ಬಯಕೆ
ಬಯಕೆ ಏನೋ ಇತ್ತು ನಿಂದು, ಬೇಡಲಿಲ್ಲ ಎಂದೂ
ಬೇಡದೇನೇ ಸಿಕ್ಕೆಯಲ್ಲ ನನಗೆ ನೀನು ಇಂದು
ಕನಸಿನಲ್ಲಿ ಬರುತ್ತಿದ್ದೆ, ನೆನೆಪಿನಲ್ಲಿ ಕಾಡುತ್ತಿದ್ದೆ
ಗೇಲಿ ಏನೋ ಮಾಡಿ ನೋಡಿ ನನ್ನ ನಗುತ್ತಿದ್ದೆ
ಅಣುಕು ತುಣುಕು ಮಾತಿನಲಿ ಬಲೆಯ ಹೆಣೆಯುತ್ತಿರುತ್ತಿದ್ದೆ
ಮುಟ್ಟಬೇಕೆಂದು ಚಾಚಿದರೆ ಕೈಗೆ ಸಿಗದೇ ಎಲ್ಲೋ ಓಡುತ್ತಿದ್ದೆ.
ಅಕ್ಕ ಕುಳ್ಳೀ ಎಂದು ನನಗೆ ಸಿಟ್ಟು ನೀನು ತರುತ್ತಿದ್ದೆ
ಸಿಟ್ಟು ತಂದ ಮೇಲೆ ಮತ್ತೆ ನಗಿಸಿ ನನ್ನ ನಲಿಸುತ್ತಿದ್ದೆ.
ಜಗಳ ಕದನ ಆಡಿ-ಕೂಡಿ ಸುಸ್ತ್ ನನಗೆ ಮಾಡುತ್ತಿದ್ದೆ.
ಕನಸಿನ ಲೋಕ ತೋರಿ, ನನ್ನ ಮೇಲಕ್ಕೆಲ್ಲೋ ಹಾರಿಸುತ್ತಿದ್ದೆ
ನನ್ನ ಮನದಲ್ಲಿ ಏನೋ ಹುಡುಕಿ ನನ್ನ-ನೀನು ಬೇಡುತ್ತಿದ್ದೆ
ಏನು ಎಂದು ಕೇಳಿದರೆ ನಾ ಹೇಳದೆಯೇ ಅಳಿಸುತ್ತಿದ್ದೆ
ನಂತರ ಸಾಕೆನ್ನುವಷ್ಟು ನಾನು, ಸಂತೋಷವ ಕೊಡುತ್ತಿದ್ದೆ.
ಸಿಕ್ಕೆ ನೀನು ಅಷ್ಟೇ ಎಂದು ತೃಪ್ತಿಯಿಲ್ಲ ಇಂದು
ಬೇಡುವೆನು ನಾನು, ನಿನ್ನ ಮರೆಯದಿರಬೇಕೆಂದು - ನಿನ್ನ ಜೊತೆಯಿರಬೇಕೆಂದು
- ಮಮತ
Rating