ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

'ಇಂಡಿಯಾ' ಕನ್ನಡದ ಒರೆಯೇ/ಪದವೇ!!?

'ಇಂಡಿಯಾ' ಕನ್ನಡದ ಒರೆಯೇ/ಪದವೇ!!?

ಇಂಡಿಯಾ ಅನ್ನುವ ಹೆಸರು ಬರುವುದಕ್ಕೆ ಸಿಂದು/ಇಂಡಸ್ ಹೊಳೆಯೇ ಓಸುಗರ/ಕಾರಣ ಇದೆ ಎಂದು ಎಲ್ಲರಿಗೂ ಗೊತ್ತಿರುವ ವಿಶ್ಯವೇ. ಆದರೆ ನನ್ನ ಕನ್ನಡದ ಅರಿಮೆ
ಇದು ಕನ್ನಡ ಒರೆಯಾಗಿರಲು ಸಾದ್ಯವೇ ಎಂದು ಉಂಕಿಸಿತು. ಆಗ ನನಗೆ ಹೊಳೆದದ್ದು ಹೀಗೆ:-

ಅವತಾರ

ಕೊಲೆಯ ಕತೆ ಹೇಳಿ ಮೈ ನಡುಗಿಸಿ
ನಡುರಾತ್ರಿ ಮಾಯವಾಗುವ ನಲ್ಲ
ಮುಂಜಾವದ ಕನಸಲ್ಲಿ ಕಾಣಿಸಿಕೊಂಡು
ನಾಚಿಕೆ ಬಿಟ್ಟು ತಬ್ಬುವುದು
ಆಕಸ್ಮಿಕವಲ್ಲ
ಅವನ ಇನ್ನೊಂದು ಮಗ್ಗುಲು ಅಷ್ಟೆ.

Real...

ಅಲ್ಲಿ ಸಂಭ್ರಮ. ಸಡಗರ. ನಾಗರ ಪಂಚಮಿ ಹಬ್ಬದ ಖುಷಿ. ಎಲ್ಲ ಕಡೆಗಳಿಗಿಂತ ಸ್ವಲ್ಪ ಬಿನ್ನ. ಕಲ್ಲಿನ ಹಾವಿಗೆ ಹಾಲೆರೆಯುವುದು ಸಾಮಾನ್ಯ, ಆದರೆ ಶಿವಮೊಗ್ಗ ಗೋಪಾಳದಲ್ಲಿ ನಿಜವಾದ ನಾಗರಹಾವಿಗೆ ಜನರು ಹಾಲೆರೆದು ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಿದರು. ವಿಶಿಷ್ಟ ರೀತಿಯಲ್ಲಿ.

ಈ ಮಣ್ಣ ಸತ್ಯ

ಈ ಮಣ್ಣ ಸತ್ಯ

ಕಾಲ ಸಮಾಧಿಯ ಮೇಲೆ ಕುಳಿತು
ಬಗೆ ಬಗೆಯುತ್ತಿದೆ, ಬಗೆಬಗೆಯುತ್ತಿದ್ದೆ, ಅತ್ತ್
ಹರಿವ ಹೊಳೆ-ಹೊಳೆಯುತ್ತಿತ್ತು
ಹೊಳೆಹೊಳೆಯುತ್ತಿತ್ತು.

ಹತ್ತೂ ಬೆರೆಳುಗಳ ಸೆಟೆಸಿ, ಹಸ್ತಗಳನ್ನೊಂದು ಮಾಡಿ
ನರನಾಡಿಗಳನದರ ಗುಡಿಮಾದಿ, ಪಾದಗಳನೂರಿ
ಊರುಗಳ ವೀರಮುದ್ರೆಗೆಗೀಡುಮಾಡಿ
ಅಸ್ತಿತ್ವದೊಡತೆ ಮನಕೆ ನಮಿಸಿ,

ನುಡಿ/ಬಾಶೆ ಮತ್ತು ಉಂಕು/ಚಿಂತನೆ - ಇವಕ್ಕೆ ಹತ್ತಿರದ ನಂಟಿದೆ.!!

http://anthro.palomar.edu/language/language_5.htm

  

ಮೇಲೆ ಕೊಟ್ಟಿರುವ ಎಳೆಯಲ್ಲಿ ಹಲವು ಅರಿಮೆಗಳಿವೆ.

ನುಡಿ ಮತ್ತು ಉಂಕು ತುಂಬ ಹತ್ತಿರದ ನಂಟಿದೆ ಎಂದು ಅವರು ಹೇಳುತ್ತಾರೆ.
ನೀವು --> ನಿಮ್ಮ ನುಡಿ --> 'ದಿಟ'

ನನ್ನದೂ ಒಂದು ಪ್ರಶ್ನೆ..

ಗಣೇಶ ಚೌತಿ,ರಾಜ್ಯೋತ್ಸವ,ಅಣ್ಣಮ್ಮದೇವಿ ಕೂರಿಸುವುದು,ನವರಾತ್ರಿ ಹಬ್ಬಗಳಲ್ಲಿ ಬೀದಿ ಬೀದಿಗಳಲ್ಲಿ ಸಾಂಕ್ರಾಮಿಕವಾಗಿ ತೊಂದರೆ ಕೊಡುವ ರೋಗದ ಹೆಸರೇನು?
ಸೂಚನೆ: ಬೆಂಗಳೂರಿನ ಗಲ್ಲಿ,ಗಲ್ಲಿಯ ಜನರಿಗೂ ಗೊತ್ತಿರುವುದರಿಂದ ಅವರು ಭಾಗವಹಿಸಬಾರದು.ಆದರೆ ತಮ್ಮ ಗಲ್ಲಿಯಲ್ಲಿ ಈ ರೋಗ ಹರಡದಂತೆ ತಡೆಯುವಲ್ಲಿ ಯಶಸ್ವಿಯಾದವರಿದ್ದರೆ ಔಷಧಿಯನ್ನು ತಿಳಿಸಿರಿ.

ಕೈಗೆಟುಕಲಿರುವ ಸಂಜೀವಿನಿಗಳು...

ಎಲ್ಲೆಂದರಲ್ಲಿ ಕಾಲೆತ್ತಲು ಹೋಗುವ ಕಚ್ಚೆಹರುಕರಿಗಷ್ಟೆ ಏಡ್ಸ್ ಬರುವುದಿಲ್ಲ. ಒಬ್ಬ ಇಲ್ಲವೆ ಒಬ್ಬಳು ಈಗಾಗಲೆ ಏಡ್ಸ್ ಹೊಂದಿರುವವಳ/ನ ಬಳಿ ಯಾವುದೊ ಅನೈತಿಕ ಕೆಲಸ ಮಾಡಲು ಹೋಗಿ ಅಂಟಿಸಿಕೊಂಡು ಬಿಟ್ಟಿರಬಹುದು. ಆದರೆ, ಏಡ್ಸ್‌ಪೀಡಿತನಿಂದ ಅವನ ಮುಗ್ಧ ಹೆಂಡತಿಗೆ, ಏಡ್ಸ್‌ಪೀಡಿತೆಯಿಂದ ಅವಳ ಮುಗ್ಧ ಗಂಡನಿಗೆ, ದಾಂಪತ್ಯ ಜೀವನದಲ್ಲಿ ಸಹಜವಾದ ಅಸುರಕ್ಷಿತ (ಕಾಂಡೋಮ್ ಇಲ್ಲದ) ಲೈಂಗಿಕ ಸಂಪರ್ಕದಿಂದಲೂ ಅದು ಬಂದು ಬಿಡುತ್ತದೆ. ಇನ್ನು, ಗೊತ್ತಿದ್ದೊ ಗೊತ್ತಿಲ್ಲದೆಯೊ ಗರ್ಭಿಣಿಯಾಗುವ ಏಡ್ಸ್‌ಪೀಡಿತೆ, ತನ್ನ ನಿಷ್ಪಾಪಿ ಮಗುವಿಗೆ ಅದರ ಜನ್ಮದಿನದಂದೆ ಏಡ್ಸ್ ಅನ್ನು ದಯಪಾಲಿಸಿ ಬಿಟ್ಟಿರುತ್ತಾಳೆ. ಒಬ್ಬರು ಬಳಸಿದ ಸಿರಿಂಜ್ ಅನ್ನು ಇನ್ನೊಬ್ಬರು ಬಳಸಿಬಿಡುವ ಸಂದರ್ಭಗಳಲ್ಲೂ ಏಡ್ಸ್ ಅಂಟಬಹುದು. ಹೀಗೆ, ಇಂದು ಏಡ್ಸ್ ಎನ್ನುವುದು ಬಹುಜನರೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡವರಿಗೆ ಮಾತ್ರ ಅಂಟುವ, ಅಥವ ವೇಶ್ಯಾವೃತ್ತಿಯಲ್ಲಿ ತೊಡಗಿಕೊಂಡವರಿಗೆ ಮತ್ತು ಅವರ ಗಿರಾಕಿಗಳಿಗೆ ಮಾತ್ರ ಅಂಟುವ ಕಾಲೆಯಾಗಿ ಉಳಿದಿಲ್ಲ.

ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನೆ ಕೊಲ್ಲುವ, ಸಾಮಾನ್ಯ ಜ್ವರವನ್ನೂ ತಡೆದುಕೊಳ್ಳಲಾಗದಷ್ಟು ದೇಹವನ್ನು ದುರ್ಬಲ ಮಾಡಿಬಿಡುವ ಈ ಮಾರಿ ಆಫ್ರಿಕಾದ ಹಲವು ದೇಶಗಳಲ್ಲಿಯಂತೂ ಹೆಮ್ಮಾರಿಯಾಗಿ ಬಿಟ್ಟಿದೆ. ಇಂದು ಪ್ರಪಂಚದಲ್ಲಿನ ಸುಮಾರು 4 ಕೋಟಿ ಜನಕ್ಕೆ ಏಡ್ಸ್ ಇದೆ. ಕಳೆದ ವರ್ಷ ಇದನ್ನು ಅಂಟಿಸಿಕೊಂಡವರ ಸಂಖ್ಯೆ 43 ಲಕ್ಷವಂತೆ. ಈ ಕಾಯಿಲೆಯಿಂದ ಪ್ರತಿ ವರ್ಷ ಸಾಯುತ್ತಿರುವವರ ಸಂಖ್ಯೆಯೆ 30 ಲಕ್ಷ ಮುಟ್ಟುತ್ತಿದೆ. ಅಂದರೆ ದಿನಕ್ಕೆ 8000 ಜನ ಇದರಿಂದ ಸಾಯುತ್ತಿದ್ದಾರೆ. ಗಾಂಧಿ ಮೆಟ್ಟಿದ ದಕ್ಷಿಣ ಆಫ್ರಿಕಾದಲ್ಲಿ

ಸ್ವಾತಂತ್ರ್ಯ ದಿನ, ಸ್ನೇಹಿತನ ನಿಶ್ಚಿತಾರ್ಥ ಹಾಗೂ ಅಸ್ಸೆಂಬಲ್ಡ್ ಕಂಪ್ಯೂಟರ್...

ಪುಣ್ಯದಿನದಂದು ಒಂದು ಪುಣ್ಯ ಕಾರ್ಯ (Good deed) ಮಾಡಬೇಕಂತೆ. ಸ್ವಾತಂತ್ರ್ಯ ಏನಿರಬಹುದು, ಅದಕ್ಕೊಂದು ಅರ್ಥವಿದೆಯಾ? ಸ್ವಾತಂತ್ರ್ಯವನ್ನು ಯಾವ ಸ್ವಾತಂತ್ರ್ಯವೆಂದು ನೋಡಬೇಕು, ಸ್ವಾತಂತ್ರ್ಯ ಸಿಕ್ಕು ೬೦ ವರ್ಷಗಳಾದುವೆಂದು ಎಲ್ಲರೂ ಹೇಳುತ್ತಿರುವ ಈಗ ನಾವು ಸ್ವತಂತ್ರರು ಹೌದೆ? ಎಂದೆಲ್ಲ ತಲೆ ಬಿಸಿ ಮಾಡಿಕೊಂಡು ಬೆಳಬೆಳಗ್ಗಿನ ಚಳಿಯನೆದುರಿಸಿ ಸ್ನೇಹಿತನ ನಿಶ್ಚಿತಾರ್ಥ ಅಟೆಂಡ್ ಮಾಡೋದಕ್ಕೆಂದು ಗಾಡಿ ಸ್ಟಾರ್ಟ್ ಮಾಡಿ ಹೊರಟಾಗ ಅವತ್ತು ನನ್ನಿಂದ "ಮಾಡಿಸಲ್ಪಡಲಾಗುವ" ಗುಡ್ ಡೀಡ್ ಬಗ್ಗೆ ನನಗೆ ಖಂಡಿತ ಅರಿವಿರಲಿಲ್ಲ. ದಿನದ ಕೊನೆಗೆ ಮಾತ್ರ ಮತ್ತೊಬ್ಬ ಸ್ನೇಹಿತರ ಸ್ನೇಹಿತರೊಬ್ಬರಿಗೆ ಕಂಪ್ಯೂಟರ್ ಒಂದನ್ನು ಅಸ್ಸೆಂಬಲ್ ಮಾಡಿಸಿಕೊಡುವ ಘನಕಾರ್ಯಕ್ಕೆ ಕೈಹಾಕುವ ಸಾಹಸ ಮಾಡಿದ್ದೆ, ಹಲವು ವರ್ಷಗಳ ನಂತರ ಮತ್ತೊಮ್ಮೆ.

*******

ಬೆಳಗ್ಗಿನ ಜಾವ ರಾತ್ರಿಯಾದ್ದರಿಂದ ನನಗೆ ಬೆಳಗು ಬೆಳಗಿನ ಜಾವದಂತನಿಸಿದ್ದರಲ್ಲಿ ಅಚ್ಚರಿಯಿಲ್ಲ. ಆಕಳಿಸುತ್ತಾ ಗೇರ್ ಹಾಕಿ ನಿಧಾನಗತಿಯಲ್ಲಿ ಸ್ನೇಹಿತ ಮತ್ತವನ ಭಾವೀ ಪತ್ನಿಗೆ ನೀಡಲೆಂದು ಬೊಕೆ ಹುಡುಕಿ ಹೊರಟ ವೇಗ ಯಾವ ಜಟಕಾಗಾಡಿಯನ್ನೂ ನಾಚಿಸುವಂತಿತ್ತು. ಅಲ್ಲಿಲ್ಲಿ ಪಟಾಕಿ ಹೊಡೆದು ಸ್ವತಂತ್ರ ಭಾರತದ ಸಮೃದ್ಧವಾದ ಗುಂಡಿ ಗಟರುಗಳ ಟಾರ್ ರೋಡನ್ನು ಮತ್ತಷ್ಟು ಸ್ವಚ್ಛಗೊಳಿಸುತ್ತಿದ್ದರು, ಬೆಳಬೆಳಿಗ್ಗೆ ಅಲ್ಲಿಲ್ಲಿ ಫ್ರೆಶ್ಶಾದ ಸೆಗಣಿಯನ್ನು ಕಂಡ ರೋಡು ಆಗಲೇ ಸ್ವಚ್ಛವಿಲ್ಲವೇನೋ ಎಂಬಂತೆ. ಅಲ್ಲಲ್ಲಿ ಬೈಕಿನ ತುದಿಗೆ, ಕಾರಿನ ಮುಡಿಗೆ, ಆಟೋ ಬದಿಗೆ ಭಾರತ ಮಾತೆಯ (ಪರಿ)ಸ್ಥಿತಿಯನ್ನು ಸಾರಿ ಹೇಳುವ ಪ್ಲಾಸ್ಟಿಕ್ ಧ್ವಜಗಳು ಕಂಗೊಳಿಸುತ್ತಿದ್ದವು. ಅವರವರ ಟೆರಿಟರಿ ಮಾರ್ಕ್ ಮಾಡುತ್ತಿರುವರೆಂಬಂತೆ ಅಲ್ಯಾವುದೋ ದಾರಿಯಲ್ಲಿರುವ ಸ್ಕೂಲಿಗೆ ಪುಢಾರಿಯೊಬ್ಬನ ಆಗಮನದ ಸಿದ್ಧತೆ ನಡೆದಿತ್ತು. ಅತ್ತಿತ್ತ ಅಂಬಾಸಡರ್ರು ಕಾರುಗಳಲ್ಲಿ ಮಾತ್ರ ತ್ರಿವರ್ಣ ಖಾದಿಯ ಧ್ವಜ ಕಣ್ಸೆಳೆದಿತ್ತು.
ಬೆಂಗಳೂರಲ್ಲಿ ಸ್ವಾತಂತ್ರ್ಯ ನೆತ್ತಿಗೇರಿತ್ತು; ಬೊಕೆ ಮಾತ್ರ ಸಿಗಲಿಲ್ಲ.