ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?

ಭಾರತದಲ್ಲೂ ವಿದ್ಯುತ್ ಸುಭಿಕ್ಷ ಉಂಟಾಗಿ ಕಲಾಂ ಅವರ ಕ್ರಿ.ಶ.2020ರ ಕನಸು ನನಸಾದೀತು. ಅಂದರೆ ಭಾರತ ಜಗತ್ತಿನ ಮೂರು ಬಲಿಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಒಂದು ಸ್ಥಾನ (ಮನಸ್ಸು ಮಾಡಿದರೆ ಒಂದನೆಯ ಸ್ಥಾನ) ವನ್ನು ಖಂಡಿತವಾಗಿಯೂ ಪಡೆಯಬಹುದು. ಎನ್ನುತಾರೆ ಸುಧೀಂದ್ರ ಹಾಲ್ದೊಡ್ಡೇರಿ--ನೆಟ್‍ನೋಟ ---ವಿಜಯಕರ್ನಾಟಕದಲ್ಲಿ

ಇದು ಸರೀನಾ ? (ಇದು ಬರೊಬ್ಬsರ ಏನು?) (ಚಿಂತೆ-ಚಿಂತನ)

ನಾನು ಈಗ ಮಾಡ್ತಾ ಇರೋದು ಸರೀನ ?
ನಾನು ಈಗ ಮಾತಾಡ್ತಾ ಇರೋದು ಸರೀನ ?
ನಾನು ಈಗ ಸುಮ್ನೆ ಇರೋದು ಸರೀನ ?

ನಾ ಈಗ ನೋಡ್ತಾ ಇರೋದು ಬರೊಬ್ಬರ ಏನು?
ನಾ ಈಗ ಓದ್ತಾ ಇರೋದು ಬರೊಬ್ಬರ ಏನು ?
ನಾ ಈಗ ಕೇಳ್ತಾ ಇರೋದು ಬರೊಬ್ಬರ ಏನು ?
ನಾ ಈಗ ಬರಿಲಿಕ್ಕತ್ತಿರೋದು ಬರೊಬ್ಬರ ಏನು ?

ಮತ್ತS ಸಿಟ್ಟಿಗೇಳ್ಬ್ಯಾಡ್ರಿ ....
ನೀವು ಇದನ್ನೆಲ್ಲಾ ಓದ್ತಾ ಇರೋದು ?
:)

ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ

ಮಹಾಭಾರತ ಯುದ್ಧದ ಕೊನೆಗೆ ದುರ್ಯೋಧನನು ಭೀಮನಿಂದ ತೊಡೆಯನ್ನು ಮುರಿಸಿಕೊಂಡು ಸಾಯುತ್ತ ಬಿದ್ದಿದ್ದಾನೆ . ಆಗ ಅಲ್ಲಿಗೆ ಅವನ ಚಿಕ್ಕ ಮಗ ಬರುತ್ತಾನೆ. ಎಳೆಯ ವಯಸ್ಸಿನ ಆ ಮಗು ಅಭ್ಯಾಸದಂತೆ ಅವನ ತೊಡೆಯ ಮೇಲೆ ಕೂತುಕೊಳ್ಳಲು ಹೋಗುವದು . ಆಗ ದುರ್ಯೋಧನನು ಅವನಿಗೆ ’ ಈ ಜಾಗ ಇನ್ನು ಮುಂದೆ ನಿನಗೆ ಇಲ್ಲದಂತಾಗುವದು ’ ಎನ್ನುತ್ತಾನೆ .

ಹೂವೆ ನಿನ್ನ ನಗುವ ನೋಡೆ...

ಹೂವೆ ನಿನ್ನ ನಗುವ ನೋಡೆ ಅನಿಸಿತು
ನಮ್ಮ ನಗುವಿನಲಿ ಜೀವ ಇಲ್ಲವೆಂದು

ಹಕ್ಕಿಯೆ ನಿನ್ನ ದನಿ ಕೀಳಿ ಅನಿಸಿತು
ನಮ್ಮ ಮಾತಲಿ ಸಿಹಿ ಇಲ್ಲವೆಂದು

ಮಗುವೆ ನಿನ್ನ ತೊದಲ ಕೇಳಿ ಅನಿಸಿತು
ನಮ್ಮ ನುಡಿಯಲಿ ಸತ್ಯ ಇಲ್ಲವೆಂದು

ನೇಸರವೆ ನಿನ್ನ ಮಡಿಲಲ್ಲಿ ಅನಿಸಿತು
ನಮ್ಮ ಮನದಲಿ ಸ್ವಾರ್ಥ ತುಂಬಿದೆಯಂದು

ಜೀವನವೆ ನಿನ್ನ ಹಿಂದಿರುಗಿ ನೋಡೆ ಅನಿಸಿತು
ನಮ್ಮ ಮನದಲೂ...

ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ


ಳೆದ ವಾರ ನಾನು ಸಪೋಸೆಡ್ಲಿ ಯುರೋಪ್ ನ ಅತ್ಯಂತ ರಸ್ತೆ ಶಿಸ್ತು ಪಾಲಿಸುವ ದೇಶವಾದ ಇಂಗ್ಲೆಂಡಿನಲ್ಲಿ ಸಾಕಷ್ಟು ಡ್ರೈವ್ ಮಾಡಿದೆ (ಮೊದಲ ಬಾರಿಗೆ). ಗೆಳೆಯರೊಂದಿಗೆ ಇಪ್ ಸ್ವಿಚ್, ಕೇಂಬ್ರಿಜ್ ಮತ್ತು ಲಂಡನ್ ಸುತ್ತಾಡಿ ಬಂದೆ. ನಮ್ಮ ಕೊನೆಯ ಆಕರ್ಷಣೆ ಲಂಡನ್ ನ ಈಸ್ಟ್ ಹ್ಯಾಮ್ ಆಗಿತ್ತು.

ಈಸ್ಟ್ ಹ್ಯಾಮ್ ಯಾವುದೇ ಯುರೋಪೀಯನಿಗಾದರೂ ಆಘಾತವಾಗುವಷ್ಟು ಭಾರತೀಯರ ನಿಬಿಡತೆಯಿರುವ ಪ್ರದೇಶ. ಬೀದಿಯಲ್ಲಿ ಕಾರು ನಿಲ್ಲಿಸಿ - (ರಸ್ತೆಗಳು ಇಕ್ಕಟ್ಟಾಗಿ ವಾಹನಗಳಿಂದ ತುಂಬಿ ನಮ್ಮ ಬಂಟ್ವಾಳದ ಗಲ್ಲಿಗಳಂತೆ ಇವೆ) - 'ಚೆನ್ನೈ ದೋಸಾ' ವನ್ನು ಹುಡುಕಿಕೊಂಡು ಬರುತ್ತಿದ್ದಂತೆ ಇಬ್ಬರು ವಾದ್ಯಗಾರರು (ಬಹುಶ: ತಮಿಳರು - ಕಡು ಕಪ್ಪು ಬಣ್ಣದಿಂದ ಹೇಳುವುದಾದರೆ) ಹೆಗಲಿಗೆ ಚಂಡೆಯಂತಹ ವಾದ್ಯವನ್ನೇರಿಸಿ, ಬಿಳಿಪಂಚೆಯ ಚುಂಗನ್ನು ಹಿಡಿದುಕೊಂಡು ನಡೆಯುತ್ತಾ ಹಾದು ಹೋದರು. ನಾನು ಒಂದು ದೊಡ್ಡ '!' ನ್ನು ಅವರ ಮೇಲೆ ಬಿಸಾಡಿ ಮುಂದುವರೆದೆ.

ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!!

ಕೆಲವಾರು ತಿಂಗಳಿಂದ ನಾನು ಪರದೇಶದಲ್ಲಿ ನೆಲಸಿದಿನಿ. ಇಲ್ಲಿ ನನ್ನ ಜೊತೆ ನನ್ನ ಕಂಪನಿಯವ್ರೆ/ಬೆಂಗಳೋರೀಗರೇ ಸ್ನೇಹಿತರು ಇದ್ದಾರೆ.. ಬೇಜಾರು ಕಳೆಯೊಕ್ಕೆ , ತಿರುಗೊಕ್ಕೆ ಏನೂ ತೊಮ್ದ್ರೆ ಇಲ್ಲ. ಸ್ವ್ವಲ್ಪ ಜಾಸ್ತಿನೆ ದುಡ್ಡು ಕೊಡ್ತಾರೆ!?( ಬೆಂಗಳೂರಿನ ಸಮ್ಬಳಕ್ಕೆ ಒಲಿಸಿದರೆ)... ಆದ್ರೂ ನಮ್ಮ್ ಬೆಂಗಳೂರಿನ, ನಂ ಭಾರತ , ಬಾಳನೆ ವಪಾಸ್ ಎಳೆತಾ ಇದೆ...

ಗೂಗಲ್ ಮತ್ತು ಅಲ್ಲದ್ದು

ಹುಡುಕಾಟಕ್ಕೆ ಇನ್ನೊಂದು ಪದವೆನ್ನುವಂತಿರುವ ಗೂಗಲ್ ಏಕತಾನಕ್ಕೆ ತಿರುಗುತ್ತಿದೆ ಎಂಬ ತಲ್ಲಣ. ಆಗೊಮ್ಮೆ ಈಗೊಮ್ಮೆ ವಿಚಿತ್ರಗಳನ್ನೂ ಏಕತಾನದಲ್ಲಿ ಹೊರಗೆಡವುತ್ತಿದೆ. ಎಷ್ಟೋ ಸಲ ನಾನು ಬೇಕೆಂದು ಹುಡುಕಿದ್ದೇ ಸಿಗುತ್ತದೆ. ಅಷ್ಟೇ ಅಲ್ಲ ನನಗೆ ಇಷ್ಟವಾಗುವುದೇ ಸಿಗುವುದು ಕೂಡ ಸೋಜಿಗ ಅನಿಸುತ್ತಿಲ್ಲ.

ಗೂಗಲ್ ಹುಡುಕಾಟದ ಮೊದಲ ಪುಟದಲ್ಲಿ ಸಿಕ್ಕದೇ ಹೋಗುವ ಸಂಗತಿಗಳು, ಸಿಗಬೇಕಾದ ಎಷ್ಟೋ ಸಂಗತಿಗಳು ಈಗೀಗ ಕಾಡುತ್ತಿದೆ. ಸರ್ಚ್ ಇಂಜನ್ನಿನ ಶಕ್ತಿ ಬೆಳೆದಷ್ಟೂ ಯಾಕೆ ಈ ಆತಂಕ ಹೆಚ್ಚುತ್ತಿದೆ? ಹೆಚ್ಚು ಹೆಚ್ಚು ದಾಖಲೆಗಳನ್ನು ಅದು ಹುಡುಕುವ ಸಾಮರ್ಥ್ಯ ಬೆಳೆದಷ್ಟೂ ಯಾಕೆ ಈ ಆತಂಕ ಹೆಚ್ಚುತ್ತಿದೆ? ಸರ್ಚ್ ಇಂಜನ್ನು ಸೂಕ್ಷ್ಮವಾದಷ್ಟೂ, ನಾನು ಬರೆದ ಪದ ಸರಿಯಾಗಿದ್ದರೂ "ಹೀಗೆ" ತಿದ್ದಲೇ ಎಂದು ಸೂಚಿಸುವ ಜಾಣ್ಮೆ ಅದರಲ್ಲಿ ಕಂಡಷ್ಟೂ ಯಾಕೆ ಈ ಆತಂಕ ಹೆಚ್ಚುತ್ತಿದೆ? ನನಗೆ ಬೇಕಾದ್ದನ್ನು ಸೂಚಿಸುವ ಪದ ಟೈಪ್ ಮಾಡದೇ ಬೇರೇನೋ ಟೈಪ್ ಮಾಡಿದರೂ ನನ್ನ ಮನಸ್ಸನ್ನು ಅರಿತುಕೊಂಡು ಬೇಕಾದ್ದನ್ನೇ ನೀಡುವಷ್ಟು ನಿಖರವಾಗಿದ್ದರೂ ಯಾಕೆ ಈ ಆತಂಕ ಹೆಚ್ಚುತ್ತಿದ್ದೆ?

ಕನ್ನಡ "ಬರಹ" ಕೀ ಮ್ಯಾಪ ತಂತ್ರಾಂಶ ಲಿನಕ್ಸ ಬಳಕೆದಾರರಿಗೆ ಲಭ್ಯವಿದೆ

ಕನ್ನಡ "ಬರಹ" ಕೀ ಮ್ಯಾಪ ತಂತ್ರಾಂಶ ಈಗ ಲಿನಕ್ಸ ಬಳಕೆದಾರರಿಗೆ ಲಭ್ಯವಿದೆ.

ಕ ಘ ಪ, ಇನ್ಟ್ರಾನ್ಸ , ಏಮ ೧೭-ಐಟ್ರಾನ್ಸ ಕೀ ಮ್ಯಾಪ ಬಳಸುತಿದ್ದ ಎಲ್ಲ ಲಿನಕ್ಸ ಬಳಕೆದಾರರಿಗೆ ಮತ್ತೊಂದು ಕೀ ಮ್ಯಾಪ,

http://code.indlinux.net/projects/baraha-maps

ಇದು ಇನ್ನೂ "ಅಲ್ಪಾ ರಿಲೀಸ", ಉಪಯೋಗಿಸಿ ನೋಡಿ :