ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾಳಿಂಗ ಸರ್ಪಕ್ಕೂ ರಾಜಧಾನಿ ಈ ಆಗುಂಬೆ

ಎಂಥ ಚೆಂದ ನಮ್ಮ ಆಗುಂಬೆ. ಆ ಆಗುಂಬೆಗೆ ಅದೆಷ್ಟೋ ಗರಿಗಳು. ಪ್ರಕೃತಿ, ಸೂರ್ಯಾಸ್ತಮಾನ, ಮಳೆಯ ರಾಜಧಾನಿ ಹೀಗೆ. ಈ ಚೆಂದಕ್ಕೆ ಮತ್ತೊಂದು ಗರಿ ಅದು. ಈಗ ಕಾಳಿಂಗಸರ್ಪಗಳ ರಾಜಧಾನಿಯೂ ಹೌದು ಎಂಬುದು ದೃಢಪಟ್ಟಿದೆಯಂತೆ.
ಕಾಳಿಂಗ ಸರ್ಪ ಅಲಿಯಾಸ್ ಕಿಂಗ್‌ಕೋಬ್ರಾ ಜಗತ್ತಿನ ವಿಷದ ಹಾವುಗಳಲ್ಲಿಯೇ ಅತ್ಯಂತ ದೊಡ್ಡದಾದ ಹಾವು. ಇದನ್ನು ದೃಡ ಪಡಿಸಿರುವವರು ವಿಶ್ವದ ಖ್ಯಾತ ಉರಗ ತಜ್ಞ ವಿಟೇಕರ್.
೧೯೭೧ರಲ್ಲಿ ಆಗುಂಬೆಗೆ ಭೇಟಿ ನೀಡಿದ್ದ ವಿಟೇಕರ್‌ಗೆ ಮೊದಲು ಇಲ್ಲಿನ ಮನೆಯೊಂದರಲ್ಲಿ ೯ ಅಡಿ ಉದ್ದದ ಕಾಳಿಂಗ ದರ್ಶನವಾಯಿತು. ಇದಾದ ಕೆಲವೇ ದಿನಗಳಲ್ಲಿ ಇನ್ನೊಂದು ಕಾಳಿಂಗ ಹಾವು ಕಾಣಿಸಿಕೊಂಡಿತು. ಮತ್ತು ಕಾಳಿಂಗನ ಬಗ್ಗೆ ಇಲ್ಲಿನ ಜನರು, ಅಂಗಡಿ ಕಟ್ಟೆಗಳಲ್ಲಿ ಮಾತನಾಡಲು ಪ್ರಾರಂಭಿಸಿದಾಗ ಅವರಿಗೆ ಕುತೂಹಲ ಹೆಚ್ಚಿತು. ನಂತರ ಕಾಳಿಂಗನಬಗ್ಗೆ ರಿಸರ್ಚ್ ಮಾಡಲು ನಿರ್ಧರಿಸಿಯೇ ಬಿಟ್ಟರಂತೆ. ಹೀಗೆ ವಿವರಿಸಿದ್ದು ಅವರ ಶಿಷ್ಯ ಗೌರಿಶಂಕರ್.
ಈ ಕಾಳಿಂಗ ರಾಜಧಾನಿಯಲ್ಲಿಗ ‘ರಾಜರ’ ರಿಸರ್ಚ್ ನಡೆಯುತ್ತಿದೆ. ಅವರ ಹಾವ- ಭಾವ, ಸಂತಾನ... ಹೀಗೆ ದಾಖಲಾತಿ ಆಂದೋಲನ.
ಈ ಆಂದೋಲನದ ಪ್ರಥಮ ಮಾಹಿತಿ ಪ್ರಕಾರ ಆಂಗುಬೆ ಕಾಳಿಂಗನ ರಾಜಧಾನಿ ಎಂಬುದು ಬಹುತೇಕ ಖಚಿತವಾಗುವಂತೆ ಅಂಶಗಳು ಕಂಡುಬಂದಿವೆ.
ಆಗುಂಬೆಯಲ್ಲಿ ವಿಟೇಕರ್ ನೇತೃತ್ವದಲ್ಲಿ ಪ್ರಾರಂಭವಾಗಿರುವ ಮಳೆಕಾಡು ಸಂಶೋಧನಾ ಕೇಂದ್ರದಲ್ಲಿ ಈಗ ಈ ಪ್ರಕ್ರಿಯೆ ಪ್ರಾರಂಭವಾಗಿದ್ದು ಇನ್ನೊಂದು ವರ್ಷದಲ್ಲಿ ಕಾಳಿಂಗ ಸರ್ಪದ ಸಾಕಷಷ್ಟು ಮಾಹಿತಿ ಸಿದ್ದವಾಗುತ್ತದೆ.
ಇದರ ಬಗ್ಗೆ ರಿಸರ್ಚ್ ನಡೆಸಿ ಪ್ರಪಂಚಕ್ಕೆ ಮಾಹಿತಿ ನೀಡಲು ವಿಟೇಕರ್ ನೇತೃತ್ವದ ತಂಡ ಶ್ರಮಿಸುತ್ತಿದೆ.
ಕಳೆದ ೨೨ ತಿಂಗಳಿಂದ ಮಳೆಕಾಡು ಸಂಶೋಧನಾ ಕೇಂದ್ರ ಈ ಕುರಿತು ತನ್ನ ಚಟುವಟಿಕೆ ಪ್ರಾರಂಭಿಸಿದ್ದು, ಪ್ರಸ್ತುತ ಪಶ್ಚಿಮ ಘಟ್ಟದಲ್ಲಿ ಕಾಳಿಂಗನ ನಡೆದಾಟದ ಬಗ್ಗೆ ಅಬ್ಸರ್‌ವೇಶನ್ ಕಾರ್‍ಯ ನಡೆದಿದೆ.
‘ನಾವೀಗ ರೇಡಿಯೋ ಟೆಲಿಮೀಟರ್ ಮತ್ತು ಮೆಡಿಕಲ್ ಕ್ಯುಟೆರಿ ತಂತ್ರಜ್ಞಾನದ ಮೂಲಕ ಪರಿಶೀಲನಾ ಕಾರ್‍ಯ ನಡೆಸಲು ಸಿದ್ದತೆ ನಡೆಸುತ್ತಿದ್ದೇವೆ. ಇದನ್ನು ಬಳಸಲು ಅರಣ್ಯ ಇಲಾಖೆಯಿಂದ ಪರ್‍ಮಿಶನ್ ಬೇಕು. ನಂತರ ಕಾಳಿಂಗ ಸರ್ಪದ ಮೇಲೆ ಪ್ರಯೋಗ ಪ್ರಾರಂಭವಾಗುತ್ತದೆ’ ಎನ್ನುತ್ತಾರೆ ಸಂಶೋಧನಾ ಕೇಂದ್ರದ ಮುಖ್ಯ ಅಧಿಕಾರಿ ಪಿ. ಗೌರಿಶಂಕರ್.
ಗೌರಿಶಂಕರ್ ಹೇಳುವಂತೆ, ಅವರು ಇಲ್ಲಿಗೆ ಬಂದ ನಂತರ ಸಮೀಪದ ಮನೆ, ಕೊಟ್ಟಿಗೆ, ಬಾವಿಯಲ್ಲಿ ಕಂಡುಬಂದ೫೦ಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಹಿಡಿದಿದ್ದಾರೆ. ಅದೂ ಸುತ್ತಮುತ್ತಲ ಹಳ್ಳಿಗಳ ಮನೆಗಳಲ್ಲಿ ಸೇರಿಕೊಂಡಿರುವ ಕಾಳಿಂಗನನ್ನು ಹಿಡಿಯಲಾಗಿದೆ. ಹಾಗೆ ಅದನ್ನು ಅಲ್ಲೇ ಸಮೀಪದ ಕಾಡಿನಲ್ಲಿ ಬಿಡಲಾಗಿದೆ.
ಈ ವರೆಗೆ ಕಾಡಿನಲ್ಲಿ ಸಿಕ್ಕ ಕಾಳಿಂಗನ ಮೊಟ್ಟೆಗಳನ್ನು ಸಂಗ್ರಹಿಸಲಾಗಿತ್ತು. ನಂತರ ೧೮ ತಿಂಗಳಲ್ಲಿ ಸುಮಾರು ೧೧೯ ಮರಿಗಳನ್ನು ಪುನಃ ಕಾಡಿಗೆ ಬಿಡಲಾಗಿದೆ.

’ ಇರುವುದೆಲ್ಲವ ಬಿಟ್ಟು ......' - ಏನಿದರ ನಿಜವಾದ ಅರ್ಥ?

’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ’ - ಅಡಿಗರ ಕವಿತೆಯ ಈ ಸಾಲು ಕ್ಲೀಶೆ (Cliche) ಅನ್ನಿಸುವಷ್ಟರ ಮಟ್ಟಿಗೆ ಉಪಯೋಗವಾಗಿದೆ.

ಆದರೆ ನಾನು ಎಲ್ಲೋ ಓದಿದ ನೆನಪು ಹೀಗಿದೆ:

Original ಕವಿತೆಯಲ್ಲಿ ಈ ವಾಕ್ಯದ ಕೊನೆಗೊಂದು ಪ್ರಶ್ನಾರ್ಥಕ ಚಿಹ್ನೆ ಇದೆಯಂತೆ:
’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?’ - ಎಂದು.

’ಡುಂಡಿ’ನಃ ಪದಲಾಲಿತ್ಯಮ್...

ಅಮೆರಿಕದ ಕನ್ನಡ ಸಾಹಿತ್ಯ ರಂಗವು ಇತ್ತೀಚೆಗೆ (19,20 ಮೇ 2007) ಚಿಕಾಗೊದಲ್ಲಿ ’ವಸಂತ ಸಾಹಿತ್ಯೋತ್ಸವ’ವನ್ನು ಹಮ್ಮಿಕೊಂಡಿತ್ತು. ಆ ಸಂದರ್ಭದಲ್ಲೇ ಆಧುನಿಕ ಕನ್ನಡ ಹಾಸ್ಯಸಾಹಿತ್ಯವನ್ನು ಪರಿಚಯಿಸುವ ’ನಗೆಗನ್ನಡಂ ಗೆಲ್ಗೆ’ ಎಂಬ ಉದ್ಗ್ರಂಥವೊಂದನ್ನು ಬಿಡುಗಡೆ ಮಾಡಲಾಯಿತು. ಗ್ರಂಥದ ಮೊದಲ ಭಾಗದಲ್ಲಿ ಕನ್ನಡದ ಹಾಸ್ಯಸಾಹಿತಿಗಳ ಕುರಿತಾದ ಲೇಖನಗಳಿವೆ. ಅವುಗಳಲ್ಲಿ ಹೆಚ್ಚಿನವು ಅಮೆರಿಕನ್ನಡಿಗ ಬರಹಗಾರರಿಂದೆಲೇ ಬರೆಯಲ್ಪಟ್ಟವು. ಖ್ಯಾತ ಹನಿಗವಿ ಎಚ್.ಡುಂಡಿರಾಜ್ ಬಗ್ಗೆ ಲೇಖನ ಬರೆಯುವ ಜವಾಬ್ದಾರಿ ನನಗೆ ವಹಿಸಿದ್ದರು, ಅದನ್ನು ತಕ್ಕಮಟ್ಟಿಗೆ ನಿಭಾಯಿಸಿ ಲೇಖನವನ್ನು ಸಲ್ಲಿಸಿದ್ದೆ. ಅದು ಪುಸ್ತಕದಲ್ಲಿ ಪ್ರಕಟವಾಗಿದೆ. ಲೇಖನದ ಮೂಲಪ್ರತಿಯ ಪಿ.ಡಿ.ಎಫ್ ನಿಮ್ಮ ಓದಿಗಾಗಿ, ಇಲ್ಲಿದೆ.

ಮೂಡನಂಬಿಕೆ

ಮೂಡನಂಬಿಕೆ
೧. ಮನೆಯಿಂದ ಹೊರಗಡೆ ಹೋಗಬೇಕೆಂದಾಗ ಎಡವಿದರೆ , ನೀವು ಕುಳಿತು ಹೋಗಬೇಕಂತೆ .
೨. ನೀವು ಮನೆಯಿಂದ  ಹೊರಗಡೆ ಹೋಗಬೇಕಾದರೆ, ಎದುರುಗಡೆ ಖಾಲಿ ಬಿಂದಿಗೆ ನೋಡಿದರೆ, ನಿಮ್ಮ ಕೆಲಸ ಆಗಲ್ವಂತೆ .
೩. ಬೆಕ್ಕು ಅಡ್ಡ ಬಂದರೆ, ನಿಂ ಕೆಲಸ ಎಡವಟ್ಟು.
೪. ಎಡ (ಬಲ) ಗಣ್ಣು ರೆಪ್ಪೆ ಬಡಿದರೆ, ಏನೊ ಆಪತ್ತು.

"ಆವರಣ" -ನನ್ನ ತತ್ ಸಮಯದ ಪ್ರತಿಕ್ರಿಯೆ

ಕಳೆದ ತಿಂಗಳು ಮಂಗಳೂರಿನ ಸಾಹಿತ್ಯಕೇಂದ್ರದಿಂದ ಎಸ್.ಎಲ್. ಭೈರಪ್ಪನವರ ಹೊಸಪುಸ್ತಕ "ಆವರಣ" ಕೊಂಡುಕೊಂಡೆ. ಓದುತ್ತಾ ಹೋದಂತೆ ಪುಸ್ತಕ ನನ್ನ ಮನಸ್ಸನ್ನೆ ಆವರಿಸಿಕೊಂಡಿತು. ಇನ್ನೂ ಓದಿ ಮುಗಿದಿಲ್ಲ.

ಮಿ. ಹರ್ಜ್ ರಿಗೆ, ೧೦೦ ನೇ ವರ್ಷದ ಜನ್ಮದಿನೋತ್ಸವವಾದರೆ, ಟಿನ್ ಟಿನ್ ಗೆ ೭೮ ನೆ ವರ್ಷದ ಜನ್ಮದಿನ !

ಇದೇ ದಿನ, ೧೦೦ ವರ್ಷಗಳ ಹಿಂದೆ, ಅಂದರೆ, ಮೇ ೨೨, ೧೯೦೭ ರಲ್ಲಿ ಬೆಲ್ಜಿಯಮ್ ದೇಶದ ಬ್ರಸಲ್ಸ್ ಪಟ್ಟಣದಲ್ಲಿ , ಹರ್ಜ್ ಜನ್ಮಿಸಿದ್ದರು. ಈಗ ಅವರು ಬದುಕಿದ್ದಿದ್ದರೆ, ತಮ್ಮ ಜೀವನದ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ, ಅವರು ಈ ದಿನವನ್ನು ನೋಡುವ ಮೊದಲೇ ಸುಮಾರು ೨೪ ವರ್ಷಗಳ ಹಿಂದೆಯೇ ಕಣ್ಣುಮುಚ್ಚಿದ್ದರು.