೧.ನೀನೆ ಕೇಳಿದ ಪ್ರಶ್ನೆ

೧.ನೀನೆ ಕೇಳಿದ ಪ್ರಶ್ನೆ

ಬರಹ

ಎಡೆಬಿಡದೆ ಎದೆಯೊಳಗೆ
ಕದವ ತಟ್ಟುವಿಯಲ್ಲ,
ಉರಿಯಾಗಿ ಎದೆಯಲ್ಲಿ,
ಮಿಂಚಾಗಿ ಮೈಯ್ಯಲ್ಲಿ,
ಕುದಿರಕ್ತದಲ್ಲಿ, ನಡುನಾಡಿಯಲ್ಲಿ,
ಎರಕದಂದದಿ ಹರಿದು ಬುಸುಗುಟ್ಟುತಿಹೆಯಲ್ಲ,

ಹೊಟ್ಟೆಯಲಿ ಹಸಿವಾಗಿ,
ದಿಟ್ಟನೆಯ ಮಗುವಾಗಿ,
ಕಚ್ಚಿಬಿಡದೆನ್ನ ರಚ್ಚೆಹಿಡಿದು ಕಾಡುವಿಯಲ್ಲ,
ಏನು ನೀನು?

ನಿನ್ನ ತೊದಲು ತುಂಟಾಟ ಸುಮ್ಮನಲ್ಲ,
ನಿನ್ನ ಹಠ- ನಿನ್ನಾಟ ಬರಿದೇನಲ್ಲ!

ನಿನಗೆಂದ ಜೋಗುಳ ಕವಿತೆಯಾಗುವುದಲ್ಲ,
ಅಲ್ಲಿ ಬದುಕಿನ ಕೊರಡು ಚಿಗುರುವುದಲ್ಲ,
ಓ ಆತ್ಮರತಿಯಾತ್ಮವೇ ನೀನು ಯಾರು?