ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ?

ಈ ನಡುವೆ ಬಹಳಷ್ಟು ಜನಗಳು ಕನ್ನಡ ಕನ್ನಡ ಎಂದುಕೊಂಡು ಅಂಗಡಿಗಳನ್ನೊಡೆಯೋದು, ಚಿತ್ರಮಂದಿರಗಳನ್ನ ಚೂರು ಮಾಡೋದು, ಪೇಪರುಗಳನ್ನ ಬೈಯೋದು ಇವೆಲ್ಲಾ ಕಸುಬು ಮಾಡಿಕೊಂಡಿರುವುದು ಗಮನಕ್ಕೆ ಬರದೇ ಇರೋದಿಲ್ಲ. ಕನ್ನಡ ಪ್ರೇಮೆ ಇದೇನಾ? ಕನ್ನಡ ತಾಯಿ ಹೀಗೆ ಮಚ್ಚು ದಿಣ್ಣೆ ಹಿಡಿದು ಜಗಳ ಕಾರುವವರು ತನ್ನ ಮಕ್ಕಳೆಂದು ಹೆಮ್ಮೆ ಪಡುವಳಾ?

ಹಿತನುಡಿ

ಜೀವನದಲ್ಲಿ ಏಳುವ ಏಲ್ಲಾ ಸಮಸ್ಯೆಗಳಿಗೂ ಪರಿಹಾರವಿದ್ದೇ ಇದೆ, ಆದರೆ ನಾವು ಬಯಸುವ ರೀತಿಯ ಪರಿಹಾರ ದೊರೆಯದಿರಹುದು. ಎಲ್ಲಾ ಪ್ರಶ್ನೆಗಳಿಗೂ ಉತ್ತರ ನಮ್ಮೊಳಗೇ ಇದೆ, ಹುಡುಕಿಕೊಳ್ಳಬೇಕು ಪದಬಂಧ ಬಿಡಿಸಿದಂತೆ.

ಎರಡು ಕವನ - ನಲ್ಲೆಯ ನಾಚಿಕೆ ಮತ್ತು ನಗು

ನಾಚಿಕೆ

ನಾಚಿ ನೀರಾದಳು ನಾರಿ,
ಎನಿತು ಹೇಳಲಿ ನಾಚಿದ ಆ ಪರಿ.

ಅವಳುಟ್ಟಿದ್ದಳು ಆಗಸವ ಹೊಲುವ ನೀಲ ಜರಿ ಸೀರೆ,
ಅವಳಾಗಿದ್ದಳು ಕಣ್ಣ ಕುಕ್ಕಿಸುವ ಸೌಂದರ್ಯ ಧಾರೆ.

ಆಹ್ವಾನ ನೀಡುವಂತೆ ಕೂಗಿ ಕರೆಯುತಿತ್ತು, ಹಾರಾಡುತಿದ್ದ ಅವಳ ಸೀರೆ ಸೆರಗು.
ಮರವ ಸುತ್ತಿಹ ಲತೆಯಂತೆ ನಲಿಯುತಿತ್ತು ಜರಿ ಸೀರೆಯ ನೆರಿಗು.

ನೋಟ ಬದಲಿಸಲೆಂತು, ಎದುರಿಗಿರಲು ಈ ಸೊಬಗು,

ಹಿತನುಡಿ

ಜನರು ಪುಣ್ಯದ ಕೆಲಸವನ್ನು ಮಾಡಲು ಇಷ್ಟಪಡುವುದಿಲ್ಲ; ಆದರೆ ಪುಣ್ಯದ ಫಲವನ್ನು ಬಯಸುತ್ತಾರೆ. ಇವರಿಗೆ ಪಾಪದ ಫಲವು ಬೇಡ; ಆದರೆ    ಪ್ರಯತ್ನಪೂರ್ವಕವಾಗಿ ಪಾಪವನ್ನು ಮಾಡುತ್ತಾರೆ.

ಹಿತನುಡಿ

ಜಗತ್ತಿನಲ್ಲಿ ನೀವು ಯಾವ ಪರಿವರ್ತನೆಯನ್ನು ಬಯಸುತ್ತೀರೋ, ಆ ಪರಿವರ್ತನೆಯನ್ನು ಮೊದಲು ನಿಮ್ಮಲ್ಲಿ ತಂದುಕೊಳ್ಳಿ

ಸವಿ ನೆನಪು

ಕಣ್ಣ ತೆರೆದ ನೆನಪಿಲ್ಲ, ಮೊಲೆಯುಂಡ ನೆನಪಿಲ್ಲ
ನೆನಪಿದೆ ಆ ಬಿಸಿಯಪ್ಪುಗೆ
ಅಮ್ಮನ ತೋಳಲ್ಲಿ ಮೆಲ್ಲಗೆ
ತಂಗಿಯ ಕೆನ್ನೆ ಹಿಂಡಿದ ನೆನಪು
ಕೆಣ್ಣೆ ಬೆಣ್ಣೆಯಂತೆ ನುಣುಪು
ಬಣ್ಣದ ಚಿಟ್ಟೆಯ ಹಿಡಿದ ನೆನಪು
ಮರೆಯಲಾಗದ ಆ ಪುಟ್ಟ ಹುಡುಗಿಯ ಒನಪು

ಆಡುತ ಕೆರೆಯ ತಡಿಯಲಿ,
ಕಟ್ಟಿ ಮನೆಯ ಮರಳಲಿ
ಓಡಿದ ನೆನಪು ಮುಖಕೆ ಮರಳೆರಚಿ
ಅಮ್ಮನ ಕೂಗಿದ ನೆನಪು ಜೋರಗಿ ಅರಚಿ

ಪರದೆ

ಪರದೆ

ಪ್ರಪಂಚ ಕಾಣಿಸದು, ಬರಿದೇ ಕೇಳಿಸುವುದು
ಕತ್ತಲು ಕವಿದರೆ, ಕಣ್ಣು ಕುರುಡಾದರೆ

ಮಾತುಗಳಷ್ಟೆ ಕೇಳಿಸುವುದು, ಸತ್ಯಾಸತ್ಯಥೆಯಲ್ಲ
ಮನದ ತುಂಬೆಲ್ಲ ಅಜ್ನಾನ ಮನೆ ಮಾಡಿದರೆ

ಹೊಟ್ಟೆಗಷ್ಟೆ ಪಚನ, ಸಿಹಿಯ ಸುಖವಿಲ್ಲ
ನಾಲಿಗೆಯು ತನ್ನ ರುಚಿಯ ಕಳೆದರೆ

ಪ್ರೀತಿ, ಭರವಸೆಗಳಲ್ಲ, ಬರೀ ಕುರುಡು ಮರ್ಯಾದೆ
ಅಸಡ್ಡೆ, ಭಯಗಳೇ ಉಳಿವುದು ನಂಬಿಕೆ ಮುರಿದರೆ

ಕಾತುರ - ನಿರೀಕ್ಷೆ ಎರಡು ಕವನಗಳು

ಕಾತುರ

ಹಳೆಯ ಗಾಯವಾದರೆ ಮಾಸಬಹುದು,
ಮಾಸಗಳು ಕಳೆಯಲು ನೆನಪುಗಳು ಮರೆಯಬಹುದು.

ಬೆಳದಿಂಗಳ ಹಿಡಿಯ ಬಯಸುವ ಮುಗ್ದ ಮನಸಿನ ಪ್ರೀತಿ,
ವಸಂತಕ್ಕೆ ಕಾದು ಮನ ಮಿಡಿತವ ಹಿಡಿದಿಡುವ ಕೋಗಿಲೆಯ ರೀತಿ.

ಮುಗಿಲ ಮರೆಮಾಚುವ ಕಾರ್ಮುಗಿಲ ಕಾದ ನವಿಲಿನಂತೆ,
ನಿನ್ನ ಸವಿ ನುಡಿಗಾಗಿ ಕಾಯುತಿರುವೆ ಮುಂಗಾರಿನ ಮಿಂಚಿನಂತೆ.

ನಿರೀಕ್ಷೆ

ಎರಡು ಕವನ - ಬರ ಮತ್ತು ಪರದೆ

ಬರ

ಹಸಿದ ಹೊಟ್ಟೆಗೆ ಹಿಡಿ ಅನ್ನವೆ ಸಾಕು,

ನೊಂದ ಮನಕೆ ಅವಳ ಮುಗುಳ್ನಗೆಯಷ್ಟೆ ಸಾಕು

ಮತ್ತೆ ಜೀವ ಬರಿಸಲು ಕುಡಿ ನೊಟವೆ ಸಾಕು

ಅನ್ನವೀಯಲೇ ಇಲ್ಲ, ಮುಗುಳ್ನಗೆಗೆ ಬರವಿಲ್ಲಿ,

ಕುಡಿ ನೋಟಕೆ ನೀನೆಲ್ಲಿ!

ಪರದೆ

ಪ್ರಪಂಚ ಕಾಣಿಸದು, ಬರಿದೇ ಕೇಳಿಸುವುದು