ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ದೇವರು ಮತ್ತು ನಾವು

”ದೇವರು ಎಲ್ಲಿದ್ದಾನೆ ಬಿಡಿ! ಅವನು ಇದ್ದಿದ್ದರೆ ಇಷ್ಟೆಲ್ಲ ಅನ್ಯಾಯ-ಅನಾಚಾರ ಆಗುತ್ತಿರಲಿಲ್ಲ. ಅವನು ಕಣ್ಮುಚ್ಚಿ ಕುಳಿತಿದ್ದಾನೆ. ಕಲ್ಲಾಗಿದ್ದಾನೆ” ಹೀಗೆ ಹೇಳುವವರಿದ್ದೇವೆ.  ಅತೀವ ಕಷ್ಟ ಕಾರ್ಪಣ್ಯಗಳಿಂದ,ಮಾನಸಿಕ ತಳಮಳ,ಹಿಂಸೆ-ಕಿರುಕುಳದಿಂದ ಬೇಸತ್ತಾಗ ನಿಜವಾಗಲೂ ದೇವರು ಎಲ್ಲಿದ್ದಾನೆ? ದೇವರು ಎಂದರೇನು ಚಿಂತಾಕ್ರಾಂತರಾಗುತ್ತೇವೆ...
 

ಮಾತಾಡು ಮಾತಾಡು ಮಲ್ಲಿಗೆ!

ಝಣ ಝಣ ಝಣ ಝಣ ಕಾಂಚಾಣದಲ್ಲಿ
ಅಮೇರಿಕದ ಲಾಂಛನದಲ್ಲಿ
.............................
.............................
ಎಲ್ಲಾ ಮಾಯ, ಇನ್ನು ನೀವೂ ಮಾಯ!
ನಾವೂ ಮಾಯ, ಇನ್ನು ನೀವೂ ಮಾಯ!

'ಮಾತಾಡು ಮಾತಾಡು  ಮಲ್ಲಿಗೆ' ಚಿತ್ರದ ಈ ಹಾಡು ಇಂದಿನ ರಾಜಕೀಯಕ್ಕೆ ಸನ್ನಿವೇಶಕ್ಕೆ ತಕ್ಕುದಾಗಿದೆ. ಈ ಚಿತ್ರದಿಂದ ಇನ್ನಷ್ಟು ನಿರೀಕ್ಷಿಸೋಣ.

ಯಾರು ಹಿತವರು ನಮಗೆ - ಕೃತಿಯೋ , ಕರ್ತೃವೋ?

ಒ೦ದು ಸಾಹಿತ್ಯ ಕೃತಿಯನ್ನು ಕೊಳ್ಳುವ ಮೊದಲು ಯೋಚನೆಗೆ ಬರುವುದು - ಯಾವ ಪುಸ್ತಕವನ್ನು ಕೊಳ್ಳಲಿ ? ಕಾವ್ಯವಾದರೆ, ಯಾವ ಕವಿಯದ್ದು ? ಕಾದ೦ಬರಿಯಾದರೆ, ಯಾರದ್ದು ಚೆನ್ನ ? ಯಾವ ಕತೆಗಾರನ ಕತೆಗಳು ಸೊಗಸು ? ... ಹೀಗೇ ಅಲ್ಲವೇ ಲಕ್ಷಾ೦ತರ ಕೃತಿಗಳಲ್ಲಿ ನಾವು ಒ೦ದೆರಡನ್ನು ಆರಿಸಿಕೊಳ್ಳುವ ವಿಧಾನ ? ಇದು ಸತ್ಯ ಮತ್ತು ಸಹಜ ಎ೦ದೆನಿಸುತ್ತದೆ.

ಸ್ನೇಹಿತನ ಶಿಫಾರಸ್ಸಿನ ಮೇರೆಗೋ, ಪ್ರಸಿದ್ಧ ಸಾಹಿತಿಯದೆ೦ದೋ ಅಥವಾ ಭಾರೀ ಚರ್ಚೆಗೆ ಗ್ರಾಸವಾಗಿದ್ದೆ೦ದೋ, ಒ೦ದು ಪುಸ್ತಕವನ್ನು ಕೊ೦ಡು ಓದಲು ಪ್ರಾರ೦ಭಿಸುತ್ತೇವೆ. ಕ್ರಮೇಣ ಒ೦ದು ಇಷ್ಟವಾಗಿ, ಇನ್ನೊ೦ದು ಆಗದೇ, ನಮ್ಮ ರುಚಿ ನಮಗೇ ಗೊತ್ತಾಗಿ, ಯಾರ ಪಾಕ ಹೇಗಿರುತ್ತದೆ೦ಬ ಕಲ್ಪನೆ ಬರತೊಡಗಿ, ಓದಿ ಓದಿ ಕೊನೆಗೆ ತಮ್ಮ ತಮ್ಮ ಅಭಿರುಚಿಗೆ ಎ೦ತಹ ಪುಸ್ತಕವನ್ನು ಕೊಳ್ಳಬೇಕು ಎ೦ಬುದನ್ನೂ ತರ್ಕಬದ್ಧವಾಗಿ ನಿರ್ಧರಿಸುವುದರ ಮಟ್ಟಿಗೆ ನಮ್ಮ ಓದು ಬೆಳೆದುಬಿಡುತ್ತದೆ.

ಇಷ್ಟು ಸಲೀಸಾಗಿ ಒಬ್ಬ ಓದುಗ ತನ್ನ ಸಾಹಿತ್ಯ ರುಚಿಯನ್ನು ಕ೦ಡುಹಿದಿದುಕೊ೦ಡುಬಿಟ್ಟಿದ್ದರೆ ಅಥವಾ ಕೃತಿ ಆಯ್ಕೆಯಲ್ಲಿ ಮನಸ್ಸು ಅಷ್ಟು ಸ್ವತ೦ತ್ರ್ಯವಾಗಿದ್ದಿದ್ದರೆ ನಾವು ಭಯಪಡಬೇಕಿರಲಿಲ್ಲ. ಬದಲಾಗಿ ಇ೦ದು ಕರ್ತೃ ಆಧಾರಿತ, ಅದರಲ್ಲೂ ಕರ್ತೃವಿನ ರಾಜಕೀಯ, ವೈಚಾರಿಕ ಮತ್ತು ವೈಯುಕ್ತಿಕ ನಿಲುವುಗಳ ನೆಲೆಗಟ್ಟಿನಮೇಲೇ ಅವರ ಕೃತಿಗಳನ್ನು ಅಳೆದು, ಓದುಗರ ವರ್ಗೀಕರಣವಾಗುತ್ತಿರುವುದು ಸ್ವತ: ಓದುಗರಿಗೆ ಮತ್ತು ಸಾಹಿತ್ಯಲೋಕಕ್ಕೆ ಆಗುತ್ತಿರುವ ಅತಿದೊಡ್ಡ ನಷ್ಟ.

ಭಗವದ್ಗೀತೆ

ಒಂದು ಕೆಲಸವನ್ನು ಮಾಡಿದವರು, ಮಾಡಿಸಿದವರು, ಅದಕ್ಕೆ ಪ್ರೇರಣೆ ನೀಡಿದವರು ಹಾಗೂ ಅದನ್ನು ಅನುಮೋದಿಸಿದವರು, ಆ ಕೆಲಸ ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದೇ ಆಗಿರಲಿ, ಅದರಲ್ಲಿ ಸಮ ಭಾಗಿಗಳಾಗಿರುತ್ತಾರೆ.

ಹೀಗೊಂದು ಕಥೆ

ಹಾಸನ ಜಿಲ್ಲೆಯ ಹೊಳೆನರಸೀಪುರದ ಬಳಿ ಕಂದುಕೆರೆ ಎಂಬ ಪುಟ್ಟ ಗ್ರಾಮ, ಹಿಂದೆಲ್ಲೆ ಹತ್ತಾರು ಬ್ರಾಹ್ಮಣರ ಮನೆಗಳಿಂದ ತುಂಬಿರುತಿದ್ದ ಗ್ರಾಮದಲ್ಲಿ ಈಗ ಕೇವಲ ಬೆರಳೆಣಿಕೆಯಷ್ಟೇ ಮನೆಗಳು.

ಹೀಗೊಂದು ಕಥೆ

ಹಾಸನ ಜಿಲ್ಲೆಯ ಹೊಳೆನರಸೀಪುರದ ಬಳಿ ಕಂದುಕೆರೆ ಎಂಬ ಪುಟ್ಟ ಗ್ರಾಮ, ಹಿಂದೆಲ್ಲೆ ಹತ್ತಾರು ಬ್ರಾಹ್ಮಣರ ಮನೆಗಳಿಂದ ತುಂಬಿರುತಿದ್ದ ಗ್ರಾಮದಲ್ಲಿ ಈಗ ಕೇವಲ ಬೆರಳೆಣಿಕೆಯಷ್ಟೇ ಮನೆಗಳು.

ಕನ್ನಡ ಬಾಷೆಗೆ ಕುತ್ತು!.

ಬೆ೦ಗಳೂರು ಕಳೆದ ಒ೦ದು ದಶಕದಲ್ಲಿ ನಡೆದ ಆರ್ಥಿಕ ಚಟುವಟಿಕೆಗಳ ಬೆಳವಣಿಗೆಗಳಿ೦ದಾಗಿ ಬೃಹದಾಕಾರವಾಗಿ ಬೆಳೆದು ನಿ೦ತಿದೆ. ಪ್ರಪ೦ಚದ ಮೂಲೆ ಮೂಲೆಗಳಿ೦ದ ವಲಸಿಗರ ದ೦ಡೇ ಬೆ೦ಗಳೂರಿಗೆ ಬ೦ದಿದೆ ಹಾಗೂ ಬರತೊಡಗಿದೆ!. ಈ ಕಾರಣಗಳಿ೦ದಾಗಿ ಬೆ೦ಗಳೂರು ಜನಸಾಗರದಿ೦ದ ತು೦ಬಿ ತುಳುಕುತ್ತಿದೆ.