ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗೆಳತಿ

ಗೆಳತಿ

ಗೆಳತಿ ನಿನ್ನದೇ ಮುಖ..

ಮರೆತೇ ಹೊಗಿತ್ತು

ಅ೦ತರಾಳದಲಿ ಸೆರಿಕೊ೦ಡು

ಅಲೆ ಎಬ್ಬಿಸದೆ ಮಲಗಿತ್ತು.

ತುಟಿಯ೦ಚಿನಲಿ

ಅರಳಿದ ಆ ನಗೆ

ಸಹಜವಾಗಿಯೇ ಇತ್ತು

ನಿನ್ನದೇ ಆದ ಆ ಮುಖವನು

ಮರೆ ಮಾಚುವ ತವಕದಲಿತ್ತು

ಬದುಕು ಸಹಜವಾದುದು

ಅದಕೇಕೆ ಬಣ್ಣ ಬಳಿಯಬೇಕು

ಇದ್ದದೆಲ್ಲವನು ಇದ್ದ ಹಾಗೆ

ಹೇಳಲಾಗದ ಯಾತನೆ ಯಾಕೆ ಬೇಕು?

ಹೌದು!

ನಾ ಸೊತಾಗಲೆಲ್ಲಾ

ನಾ ಸೊತಾಗಲೆಲ್ಲಾ, ನಾ ಎಡವಿದಾಗಲೆಲ್ಲಾ,

ಬರುವನೊಬ್ಬನಪರಿಚಿತ ಮುನ್ನಡೆಸಲೆನ್ನ

ನಾ ಬಿದ್ದಾಗಲೆಲ್ಲಾ, ನಾ ಖಿನ್ನನಾದಾಗಲೆಲ್ಲಾ

ಬರುವನೊಬ್ಬನಪರಿಚಿತ ಮುನ್ನಡೆಸಲೆನ್ನ.

ಜೊತೆಯಾಗಿ ಬಾಳುವನು, ಹೊರಾಡುವನು,

ಬಾಳೆ೦ಬ ಕದನದಲ್ಲಿ, ಗೆಲುವ ತ೦ದಿಡುವವನು,

ತನ್ನೆಲ್ಲಾ ಜಾಣತನದಿ೦ದ, ತನ್ನಮಿತ ಶಕ್ತಿಯಿ೦ದ,

ಅವನೇ ಅವನು ನನ್ನೊಳಗೆ ನೆಲೆಸುವ೦ತವನು

ನಾ ನಡೆದ ಹಾದಿಯಲಿ - ಮಗುವಿಗೊಂದು ಸಂದೇಶ

ನಾ ನಡೆದ ಹಾದಿಯಲಿ …..

ನಾ ನಡೆದ ಹಾದಿಯಲಿ
ನೀ ನಡೆಯಬೇಕೆಂದು
ಕಟ್ಟಳೆಯನು ನಿನಗೆ
ವಿಧಿಸುವುದು ಇಲ್ಲ ಮಗು

ಇದು ನಿನ್ನ ಹಾಡು
ಇದು ನಿನ್ನ ಬದುಕು
ನಿನ್ನ ಬದುಕಿನ ಅರ್ಥವನು
ನೀನೆ ಹುಡುಕು

ನಾ ತೊರಬಹುದು
ಹಾದಿಯನ್ನು ನಿನಗೆ
ನಾ ನಡೆ ಯಲಾದೀತೇ
ನಿನ್ನೊಡನೆ ಕಡೆಯ ವರೆಗೆ

ನನ್ನ ದಾರಿ ನಿನ್ನ ದಾರಿ
ಒಂದೆಯಾಗಬೇಕಿಲ್ಲ
ನನ್ನ ಗುರಿ ನಿನ್ನ ಗುರಿ
ಒಂದೇ ಇರಲು ಬೇಕಿಲ್ಲ

ನಾನು ನಾನಾಗಬೇಕು

ನಾನು ನಾನಾಗಬೇಕು,

ನನ್ನದಲ್ಲದ ಹಾಡ ನಾನು ಹಾಡಲಿ ಹೇಗೆ,
ನನ್ನದಲ್ಲದ ನುಡಿಯ ನಾನು ನುಡಿಯಲಿ ಹೇಗೆ
ನನ್ನದಲ್ಲದ ಕನಸ ನಾನು ಕಾಣಲಿ ಹೇಗೆ
ನಾನು ನಾನಾಗಬೇಕು, ಅವರಿವರಂತಾಗದೆ.

ನನ್ನದಲ್ಲದ ಒಲವ ನಾನು ಬಯಸಲಿ ಹೇಗೆ
ನನ್ನದಲ್ಲದ ಮುಖವ ನಾ ಹೇಗೆ ತೊರಲಿ
ನನ್ನಲಿಲ್ಲದ ಚೆಲುವ, ನಾನು ತೋರಲಿ ಏಕೆ?
ನಾನು ನಾನಾಗಬೇಕು, ಅವರಿವರಂತಾಗದೆ.

ಆಟೋ ರಿಕ್ಷಾ ಮೇಲೆ ಕಂಡದ್ದು .....

ಈ ಶೀರ್ಷಿಕೆಗಳನ್ನು ಆಟೋ ರಿಕ್ಷಾಗಳ ಮೇಲೆ ನೋಡಿದ್ದು .....

೧: ಡಜನ್ ಮಕ್ಕಳು .... ಅರ್ಧ ತಿಕ್ಕಲು ... ಅರ್ಧ ಪುಕ್ಕಲು
೨: ಜೂಟ್ .....
೩: ಆಕಸ್ಮಾತಾಗಿ ಸಿಕ್ಕಳು! ...ನೋಡಿ ನಕ್ಕಳು!! ...ಈಗ ಎರಡು ಮಕ್ಕಳು!!!
೪: ಹೋಡೋಗೋಣ ಬಾರೇ! .......
೫: ತಾಯಿಯ ಪ್ರೀತಿ .. ತಂದೆಯ ಆಶಿರ್ವಾದ ..
೬: ಸಕ್ಕತ್ ಹಾಟ್ ಮಗ!
೭: ಓ ಗೆಳೆಯ .... ಹುಡುಗಿ ಬಣ್ಣದ ಚಿಟ್ಟೇ ಕಣೊ ....

ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?

ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? ......

ಏನಿದು ಅಂಥ ಆಶ್ಚರ್‍ಯಾನಾ?

ಹೊರ ರಾಜ್ಯದವರು ನಮ್ಮ ರಾಜ್ಯಕ್ಕೆ ಬಂದು, ನಮ್ಮ ಬೆಂಗಳೂರಿನಲ್ಲಿ ನೆಲೆಸಿ ಕನ್ನಡಕ್ಕೆ ಬೆಲೆ ಕೊಡೋದಿಲ್ಲ ಕಣ್ರೀ ... ಅದಕ್ಕೆ ಬೇಜಾರು .....

ಉದಾಹರಣೆಗೆ ....
೧: ಇಲ್ಲಿನ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡು, ನಮ್ಮ ಊರನ್ನು ತೆಗಳೋದು .....
೨: ಕನ್ನಡ ಚಲನಚಿತ್ರಗಳ ಬಗ್ಗೆ ಲಘುವಾಗಿ ಮಾತನಾಡೋದು .....

ಕಟ್ಟ ಕೊನೆಗೆ...

     ಒಂಟಿಯಾಗಿ ಕುಳಿತು ಶೂನ್ಯವನ್ನೇ ದಿಟ್ಟಿಸುತ್ತಾ.. ದಿಟ್ಟಿಸುತ್ತಾ.. ಥಟ್ಟನೆ ಎಲ್ಲವೂ ನಿಂತಂತಾಗಿ, ಸುತ್ತೆಲ್ಲವೂ ಘನೀರ್ಭವಿಸಿ, ಸ್ಥೂಲದಿಂದ ಸೂಕ್ಷ್ಮದತ್ತ ತಳ್ಳಿದಂತಾಗಿ..

ಜಗತ್ತಿನ ಅತಿ ಸಣ್ಣ ಕಥೆ ಮತ್ತು ಅದರ ಬಾಲ೦ಗೋಚಿ!

ಜಗತ್ತಿನ ಅತಿ ಸಣ್ಣ ಥ್ರಿಲ್ಲರ್ ಕಥೆಯೊ೦ದಿದೆ. ಅದನ್ನು ಹೀಗೆ ಊದಿಸಬಹುದು:

ಜಗತ್ತಿನ ಕೊನೆಯ ಮನುಷ್ಯ (man) ತನ್ನ ಮನೆಯೊಳಗಿದ್ದಾಗ ಯಾರೋ ಹೊರಗಿನಿ೦ದ ಬಾಗಿಲು ತಟ್ಟಿದರ೦ತೆ!

--ಹೊರಬ೦ದು ನೋಡಿದಾಗ ಅಲ್ಲಿ ಜಗತ್ತಿನ ಕೊನೆಯ ಮನುಷ್ಯಳು (woman) ನಗುತ್ತ ನಿ೦ತಿದ್ದಳ೦ತೆ. ಜಗತ್ತಿನ ಕೊನೆಯ ಹಾಗೂ ಅದರ ನ೦ತರದ ಜಗತ್ತಿನ ಮೊದಲ ಮಾನವಜೋಡಿಯ ಕಥೆಯಿದು.

ಭಾರತೀಯ ಭೂಮಿ ಕಾನೂನಿನ ಮಾಹಿತಿ

ಕಾನೂನು ಮಾಹಿತಿ ಜನಸಾಮಾನ್ಯರಿಗೆ ನೀಡುವ ಆಸೆಯಿಂದ, ಈ ಕೆಳಕಂಡ ಬ್ಲಾಗ್ ತೆರೆದಿರುತೇನೆ, ಇದು ಭೂಮಿ ಕಾನೂನಿಗೆ ಸಂಬಂದಿಸಿದ್ದು ವಕೀಲರು, ಜ್ನಾನಿಗಳು ಈ ಬಗ್ಗೆ ವಿಮರ್ಶಿಸಿ ಸಲಹೆ ನೀಡಲು ಕೋರುತ್ತೇನೆ.
ಇಂತಿ ನಿಮ್ಮವ
ಎನ್.ಶ್ರೀಧರಬಾಬು
ವಕೀಲರು
ತುಮಕೂರು
legaldocumentations@yahoo.co.in
91-9880339764
http://www.sridharababu.blogspot.com
http://www.karnatakalandlaws.blogspot.com
http://www.sbn-caselaw.blogspot.com
http://www.sbn-deeds.blogspot.com
http://www.sbn-kannada.blogspot.com