ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇರುಳು ಹಗಲು

ಮಾಡಿನ ಕಿಂಡಿ ಮತ್ತು ತೆರೆದ ಕಿಟಕಿಯಿಂದ ತೂರಿ ಬಂದು ದಿನವಿಡೀ ನನ್ನ ಮೈಗೆಲ್ಲಾ ಕಚಗುಳಿಯಿಟ್ಟು, ಬಿಡುಬೀಸಾಗಿ ಮನೆಯೆಲ್ಲಾ ಮೈ ಹರಡಿ ನನ್ನ ಜತೆ ಚಕ್ಕಂದವಾಡಿ ಸಂಜೆ ಹೋಗುವಾಗ "ಮುಳುಗುವ ಸಮಯ ಬಂತು, ನಾನು ಇಲ್ಲಿಂದ ಹೋಗುತ್ತಲೂ ಕತ್ತಲಾಗೋಕೆ ಬಿಡದ ಹಾಗೆ ಬಿಳಿಯ ಬೆಳಕಿನ ಮೋಡಿ ಹಾಕಿ, ರಾತ್ರಿ ಇಡೀ ಚುಂಬಿಸ್ತೀನಂತ ಆ ಮಾಯಗಾತಿ ಬರುತ್ತಾಳೆ. ಹುಷಾರಾಗಿರು. ಸುಮ್ಮನೆ ನಿದ್ದೆ ಮಾಡು" ಎಂದು ಹಿಂದೆ ತಿರುಗಿ ನೋಡದೆ ಮಾಯವಾದಳು. ಅವಳ ಚೆಲುವಿಗೆ ಸೋತು ಅವಳ ಕನಸೇ ಕಾಣಬೇಕೆಂದು ಗಟ್ಟಿಮಾಡಿಕೊಂಡೆ.
ಮಾಡಿನ ಕಿಂಡಿಗೆಲ್ಲಾ ಹಲಗೆ ಅಡ್ಡಮಾಡಿ, ಕಿಟಕಿಯೆಲ್ಲಾ ಮುಚ್ಚಿ ಮೇಣದಬತ್ತಿ ಹತ್ತಿಸಿ ಮೂಲೆಯಲ್ಲಿ ಕೂತೆ. ಮೈಬಿಸಿ ಮಾಡುವ ಅವಳ ಕನಸು ತರಲಿ ಅನ್ನೋ ಆಸೆಯಿಂದ ಗೋಡೆಯ ಮೇಲೆ ತೆವಳಾಡುವ ನೆರಳನ್ನು ನೋಡಿದೆ. ಕನಸೇನೋ ಬಿತ್ತು. ಆದರೆ ಬಿಳಿಯ ಬೆಳಕು ಮೈಯೆಲ್ಲಾ ಮೆತ್ತಿಕೊಂಡು ಇರುಳಿಡೀ ಕುಣಿದ ಹಾಗೆ. ದಣಿವಾದ ಹಾಗೆ. ಮೈಗೆ ಮೈಕೊಟ್ಟು ನಿಜವೇ ಅನ್ನಿಸೋ ಮತ್ತೇರಿದ ಹಾಗೆ. ಎಷ್ಟು ಬೇಕೆಂದು ತಹತಹಿಸಿದರೂ ಇರುಳು ಮೆಲ್ಲನೆ ಜಾರಿ ಹೋದ ಹಾಗೆ. ದಿನದ ಬೆಳಕು ತುಂಬಿಕೊಂಡ ಹಾಗೆ. ಕನಸ್ಸಲ್ಲೇ ಕನಸ್ಸಿಂದ ಎಚ್ಚರವಾದ ಹಾಗೆ. ಎಷ್ಟು ಕಷ್ಟಪಟ್ಟರೂ ಮೈಗೆ ಹತ್ತಿದ ಬಿಳಿಯನ್ನು ಒರೆಸಿ ತೆಗೆಯಲಾಗದ ಹಾಗೆ. ಉಜ್ಜಿ ಉಜ್ಜಿ ರಕ್ತ ಒಸರಿದ ಹಾಗೆ.
ಮತ್ತು-ಆತಂಕ-ಕಳವಳ.
ಕಿಟಕಿ ಬಡಿತಕ್ಕೆ ಎಚ್ಚತ್ತಾಗ ಬೆಳಗಾಗಿ ಬಿಟ್ಟಿತ್ತು. ಕಿಟಕಿ ಮೆಲ್ಲನೆ ತೆಗೆದರೆ ಸರಕ್ಕನೆ ಒಳಗೆಲ್ಲಾ ತುಂಬಿಕೊಂಡುಬಿಟ್ಟಳು. ವೈಯ್ಯಾರದಿಂದ ಅನುಮಾನ ತೋರದ ಹಾಗೆ ನಗುತ್ತಾ ಸುತ್ತೆಲ್ಲಾ ನೋಡಿದಳು. "ಕಿಂಡಿಗಳನ್ನು ಯಾಕೆ ಮುಚ್ಚಿ ಬಿಟ್ಟೆಯೋ?" ಕೊಂಕಾಡಿದಳು.
"ನೀನು ನನ್ನ ಮುದ್ದು ಮೊಲ ಗೊತ್ತ?" ಅಂತ ರಮಿಸಿದಳು.
"ನೀನು ಮೋಸಮಾಡೋನಲ್ಲ ಅಂತ ಗೊತ್ತಿತ್ತು" ಅಂತ ಅಪ್ಪಿದಳು.
"ಆ ಸೋಗಲಾಡಿ ತಾನೇ ಸುರಸುಂದರಿ ಅನ್ಕೊಂಡು ಅಗ್ಗವಾಗಿ ಆಡಿದಳು ಅಲ್ವ?" ಎಂದು ಮುಖ ಮುರಿದಳು.
"ತನ್ನದೇ ಬೆಳಕು ಅನ್ನೋ ಹಾಗೆ ಆಡುತ್ತಾಳೆ ಕೊಂಕಿನ ರಾಣಿ! ಅವಳು ಬಿಂಬಿಸಿದ ಬಿಳಿ ಬೆಳಕು ಸ್ವಂತದ್ದು ಅಂತ ನಂಬಿಸೋಕೆ ಬಂದಳ?" ಎಂದು ಪ್ರಶ್ನಿಸಿದಳು.

ಜೈವಿಕ ಇಂಧನಗಳ ಬಳಕೆಯಿಂದ ಅಪಾಯ?(ಇ-ಲೋಕ-22) (11/5/2007)

 ಇಥೆನಾಲ್ ಬಳಸಿ ವಾಹನ ಓಡಿಸಲು ಸಾಧ್ಯ. ಅದನ್ನು ಪೆಟ್ರೋಲ್ ಜತೆ ಮಿಶ್ರ ಮಾಡಿಯೂ ಬಳಸಬಹುದು. ಏರುತ್ತಿರುವ ಕಚ್ಚಾ ತೈಲದ ಬಳಕೆ ಮತ್ತು ಅದರಿಂದ ಭೂಮಿಯ ವಾತಾವರಣಕ್ಕೆ ಅಗುತ್ತಿರುವ ಹಾನಿ, ಶಾಖದ ಏರಿಕೆ ಇವುಗಳ ಬಗ್ಗೆ ಚಿಂತಿಸಿದ ಸಂಶೋಧಕರು, ಇಥೆನಾಲ್‍ನಂತಹ ಜೈವಿಕ ಇಂಧನ ಬಳಕೆ ಒಳಿತು ಎಂಬ ಅಭಿಪ್ರಾಯಕ್ಕೆ ಬಂದಿದ್ದರು.

ಊರಲೆದ ಮೊಲ

-೧-
ಮುಗಿಲೆತ್ತರ ನಿಂತು ನಗುವ ಜಾದುಗಾರನೆದುರು
ಕಪ್ಪು ಮೇಜು ಕಪ್ಪು ಹೊದಿಕೆ ನಟ್ಟ ನಡುವೆ ಹೊಳೆವ ಕಪ್ಪು ನೀಳ ಹ್ಯಾಟು.
ಹ್ಯಾಟಿನೊಳಗೆ ಇಳಿವ ಅವನ ಕೈಗೆ
ಕಿವಿಯ ಕೊಡಲು ಕಾದು ಕೂತ ಬೆಳ್ಳಿತೊಗಲ ಮುದ್ದು ಮೊಲ.
ಹ್ಯಾಟಿನಾಚೆ ಎತ್ತಿದೊಡನೆ
ಕೂಗಲೆಂದೆ ಕಾದು ಕೂತ ಪುಟ್ಟ ಪುಟ್ಟ ದನಿಗಳು,
ತೂಗಲೆಂದೆ ಕಾದು ಕೂತ ನೆರೆತ ಹಿರಿಯ ತಲೆಗಳು;
ಹ್ಯಾಟು ಮೊಲದ ಟ್ರಿಕ್ಕಿಗಾಗಿ ಸ್ಥಬ್ಧ ಮೌನ ಸುತ್ತಲು.
ಅಷ್ಟರಲ್ಲಿ ಧಡೀರನೆ-
ಹ್ಯಾಟು ಬಾಯಿಯಿಂದ ಬಿದ್ದ ಮುಗಿಲ ಬೆಳ್ಳಿ ಬೆಳಕು,
ಮುದ್ದು ಮೊಲದ ಎದೆಯ ಲೋಕದಾಸೆ ಮಣಿಗೆ ಹೊಳೆದು,
ಹ್ಯಾಟಿನಂತರಾಳವೆಲ್ಲ ಹಾಲಿನಂಥ ಬೆಳಕು;
ಸೆಟೆದು ಬಾಲ, ನಿಮಿರಿ ಕಿವಿಯು, ಲಾಗ ಹಾಕಿ ಮನಸು;
ಒಂದೆ ಜಿಗಿತ ಹ್ಯಾಟಿನಾಚೆ, ಜಾದುಗಾರ ಜಾಲದಾಚೆ, ಜನದ ನೆಟ್ಟ ನೋಟದಾಚೆ,
ಚಿಪುಕು, ಚಿಪುಕು, ಚಿಪುಕು, ಚಿಪುಕು.

ಕಾಡುವ ಹಾಡು

ಮತ್ತದೆ ಬೇಸರ...
ಅದೇ ಸಂಜೆ
ಅದೇ ಏಕಾಂತ...
ನಿನ್ನ ಜೊತೆ ಇಲ್ಲದೆ
ಮಾತಿಲ್ಲದೆ ಮನ ವಿಭ್ರಾಂತ....

ನಿಸ್ಸಾರರ ಈ ಕವನ ಓದಿದಾಗಲೆಲ್ಲಾ ಸಂಜೆಯೂ ಆಲ್ಲದ, ರಾತ್ರಿಯೂ ಅಲ್ಲದ ಆ ಸಮಯ ನೆನಪಿಗೆ ಬರುತ್ತದೆ. ಸೂರ್ಯ ಮುಳುಗಿದ ನಂತರದ, ರಾತ್ರಿ ಆವರಿಸುವ ಮೊದಲಿನ ಆ ಸಮಯ. ಅದೊಂದು ಹಗಲು ಅಲ್ಲದ, ರಾತ್ರಿಯೂ ಅಲ್ಲದ ವಿಚಿತ್ರ ಕಾಲ. ನೆನಪುಗಳು ನುಗ್ಗಿ ಬರುವ ಸಂಕ್ರಮಣ ಸಮಯ.

"ಕಾರ್‍ ಪೂಲ್ಸ್" ಮತ್ತು "ಗ್ರೀನ್ ಕನ್ಸರ್ಟ್ = ಅರ್ಥ ???

ನಮಸ್ಕಾರ.

ನನಗೆ "ಕಾರ್‍ ಪೂಲ್ಸ್" (carpools) ಮತ್ತು "ಗ್ರೀನ್ ಕನ್ಸರ್ಟ್" (green concert) ಇವುಗಳ ಅರ್ಥ ತಿಳಿದುಕೊಳ್ಳಬೇಕಾಗಿದೆ. ದಯವಿಟ್ಟು ಇವುಗಳನ್ನು ಅನುವಾದಿಸಿ ಕೊಡಿ.

ಧನ್ಯವಾದಗಳು

Bugs ಮಳೆ

Bugs ಮಳೆ

ಅನಿಸುತಿದೆ ಯಾಕೋ ಇಂದು ಎಷ್ಟೊಂದು Bugsಇವೆ ಎಂದು...
Developers ಕೈಯಿಂದ ಇಂದು ಮತ್ತಷ್ಟು ಬಂದಿವೆಯೆಂದು

ಅಹಾ ಎಂಥ Bugಗಳ ಸುರಿಮಳೆ
ನಿಂತು ಬಿಡುವುದು ಎಂದು, ಹಾಗೇ ತಣ್ಣನೆ..... ||ಅನಿಸುತಿದೆ ಯಾಕೋ ಇಂದು...||

ಊಟದ ತಟ್ಟೆಯ ಮುಂದೆಯೂ ಕೇಳಿದೆ ಕಲರವ,
ರಾತ್ರಿಯ ಕನಸಲೂ ನಾನು ಹೋದರೆ ತಳಮಳ
ನೆಮ್ಮದಿ ನಿದ್ದೆ ರಜ ಹಾಕಿದೆ ಕೆಲಸಕೆ ನಾನು ಬಂದ ಕ್ಷಣ

ನಾ ಖೈದಿ ಕಂಪೆನಿ ಸೆರೆಮನೆ,
ನಿದ್ದೆ ಬರುವುದು ಎಂದು ನನಗೆ, ಹಾಗೇ ತಣ್ಣನೆ..... ||ಅನಿಸುತಿದೆ ಯಾಕೋ ಇಂದು...||

ಕನ್ನಡ ಪುಸ್ತಕಗಳನ್ನು ಅಂತರ್ಜಾಲದ ಮೂಲಕ ಮಾರಾಟ ಮಾಡುವವರಿದ್ದಾರೆಯೇ?

ಕನ್ನಡ ಪುಸ್ತಕಗಳನ್ನು ಅಂತರ್ಜಾಲದ ಮೂಲಕ ಮಾರಾಟ ಮಾಡುವ ಯಾವುದಾದರೂ agency / website / distributors ಇದ್ದಾರೆಯೇ? ಇದ್ದರೆ ದಯವಿಟ್ಟು ತಿಳಿಸಿ. ನಾನಿರುವ ಊರಲ್ಲಿ ಯಾವುದೇ ಕನ್ನಡ ಪುಸ್ತಕಗಳು ಸಿಗುವುದಿಲ್ಲ.