ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ ಪುಸ್ತಕ ಬಿಡುಗಡೆ

"ಧ್ಯೇಯಯಾತ್ರಿ" ಬಿಡುಗಡೆ ಸಮಾರಂಭಕ್ಕೆ ಬನ್ನಿ :

BOOK RELEASE : DHYEYAYATHRI
> >
> Text in Baraha IME 1.0 Unicode:
>
> ಮಾನ್ಯ ಬಂಧುಗಳೇ,
>
> ನನ್ನ ಏಳನೇ ಕೃತಿ,
>
>
> ಧ್ಯೇಯಯಾತ್ರಿ
>
> (ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾಗಿದ್ದ,
> ಲೇಖಕರೂ, ಅಂಕಣಕಾರರೂ, ಸಾಮಾಜಿಕ ಕಾರ್ಯಕರ್ತರೂ ಆದ ದಿವಂಗತ
> ಹೊ.ವೆ.ಶೇಷಾದ್ರಿ
> ಅವರ ಜೀವನ ದರ್ಶನ )
>

ಬೆಂಗಳೂರಿನ ಹೊಳಲುಗಳು/ನಗರಗಳು

ಬೆಂಗಳೂರಿನ ಹೊಳಲುಗಳು/ನಗರಗಳು
೧) ಗೆಲ್ಪೊಳಲು - ಜಯನಗರ
೨) ಗೆಲ್ಗದಿರ್ವೊಳಲು - ಜಯಪ್ರಕಾಶನಗರ
೩) ಮೈಗಣ್ಣಹೊಳಲು - ಇಂದಿರಾನಗರ/ಇಂದ್ರನಗರ
೪) ಜೊತೆಬಾಳ್ವೊಳಲು - ಸಹಕಾರನಗರ
೫) ಬೆಟ್ಟದಹೊಳಲು - ಗಿರಿನಗರ
೬) ಕಾಡುಮುಕ್ಕಣ್ಣೆ - ಬನಶಂಕರಿ
೭) ಸಿರಿಹೊಳಲು - ಶ್ರೀ ನಗರ
೮) ಮುತ್ತತ್ತಿಹೊಳಲು - ಹನುಮಂತನಗರ
೯) ಹಿರಿಗೆಲ್ವೊಳಲು - ವಿಜಯನಗರ

ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ?

ಅಟ್ಟುದನಡುವರೇ, ಸುಟ್ಟುದ ಸುಡುವರೆ? ಬೆಂದ ನುಲಿಯಾ ಸಂ ಧಿಸಬಹುದೆ?
ಪಂಚಾಕ್ಷರೀಯಲ್ಲಿ ಧಗ್ದವಾದ ನಿರ್ದೇಹಿಗೆ ಸಂದೇಹವುಂಟೆ?
ಧಗ್ಧಸ್ಯ ದಹನಮ್ ನಾಸ್ಥಿ, ಪಕ್ವಸ್ಯ ಪಚನಂ ಯತಾ! ಜ಼್ನಾನಾಗ್ನಿ ಧಗ್ಧ ದೇಹಸ್ಯ ನ ಪುನರ್ಧಹನ ಕ್ರಿಯ!!
ಇದು ಕಾರಣ ಕೂಡಲ ಚೆನ್ನ ಸಂಗಣ ಶರಣರು ಬ್ರಾಂತು ಸೂತಕ ಕ್ರಿಯಾವಿಹಿತರು

ಇಲ್ಲಿ

"ಬೆಂದ ನುಲಿಯಾ ಸಂ ಧಿಸಬಹುದೆ?" ಎಂದರೆ ಏನು?

ಆಗಸ್ಟ್ 17ರಿಂದ, 'ಕನ್ನಡ ಕಸ್ತೂರಿ' ಹಚ್ಚ-ಹೊಸ ಚಾನಲ್ !

ಕನ್ನಡಿಗರ ಹಚ್ಚ-ಹೊಸ ಕನ್ನಡ ಚಾನಲ್ ಪಾದಾರ್ಪಣೆ ಮಾಡಲಿದೆ.

ಇದರ ರುವಾರಿ ಯಾರು ಗೊತ್ತೆ ? ನಮ್ಮ ಮಾಜಿ ಪ್ರಧಾನಿ ದೇವೇಗೌಡರ ಸೊಸೆ ಹಾಗೂ ಹಾಲಿ ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಪತ್ನಿಯಾದ ಅನಿತಾ ಕುಮಾರಸ್ವಾಮಿಯವರು. 24x7 ಕನ್ನಡ ಮನರಂಜನಾ ವಾಹಿನಿಯನ್ನು ನಾಳೆಯೇ ನಮ್ಮಜನರೆಗೆ ಅರ್ಪಿಸುವ ಆಶೆಯಿಟ್ಟುಕೊಂಡಿದ್ದಾರೆ.

"ಎಲ್ಲಿ, ಬೇಗ್ ಬೇಗ್ ಹೇಳಿ ಏಳಿ ಸಾರ್!"

ಅಮ್ಮನಿಗೆ ಹುಷಾರಿಲ್ಲದ ಕಾರಣ ಒಬ್ಬನೇ ಹತ್ತಿರದ ಒಂದು ಹೋಟೆಲಿಗೆ ತೆರಳಿ ರಾತ್ರಿಯ ಊಟ ಮಾಡಬೇಕಿತ್ತು. ಸ್ವಾತಂತ್ರ್ಯದಿನವನ್ನು ಬಾಯ್ಚಪಲ ಸ್ವಾತಂತ್ರ್ಯಕ್ಕೆ ಮುಡುಪಾಗಿಟ್ಟು ಹೊರಬಂದ ಬೆಂಗಳೂರು ಜನರ ಕಾರಣ ಇಂದು ಎಲ್ಲೆಲ್ಲಿಯೂ ಹೋಟೆಲುಗಳು "ಹೌಸ್ ಫುಲ್", ಸೀಟ್ಸ್ ಫುಲ್! ನಿಂತುಕೊಳ್ಳಲೂ ಜಾಗವಿಲ್ಲದಂತೆ.

ಹತ್ತಿರದ ಬನಶಂಕರಿಯಲ್ಲಿರುವ ನನ್ನ ನೆಚ್ಚಿನ ಒಂದು ಹೋಟೆಲಿಗೆ ಹೋದರೆ ಇದೇ ಪರಿಸ್ಥಿತಿಯಾಗಿತ್ತು. ಇಲ್ಲಿ ದೂರ ದೂರಕ್ಕೂ ೯.೪೫ರ ಸಮಯದಲ್ಲೂ ಊಟ ಸಿಗುವುದು ಇಲ್ಲೊಂದೇ ಕಡೆ. ಅಲ್ಲಿದ್ದ ವೇಯ್ಟರು ಸಾಹೇಬ "ಅಲ್ಲೊಂದು ಕಡೆ ಖಾಲಿ ಇದೆ ಸಾರ್" ಎಂದು ಇಬ್ಬರಾಗಲೇ ಕುಳಿತಿದ್ದ ನಾಲ್ಕು ಸೀಟಿನ ಮೇಜಿನ ಕಡೆ ಕೈ ತೋರಿಸಿದ. "ತೊಂದರೆಯಿಲ್ಲವಾ?" ಎಂದು ಸೌಜನ್ಯವಾಡಿ, ಕುಳಿತಿರುವವರಿಗೂ ಒಮ್ಮೆ ಅನುಮತಿ ಕೇಳಿ ಅದೇ ಸೌಜನ್ಯದಿಂದ ಕುಳಿತು ಮೆನು ಕೈಯಲ್ಲಿ ಹಿಡಿದದ್ದೇ ತಡ, ಹೊಸಬನಂತಿದ್ದ ಒಬ್ಬ ವೇಯ್ಟರ್ ಓಡಿ ಬಂದು "ಎಲ್ಲಿ ಬೇಗ್ ಬೇಗ್ ಹೇಳಿ ಏಳಿ ಸಾರ್!" ಅಂದುಬಿಡುವುದೆ?

ಎಲ್ಲರಿಗು ದೀಪಕ್ ಮಾಡುವ ನಮನಗಳು

ನನ್ನ ಹೆಸರು ದೀಪಕ್. ನಾನು ಹುಟ್ಟಿದ್ದು ಉತ್ತರ ಕರ್ನಾಟಕದಲ್ಲಿ, ಆದರೆ ಓದಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ.
ನಾನು ಸಾಫ್ಟ್ ವೇರ್ ಎಂಜಿನೀಯರಾಗಿದ್ದು, ಇತ್ತೀಚಿಗೆ ನ್ಯೂ ಯಾರ್ಕಿನಲ್ಲಿ ಇದ್ದೇನೆ.

ಎಲ್ಲರಿಗು ಸ್ವಾತಂತ್ರೋತ್ಸವದ ಶುಭಾಶಯಗಳು!!

ಸ್ಮರಣ ಶಕ್ತಿಯನ್ನು ವೃದ್ದಿಗೊಳಿಸುವುದು ಹೇಗೆ ?

ಸ್ಮರಣ ಶಕ್ತಿಯನ್ನು ವೃದ್ದಿಗೊಳಿಸುವುದು ಹೇಗೆ ?

ಇದು ಸುಲಭ ತಂತ್ರ ....

ನಿಮ್ಮ ಮನಸ್ಸಿನಲ್ಲಿ ೧, ೨, ೩ .... ಎಂದು ೧೦೦ ರ ವರೆಗೆ ಎಣಿಸಿ. ಸಾದ್ಯವಾದರೆ ೧೦೦ ರಿಂದ ೧ ದರವರೆಗೆ ಉಲ್ಟ ಎಣಿಸಿ. ಇದರಿಂದ ನಿಮ್ಮ ಸ್ಮರಣಶಕ್ತಿ ಹೆಚ್ಚಾಗುತ್ತದೆ.