ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಾಳ ದಾರಿ

ಕೂಡಿ ಕಳೆದು ಗುಣಿಸಿ ಭಾಗಿಸಿ ಏನ ಮಾಡುವೆ?
ಬಾಳದಾರಿಯಲ್ಲಿ ನೀನು ಏತ್ತ ಸಾಗಿಹೆ?

ಸಾದನೆಯ ಮೆಟ್ಟಿಲನ್ನು ಏಷ್ಟು ಏರಿಹೆ?
ಹಾದಿಯಲ್ಲಿ ಸುಖವು ಮಾತ್ರ ಗೌಣವಾಗಿದೆ

ಏರಿ ಏರಿ ಏರಿ ಏರಿ ಮೇಲೆ ಹೊಗಿಹೆ
ಏರುವಾಗ ದಾರಿ ನಗುವು ಕಾಣದಾಗಿದೆ

ಇಂಥ ಹಾದಿ ಬೇಕೇ ನಿನಗೆ ಹಾಗೆ ಸುಮ್ಮನೆ
ಮುಂದೆ ಮುಂದೆ ಹೊಗುವ ಮೊದಲು ಯೋಚಿಸೊಮ್ಮನೆ

ಅಂಧಕಾರವೋ , ಅವಿವೇಕವೋ ?

"ಬೆಳಿಗ್ಗೆ ಬೆಳಿಗ್ಗೆನೆ ಯಾವನ್ ಮುಖ ನೋಡಿದ್ನೋ ಏನೊ, ಅದಕ್ಕೆ ಹಿಂಗ್ ಆಗ್ತಾ ಇದೆ", "ಇವತ್ time ಸರಿ ಇಲ್ಲ, ಆ ಕೆಲಸ ಇವತ್ ಬೇಡ", "ದಿನಾ ಬೆಳಿಗ್ಗೆ ಬಲಗಡೆಯಿಂದನೇ ಏಳ್ಬೇಕು" ಇಂತಹ ಅನೇಕ ಆಧಾರವಿಲ್ಲದ ದೂರುಗಳನ್ನು ಕೇಳಿರಬಹುದು.

ನಾವೆಂಥಾ ಜನ!

ಅಲ್ಲಾ ಗುರು,
ಬಂಜಗೆರೆ ಬರೆದರೆ ಇವರು ಮಾಡುತ್ತಿರುವುದೆಲ್ಲ ಊಹಾಪೋಹ, ತಮಗೆ ಬೇಕಾದನ್ನಷ್ಟೇ ತೆಗೆದು ಮಿಕ್ಕವುಗಳ ಬಗ್ಗೆ ಬೇಕಂತಲೇ ದೃಷ್ಟಿ ಹರಿಸಿಲ್ಲ ಎನ್ನುವ ನಾವು (ನಾನಲ್ಲ, ನಮ್ಮಲ್ಲಿ ಕೆಲವರು) ಭೈರಪ್ಪ ಬರೆದಾಗ ಇದು "ಸಂಪೂರ್ಣ ಸತ್ಯ" ಎಂದು ನಂಬುವುದೇಕೆ?

ಪುಸ್ತಕ ಬಿಡುಗಡೆ

ಪುಸ್ತಕಗಳು: ’ಇನ್ನೊಂದಿಷ್ಟು ವಿಚಿತ್ರಾನ್ನ" ಮತ್ತು "ಮತ್ತೊಂದಿಷ್ಟು ವಿಚಿತ್ರಾನ್ನ"
ಲೇಖಕ: ಶ್ರೀವತ್ಸ ಜೋಷಿ
ಭಾಗವಹಿಸುವವರು: ವಿಶ್ವೇಶ್ವರ ಭಟ್,ವಲ್ಲೀಶ ಶಾಸ್ತ್ರಿ,ದುಂಡಿರಾಜ್
ಸ್ಥಳ:ಬಸವನಗುಡಿ-ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣ
ವಿಶೇಷ ಆಕರ್ಷಣೆ:ವಿಚಿತ್ರಾನ್ನ
ರಿಯಾಯಿತಿ ದರದಲ್ಲಿ ಪುಸ್ತಕಗಳ ಮಾರಾಟ

ದುರ್ಭಿಕ್ಷದಲ್ಲಿ ಅಧಿಕ ಮಾಸ ??

ದುರ್ಭಿಕ್ಷದಲ್ಲಿ ಅಧಿಕ ಮಾಸ ಅನ್ನೋ ಗಾದೆಯನ್ನು ನೀವೆಲ್ಲ ಕೇಳೇ ಇರುತ್ತೀರಿ. ಅಥವಾ ಇದೇ ಅರ್ಥದ ಕ್ಷಾಮದಲ್ಲಿ ಅಧಿಕಮಾಸ ಅನ್ನೋದನ್ನಾದ್ರೂ ಕೇಳಿರ್ತೀರಿ. ಈ ಗಾದೆನಲ್ಲಿ ಅಲ್ಲಿ ಎಂಬ ವಿಭಕ್ತಿ ಸೂಚಕ ಬಿಟ್ಟರೆ, ಇನ್ಯಾವುದೂ ಕನ್ನಡ ಪದ ಇಲ್ಲದಿರುವುದು ಬೇಸರದ ಸಂಗತಿ. ಸರಿ, ಏನನ್ನೋಣ? ಬರದಲ್ಲಿ ಹೆಚ್ಚುವರಿ ತಿಂಗಳು ಎನ್ನಲೇ?

ಸುರಿವ ಮಳೆ, ತಣ್ಣಗೆ ಬೀಸುವ ಗಾಳಿಯಲ್ಲೂ ಹರಿಯುತ್ತಿದೆ ಬೆವರು...!

ಎನ್‌ಕೌಂಟರ್, ಬಸ್ಸಿಗೆ ಬೆಂಕಿ, ನಗನಾಣ್ಯ ಲೂಟಿ-
ಏನಾಗುತ್ತಿದೆ... ಎತ್ತ ಸಾಗುತ್ತಿದೆ ಸುಂದರ ಮಲೆನಾಡು?

ಧೋ... ಎಂದು ಸುರಿಯುವ ಮಳೆ... ಜೊತೆಗೆ ಕೊರೆಯುವ ತಣ್ಣನೆ ಗಾಳಿ. ಈ ಮಧ್ಯೆಯೂ ಮಲೆನಾಡಿನ ಮಂದಿ ಬೆಚ್ಚಿ ಬಿದಿದ್ದಾರೆ. ಮೈಯಲ್ಲಿ ಬೆವರು.
ಭೋರ್ಗರೆವ ಗುಂಡಿನ ಸದ್ದು, ಅಲ್ಲಲ್ಲಿ ಕಾಣಿಸಿ ಉಪಟಳ ಕೊಡುವ ನಕ್ಸಲರು, ಅವರನ್ನು ಹಿಂಬಾಲಿಸಿ ಅತ್ತಿತ್ತ ಸುಳಿದಾಡುವ ಪೊಲೀಸರ ಬೂಟಿನ ಸದ್ದು ದಟ್ಟ ಹಸಿರು ಸೆರಗುಹೊದ್ದ ಮಲೆನಾಡಿನ ಚಿತ್ರಣವನ್ನೇ ಬದಲು ಮಾಡಿದೆ.
ಸತತವಾಗಿ ಕೇಳಿಸುವ ಗುಂಡಿನ ಸದ್ದಿಗೆ ಸದ್ದಿಲ್ಲದೇ ಇಲ್ಲಿನ ಮಂದಿ ಮನೆಹೊಕ್ಕು ಕುಳಿತಿದ್ದಾರೆ.
ತಮ್ಮ ಹಳ್ಳಿ, ಊರಿನ ರಸ್ತೆಯಲ್ಲಿ ಹೋಗುವ ಪ್ರತಿಯೊಬ್ಬರನ್ನೂ ಕಿಟಕಿಯಿಂದಲೇ ಇಣುಕಿ ಅನುಮಾನಿಸುತ್ತಾ ನೋಡುತ್ತಾರೆ.
ಚಿಕ್ಕಮಗಳೂರು ಜಿಲ್ಲೆಯ ಮೆಣಸಿನ ಹಾಡ್ಯ, ಶಿವಮೊಗ್ಗ ಜಿಲ್ಲೆಯ ತಲ್ಲೂರು ಅಂಗಡಿಯಲ್ಲಿ ನಡೆದ ನಕ್ಸಲರಿಂಗ ಸಂಬಂಧಿಸಿದ ಎರಡು ಘಟನೆಗಳು ಈಗ ಪ್ರದೇಶದ ಜನರನ್ನು ತಬ್ಬಿಬ್ಬು ಮಾಡಿದೆ. ಊರಲ್ಲಿ ಇರಲೂ ಆಗಲೇ, ಬಿಡಲೂ ಆಗದೇ ತ್ರಿಶಂಕು ಸ್ಥಿತಿಯಲ್ಲಿ ಸಿಕ್ಕಿದ್ದಾರೆ.

ನೆಪ

 

ಹಾದರಕ್ಕಿಳಿದ ಗಂಡನ ಕತ್ತಿನಪಟ್ಟಿ
ನನ್ನ ಮುಷ್ಟಿಯಲ್ಲಿ ಕೊಸರುವಾಗ
"ಮಹಾಭಾರತದಲ್ಲೇ ಹಾದರವಿದೆ..." ಎಂಬ ಅವನ
ಒಡಕು ದನಿಯ ಸಣ್ಣ ಮಾತು
ನನ್ನ ಮುಟ್ಟದೆ
ಅಷ್ಟು ದೂರ ನಡುಗಾಳಿಯಲ್ಲಿ
ತತ್ತರಿಸಿತು.

ಚಿಕ್ಕದಾಗಿರಲಿ, ಚೊಕ್ಕವಾಗಿರಲಿ !

Brevity is the soul of wit

---- Shakespeare - Hamlet, 1603

"Words are like leaves, and where they most abound, Much fruit of sense is rarely found"

---- Alexander Pope in An Essay in Criticism 1711

ಎತ್ತು ಉಚ್ಚೆ ಹೊಯ್ ದಂತೆ ಬರೆಯುತ್ತಾಆಆ ಹೋಗುವವರು ನಾನೂರು ವರುಷ ಹಿಂದೆಯೂ ಇದ್ದರು ಎಂಬುದು ಈ ಮೇಲಿನ ಎರಡು ನುಡಿಮುತ್ತುಗಳಿಂದ ತಿಳಿಯುತ್ತದೆ.