ಸುಖವಾಗಿದ್ದೆವು. ಒಬ್ಬರನೊಬ್ಬರನ್ನ ಹೊಂದಿಕೊಂಡು ಕಷ್ಟಾಕ್ಕೆ ಆಗಿ. ನಮ್ಮ ಮಕ್ಕಳು ಈಗಿನಷ್ಟು ಇರಲಿಲ್ಲ . ಈಗಿನಂತೇನೂ ಇರಲಿಲ್ಲ
ಯಾವಾಗ ನಮ್ಮನ್ನೆಲ್ಲಾ ಬೇರೆ ಮಾಡಿ ಇವಳಿಗಷ್ಟು ಅವಳಿಗಷ್ಟು ಅಂತ ಆಸ್ತಿ ಮಾಡಿದರೋ ಅವಾಗ ಎಲ್ಲರಿಗೂ ಹೊಟ್ಟೆ ಉರಿ ಬಂತು."

"ಅಮೇಲೆ ನಿನ್ನ ಥರಾನೆ ಉಳಿದವರೂ ಅಗಿದ್ದಾರಾ?"

"ನಾನು ಸ್ವಭಾವದಿಂದಾನೆ ಒಳ್ಳೆಯವಳು ಸೌಮ್ಯ ಮನೋಭಾವದವಳು. ಹಾಗಾಗಿ ನನಗೆ ಏನು ಕೊಟ್ಟಿದಾರೋ ಅದನ್ನೆ ಇಟ್ಟುಕೊಂಡ್ ಸುಮ್ಮನಿದ್ದೆ. ನನ್ನ ಮಕ್ಕಳೂ ನನ್ನ ಹಾಗೆ ಯಾರ ತಂಟೆಗೂ ಹೋಗದವರು . ಅದನ್ನೆ ಈಗ ದೌರ್ಬಲ್ಯ ಅಂದುಕೊಂಡು ಆ ಜನ ನನ್ನ ಇಷೀಷ್ಟೇ ತಿಂತಿದಾರೆ . ನನ್ನ ಅಕ್ಕ ತಂಗಿಯರು ಘಟಾಣಿಗಳು ಅವರ ಮಕ್ಕಳು ಹಾಗೆ" .

"ನನ್ನ ಹೊಟ್ಟೇಲಿ ಹುಟ್ಟಿದ ಮಗಳೆ ನನ್ನ ತಂಗಿಯ ಮಗಳು ಅನ್ನಿಸಿಕೊಂಡು ನನ್ನ ಜೀವಜಲಾನೆ ಕೀಳ್ತಿದಾಳೆ. ಅವಳ ಅಣ್ಣಾ ತಮ್ಮಂದಿರಿಗೆ ಅಂದರೆ ನನ್ನಬೇರೆ ಮಕ್ಕಳಿಗೂ ಅವಳು ಅನ್ಯಾಯ ಮಾಡ್ತಾ ಇದಾಳೆ."

ಸರಿ ಇದೇನು ನಿನ್ನ ವೇಷ
"ನನ್ನ ಮಕ್ಕಳು ಅಂದನಲ್ಲ ಅವರೆಲ್ಲ ಈಗ ಊರಿಂದೂರಿಗೆ ಹೋಗಿ ಅಲ್ಲೇ ಹ್ಯಾಗೆ ಹ್ಯಾಗೆ ಇರ್ತಾರೊ ಹಾಗೆ ಇರ್ಬೇಕು ಇಲ್ಲ ಅಂದರೆ ನಾನು ಉದ್ದಾರ ಆಗಲ್ಲ . ಈ ವೇಷ ಹಾಕಿದಾರೆ"
"ಊರಿಂದೂರಿಗಾ?"

" ಹೌದು ಅವರೆಲ್ಲಾ ವಿದೇಶಕ್ಕೆ ಹೋಗಿ ಅವಾಗಿವಾಗ ಅಷ್ಟೊ ಇಷ್ಟು ದುಡ್ಡು ಕೊಡ್ಥಾರೆ ಸುಮ್ಮನೆ ಅವಾಗವಾಗ್ ಅಮ್ಮ ಹ್ಯಾಗಿದ್ದೀಯ ನಮ್ಮ ಅಮ್ಮನೇ ದೇವರು ಅಂತ ಕೂಗ್ತಿರಾರೆ . ಅಷ್ಟೆ.
ನನಗೂ ನನ್ನ ಮಕ್ಕಳು ಇಲ್ಲೇ ಇದ್ದು ಉದ್ದ್ದಾರವಾಗಲಿ ಅಂತ ಆಸೆ. ಆದರೆ ಆಗಲ್ಲ ಅಂತ ಅವರು ಹೇಳ್ತಾರೆ"

" ಸರಿ ಇಲ್ಲೇ ಇರುವ ಮಕ್ಕಳು ಏನ್ಮಾಡುತ್ತಾರೆ?"
"ಅವರಾ ವರುಷಕ್ಕೆ ಒಂದು ಸಲ ನನ್ನ ಎತ್ತಿ ಕೊಂಡಾಡುತ್ತಾರೆ . ಆಮೆಲೆ ಯಾರು ಕೇರೇ ಮಾಡಲ್ಲ"

" ಹೋಗಲಿ ಬಿಡು ಇಷ್ಟೂ ಚನ್ನಾಗಿ ಕನ್ನಡ ಮಾತಾಡ್ತೀಯ ಮತ್ತೆ ಯಾಕೆ ಹೆಲ್ಪ್ ಮಿ ಅಂತ ಇಂಗ್ಲೀಷ ನಲ್ಲಿ ಕಿರುಚಿಕೊಂಡು ಬಂದೆ"?
" ಅದಾ. ಇಲ್ಲ ಅಂದರೆ ನನ್ನ ಅಕ್ಕ ತಂಗಿಯರ ಮಕ್ಕಳು ಇರಲಿ ನನ್ನ ಮಕ್ಕಳೇ ತಮಾಷೆ ಮಾಡ್ತಾರೆ."

"ಅಯ್ಯೊ ಪಾಪ ಅನ್ನಿಸುತ್ತ್ಜೆ ನಿನ್ನ ನೋಡಿ ಅಂದ ಹಾಗೆ ನೀನು ಯಾಕೆ ಈ ಗಾಜಿಲ್ಲದ ಕನ್ನಡಕ ಹಾಕಿಕೊಂಡಿದ್ದೀಯ?"
"ಕನ್ನಡಕ ದಲ್ಲಿ ಕನ್ನಡ ಇಲ್ಲ ಅಂತ ತೋರಿಸೋಕೆ"
" ಓ ಚೆನ್ನಾಗಿ ಮಾತಾಡ್ತೀಯ ನಿನ್ನ ಹೆಸರೇನಮ್ಮ?"

ನನ್ನ ಹೆಸರ್ರು ಕರ್ನಾಟಕ ಅಂತ .

"ಆಂ"

ಬೆಚ್ಹಿ ಮೆಲ್ಲನೆ ಕಣ್ಣು ಬಿಟ್ಟೆ ಇಲ್ಲಿಈವರೆಗೂ ನೋಡಿದ್ದು ಕನಸು ಅಂತ ತಿಳಿಯಿತು.

Rating
No votes yet