ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸರ್ವಸೃಷ್ಟಿಯ ಜನಕ

ಇವ ಸರ್ವಸೃಷ್ಟಿಯ ಜನಕ
ಜೀವರಾಷಿಗಳ ಪೋಷಕ
ಸಕಲ ಕಾರ್ಯಗಳ ನಿಯಂತ್ರಕ
ಎಲ್ಲಿರುವೆಯೋ ನೀ ಮಾಂತ್ರಿಕ

ಕಲ್ಪನೆಗೆ ಎಟುಕದ ಜಗವೋ
ಹಲವು ವಿಸ್ಮಯಗಳ ತಾಣವೋ
ಕಾಣದ ಕನಸುಗಳ ಬೆನ್ನತ್ತಿ
ಹುಡುಕುತ ನಡೆವೆವು ನಾವು

ಅದ್ಭುತ ಮಾನವ ಕುಲವು
ಇಲ್ಲಿರುವುದು ನಾಕ ನರಕವು
ನಿನ್ನ ಶಕ್ತಿಯ ಸ್ಮರಿಸುತ ನಾವು
ಬಾಳಿನ ಬಂಡಿ ನಡೆಸುವೆವು

ಯಾವ ಕೊರತೆ?

ಹಕ್ಕಿಯ ಹಾಡಿಗೆ ರಾಗಗಳುಂಟೆ
ಹರಿಯುವ ನದಿಗೆ ಜಾಗದನಂಟೆ
ಬೀಸುವ ಗಾಳಿಗೆ ಯಾರ ಚಿಂತೆ
ಸುರಿಯುವ ಮಳೆಗೆ ಸುಳಿಯುಂಟೆ

ಕುಣಿಯುವ ನವಿಲಿಗೆ ತಾಳಗಲಿವೆಯೇ
ಬಣ್ಣದ ಚಿಟ್ಟೆಗೆ ಅಂದದ ಕೊರತೆಯೇ
ವನ್ಯ ಮೃಗಗಳಿಗೆ ಸ್ನೇಹದ ಬರವೆ
ಹಸಿರಿನ ವನಕೆ ಭೇದಗಲಿವೆಯೇ

ಕಾಣುವ ಕಣ್ಣು ಕುರುಡಾಯಿತೇಕೆ
ಕೇಳುವ ಕಿವಿಯು ಕಿವುಡಾಯಿತೇಕೆ
ಶಾಂತಿ ಚಿತ್ತದಿ ಸಂತಸ ಮನಕೆ

ಮಹಿಳೆಯರಿಗೆ ಅಧಿಕಾರ ನೀಡಬಾರದು ಎಂಬ ಪರೋಕ್ಷ ಅಲೋಚನೆ

ಬೆನಜೀರ್ ಬುಟ್ಟೊ ಹತ್ಯೆಯಾದದ್ದು ಬಹುಶಃ ಮುಸ್ಲಿಂ ದೇಶದಲ್ಲಿ ಮಹಿಳೆಯರಿಗೆ ಅಧಿಕಾರ ನೀಡುವಂತಿಲ್ಲ, ನೀಡಬಾರದು ಎಂಬ ಉದ್ದೇಶವನ್ನು ಹೊಂದಿದೆ ಎಂದು ಕಾಣುತ್ತಿದೆ. ಒಬ್ಬ ಮಹಿಳೆಯನ್ನು ಈ ರೀತಿ ಹೀನಾಯವಾಗಿ ಅಂತ್ಯಕಾಣಿಸಿದ್ದು ನಿಜಕ್ಕೂ ಪುರುಷ ಪ್ರಧಾನ ಸಮಾಜಕ್ಕೆ ಹೇಸಿಗೆ ತರುವಂತಹ ವಿಷಯ.

ಜಾಗತೀಕರಣದ ಮಳೆ

ಸ್ಪರ್ಧಾಪೂರ್ಣ ಜಗ
ಆಧುನಿಕತೆಯ ವೇಗ
ಇಲ್ಲಿ ಭಾವಕ್ಕಿಲ್ಲ ಜಾಗ
ಮಾಡಿ ಲಾಭಕ್ಕೆಲ್ಲ ತ್ಯಾಗ

ಇಲ್ಲಿ ದುಡ್ಡಿದ್ದವನೆ ದೊಡ್ಡಪ್ಪ
ಅಧಿಕಾರವಿದ್ದವನೇ ನಮ್ಮಪ್ಪ
ಇದು ಹುಚ್ಚು ಕುದುರೆ ಓಟ
ಇದು ಯಾವ ಪರಿಯ ಆಟ

ಶರವೇಗದ ಸರದಾರರು
ಅಪ್ರತಿಮ, ಅಸಾಧ್ಯ ಶೂರರು
ಸಕಲವ ಬಲ್ಲ ಪ್ರಗತಿಪರರು
ದೇಶವನಾಳುವ ಅರಸರು

ಜಾಗತೀಕರಣದ ಮಳೆ
ಇಲ್ಲಿ ಸಾಮರ್ಥ್ಯಕ್ಕೆ ಬೆಲೆ

ಯಾರಿಗಾದರೂ ಗೊತ್ತಿದ್ದರೆ ತಿಳಿಸಿ

ನಾನು ಚಿಕ್ಕವಳಿದ್ದಾಗ ( ಏಳೇಂಟು ವರ್ಷ) ಮಕ್ಕಳ ಕಾದಂಬರಿಯೊಂದನ್ನು ಓದಿದ್ದೆ .

ಅದರ ಹೆಸರು "ಪೂಪ್ ಕಾಡಿನಲ್ಲಿ ಪಾಪು" ಅಂತ . ಬಹಳ ಸ್ವಾರಸ್ಯಕಾರಿಯಾದ ಪುಸ್ತಕ ಅದು.

 ಸುಮಾರು ೨೦೦ ರಿಂದ ೩೦೦ ಪುಟಗಳು.

ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ

ಓಂಕಾರಿ ಕಲ್ಯಾಣಿ ಶೃಂಗೇರಿ ಸಿರಿರಾಣಿ
ಬಂಗಾರ ಶಾರದೆಯ ಶ್ರೀದಿವ್ಯವಾಣಿ
ಅಚ್ಚ ಕನ್ನಡಜಾಣೆ ಗಾಯತ್ರಿ ಗೀರ್ವಾಣಿ
ವ್ಯಾಸ ಲಕ್ಷ್ಮೀಶರ ಕುಸುಮಕೋಕಿಲವಾಣಿ
ಕರುನಾಡ ಕವಿಕುಲದ ಕನ್ನಡದ ರಸವಾಣಿ
ಸಿರಿಗನ್ನಡಂ ಗೆಲ್ಗೆ ಶ್ರೀಮಂತ ವಾಣಿ

ನಾಗರಿಕತೆ

 

ಹದ್ದು ಮೀರಿದ ನಗರಕ್ಕೆ ಸಾಕ್ಷಿ-
ಕೊಟ್ಟಿಗೆಯಲ್ಲಿ ಕರು
ಹಾಕಿ ಬಂದ ದನ ಬಸ್‌ಸ್ಟಾಂಡಿನಲ್ಲಿ
"ಅಂಬಾ"
ಎಂದು ಕೂಗುವುದು.

ಹಣ್ಣುಗಳು

ಕನ್ನಡ ಹೆಸರು--- English name--- Latin name
ಅತ್ತಿ--- Cluster figs--- Ficus glomerata
ಅನನಾಸು--- Pine apple--- Ananasa sativa
ಈಚಲ ಹಣ್ಣು--- Toddy palm fruit--- Caryota urens
ಅಂಜೂರ--- Figs--- Ficus carica
ಕಲ್ಲಂಗಡಿ--- Water melon--- Citrullus vulgaris
ಕಿತ್ತಳೆ--- Orange--- Citrus reticulata
ಖರ್ಜೂರ--- Dates--- Phoenix dactylifera
ಖರ್ಬೂಜ--- Musk melon--- Cucumis melo
ಗೇರು ಹಣ್ಣು--- Cashew fruit--- Anacardium accidentale
ಚಕೋತ್ತರ ಹಣ್ಣು--- Pomelo--- Citrus decumena
ಚೆರ್ರಿ ಹಣ್ಣು--- Cherries--- Prunus cerasus
ಜಿಂದೆ ಹಣ್ಣು--- Apricot--- Prunus armeniaca