ಮರೆವು

ಮರೆವು

ನಾನು ಶಾಲೆಯಿಂದ ತಂದ ಪುಸ್ತಖ ಕಾಣುತ್ತಿಲ್ಲ ಅದನ್ನು ಇಲ್ಲೆ ಇಟ್ಟಿದ್ದೆ ಅದು ಇಲ್ಲಿಲ್ಲ ಇದು ಎಲ್ಲಾ ಮನೆಯಲ್ಲಿ ಕೇಳಿಸುವ ಒಂದು ಸಾಮನ್ಯ ಶಬ್ದ. ಅಲ್ಲಿದ್ದದ್ದು ಎನಾಯಿತು ಮರೆತು ಹೋಯಿತು ನಾವು ಅನೇಕ ವಿಚಾರಗಳನ್ನು ಮರೆಯುತ್ತಿರುತ್ತೇವೆ. ಮರೆವೆ ಇಲ್ಲದ್ದಿದ್ದರೆ ಎನಾಗುತ್ತಿತ್ತು. ಈಗಲೇ ಯಾಕಪ್ಪ ಈ ಮಾನವ ಜನ್ಮ ಎನ್ನುವ ಜನವೆ ಹೇಚ್ಹು ಅಂಥಹುದರಲ್ಲಿ ಮರೆವೆ ಇಲ್ಲದ್ದಿದ್ದರೆ ನಾವು ಅನುಭವಿಸಿದ ನೋವು ನಲಿವು ಸುಖ ಯಾತನೆ ನಮ್ಮ ಮನದ ಮುಂದೆ ಮತ್ತೆ ಮತ್ತೆ ಸುಳಿದು ಮಾನವ ಇತ್ತೀಚಿನ ಬಾಷೇಯಲ್ಲಿ ಬಳಸುವ ಮತಿಹೀನ ಅಗಿ ಬೀಡುತ್ತಿದ್ದ. ದೇವರು ಮಾನವನಿಗೆ ನೀಡಿರುವ ಒಂದು ಒಳ್ಳೆಯ ವರವೇ ಮರೆವು. ನಿಜವಾಗಿ ಮರೆವು ಅನೇಖ ವಿಚಾರದಲ್ಲಿ ತುಂಬಾ ಉಪಯುಕ್ತ. ನಾವು ನಿನ್ನೆಯ ಬಗ್ಗೆ ಯೋಚಿಸುತ್ತ ಕಾಲ ಕಳೆದರೆ ಮುಂದಿನ ದಾರಿ ತುಂಬ ಕಟೋರ ಅಗಿ ಬೀಡುತ್ತದೆ. ಒಬ್ಬ ವ್ಯಕ್ತಿ ಇನ್ನೋಬ್ಬನ ಮೇಲೆ ತುಂಬ ದ್ವ್ಹೇಷ ಸಾದಿಸಿದರು ಕಾಲ ಕ್ರಮೇಣ ಅದು ಅವನಿಗೆ ಮರೆತು ಬಿಡುತ್ತದೆ. ಯಾರನ್ನಾದರು ತುಂಬ ತುಂಬ ಪ್ರೀತಿಸಿದರು ಸಹ ಕಾಲ ಚಕ್ರ ಅದನ್ನು ಮರೆಸಿ ಬೀಡುತ್ತದೆ. ಮರೆವೇ ನಿನಗೆ ನನ್ನ ನಮಸ್ಕಾರ. ಒಂದು ಮಗು ರಚ್ಚೆ ಇಡಿದರೆ ಅದನ್ನು ಸುದಾರಿಸುವ ಅದರ ತಾಯಿಗೆ ಮಾತ್ರ ಅದರ ನೋವು ತಿಳಿದಿರುತ್ತದೆ ಹೇಗೊ ಯಾವದನ್ನೋ ತೋರಿಸಿ ತಾಯಿ ಮಗುವನ್ನು ಸುದಾರಿಸುತ್ತದ್ದೆ. ಮಗು ಮೋದಲನೆಯದನ್ನು ಮರೆಯುವುದರಿಂದ. ವಯಸ್ಸಾದಂತೆ ಅರಿವು ಮರೆವು ಎನ್ನುವುದು ವಾಡಿಕೆ. ಅದು ಎಕೆಂದರೆ ಅವರಿಗೆ ಪ್ರಂಪಚದ ಹಳೆಯ ವಿಚಾರ ಮರೆತು ಅ ಸಮಯದಲ್ಲಾದರು ನೆಮ್ಮದಿ ಸಿಗಲಿ ಎಂದು ದೇವರ ಕೊಡುಗೆ. ಯಾವದಾದರು ಅದಿಕಾರ ಕಳೆದು ಕೊಂಡವರ ನೋವು ನೋಡಲು ಅಗದು ಅದರೆ ಕೇಲವೆ ದಿನದಲ್ಲಿ ಮರೆತು ಮತ್ತೆ ಸಾಮನ್ಯ ಬದುಕಿಗೆ ಬರಲು ಮರೆವೆ ಕಾರಣ. ಇದನ್ನು ಮೀರಿದಾಗಲೆ ಮಾನವನ ಮನಸ್ಸು ಸ್ತಿಮಿತ ಕಳೆದುಕೊಳ್ಳುವುದು. ಅದ್ದರಿಂದ ಲೋಕದ ಸಕಲ ಜೀವಕ್ಕೆ ಮರೆವುಬೇಕು ಕಾಣ ಜಾಣ.

Rating
No votes yet