ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಾತಿನಲ್ಲಿ ಹುರುಳು

ಕೆಲದಿನಗಳ ಹಿಂದೆ ಒಂದು ಸರಸ್ವತಿ ಸ್ತುತಿಯ ಅನುವಾದದ ಪ್ರಯತ್ನ ಮಾಡಿದ್ದೆ. ಇವತ್ತು ಶಿವ-ಪಾರ್ವತಿಯರ ಮೇಲೊಂದು ಸ್ತುತಿ.

 

ಕಾಳಿದಾಸನ  ರಘುವಂಶದ ಮಂಗಳ ಶ್ಲೋಕ ಹೀಗಿದೆ:

 

वागर्थाविव सम्पृक्तौ वागर्थ प्रतिपत्तयॆ |

जगतः पितरौ वन्दे पार्वती परमेश्वरौ ॥

 

ಡೆಡ್ಲಿ ಕಾಂಬಿನೇಶನ್ ಮತ್ತು ಇಡ್ಲಿ ಕಾಂಬಿನೇಶನ್..

ಅಮೆರಿಕದ ಜಂಕ್‌ಫುಡ್‌ಗಿಂತ ನಮ್ಮ ಭಾರತೀಯ ಭಕ್ಷ್ಯಭಂಡಾರದಲ್ಲಿ ಕಂಡುಬರುವ ಕಾಂಬಿನೇಶನ್ಸೇ ಮಹದಾನಂದವನ್ನು ಕೊಡುವಂಥವು ಎಂದು ನನ್ನ ಅಂಬೋಣ.

ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ

ದುಡಿಮೆಗೆ ಗುರಿಯಿರಲಿ - ಸ್ವಾತಂತ್ರ ಹಬ್ಬ ವಿಶೇಷ

"ದುಡಿಮೆಗೆ ಗುರಿಯಿರಲಿ" ಸರ್. ಎಂ.ವಿ ಅವರ ಅನುಭವಾಮೃತ. ದೇಶವನ್ನು ದುಡಿಮೆಯಿಂದ ಹೇಗೆ ಪ್ರಗತಿಯ ಪಥದಲ್ಲಿ ನಡೆಸಬಹುದು ಎಂದು ತೋರಿಸಿಕೊಟ್ಟವರು.

ಇಂಡಿಯ-ಆಸ್ಟ್ರೇಲಿಯ ಗೆಳೆತನ ಜಾತ್ರೆ

 

ಭಾನುವಾರ ಆಗಸ್ಟ್ ೧೨, ಸಿಡ್ನಿಯ ಒಲಂಪಿಕ್ ಅಥ್ಲೆಟಿಕ್ ಸೆಂಟರ್‌ನಲ್ಲಿ ಇಂಡಿಯಾದ ಅರವತ್ತನೇ ವರ್ಷದ ಸ್ವಾತಂತ್ಯ್ರ ಉತ್ಸವ. ಇದು ಭಾರತದ ಹೊರಗೆ ನಡೆಯೋ ಸ್ವಾತಂತ್ಯ್ರ ಉತ್ಸವಗಳಲ್ಲಿ ಅತಿ ದೊಡ್ಡದಂತೆ. ಹತ್ತಾರು ಸಾವಿರ ಜನ ಇಂಡಿಯಾದವರು ಸೇರತಾರೆ. ದಿನವಿಡೀ ಹಾಡು ಕುಣಿತ ಊಟ ತಿಂಡಿ ಜಾತ್ರೆ. ಇದರ ನಡುವೆ ಆಸ್ಟ್ರೇಲಿಯಾದ ಕೆಲವು ರಾಜಕಾರಣಿಗಳನ್ನ ಕರೆಸಿ ಬೆನ್ನು ತಟ್ಟಿಸಿಕೊಳ್ಳೋ ಬೇಜವಾಬ್ದಾರಿತನ ನಮ್ಮ ಸೂಟುಧಾರಿ ಇಂಡಿಯನ್ "ಎಂಟರ್‌ಪ್ರೆನರ್ಸ್‌"ಗಳಿಗೆ. ಹಲ್ಲುಗಿಂಜಿಕೊಂಡು ಅವರ ಜತೆ "ಸಭ್ಯತೆಯ ಲಂಚ್" ಬೇರೆ.

ತ್ರೇತಾ, ದ್ವಾಪರಾ ಮತ್ತು ಕಲಿಯುಗದ ಮಹಿಳೆಯರು.

ನಾನು ನನ್ನ ೭, ೮ನೇವಯಸ್ಸಿನಿಂದ ಪುರಾಣ ಕಥೆಗಳನ್ನು ಓದುತ್ತಾ ಬಂದಿದ್ದೇನೆ. ಕಾಲೆೇಜು ಮೆಟ್ಟಲು ಹತ್ತುವ ತನಕ ಪುರಾಣಗಳು ನನ್ನಲ್ಲಿ ಯಾವ ತರದ ಸಂಶಯಗಳನ್ನು ಹುಟ್ಟಿಸಿರಲ್ಲಿಲ್ಲ. ಬಹುಶಃ ಹಿರಿಯರು ನಮ್ಮಲ್ಲಿ ಯಾವುದೇ ಸಂಶಯ ಮೂಡದಂತೆ ಹೆದರಿಕೆ ಮೂಡಿಸಿರಬೇಕು. ಆಗ ಪುರಾಣಗಳು ಕೇವಲ ಕಥೆಗಳಂತೆ ಕಾಣುತ್ತಿತ್ತು. ನಾನು ಬೆಳೆದಂತೆ ಮಹಾಭಾರತ, ರಾಮಾಯಾಣದ ಕಥೆಗಳೆಲ್ಲವೂ ಒಂದಾನೊಂದು ಕಾಲದಲ್ಲಿ ನಡದ ನಿಜ ಘಟನೆಗಳೆಂದು ತಿಳಿಯಿತು. ಮತ್ತು ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟಿಸಿದವು. ನಮ್ಮ ಸಮಾಜವಿಜ್ಞಾನ ಪುಸ್ತಕದಲ್ಲಿ ತಿಳಿಸುವಂತೆ ವೇದದ ಕಾಲದಲ್ಲಿ ಮಹಿಳೆಯರಿಗೆ ಅತ್ತ್ಯುತ್ತಮ ಸ್ಥಾನ ದೊರಕ್ಕಿತ್ತು ಎಂದು ತಿಳಿದು ಬರುತ್ತದೆ. ಆದರೆ ತ್ರೇತಾ ಮತ್ತು ದ್ವಾಪರಾ ಯುಗದಲ್ಲಿನ ನಾಯಕಿಯರ ಪಾಡು ಹೇಗಿತ್ತು? ಸೀತೆ, ದ್ರೌಪದಿ, ಕುಂತಿ, ಊರ್ಮಿಳೆ ಇವರೆಲ್ಲಾ ಅನುಭವಿಸಿದ ಪಾಡು ನೋಡಿದರೆ ಅಯ್ಯೋ ಎನಿಸುತ್ತದೆ. ಸೀತೆಯನ್ನು ಕಾಡಿಗಟ್ಟುವಾಗ ಯಾರು ಈ ಬಗ್ಗೆ ಚಕಾರವೆತ್ತುವುದಿಲ್ಲ. ವಿಚಿತ್ರವಲ್ಲವೇ? ಯಾವನೋ ಒಬ್ಬನ ಮಾತಿಗೆ ಬೆಲೆಕೊಟ್ಟು ರಾಮ ತನ್ನ ಪ್ರಿಯ ಪತ್ನಿಯನ್ನು ಕಾಡಿಗಟ್ಟುವುದೇ? ಹೋಗಲಿ, ಆಕೆಯ ವಾಸ್ತವ್ಯದ ಬಗ್ಗೆ ಏನಾದರೂ ಮಾಡಬಹುದಿತ್ತಲ್ಲವೇ! ಲಕ್ಶ್ಮಿಯ ಅವತಾರವೆಂದು ತಿಳಿಯುವ ಸೀತೆಗೇ ಈ ತರದ ಕಷ್ಟ ಬರಬೇಕಾದರೆ ಉಳಿದ ಮಹಿಳೆಯರ ಪಾಡು ಏನಾಗಿರಬಹುದು?

ಶಾಸ್ತ್ರೀಯ ಸಂಗೀತ

ಕರ್ನಾಟಕ ಶಾಸ್ರೀಯ ಸಂಗೀತದಲ್ಲಿ ವಿದ್ವಾನ್, ವಿದುಷಿ ಎಂಬ ಪದಗಳಿವೆ. ಹಿಂದೂಸ್ತಾನಿ ಸಂಗೀತದಲ್ಲಿ ಉಸ್ತಾದ್, ಪಂಡಿತ್ ಶಬ್ದಗಳಿಗೆ ಸ್ತ್ರೀಲಿಂಗ ಶಬ್ದ ಯಾವುದು ಬಲ್ಲವರು ತಿಳಿಸಿ

ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ - ಪುಸ್ತಕ ಬಿಡುಗಡೆ ಸಮಾರಂಭ

ಎಸ್. ದಿವಾಕರ್ ಅವರ
ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ
ಪುಸ್ತಕ ಬಿಡುಗಡೆ ಸಮಾರಂಭ

ಪುಸ್ತಕ ಬಿಡುಗಡೆ ಮತ್ತು ಅಧ್ಯಕ್ಷತೆ
ಪ್ರೊ. ಕೆ. ಎಸ್. ನಿಸಾರ್ ಅಹಮದ್

ಮುಖ್ಯ ಅತಿಥಿ
ಶ್ರೀ ವಿವೇಕ ಶಾನಭಾಗ

ದಿವಾಕರ್ ಅವರ ಅತಿಸಣ್ಣಕತೆಗಳನ್ನು ಓದುವವರು
ಶ್ರೀ ರವಿ ಬೆಳಗೆರೆ
ಶ್ರೀ ಎಸ್. ಸುರೇಂದ್ರನಾಥ್
ಶ್ರೀ ಸಿಹಿ ಕಹಿ ಚಂದ್ರು
ಶ್ರೀ ಜಹಾಂಗೀರ್
ಶ್ರೀಮತಿ ಪವಿತ್ರಾ ಲೋಕೇಶ್

ಭಾವಗೀತೆಗಳ ಗಾಯನ
ಕಾಸರವಳ್ಳಿ ಸಹೋದರಿಯರು

19-08-2007 ಭಾನುವಾರ ಬೆಳಿಗ್ಗೆ 10.30
ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ನಂ. 6 ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು – 560 004