ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವರನಟ ರಾಜ್‍ಕುಮಾರ್ ಪುಣ್ಯತಿಥಿ

ಕನ್ನಡ ವರನಟ ರಾಜ್‍ಕುಮಾರ್ ಮೊದಲನೇ ಪುಣ್ಯತಿಥಿ ಇಂದು. ವರನಟನ ನೆನಪಿಗೆ ನಾವು ಇದುವರೆಗೆ ಗಮನೀಯವಾದುದನ್ನು ಮಾಡಿಲ್ಲ. ರಾಜ್ ಸ್ಮಾರಕ ರಚನೆಯಾಗಲಿದೆ ಎನ್ನುವ ಭರವಸೆ ಪದೇ ಪದೇ ಕೇಳಿ ಬರುತ್ತಿದೆ. ಅವರ ಬಗೆಗೆ ಖಾಸಗಿಯಾಗಿ ಪುಸ್ತಕ ಪ್ರಕಟಣಾ ಯೋಜನೆಯೂ ಇದೆ. ವರನಟನ ಸ್ಮಾರಕ ಹೇಗಿರಬೇಕು?

ಪದಗಳ ಉಪಯೋಗದ ಬಗ್ಗೆ ಒಂದು ಕಿರುಟಿಪ್ಪಣಿ

ಬರೆಯುವ ಮುಂಚೆ ಕೆಲವು ಪದಗಳನ್ನು ರಾತ್ರಿಯಿಡೀ ನೆನೆಹಾಕಿಟ್ಟು ಮರುದಿನ ನುಣ್ಣಗೆ ರುಬ್ಬಿ ತಯಾರು ಮಾಡಿಡಬೇಕಾಗುತ್ತದೆ. ಇನ್ನು ಕೆಲವು ಪದಗಳನ್ನು, ಬೇಕೆಂದಾದರೆ ಒಂದು ಬಟ್ಟೆಯಲ್ಲಿ ಕಟ್ಟಿಟ್ಟು ಮೊಳಕೆ ಬರಿಸಬಹುದು. ಇಲ್ಲ ಕೆಲವೊಮ್ಮೆ ಹಾಗೆಯೇ ಉಪಯೋಗಿಸಬಹುದು. ಮೊಳಕೆ ಬರಿಸಿದರೆ ಪೌಷ್ಟಿಕವಾಗಿದ್ದು ಆರೋಗ್ಯಕ್ಕೆ ಒಳ್ಳೆಯದು ಎನ್ನುವವರಿದ್ದಾರೆ. ಆದರೆ ಅದು ಹಾಗೇ ಆಗಬೇಕೆಂದೇನೂ ಇಲ್ಲ. ಮೊಳಕೆಯೊಡೆದ ಪದದ ರುಚಿ ನಿಮಗೆ ಹಿಡಿಸದಿದ್ದರೆ ಹಾಗೇ ಉಪಯೋಗಿಸಲೂ ಬಹುದು. ಪೌಷ್ಟಿಕದಷ್ಟೇ ರುಚಿಯೂ ಮುಖ್ಯವಲ್ಲವೆ?
ಇನ್ನು ಕೆಲವು ಪದಗಳು ಚೆನ್ನಾಗಿ ಬಲಿತಿದ್ದರೆ ಒಳ್ಳೆಯದು. ಜಗಿದಾಗ ಬಾಯಿಗೆ ಸಿಕ್ಕುವಂತಿರಬೇಕು. ಅಂಥ ಪದಗಳನ್ನು ಚೆನ್ನಾಗಿ ಬೇಯಿಸಬೇಕಾಗಬಹುದು. ಕೆಲವೊಮ್ಮೆ ಉಪ್ಪುಖಾರ ಚೆನ್ನಾಗಿ ಹಾಕಿ ಬಲಿತ ಪದಗಳನ್ನು ಬೇಯಿಸಿದರೆ ಗಮ್ಮತ್ತಾಗಿರುತ್ತದೆ. ಇನ್ನು ಕೆಲವು ಪದಗಳು ಎಳೆಯದಾಗಿದ್ದರೆ ತುಂಬಾ ರುಚಿ. ಅವುಗಳನ್ನು ಬೇಯಿಸಲೇಬೇಕಾಗಿಲ್ಲ. ಬಿಸಿನೀರಿನಲ್ಲಿ ಒಂದಷ್ಟು ಹೊತ್ತು ಮುಳಿಗಿಸಿಟ್ಟು ತೆಗೆದು ಬಿಡಬಹುದು. ಆಗ ಆ ಪದಗಳ ಒಳಗಿನ ಪರಿಮಳ ಇನ್ನೂ ಚೆನ್ನಾಗಿ ಮೂಗಿಗೆ ಅಡರುತ್ತದೆ. ಎಳೆಯ ಪದಗಳನ್ನು ಹಾಗೆ ಉಪಯೋಗಿಸುವಾಗ ಹೆಚ್ಚು ಉಪ್ಪುಖಾರಹುಳಿ ಬೇಡ, ಅದು ಪದದ ನಿಜ ಸೊಗಡನ್ನು ಮುಚ್ಚಿಬಿಡುತ್ತದೆ ಎಂಬ ಅಪವಾದವೂ ಇದೆ.

ನಾರಾಯಣ ಸ್ಮರಣೆ ಸಾಕು. ಅಲ್ಲಮ್ಮನ ಸ್ಮರಣೆ ಮಾಡುವ. ಸ್ತುತಿ ನಿ೦ದೆಗೆ ಕಿವುಡನಾಗಿರ ಬೇಕು.

ನಾರಾಯಣ ಸ್ಮರಣೆ ಸಾಕು. ಅಲ್ಲಮ್ಮನ ಸ್ಮರಣೆ ಮಾಡುವ.
ಯಾರೋ ಆರನ್ನೋ ನಿ೦ದಿಸಿದರೆ ನಾವೇಕೆ ಅಷ್ಟೋ೦ದು ಮನಸ್ಸು ಕೊಡಬೇಕು ??
********************************
ಭೂಮಿ ನಿನ್ನದಲ್ಲ್ಲ , ಹೇಮ ನಿನ್ನದಲ್ಲ ಕಾಮಿನಿ ನಿನ್ನವಳಲ್ಲ
ಅವು ಜಗಕ್ಕಿಕ್ಕಿದ ವಿಧಿ
ನಿನ್ನ ಒಡವೆ ಎ೦ಬುದು ಜ್ಞಾನರತ್ನ.
ಅ೦ತಪ್ಪ ದಿವ್ಯ ರತ್ನವ ಕೆಡಗುಡದೆ
ಆ ರತ್ನವ ನೀನು ಅಲ೦ಕರಿಸಿದೆಯಾದಡೆ
ನಮ್ಮ ಗುಹೇಶ್ವರಲಿ೦ಗದಲ್ಲಿ

ಹಿತನುಡಿ

ಹಿಂದಿನದನ್ನು ಮರೆತುಬಿಡು. ಎಲ್ಲ ಮಾನವರ ಕಣ್ಮರೆಯಾದ ಬಾಳುಗಳೂ ಅನೇಕ ಲಜ್ಜಾಸ್ಪದ ಕರ್ಮಗಳಿಂದ ಕರಾಳವಾದುದೇ. ಮಾನವನಲ್ಲಿ ದೈವೀ ಭಾವನೆ ದೃಢವಾಗಿ ನೆಲೆಗೊಳ್ಳುವವರಗೆ ಅವನ ನಡತೆ ಎಂದಿಗೂ ನೆಚ್ಚುವಂತಹುದಲ್ಲ. ಈಗ ನೀನು ಅದ್ಯಾತ್ಮಿಕ ಪ್ರಯತ್ನ ನಡೆಸುವೆಯಾದರೆ ಮುಂದೆ ಪ್ರತಿಯೊಂದೂ ಉತ್ತಮಗೊಳ್ಳುತ್ತದೆ.

Helvetica ಫಾಂಟಿಗೆ ೫೦ ವರುಷ

ವಿಶ್ವದಲ್ಲಿ ಅತಿ ಹೆಚ್ಚಾಗಿ ಬಳಸಲ್ಪಡುವ ಫಾಂಟುಗಳಲ್ಲೊಂದಾದ ಹೆಲ್ವೆಟಿಕ ಫಾಂಟು ಹೊರಬಂದು [:http://www.washingtonpost.com/wp-dyn/content/article/2007/04/06/AR2007040601986.html|ಈ ವರ್ಷಕ್ಕೆ ಸರಿಯಾಗಿ ೫೦ ವರ್ಷಗಳಾಗಲಿದೆಯಂತೆ]. ಓದಲು ಬಹಳ ಸುಲಭವಾದ ಈ ಫಾಂಟು ಅಮೇರಿಕದ ಸಬ್-ವೇ ಗಳಿಂದ ಹಿಡಿದು ಬಿ ಎಮ್ ಡಬ್ಲು ನಂತಹ ಕಂಪೆನಿಗಳ ಲೋಗೋಗಳಲ್ಲೂ ಬಳಕೆಯಾಗಿದೆಯಂತೆ.

`ಓವಿ ' ಪದದ ಅರ್ಥವೇನು?

`ಸಂಪದ.ನೆಟ್' ಮಿತ್ರರೆ,

ನಾನು ಒಂದು ಪುಸ್ತಕವನ್ನು ಓದುತ್ತಿರುವಾಗ, ವಾಕ್ಯವೊಂದರಲ್ಲಿ `ಓವಿ' ಯಷ್ಟಾದರೂ ಓದಬೇಕು ಎಂದಿತ್ತು. ನನಗೆ `ಓವಿ' ಪದದ ಅರ್ಥವು `ಒಂದು ಪುಟವೋ ಅಥವಾ ಒಂದು ಅಧ್ಯಾಯವೋ' ಎಂದು ತಿಳಿಯುತ್ತಿಲ್ಲ. ನಿಮಗೆ ಗೊತ್ತಿದ್ದರೆ ತಿಳಿಸಿ.

ಧನ್ಯವಾದಗಳು

ಚಂದ್ರಶೇಖರ ಬಿ.ಎಚ್.

ಟಾಲ್ಸ್‌ಟಾಯ್: ಕ್ರೂಟ್ಸರ್ ಸೊನಾಟಾ: ಅಧ್ಯಾಯ ಎರಡು

ಮುದುಕ ಆ ಕಡೆ ಹೋಗುತ್ತಿದ್ದ ಹಾಗೆಯೇ ಇಲ್ಲಿ ಒಟ್ಟಿಗೆ ಬೇರೆ ಬೇರೆ ಥರದ ಮಾತು ಹುಟ್ಟಿದವು.
“ಹಳೇ ಜಮಾನಾದ ಮುದುಕ!” ಎಂದ ಕ್ಲಾರ್ಕು.
“ಇವಾನ್ ದಿ ಟೆರಿಬಲ್ ಕಾಲದ ಮದುವೆ ನಿಯಮಗಳನ್ನೇ ಫಾಲೊ ಮಾಡಬೇಕು ಅನ್ನುವವನು ಇವನು. ಹೆಂಗಸರ ಬಗ್ಗೆ, ಮದುವೆಯ ಬಗ್ಗೆ ಎಂಥ ಹಾರಿಬಲ್ ಒಪಿನಿಯನ್ನು!” ಎಂದಳು ಹೆಂಗಸು.
“ಹೌದು. ಯೂರೋಪಿನಲ್ಲಿರುವಂಥ ಮದುವೆಯ ಐಡಿಯಾಗಳು ನಮ್ಮಲ್ಲಿ ಬರುವುದಕ್ಕೆ ಇನ್ನೂ ಬಹಳ ಕಾಲ ಬೇಕು” ಎಂದ ಲಾಯರು.
“ಇಂಥಾ ಜನಕ್ಕೆ ಅರ್ಥವಾಗುವುದೇ ಇಲ್ಲ. ಪ್ರೀತಿ ಇಲ್ಲದ ಮದುವೆ ಮದುವೆನೇ ಅಲ್ಲ. ಪ್ರೀತಿ ಇದ್ದರಷ್ಟೆ ಮದುವೆಗೆ ಪಾವಿತ್ರ್ಯ” ಎಂದಳು ಹೆಂಗಸು.
ಮುಂದೆ ಕೆಲಸಕ್ಕೆ ಬಂದೀತೆಂದು ತಾನು ಕೇಳಿದ ಜಾಣ ಮಾತುಗಳನ್ನೆಲ್ಲ ನೆನಪಿಟ್ಟುಕೊಳ್ಳುವವನ ಹಾಗೆ ಅವಳ ಮಾತು ಕೇಳುತ್ತ ಕ್ಲಾರ್ಕು ಮುಗುಳ್ನಕ್ಕ.
ಆ ಹೆಂಗಸಿನ ಮಾತಿನ ನಡುವೆ ನನ್ನ ಬೆನ್ನ ಹಿಂದೆ ಯಾರೋ ಕಷ್ಟಪಟ್ಟು ಬಿಕ್ಕಳಿಕೆ ತಡೆದುಕೊಂಡ ಹಾಗೆ ಅಥವಾ ನಗು ತಡೆದುಕೊಂಡ ಹಾಗೆ ಶಬ್ದ ಕೇಳಿಸಿತು. ತಿರುಗಿ ನೋಡಿದೆ. ಅವನೇ, ಹೊಳಪು ಕಣ್ಣಿನ, ನೆರೆಗೂದಲ ಒಂಟಿ ಪ್ರಯಾಣಿಕ. ಮಾತಿನಲ್ಲಿ ಮೈಮರೆತ ನಮಗೆ ಗೊತ್ತೇ ಆಗದಂತೆ ಹತ್ತಿರಕ್ಕೆ ಸರಿದಿದ್ದ. ನಮ್ಮ ಮಾತಿನಲ್ಲಿ ಅವನಿಗೆ ಆಸಕ್ತಿ ಹುಟ್ಟಿತ್ತು. ಕೇಳಿದ: “ಅದೇನದು, ಪ್ರೀತಿ ಮತ್ತೆ ಪಾವಿತ್ರ್ಯದ ಮಾತು?”
ಸೀಟಿನ ಮೇಲೆ ಕೈಯೂರಿ ನಿಂತಿದ್ದ. ಮನಸ್ಸಿನಲ್ಲಿ ಗೊಂದಲವಿತ್ತು. ಮುಖ ಕೆಂಪಾಗಿತ್ತು. ಹಣೆಯ ನರವೊಂದು ಉಬ್ಬಿತ್ತು. ಕೆನ್ನೆಗಳು ಅದುರುತ್ತಿದ್ದವು.
“ಮದುವೆಗೆ ಪಾವಿತ್ರ್ಯ ತಂದುಕೊಡುವ ಪ್ರೀತಿ, ಯಾವುದದು?” ತಡವರಿಸುತ್ತಾ ಕೇಳಿದ.

ಸಚಿನ್,ಮೂರ್ತಿ ಮತ್ತು ವಿವಾದಗಳು

ಸಚಿನ್ ಯಾವುದೋ ಪಾರ್ಟಯಲ್ಲಿ ಕೇಕ್ ತುಂಡು ಮಾಡಲಿತ್ತಂತೆ. ಆ ಕೇಕ್ ನಮ್ಮರಾಷ್ಟ್ರಧ್ವಜದ ಬಣ್ಣ ಹೊಂದಿತ್ತು. ಆದರೂ ಸಚಿನ್ ಮಹಾಶಯ ನಿರ್ಯೋಚನೆಯಿಂದ ಕೇಕ್ ತುಂಡು ಮಾಡಿ,ವಿವಾದ ಸೃಷ್ಟಿಗೆ ಕಾರಣರಾದರು.