ಬಾನಿಂದ ಜಾರಿಬಂದ ಹಕ್ಕಿಗೋಂದು
ಬರಹ
ಬಾನಿಂದ ಜಾರಿಬಂದ ಹಕ್ಕಿಯೊಂದು
ಹಾಡಿತು ಬಂದೆ ಇಲ್ಲಿ ನಿನಗಾಗೆಯೆಂದು
ಕುಣಿಯಿತು ನನ್ನ ಮನವು ಅಲ್ಲಿ
ಮಳೆಯಾಗಿ ಪ್ರೀತಿಯ ಚೆಲ್ಲಿ
ಎಲ್ಲೆಲ್ಲು ಆನಂದವೇ ಹೋ ಹೋ ......
ಬಾನಿಂದ ಜಾರಿಬಂದ ಹಕ್ಕಿಗೋಂದು
ಕಟ್ಟಿದೆ ಕಿಟಕಿ ಇಲ್ಲದ ಗೂಡನೊಂದು...
ತಂಗಾಳಿ ಬೀಸದು ಅಲ್ಲಿ
ತಂಪಾಗದು ನಿನಗೆಂದು ಇಲ್ಲಿ
ಇನೆಂದು ಉಲ್ಲಾಸವೇ ಹೋ ಹೋ ....
ಬಾನಿಂದ ಜಾರಿಬಂದ ಹಕ್ಕಿ ಅಂದು
ಕೇಳಿತು ನಾ ಹಾರಲೇ ಒಮ್ಮೆ ಇಂದು
ನಾನಂದೆ ಹೋಗೋ ಗೆಳತಿ
ಕಾಯುವೆ ಬಾರೋ ನನ್ನ ಒಡತಿ
ಹರುಷದಿ ನಕ್ಕಿ ನಲಿಯಿತು ಹೋ ಹೋ....
ಬಾನಿಂದ ಜಾರಿಬಂದ ಹಕ್ಕಿಗೆಂದು
ಬರೋ ದಾರಿ ಕಾದು ನಿಂತೆ ಇಲ್ಲೇ ಇಂದು
ಕುಗಿತು ಬರಲಾರೆ ಗೆಳೆಯ
ನಾಕಂಡೆ ನನ್ನ ನೆಲೆಯ
ಇನ್ನೆಂದು ಕಣ್ಣಿರಲ್ಲೇ ಹೋ ಹೋ ....