ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕರ್ನಾಟಕ ರಕ್ಷಣಾ ವೇದಿಕೆ - ಒಂದು ಹೊಸ ದಿಗಂತ

ಸಮಸ್ತ ಕನ್ನಡಿಗರಲ್ಲಿ,

ಕನ್ನಡವೆ ಜಾತಿ, ಕನ್ನಡವೆ ಧರ್ಮ, ಕನ್ನಡವೇ ದೇವರು ಎಂದು ಪ್ರತಿಪಾದಿಸುತ್ತ;
ಕನ್ನಡಿಗರಲ್ಲಿ ಜಾಗೃತಿ ಮೂಡಿಸುತ್ತಿರುವ ಏಕೈಕ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ (ಕ.ರ.ವೇ).

ಕ.ರ.ವೇ. ಇಲ್ಲಿಯವರೆವಿಗು ಮಾಡಿರು ಸಾಧನೆ ಗಳ ಪತ್ರಿಕಾ ವರಧಿ, ದೃಶ್ಯ ಚಿತ್ರಗಳಿಗಾಗಿ,
ಈ http://www.karave.blogspot.com/ ಕೊಂಡಿಗೆ ತಾಗಿಕೊಳ್ಳಿರಿ.

ಚಲನಚಿತ್ರಗಳಿಗೆ ಪ್ರಮೋಶನಲ್ ಆಫರ್ ...

ಸುದ್ದಿ : ಮದುವೆ - ಚಿತ್ರಕ್ಕೆ ಹೋದವರಿಗೆ ಮಹಿಳೆಯರಿಗೆ ಹರಿಷಣ, ಕುಂಕುಮ ಪ್ಯಾಕೆಟ್.

ಕಣ್ಣಿರು ಹರಿಸುವ ಚಿತ್ರಕ್ಕೆ ಹೋದರೆ - ಕರವಸ್ತ್ರಗಳು ಫ್ರೀ

ಮಚ್ಚು-ಕೊಚ್ಚು-ಚುಚ್ಚು (ರೌಡಿ ಚಿತ್ರಗಳು) - ಚಾಕು, ಚೈನು, ಲಾಂಗುಗಳು ಫ್ರೀ.

ನಿಮ್ಮ ಐಡಿಯಾಗಳು ಹಾಕಿ, ನಿರ್ಮಾಪಕರಿಗೆ ಉಪಯೋಗವಾಗಬಹುದು. ;)

 

ಗಲ್ಲಿ ಗಾದೆ !!!

  1. ಎಡಬಿಡಂಗಿ ಎಡವಟ್ಟರಾಯಾ.
  2. ಅಳಕ್-ಮೇಲ್-ಪುಳುಕು.
  3. ಅಡ್ ಏಟು ಮ್ಯಲೆ ಗುಡ್ ಏಟು.
  4. ಹಗ್ಗತಿನ್ನೊ ಹನುಮಂತರಾಯಾ.
  5. ಇರಲಾರದೆ ಇರುವೆ ಬಿಟ್ಟುಕೂಂಡರು
  6. ಕಲಿಯೊವರೆಗು ಬ್ರಹ್ಮವಿದ್ಯೆ, ಕಲಿತಮೇಲೆ ಕಪಿವಿದ್ಯೆ !!!
  7. ಆಂಜನೇಯನ ಭಂಡಾರ ಹಣೆಗೆ ಇಟ್ರೆ ಚೆನ್ನ.
  8. ಅಜ್ಜಿಗೆ ಅರಿವೆ ಚಿಂತೆ, ಮಗಳಿಗೆ ಇನ್ನೇನೊ ;) ಚಿಂತೆ
  9. ತಲೆ ಕೆಟ್ಟು ಕೆರ ಹಿಡಿದು, ಮಠ ಹತ್ತಿದೆ (ಶೆಡ

ಬದುಕು

ಕಾಣದ ಕೈಯ ನಡೆಯಾಟ
ಈ ಬದುಕಿನ ಚದುರಂಗದಾಟ
ತಪ್ಪಿದ ನಡೆ, ಕಡಿಯುವುದು ಆ ಕೈಯಲ್ಲ,
ನನ್ನ ತಲೆ... ಅದಕ್ಕೇನು ಬೆಲೆ?

ಇನ್ನೊಂದಿಷ್ಟು , ಮತ್ತೊಂದಿಷ್ಟು ವಿಚಿತ್ರಾನ್ನ ಪುಸ್ತಕ ಲೋಕಾರ್ಪಣೆ

ಬೆಂಗಳೂರು, ಆಗಸ್ಟ್ 12: ದಟ್ಸ್ ಕನ್ನಡ ಅಂಕಣಕಾರ ಶ್ರೀವತ್ಸ ಜೋಷಿಯವರ ಇನ್ನೊಂದಿಷ್ಟು ವಿಚಿತ್ರಾನ್ನ ಹಾಗೂ ಮತ್ತೊಂದಿಷ್ಟು ವಿಚಿತ್ರಾನ್ನ ಎಂಬ ಪುಸ್ತಕಗಳು ಲೋಕಾರ್ಪಣೆಗೊಂಡಿತು.

ವರದಿ ಒದಿ

ನೀಗಿಸಲು ವಿದ್ಯುತ್ ಬರ, ಏರಿತು ಜನರೇಟರ್ ಮತ್ತಷ್ಟು ಎತ್ತರ!

Reach for the Sky!' ಉನ್ನತ ಮಟ್ಟದ ಸಾಧನೆ ಮಾಡಬೇಕೆಂದು ಹಂಬಲಿಸುವವರನ್ನು ಪ್ರೋತ್ಸಾಹಿಸುವ ನುಡಿಗಳಿವು. ವಿಮಾನ ಹಾಗೂ ಬಾಹ್ಯಾಕಾಶ ಯಾನಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಬಂದ ಮೇಲೆ, ‘ಮುಗಿಲು ಮುಟ್ಟುವ’ ಅಥವಾ ‘ಆಗಸದತ್ತ ಜಿಗಿಯುವ’ ಕಾರ್ಯಗಳಲ್ಲಿ ನಮಗೆ ವಿಶೇಷತೆಗಳೇನೂ ಕಾಣುತ್ತಿಲ್ಲ. ಡಾ ರೊದ್ದಂ ನರಸಿಂಹ ನಿಮಗೆ ಗೊತ್ತಿರಬೇಕು.

ಟೂತ್‌ಪೇಸ್ಟು ಇಚ್ಛಾಮರಣಿಯೆ? ಚಿರಂಜೀವಿಯೆ?

ಈಚೀಚೆಗೆ ಕುಗ್ರಾಮಗಳಲ್ಲಿನ ಜನರು ಸಹಾ ಪೇಸ್ಟು ಸಹವಾಸಕ್ಕೆ ಬಿದ್ದು, ಹಲ್ಲು ತೋರಿಸುತ್ತಿದ್ದಾರೆ! ಮಣ್ಣುಮಸಿ ಜಾಗಕ್ಕೆ ಪೇಸ್ಟು ಬಂದು ಭದ್ರವಾಗಿ ಕುಳಿತಿದೆ! ಪೇಸ್ಟ್ ನ ಅಡ್ಡ ಮತ್ತು ಉದ್ದ ಪರಿಣಾಮಗಳ ಬಗ್ಗೆ ಚರ್ಚೆ ಇದ್ದದ್ದೆ. ಸದ್ಯಕ್ಕೆ ಪೇಸ್ಟುಗೆ ಸಂಬಂಧಿಸಿದ ಕೆಲ ಸ್ವಾರಸ್ಯಕರ ಸಂಗತಿಗಳು ನಿಮ್ಮ ಗಮನಕ್ಕೆ..

ಭೂಕಂಪದ 3ಡಿ ಸಿನೇಮಾ

(ಇ-ಲೋಕ-34 )(13/8/2007)

ಭೂಕಂಪದ 3ಡಿ ಸಿನೇಮಾ

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಭೂಕಂಪ ಪದೇ ಪದೇ ಸಂಭವಿಸುತ್ತಿರುತ್ತದೆ. ಭೂಮಿಯು ಎಷ್ಟು ಕಂಪಿಸಿತು,ಅದರ ಕೇಂದ್ರ ಎಲ್ಲಿತ್ತು,ಅದು ಎಷ್ಟು ಆಳದಲ್ಲಿ ಸಂಭವಿಸಿತು ಮುಂತಾದ ವಿವರಗಳನ್ನು ಭೂಮಿಗೆ ಅಳವಡಿಸಿದ ಸಂವೇದಕಗಳು ದಾಖಲಿಸುತ್ತಿರುತ್ತವೆ. ಮುಂದೆ ಈ ಪ್ರದೇಶದಲ್ಲಿ ಭೂಕಂಪ ಮಾಪಕ ರಿಕ್ಟರ್ ಸ್ಕೇಲಿನಲ್ಲಿ ಮೂರುವರೆಗಿಂತ ಹೆಚ್ಚು ಪ್ರಮಾಣದ ಭೂಕಂಪ ಸಂಭವಿಸಿದ ಅರ್ಧ ಗಂಟೆಯ ಬಳಿಕ ಟಿವಿಯಂತಹ ಮಾಧ್ಯಮಗಳಲ್ಲಿ,ಭೂಕಂಪದಿಂದ ಭೂಮಿ ಅದುರಿದ ಬಗೆಯನ್ನು ಮೂರು ಆಯಾಮಗಳಲ್ಲಿ ತೋರಿಸುತ್ತಾರಂತೆ. ಭೂಕಂಪದ ಬಗೆಗಿನ ವಿವರಗಳು ಸೂಪರ್ ಕಂಪ್ಯೂಟರಿಗೆ ತಲುಪಿ,ಅದರಲ್ಲಿರುವ ತಂತ್ರಾಂಶವು ಭೂಕಂಪದ ಪರಿಣಾಮವನ್ನು ಅನಿಮೇಶನ್ ಚಲನಚಿತ್ರವಾಗಿ ವೀಕ್ಷಕರ ಕಣ್ಣ ಮುಂದಿಡುತ್ತದೆ.ಇದಕ್ಕೆ ಮೂವತ್ತು ನಿಮಿಷಗಳಷ್ಟೇ ಸಾಕು.ಹಿಂದೆ ಈ ಪ್ರದೇಶದಲ್ಲಿ ನಡೆದ ಭೂಕಂಪ ಉಂಟು ಮಾಡಿದ ಪರಿಣಾಮಗಳ ಮಾಹಿತಿಯನ್ನೂ ಕಂಪ್ಯೂಟರ್ ಬಳಸಿಕೊಂಡು ಈ ವಿಶ್ಲೇಷಣೆ ನಡೆಸುತ್ತದೆ."ಆನ್ ಡಿಮಾಂಡ್’ ಹೆಸರಿನ ಸೂಪರ್ ಕಂಪ್ಯೂಟರ್ ಇನ್ನೂರೈವತ್ತರು ಸಂಸ್ಕಾರಕಗಳನ್ನು ಹೊಂದಿದೆ. ಲಿನಕ್ಸ್ ಕಾರ್ಯನಿರ್ವಹಣ ವ್ಯವಸ್ಥೆ ತಂತ್ರಾಂಶ ಇದರಲ್ಲಿದೆ.