ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಟ್ಟ ಕಡೆಯ ವ್ಯಕ್ತಿ

ಪತ್ರಕರ್ತ: ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಹಿಂದೆ ಕಾಂಗ್ರೆಸ್ ಪಕ್ಷವಿರುತ್ತದೆ ಎಂಬುದು ನಿಮ್ಮ ಪಕ್ಷದ ಸ್ಲೋಗನ್. ಆದರೆ ನಿಮ್ಮ ಪಕ್ಷ ರಾಹುಲ್ ಗಾಂಧಿಯ ಹಿಂದೆ ನಿಂತಿದೆಯಲ್ಲ?

ಕಾಂಗ್ರೆಸ್ಸಿಗ: ಸರಿಯಾಗಿಯೆ ಇದೆಯಲ್ಲ.

ಪತ್ರಕರ್ತ: ಹೇಗೆ?

ಕಾಂಗ್ರೆಸ್ಸಿಗ: ನೆಹರೂ ಕುಟುಂಬದ ಕಟ್ಟ ಕಡೆಯ ವ್ಯಕ್ತಿ ರಾಹುಲ್ ಗಾಂಧಿ. ಅವರ ಹಿಂದೆ ಪಕ್ಷವಿರದೆ ಇನ್ನೇನಿರಬೇಕು?

ಕನ್ನಡ ನಾಡು, ನುಡಿ , ಜನ, ಸಂಸ್ಕೃತಿ- ಪರಭಾಷೀಯರು ಏಕೆ ಗೌರವಿಸಬೇಕು?

-ನವರತ್ನ ಸುಧೀರ್

ಕನ್ನಡಿಗರೂ ಅಂದಮೇಲೆ ಕನ್ನಡ ನಾಡು, ನುಡಿ, ಜನಗಳ ಬಗ್ಗೆ ಹೆಮ್ಮೆ, ಅಭಿಮಾನ, ಗೌರವ ಇವೆಲ್ಲವೂ ಇರಲೇಬೇಕು, ನಿಜ. ಆದರೆ ಇದನ್ನು ಯಾವ ರೀತಿ ಪ್ರದರ್ಶಿಸ ಬೇಕು ಅನ್ನೋ ಬಗ್ಗೆ ಇನ್ನೂ ಒಮ್ಮತ ಇದ್ದಂತಿಲ್ಲ.

ಬೇರೆಯವರು ನಮ್ಮ ನಾಡು ನುಡಿ ಸಂಸ್ಕೃತಿಯನ್ನು ಅಷ್ಟಾಗಿ ಗೌರವಿಸುತ್ತಿಲ್ಲ, ನಮ್ಮ ನಾಡಿನಲ್ಲಿ ನಾವೇ ಹೊರಗಿನವರಂತಾಗಿದ್ದೇವೆ ಅನ್ನೋ ದುಃಖ ನಮ್ಮಲ್ಲನೇಕರಿಗಿದೆ. ನಮ್ಮನ್ನು ಅನಾಗರೀಕರು ಅಸಂಸ್ಕೃತರೂ ಅಂತ ಅಂದುಕೊಂಡರೂ ಪರವಾಗಿಲ್ಲ ಪರಭಾಷೀಯರಿಗೆ ಕಡ್ಡಾಯವಾಗಿ ಕನ್ನಡ ಕಲಿಸಬೇಕು ಅಂತ ಹಲವರು. ಎಲ್ಲಾ ನಾಮಫಲಕಗಳೂ ಕನ್ನಡದಲ್ಲಿರಬೇಕು ಅಂತ ಹಲವರು. ಕನ್ನಡದ ಕವಿತೆಗಳಿರುವ ಟೀ ಶರ್ಟ್ ಹಾಕಿಕೊಂಡು ನಿಮ್ಮ ಕನ್ನಡ ಪ್ರೇಮ ಮೆರೆಯಿರಿ ಅಂತ ಇತರರು. ನಮ್ಮ ನಾಡಿನಲ್ಲೇ ನಮ್ಮ ನಾಡಿನ ನೆಲ, ಜಲ, ಗಾಳಿ, ಸವಲತ್ತುಗಳನ್ನು ಬಳಸಿಕೊಂಡು ಹೊರಗಿನಿಂದ ಬಂದು ವಲಸೆಯಾದ ಪರಭಾಷೀಯರು ನಮ್ಮ ಭಾಷೆ ಕಲಿಯದೆ ಅಗೌರವ ಸೂಚಿಸುತ್ತಿದ್ದಾರೆ ಅಂತ ಬೇರೆ ಕನ್ನಡ ಪ್ರಾಧೀಕಾರದ ಅಧ್ಯಕ್ಷ ಶ್ರೀ ಸಿದ್ದಲಿಂಗಯ್ಯನವರು ಇತ್ತೀಚೆಗೆ ಹೇಳಿಕೆಯೊಂದನ್ನಿತ್ತಿದ್ದಾರೆ. ನಮಗೆ ಬೇರೆಯವರು ಕನ್ನಡ ಕಲಿಯುವುದು ಮುಖ್ಯವೋ ಅಥವಾ ಅವರು ನಮ್ಮ ನಾಡು , ಜನ, ಭಾಷೆ ಮತ್ತು ಸಂಸ್ಕೃತಿಯನ್ನು ಗೌರವದಿಂದ ಕಾಣಬೇಕು ಅನ್ನುವುದು ಜಾಸ್ತಿ ಮುಖ್ಯವೋ ನಾವು ಮೊದಲು ನಿರ್ಧರಿಸಬೇಕು.

ಮೊದಲು ಕನ್ನಡಿಗರಿಗೆ ಕನ್ನಡ ಕಲಿಸಿ

೧. ವಿದ್ಯಾವಂತ ಕನ್ನಡಿಗರಾದ ನಮಗೆ ಸರಳವಾಗಿ ನಾಲ್ಕು ವಾಕ್ಯ ತಪ್ಪಿಲ್ಲದೆ ಬರೆಯಲು ಬರುವದಿಲ್ಲ ಎನ್ನುವದು ನಾಚಿಕೆಗೇಡಿನ ವಿಚಾರ .
೨. ಮೊದಲು ಕನ್ನಡಿಗರಿಗೆ ಕನ್ನಡ ಕಲಿಸಿ .
೩. ಕನ್ನಡಕ್ಕೆ ಸಾವಿಲ್ಲ . ಕಡೇ ಪಕ್ಷ ಜಗತ್ತಿನಲ್ಲಿ ಇಂಗ್ಲೀಷ್ ಇರುವವರೆಗೆ ಕನ್ನಡ ಭಾಷೆ ಇದ್ದೇ ಇರುತ್ತದೆ . ಕನ್ನಡಿಗರಿಗೆ ಭಯ ಬೇಡ.

ಗಟ್ಸಿ ಗಿಬ್ಬನ್- ಕನ್ನಡ ಬಳಕೆ

ಗಟ್ಸಿ ಗಿಬ್ಬನ್ ಇದೀಗ ಬಿಡುಗಡೆಯಾಗಿದೆ.
ಅದರಲ್ಲಿ ನಾನು ಕನ್ನಡ ಬಳಸೋದನ್ನ ಸುರು ಮಾಡಿದ್ದೀನಿ. ಇಲ್ಲಿವರೆಗೂ ಆಗಿರೋ ಬೆಳೆವಣಿಗೆ.

ದೇವೇ....ಗೌಡ ಯಾಕೆ?

ಗಣೇಶ ಎಂದಾಗ ಗಣೇಶ ರಾವ್/ಪೈ/ಶೆಟ್ಟಿ/ಪ್ರಭು/ಪೂಜಾರಿ ಯಾವುದೂ ಆಗಿರಬಹುದು.ಅದೇ ರಾಮೇ,ತಮ್ಮೇ,ನರಸೇ,ಕಾಳೇ,ರಾಮಲಿಂಗೇ,ದೇವೇ ಆದಮೇಲೆ ಗೌಡನೇ ಯಾಕೆ ಬರುವುದು?(ಅಪರೂಪಕ್ಕೆಂಬಂತೆ ತಿಪ್ಪೇಸ್ವಾಮಿ ಹೆಸರಿದೆ).ಹೆಚ್ಚಿನ ಗೌಡರುಗಳು ರಾಮ,ತಮ್ಮ,ದೇವ ಹೆಸರಿಗೆ’ಏ’ಕಾರ ಸೇರಿಸಿಯೇ ಹೆಸರಿಡುವುದು ಏಕೆ?
ಅಥವಾ, ಗಣ+ಈಶ=ಗಣೇಶ ಎಂಬಂತೆ, ದೇವ+ಈ ಗೌಡ=ದೇವೇಗೌಡ ಸರಿಯೋ?

ನಾಟಕ

ಗಿರಿಜಾ ಕೆ ಸಪ್ನೆ

ಬಿ. ಸುರೇಶರ ಕನ್ನಡ ನಾಟಕ ‘ಗಿರಿಜಾ ಕಲ್ಯಾಣ’ದ ಹಿಂದಿ ರೂಪಾಂತರದ ಪ್ರದರ್ಶನ ಮುಂಬಯಿಯಲ್ಲಿ...

ಕನ್ನಡಕ್ಕೆ ಮಸಿ ಬಳಿಯ ಬೇಡಿ...

ಇನ್ನೇನ್ ನವಂಬರ್ ಒಂದು ಬಂತು...

ಪ್ರತೀ ವರ್ಷ ಹಲವು 'ಕನ್ನಡ ಪರ' ಸಂಘಟನೆಗಳು ಇಂಗ್ಲೀಷ್ ಬೋರ್ಡ್-ಗಳಿಗೆ ಮಸಿ ಬಳಿಯೋ ಕಾರ್ಯ ಇಟ್ಕೋತಾರೆ...

ನನಗೆ ಅನ್ನಿಸಿದ್ದೇನೆಂದರೆ, ಹೇಗಿದ್ರೂ ಬ್ರಶ್ ಇದೆ ಪೈಂಟ್ ಇದೆ...ಹಾಗೆ ಕನ್ನಡ, ಇಂಗ್ಲೀಷ್ ನಲ್ಲಿ ಅದೇ ಬೋರ್ಡ್-ಗಳನ್ನ ತಿದ್ದಿ ಬರೆದರೆ ಓದುವವರಿಗೂ ಇದನ್ನ ನೋಡಿ ಖುಶಿಯಾಗುತ್ತೆ...
ವಲಸೆ ಬಂದವರೂ ಇದನ್ನ ಸ್ವಾಗತಿಸ್ತಾರೆ

"ಜನ್ಮಾದ್ಯಸ್ಯ ಯಥಾಃ’ ಈ ವಾಕ್ಯದ ಅರ್ಥವೇನು?

ಈ ವಾಕ್ಯವನ್ನು ಬಹಳಷ್ಟು ಪ್ರವಚನಕಾರರ ಬಾಯಲ್ಲಿ ಕೇಳಿದ್ದೇನೆ. ಈ ವಾಕ್ಯದ ಅರ್ಥವೇನು ತಿಳಿಸುವಿರಾ?