ಮಾತಿನಲ್ಲಿ ಹುರುಳು
ಕೆಲದಿನಗಳ ಹಿಂದೆ ಒಂದು ಸರಸ್ವತಿ ಸ್ತುತಿಯ ಅನುವಾದದ ಪ್ರಯತ್ನ ಮಾಡಿದ್ದೆ. ಇವತ್ತು ಶಿವ-ಪಾರ್ವತಿಯರ ಮೇಲೊಂದು ಸ್ತುತಿ.
ಕಾಳಿದಾಸನ ರಘುವಂಶದ ಮಂಗಳ ಶ್ಲೋಕ ಹೀಗಿದೆ:
वागर्थाविव सम्पृक्तौ वागर्थ प्रतिपत्तयॆ |
जगतः पितरौ वन्दे पार्वती परमेश्वरौ ॥
ವಾಗರ್ಥಾವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ |
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ ||
ಕನ್ನಡಕ್ಕೆ ನನ್ನ ಪ್ರಯತ್ನ:
ನಾ ತಲೆವಾಗುವೆ ಶಿವಶಿವೆಗೆಈ ಜಗದಲೆಲ್ಲರ ಹೆತ್ತವರಬಿಡದೊಡಗೂಡಿಯೆ ಇರುವರಿಗೆಮಾತಲಿ ಹುರುಳು ಬೆಸೆದಂತೆಪದಪದಕ್ಕೆ ಅನುವಾದ ಮಾಡದಿದ್ದರೂ, ಒಟ್ಟಾರೆ ಭಾವನೆಯನ್ನು ಕನ್ನಡಕ್ಕೆ ತರುವ ಪ್ರಯತ್ನವಷ್ಟೇ.ಶಿವ ಪಾರ್ವತಿಯರನ್ನು ಸ್ಮರಿಸುವುದು ಅವರವರಿಗೆ ಬಿಟ್ಟದ್ದು. ಆದರೆ, ಏನು ಮಾತಾಡುವಾಗಲೂ ಹುರುಳಿಲ್ಲದೇ ಆಡಬಾರದುಎಂಬುದಕ್ಕೆ ಒಂದು ಎಚ್ಚರಿಕೆ ಇದು ಎಲ್ಲರಿಗೆ ;)
-ಹಂಸಾನಂದಿ
Rating