ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಡಾರ್ವಿನ್ ಪತ್ರಗಳು ಅಂತರ್ಜಾಲದಲ್ಲಿ ಲಭ್ಯ(ಇ-ಲೋಕ 23) (20/5/2007)

 ವಿಕಾಸವಾದದ ಹರಿಕಾರ,ಮಂಗನಿಂದ ಮಾನವನ ಉಗಮವಾಯಿತೆಂದು ಪ್ರತಿಪಾದಿಸಿದ ವಿಜ್ಞಾನಿ ಡಾರ್ವಿನ್ ತಮ್ಮ ಜೀವಿತ ಕಾಲದಲ್ಲಿ ಬರೆದ ಪತ್ರಗಳ ಸಂಖ್ಯೆ ಅಪಾರ.

ಭಾರತೀಯತೆ ಅಂದ್ರೆ ಏನು?

ನಮ್ಮಲ್ಲಿ ಹಲವರಿಗೆ ಭಾರತೀಯತೆ ಅಂದ್ರೆ ಹಿಂದಿಯಲ್ಲಿ ಮಾತಾಡೋದು, ಹಿಂದಿ ಚಿತ್ರಗಳನ್ನು ನೋಡುವುದು( ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ ) ಎನ್ನುವ ತಪ್ಪು ತಿಳುವಳಿಕೆ ಇದೆ. "ಒಂದು ದೇಶ, ಹಲವು ಭಾಷೆ, ಹಲವು ಸಂಸ್ಕೃತಿ" ಎನ್ನುವುದನ್ನು ನಾವು ಮರೆತಿದ್ದೇವೆಯೆ?
ಹಲವು ಬೇರೆ ಬೇರೆ ತನಗಳಿಂದ ಕೂಡಿ ಒಂದೇತನವನ್ನು ಮೈಗೂಡಿಸಿಕೊಂಡಿದೆ ಎನ್ನುವುದು ಅಪ್ಪಟ ದಿಟ.

ಬೇಬಿ ಸಿಟ್ಟಿಂಗಿಗೆ ಅಮೇರಿಕಾ ಭೇಟಿ

ನಾವಿಬ್ಬರೇ ಬೆಂಗಳೂರಿನಲ್ಲಿ ಇದ್ದೇವೆ. ಮಕ್ಕಳು ಅವರ ಗಂಡಂದಿರ ಮತ್ತು ಮಕ್ಕಳ ಜೊತೆ ಸಂಸಾರ ಮಾಡಿಕೊಂಡು ಅಮೇರಿಕದಲ್ಲಿ ನೆಲೆಸಿದ್ದಾರೆ. ನೀವಿಬ್ಬರೇ ಇದ್ದೀರಿ ಬೇಜಾರಗಲ್ವೆ ಅಂತ ಮಕ್ಕಳು ಕೇಳೋದ್ರಲ್ಲಿ ಆಶ್ಚರ್ಯ ಇಲ್ಲ; ಆದರೆ ನಮ್ಮ ಸುತ್ತುಮುತ್ತಿನವರೂ ಅದೇ ರೀತಿ ಕೇಳ್ತಾರೆ. ನಿಮಗೆ ವಯಸ್ಸಾದ ಕಾಲಕ್ಕೆ ನೋಡಿಕೊಳ್ಳಲು ಹತ್ತಿರದಲ್ಲಿ ಯಾರು ಇಲ್ಲವಲ್ಲ ಎಂದು ನಮಗಿಂತ ಅವರೇ ಪೇಚಾಡಿಕೊಳ್ಳುವವರು 'ಅಯ್ಯೋ ಪಾಪ’ ಅನ್ನೋ ಇನ್ನೊಂದು ಥರಹ ಜನ ಇದ್ದಾರೆ. ಈಗೇನೋ ಅಂತೂ ಇಂತೂ ಗಟ್ಟಿ ಮುಟ್ಟಾಗಿಯೇ ಇದ್ದೀವಿ. ನಾವಿಬ್ಬರೇ ’ಒಂಟಿಯಾಗಿ’ ಇದ್ದೇವೆ. ರ್ಧೈರ್ಯ ಇದೆ; ಅಮೇಲೇನಾಗತ್ತೋ ಅಮೇಲೆ ನೊಡ್ಕೊಳ್ಳೋಣ.

ನಾವು ಮೊದಲಸಾರಿ ಅಮೇರಿಕಾಗೆ ಹೋಗಿದ್ದು ಮೊದಲ ಮಗಳ ಮೊದಲ ಮಗು ಹುಟ್ಟಿದಾಗ. ಸಹಜವಾಗಿ ತಾಯಿಯ ಸನಿಹ ಮಗಳಿಗೆ ಬೇಕೇ ಆಗಿತ್ತು. ಅದೆಲ್ಲ ಸರಿ ನಮ್ಮನ್ನು ಭೇಟಿ ಆದ ಇಂಡಿಯನ್-ಅಮೇರಿಕನ್ನರು ’ಓ ಬೇಬಿ ಸಿಟ್ಟಿಂಗ್‍ಗೆ ಬಂದಿದ್ದೀರಾ’ ಅಂತಾನೇ ಕೇಳೋರು. ಅದು ಆಗಿ ಆಗಲೇ ೯ ವರ್ಷಗಳಾಯಿತು. ಇದಾದ ಮೇಲೆ ಅಗ್ಗಾಗ್ಗೆ ಹೊಗಿಬರುತ್ತಿದ್ದೇವೆ. ಇನ್ನೊಂದಿಬ್ಬರು ಮೊಮ್ಮಕ್ಕಳ ’ಬೇಬಿ ಸಿಟ್ಟಿಂ’ಗಿಗೆ. ಒಂದೆರಡು ಬಾರಿ ಕೆಲವು ಜುಜುಬಿ ಕಾರಣಗಳಿಗೆ ಅಂಥ ಇಟ್ಟುಕೊಳ್ಳಿ.

ಅಲ್ಲಿ ಮಜವಾಗಿರತ್ತೆ ಅಂತ ತಿಳ್ಕೋಬೇಡಿ. ನಮ್ಮ ಕಷ್ಟ ನಮಗೆ; ನಿಮಗೇನ್ ಗೊತ್ತು. ಮೊದಲು ಊರಲ್ಲಿ ನಾವಿಲ್ಲದೇ ಇದ್ದಾಗ ಮನೆ ನೋಡಿಕೊಳ್ಳೋದಕ್ಕೆ ಕಾವಲುಗಾರರು ಬೇಕು. lock on the door is an indication to the gentleman that the resident is out; it is also an invitation to thief to burgle. ಜನ ಹೊಂದಿಸಬೇಕು; ದರ ಕುದುರಿಸಬೇಕು.

ಪುಸಕನಿಧಿ - ಪಾಲಿ ಪಬ್ಬ ಪುಷ್ಪಾಂಜಲಿ - ಇನ್ನಷ್ಟು

ಪಾಲಿ ಪಬ್ಬ ಪುಷ್ಪಾಂಜಲಿ ( ಜೀ.ಪಿ. ರಾಜರತ್ನಂ) ಎನ್ನುವ ಪುಸ್ತಕದಿಂದ ಇನ್ನಷ್ಟು .

ಯಾವುದನ್ನು ಮಾಡಿ ಅನುತಾಪ ಪಡುವನು
ಯಾವುದರ ಪಕ್ವ ಫಲವನ್ನು ಅಳುತ್ತ
ಕಣ್ಣೀರಿನೊಂದಿಗೆ ಅನುಭವಿಸುವನು -
ಮಾಡಿದ ಆ ಕೆಲಸ ಒಳ್ಳೆಯದಲ್ಲ .

ಯಾವುದನ್ನು ಮಾಡಿ ಅನುತಾಪ ಪಡನು
ಯಾವುದರ ಪಕ್ವ ಫಲವನ್ನು ಸಂತೋಷದಿಂದ
ಒಳ್ಳೆಯ ಮನಸ್ಸಿನಿಂದ ಅನುಭವಿಸುವನು -
ಮಾಡಿದ ಆ ಕೆಲಸ ಒಳ್ಳೆಯದು .

ಪುಸ್ತಕ ನಿಧಿ - ಒಂದು ಒಳ್ಳೆಯ ಪಾಲಿ ಪುಸ್ತಕ ( ರಾಜರತ್ನಂ ರದು)

ಸತ್ಯ ಹೇಳಿದರೆ , ಕೋಪಿಸದಿದ್ದರೆ ,
ಬೇಡಿದಾಗ ಕೊಂಚವಾದರೂ ಕೊಟ್ಟರೆ ,
ಈ ಮೂರು ಮೆಟ್ಟಲುಗಳಲ್ಲಿ ದೇವತೆಗಳ ಸಮೀಪ ಹೋಗುವನು.

ಅಪ್ರಮಾದವು ಅಮೃತಕ್ಕೆ ದಾರಿ
ಅಪ್ರಮಾದವು ಮೃತ್ಯುವಿಗೆ ದಾರಿ
ಅಪ್ರಮತ್ತರು ಸಾಯುವದಿಲ್ಲ
ಪ್ರಮತ್ತರು ಸತ್ತಂತೆಯೇ

ಶಾಂತಿಯಿಂದ ಕ್ರೋಧವನ್ನು
ಕೆಟ್ಟುದನ್ನು ಒಳ್ಳೆಯದರಿಂದ
ಜಿಪುಣನನ್ನು ದಾನದಿಂದ

ಜೀವ ಛಂದವಿದೆ..

ಶಿಲಾಬಾಲಿಕೆಯಿವಳೆಂದೇ
ಪ್ರಾಸಬದ್ಧ ಕವನ ರಚಿಸತೊಡಗುತ್ತೇನೆ
ಅವಳಂತೆಯೇ ಒಪ್ಪ, ಓರಣ, ಚಂದ- ಈ ಛಂದ ಎಂದು.

ಕಟ್ಟುಗಳಿಗೆ, ಬೇಲಿಗಳಿಗೆ ಒಗ್ಗಿ ನಿಲ್ಲುವುದಿಲ್ಲ
ಉಕ್ಕಿ, ರೆಕ್ಕೆ ಚಿಮ್ಮಿ ಆಗಸದೆಡೆ,
ಬೆರಗುಗೊಳ್ಳುವಂತೆ ನೋಡುತ್ತಿರೆ
ಹರಿಯುತ್ತದೆ ಇವಳ ಹೃದಯ

ಹಕ್ಕಿಭಾವದಲಿ ಹಾರಿ, ನೀರಭಾವದಲಿ ಹರಿದು,
ಸುಮಭಾವ ಅರಳಿ, ಹಿಮಭಾವ ಕರಗಿ,
ಘಮಭಾವ ಘಮಿಸಿ, ಶಿವಭಾವ ನಮಿಸಿ,

ಗಂಡ-ಹೆಂಡತಿ-ಅತ್ತೆಯ ಕುರಿತ ಮೂರು ಜೋಕುಗಳು!

ಹೆಂಡತಿಯ ಅಥವಾ ಹೆಂಡತಿಯರ ಕುರಿತ ಜೋಕುಗಳನ್ನು ಓದಿ ಸುಸ್ತಾಗಿದ್ದೀರಿ. ಇಲ್ಲಿ ಗಂಡ, ಹೆಂಡತಿ ಮತ್ತು ಅತ್ತೆಯ ಕುರಿತ ಮೂರು ಜೋಕುಗಳಿವೆ. ಓದಿ. ಮೂರೂ ಸನ್ನಿವೇಶಗಳು ನಡೆಯುವುದು ಶವಯಾತ್ರೆಯಲ್ಲಿ.

1- ಗಂಡನ ಕುರಿತ ಜೋಕು:

ಮೋಸದಾಟದ ವಿಷ

(ಸುಖಾಂತವೋ ದುಃಖಾಂತವೋ ತಿಳಿಯದ ಬುದ್ಧ ಜಾತಕ ಕತೆಯನ್ನು ಆಧರಿಸಿದ ಕಥನ ಕವನ)

-೧-
ಊರು ಊರಿಗೆ ಸುತ್ತಿ ಸರಕನು ಕೊಂಡು ಮಾರುತ
ಇರುಳು ಇಳಿದೊಡೆ ಪೇಟೆ ಪಕ್ಕದಿ
ನಿದ್ದೆ ಝಂಪಿಗೆ ಇಳಿವವರೆಗೂ
ಜೂಜನಾಡುವ ರೂಢಿಗಿಳಿದವ ಧನಿಕ ಚುರುಕುಮತಿ.

ಎಂದಿನಂತೇ ಪಣದ ಗಂಟನು
ಹೊತ್ತ ಧನಿಕನು ಜೂಜನಾಡಲು ಕಟ್ಟೆ ಹತ್ತಿದನು.