ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಇಪ್ಪತ್ - ಇಪ್ಪತ್ ನಲ್ಲಿ ಕರ್ನಾಟಕ

ನಾಳೆಯಿಂದ ೨೦ನೇ ತಾರೀಕಿನವರೆಗೆ ಮುಂಬೈನಲ್ಲಿ ರಾಷ್ಟ್ರೀಯ ಇಪ್ಪತ್-ಇಪ್ಪತ್ ಕ್ರಿಕೆಟ್ ಪಂದ್ಯಾವಳಿ ಆರಂಭ (ನಾಳೆಯಿಂದ ಆರಂಭ ಎಂದು ನಂಬಿದ್ದೇನೆ. ೨ ಸಲ ಮುಂದೂಡಲಾಗಿತ್ತು). ಎಲ್ಲಾ ರಾಜ್ಯ ತಂಡಗಳೂ ಭಾಗವಹಿಸಲಿವೆಯೋ ಅಥವಾ ಕೆಲವು ಬಲಿಷ್ಟ ತಂಡಗಳು ಮಾತ್ರ ಸೆಣಸಾಡಲಿವೆಯೋ ಎಂಬುದರ ಬಗ್ಗೆ ಯಾವ ಮಾಹಿತಿಯೂ ಇಲ್ಲ.

ಬೇಂದ್ರೆ ಅಲ್ಲಮ ಪ್ರಭು ಬಗ್ಗೆ...

ಬೇಂದ್ರೆಯವರ 'ಉಯ್ಯಾಲೆ' ಯಿಂದ ಈ ಪದ್ಯ

ಅಲ್ಲಮ ಪ್ರಭು

ಮನದ ಬಯಲಲಿ ಬವಣೆಗೊಂಡೆ, ಬಿಸಿಲಿನ ಝಳದೆ

ಹುಲ್ಲೆ ಹಂಗಿಸುವ ಹುಸಿನೀರ ಕಾಂಬೊಲು ಕಂಡೆ

ನೀರ, ನೇಹಿಗ, ನಂಟ, ಬಂಟ, ಸಂವಾದಿ, ಗುರು,

ಶಿಷ್ಯ, ಪ್ರೀತಿಯ ಜಾತಿಗಾರ! ಎಲ್ಲಿರುವೆ ರಸ-

ಸಿದ್ಧ ಗೋರಕ್ಷನುಕ್ಕಿಲೆ ಹೊಯ್ದರೂ ಮುಕ್ಕು

ತುಕ್ಕರಿಯದಿದ್ದ ಮೈಕವಚ ಕಳೆದಿಡುವಂತೆ

ವಿಚಿತ್ರಾನ್ನದಲಿ ಕ್ಯಾರೆಟ್

ವಿಚಿತ್ರಾನ್ನ ಶ್ರೀವತ್ಸ ಜೋಷಿಯವರ ಜನಪ್ರಿಯ ಅಂಕಣ. ಈ ವಾರ ಅವರು ಕ್ಯಾರಟ್ ಕಡೆ ವಕ್ರ ದೃಷ್ಟಿ ಬೀರಿದ್ದಾರೆ. ಅಂತರ್‍ಜಾಲದ ಗಜ್ಜರಿ ಮ್ಯೂಸಿಯಂ ಪ್ರಸ್ತಾಪವೂ ಅಲ್ಲಿದೆ. ಕಣ್ಣಿಗೆ ಹಿತವಾದ, ಮನಸಿಗೂ ತಂಪುಣಿಸುವ ಕ್ಯಾರಟ್ ಸವಿಯಿರಿ: ವಿಚಿತ್ರಾನ್ನ

ನಲ್ಮೆಯ ನಮನ

ಸುಂದರ ಪಾರ್ಕು, ಸುತ್ತೆಲ್ಲ ಮರಗಳು

ಚೈತ್ರದ ಹೂಗಳು ವೈಶಾಖದ ಬಿಸಿಲಲ್ಲೂ ನಗುತ್ತಿದ್ದರೆ ಅದು ಬೆಂಗಳೂರಿನ ಮರಗಳ ವೈಭವ ಅಂತ ನೀವೆ ಅವತ್ಯಾವತ್ತೋ ಹೇಳಿದ್ರಿ. ಆ ಸುಮವೈಭವ ನೋಡುತ್ತ, ಉದ್ಯಾನದ ಕಲ್ಲು ಮೆಟ್ಟಿಲೇರಿದೆ.

ಹೊಸಾಆಆಆಆಆಆಆ ಚರ್ಚೆ ಮಾಡ್ತೀರಾ? ತಾಕತ್ತಿದ್ರೆ!!! ಹೂಹ್ಹಾಹ್ಹಾಹ್ಹಾಆಆಆಆಆಆ!

ನಾನು ಸಣ್ಣೋನಿರೋವಾಗ ದೆವ್ವಗಳನ್ನ ನೋಡಿದ್ದು ನೆನಪಿದೆ! ನಿಜವಾಗ್ಲೂ. ದೆವ್ವಗಳಿರಬಹುದೆನ್ನುವ ನಂಬಿಕೆಯನ್ನು ಬಲಗೊಳಿಸುವ ಹಲವಾರು ಘಟನೆಗಳಿಗೂ ನಾನು ಸಾಕ್ಷೀ"ಭೂತ"ನಾಗಿದ್ದೇನೆ. ನಿಮ್ಮ ಜೀವನದಲ್ಲೇನಾದ್ರೂ ಈ ತರಹದ ಘಟನೆಗಳು ನಡೆದಿದ್ರೆ ಹೇಳಿ ನೋಡೋಣ! ಆಮೇಲೆ ನಾನೂ ನನ್ನ ಅನುಭವಗಳೊಂದೆರಡನ್ನು ಇಲ್ಲಿ ವಿವರಿಸುವೆ. ದೆವ್ವಗಳಿಲ್ಲವೆನ್ನುವವರೂ "ಅರೆರೆ!

ಕನ್ನಡದವರು ಏಕೆ ಹೀಗೆ?

ನಾನು ಕೆಲಸ ಮಾಡುವುದು ಭಾರತೀಯ ವಾಯು ಸೇನೆಯಲ್ಲಿ. ಹೆಚ್ಚಾಗಿ ಉತ್ತರ ಭಾರತದಲ್ಲಿ ತಿರುಗಿಕೊಂಡಿರುವವನು. ೯೨ರಿಂದ ೯೬ರವರೆಗೆ ದೆಹಲಿಯಲ್ಲಿ ಇದ್ದೆ. ಉತ್ತರ ಭಾರತ ಶೈಲಿಯ ಊಟ ತಿಂಡಿಗಳಿಂದ ಬೇಸರ ಬಂದಾಗ ನೇರ ತಲಪುವ ಸ್ಥಳ ಮೋತಿ ಬಾಗಿನ ’ದೆಹಲಿ ಕನ್ನಡ ಸಂಘ’.

ಒಲವ ಗೀತೆ

ಲಗ್ಗೆ ಇಟ್ಟು ಆಗಾಗ್ಗೆ ಕಾಡಬೇಡ

ಕದ್ದು ಕದ್ದೆನ್ನ ನೀ ನೋಡಬೇಡ

ಈ ಹೃದಯ ಓಕೆ ನಾ ? ಈ ಗೆಳೆಯ ಇಷ್ಟಾನಾ ?

ಹೇಳೆ ನೀ ಕೇಳೆ ನೀ ಹೇಳೆ ಕೇಳೆ ಗೆಳತಿ  "ಪ"

ಮರೆಯದಿರು ಜೋಪಾನ ಮನ

 ಮಂದಿರದಿ ನಿನಗೆ ಸನ್ಮಾನ

ಈ ಹೃದಯ ಓಕೆ ನಾ ? ಈ ಗೆಳೆಯ ಇಷ್ಟಾನಾ ?

ಹೇಳೆ ನೀ ಕೇಳೆ ನೀ ಹೇಳೆ ಕೇಳೆ ಗೆಳತಿ  " ಲಗ್ಗೆ "

ಬಾ ಗೆಳತಿ ಇದುವೆ ನಿನಗೆ ಆಹ್ವಾನ

ಒಂದು ಕಾದಂಬರಿ

ಇತ್ತೀಚೆಗೆ ಈ ಕಾದಂಬರಿ ಓದಿ ಮುಗಿಸಿದೆ. "ಬೇರೆಯವರು ಸತ್ಯವನ್ನು ನಿಮ್ಮಿಂದ ಮುಚ್ಚಿಟ್ಟಿದ್ದಾರೆ; ಬನ್ನಿ ನಾನು ಅದನ್ನು ತೆರೆದು ತೋರಿಸುತ್ತೇನೆ" ಎಂಬ ಅಹಂಕಾರದಿಂದ ನಡುಹಗಲಲ್ಲಿ ಕೈಯಲ್ಲೊಂದು ಆರುತ್ತಿರುವ ದೀಪ ಹಿಡಿದು ದಾಪುಗಾಲಿಟ್ಟು ನಡೆದಿರುವ ಕಾದಂಬರಿಕಾರ. ಯಾವುದೂ ಪೂರ್ಣಸತ್ಯವಲ್ಲದ ಕಾರಣ ಇಲ್ಲಿರುವ ಸಂದೇಶಗಳನ್ನು ಅರ್ಧಸತ್ಯ ಎಂದು ಕರೆದು ಒಳ್ಳೆಯತನ ತೋರಬಹುದಷ್ಟೆ. ಇನ್ನು ಇದರಲ್ಲಿನ ಸಂದೇಶಗಳು ಎಷ್ಟು ಬಾಲಿಶ ಮತ್ತು ಕುಟಿಲತೆಯಿಂದ ಕೂಡಿದೆಯೆಂದರೆ ಅದರ ಬಗ್ಗೆ ಯೋಚಿಸುವುದು, ಚರ್ಚಿಸುವುದು ಪಾಪದಂತೆ ಕಾಣುತ್ತದೆ.
ಪೂರ್ವನಿರ್ಧಾರಿತ ಸಂಘರ್ಷಗಳಲ್ಲಿ ತೊಡಗಿಕೊಂಡು ಎಡವುತ್ತಾ ಹಿಂದು ಹಿಂದಕ್ಕೆ ಸರಿಯುವ ಏಕಮುಖ ಪಾತ್ರಗಳು ಎಲ್ಲೂ ಸೋಜಿಗವನ್ನು ಉಂಟುಮಾಡದೇ ತೆವಳುತ್ತವೆ. ಯಾಕೋ ಇಲ್ಲಿಯ ಜೀವಹೀನ ಪಾತ್ರಗಳ ಬಗ್ಗೆ ಚಿಂತಿಸುವ ಬದಲು stereotype ಮತ್ತು archetype ಪಾತ್ರಗಳ ನಡುವಿನ ವ್ಯತ್ಯಾಸವೇನು ಎಂದು ಚಿಂತಿಸುವುದು ಒಳ್ಳೆಯದೆನಿಸಿತು. ಮೊದಲ ರೀತಿಯ ಪಾತ್ರಗಳು ಮಾನವೀಯ ವಿವರಗಳ ಸಾಂದ್ರತೆಯಿಲ್ಲದೆ ಕಟ್ಟಿದ, ಒಂದು ಗುಂಪನ್ನು ಸುಲಭಮಾದರಿಯಾಗಿ ಪ್ರತಿನಿಧಿಸುವ, ನಾವಂದುಕೊಂಡಂತೆ ನಡೆದುಕೊಳ್ಳುವ ಸಾಮಾನ್ಯಗಳಾದರೆ, ಎರಡನೇ ರೀತಿಯ ಪಾತ್ರಗಳು ಮಾನವೀಯ ವಿವರಗಳ ಸಾಂದ್ರತೆಯ ಬುನಾದಿಯ ಮೇಲೆ ನಿಂತಿದ್ದು, ತನ್ನ ಗುಂಪಿನ ಎಲ್ಲ ತವಕ, ತಲ್ಲಣ, ಓರೆಕೋರೆಗಳೊಡನೆ ಪ್ರಾತಿನಿಧಿಕವಾಗಿಯೂ ಅಪ್ಪಟ ಮನುಷ್ಯನಾಗಿ ಉಳಿದು ಸೋಜಿಗ ಹುಟ್ಟಿಸುವ ರೀತಿಯವು. ಕಾದಂಬರಿ ಓದಿದ ಮೇಲೆ ಯಾಕೋ ಮೇಲಿನ ಅಂತರ ನಿಚ್ಚಳವಾಗಿ ಕಣ್ಣಿಗೆ ಹೊಡೆದಂತೆ ಕಾಣತೊಡಗಿತು. ಚೋಮನದುಡಿಯ ಚೋಮ ಮತ್ತು ಶಿಕಾರಿಯ ನಾಗಪ್ಪ ಹೆಚ್ಚು ಪ್ರಖರವಾದರು, ಮುಖ್ಯವಾದರು.
ಪುಟಗಟ್ಟಲೆ ಪಾತ್ರಗಳ ಮೂಲಕ ಭಾಷಣ ಬಿಗಿಯುವ ಕಾದಂಬರಿಕಾರ ಓದುಗರನ್ನು ದಡ್ಡ ಮಂದೆಯಂತೆ ನಡೆಸಿಕೊಳ್ಳುವ ರೀತಿಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಓದುಗನ ಜಾಣತನವನ್ನು ಹೆಜ್ಜೆಹೆಜ್ಜೆಗೂ ಅನುಮಾನಿಸುವ ಈ ಕಾದಂಬರಿ ಯಾಕೆ ಸಮಯೋಚಿತ ಎಂದು ಚಿಂತಿಸುತ್ತಾ ಕಾದಂಬರಿಯ ಹೆಸರು ಕೂಡ ಹೇಳಬಾರದು ಎಂದು ನಿರ್ಧರಿಸಿದೆ.

ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ?

೧.

ಹಳೆಯ ರ, ಳ- ಯಾವಾಗಲೋ ಎಷ್ಟೋ ನೂರು ವರ್ಷ ಹಿಂದೆ ಬಿಟ್ಟ ಅಕ್ಷರಗಳು ,
ಶಾಲೆಗಳಲ್ಲಿ ಕಲಿಸುತ್ತಿಲ್ಲ .
ಕನ್ನಡದಲ್ಲಿನ ಸಂಸ್ಕೃತ ಶಬ್ದ ಉಚ್ಚರಿಸಲು ಕಷ್ಟ - ತೆಗೆದು ಹಾಕಿ , ಸುಲಭಗೊಳಿಸಿ ಎಂದೆಲ್ಲ ಅನ್ನುವ ಜನರು
ಏಕೆ ಈ ಹಳೆಯ ರ, ಳ ಬಳಸುತ್ತಿದ್ದೀರೋ ? ತಿಳಿಯದು.
ಶಂಕರ ಭಟ್ಟರೂ ಇದನ್ನು ಒಪ್ಪಲಿಕ್ಕಿಲ್ಲ.