ಬಾ ನನ್ನೊಲವೆ
ಅರಳುವ ಹೂವು ತಿಳಿಯದು ಯಾರ ಮುಡಿಗೊ
ನನ್ನೀ ತೆರೆದ ಮನ ವಾಲುತಿದೆ ಯಾರ ಕಡೆಗೊ
ಇರಲಿ ಪ್ರೀತಿ ಮನಸಲೆ ,ಅರಳಲಿ ಅದು ಇರುಳ ಕನಸಲೆ
ನೀ ಹುದುಗಿ ಕುಳಿತಿರುವುದು ನನ್ನೀ ಮನದಲೆ.
ತಿಳಿದು ತಿಳಿದು ಸಿಲುಕಿರುವೆ ಒಲವಿನ ಬಲೆಯಲಿ
ನಿನ ನೆನಪು ಕಾಡುತಿದೆ ಈ ಇಳಿ ಸ೦ಜೆಯಲಿ
ಕಣ್ತು೦ಬಿ ಹರಿಯುತಿದೆ ಕಣ್ಣೀರ ಧಾರೆ
ಒಲವ ಸುಧೆ ಹೊತ್ತು ನನ್ನೆದುರಿಗೆ ನೀ ಬಾರೆ........
----ಹರೀಶ್
Rating
Comments
ಉ: ಬಾ ನನ್ನೊಲವೆ