ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

Thanks , ನನ್ನಿ ಮತ್ತು ಸವಿಯೊದಗು

Thanks ಗೆ ಅಚ್ಚ ಕನ್ನಡದಲ್ಲಿ ಯಾವ ಒರೆ ಹೆಚ್ಚು ಸೂಕ್ತ ಎಂಬ ಚರ್ಚೆ ಆಗಾಗ ಇಲ್ಲಿ ಆಗಿದೆ.

’ ಸವಿಯೊದಗು ’ ಮತ್ತು ’ನನ್ನಿ’ - ಇವು ಈ ವೇದಿಕೆಯಲ್ಲಿ ಅಲ್ಲಲ್ಲಿ ಬಳಕೆಯಾಗುತ್ತಿವೆ. ಈ ಬಗ್ಗೆ ಯೋಚಿಸಿದಾಗ ನನಗನಿಸಿದ್ದು:

Thanks ಎಂಬ ಶಬ್ದದಲ್ಲಿ ಎರಡು ಭಾವನೆಗಳು ವ್ಯಕ್ತವಾಗುತ್ತವೆ:

೧) ’ ನಿಮ್ಮಿಂದ ನೆರವಾಯಿತು ’ ಎಂದು ಹೇಳುವುದು (Your gesture has been a real help - ಅನ್ನುವುದು)

ಪುಸ್ತಕನಿಧಿ- http://dli.iiit.ac.in/ ಯ ಒಂದು ಸುತ್ತು ಪೂರ್ಣ

ಅಂತೂ ಒಂದು ಸಾರಿ (ವ್ಯರ್ಥ?) ಹಠ ಬಿಡದ ತ್ರಿವಿಕ್ರಿಮನಂತೆ http://dli.iiit.ac.in ತಾಣದಲ್ಲಿನ ೨೦,೦೦೦ ಪುಸ್ತಕಗಳ ಪಟ್ಟಿಯನ್ನು ನೋಡಿದೆ. ಇಲ್ಲಿ ನಾನು ಈಗಾಗಲೇ ಓದಿದ ಪುಸ್ತಕಗಳಿವೆ .

ಪುಸ್ತಕನಿಧಿ - ’ಕನ್ನಡಿಗರು ಆಳಿದ ಅಮೇರಿಕ’ , ’ವಿಶ್ವ ಕನ್ನಡ ತಮಿಳು ಮೂಲದ ಇಂಗ್ಲೀಷ್’

ಏನಿದು? ಕನ್ನಡಿಗರು ಅಮೇರಿಕವನ್ನು ಆಳಿದರೆ ? ಯಾವಾಗ ?
ಈ ವಿಷಯಕ್ಕೆ ಆಮೇಲೆ ಬರೋಣ , ಮೊದಲು ಇದನ್ನು ಓದಿ .

ಇದು ಹದ್ದು ಮೀರಿದ ಹದ್ದಿನ ಕತೆ!

ಇದು 2006ಲವ್ ಸ್ಟೋರಿ! ಹಾಲುಜೇನಿನಂತಿದ್ದ ಅವನು ಮತ್ತು ಅವಳ ನಡುವೆ, ಇನ್ಯಾವಳೋ ಬಂದು ಹುಳಿಹಿಂಡಿದ ಕತೆ! ಕಾಲನಲೀಲೆಗೆ ಸುಖಿ ಸಂಸಾರ ಸಂಕಷ್ಟಕ್ಕೆ ಸಿಕ್ಕ ಕತೆ! ಅವಳು ಸತ್ತ ಮೇಲೆ ಅವನು ವಿರಹದಿಂದ ನೊಂದ ಕತೆ! ಈಗ ಎಲ್ಲವನ್ನು ಮರೆತು ಅವನು, ಇನ್ಯಾವಳೊಂದಿಗೋ ಸರಸವಾಡುತ್ತಿರುವ ಕತೆ! ಇದು ಕಾಗೆಗುಬ್ಬಿ ಕತೆಯಲ್ಲ! ಒಂದು ಸತ್ಯ ಕತೆ!

ಜೊತೆಯಲಿ ಜೊತೆ ಜೊತೆಯಲಿ

ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು
ಹೊಸ ಹರುಷವ ತರುವೆನು ಇನ್ನು ಎಂದು!!

ಎಂಥಾ ಮಾತಾಡಿದೆ ಇಂದು ನೀ
ಎಂಥಾ ಮಾತಾಡಿದೆ ನನ್ನ ಮನಸಿನ ಭಾವನೆ ನೀನೆ ಹೇಳಿದೆ
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು

ಪ್ರೀತಿಯೆಂದರೇನು ಎಂದು ಈಗ ಅರಿತೆನು
ಪ್ರೀತಿಯೆಂದರೇನು ಎಂದು ಈಗ ಅರಿತೆನು
ಸವಿನುಡಿಯಲಿ ತನು ಅರಳಿತು
ಸವಿಗನಸಲಿ ಮನ ಕುಣಿಯಿತು

ಜೀವನೀತಿ

ಚಿಗುರು ಮೀಸೆ, ಎಳೆ ಮೊಲೆಗಳ ಕೌಮಾರ್ಯ
ಮೋಹ ಹಾಗು ಕಾಮದ ಕುರುಡಿಂದ
ಹುಚ್ಚಾಗದೆ ಹೋದರೆ

ಯವ್ವನದ ಸೊಕ್ಕು
ದೇಶ ಹಾಗು ನೆಲದ, ಆದರ್ಶ ಮತ್ತು ನಿರಾಶೆಯ
ಕಾಟಕ್ಕೆ ಕಂಗೆಡದೇ ಹೋದರೆ

ನಡುವಯಸ್ಸಿನ ಬಿರುಸಲ್ಲೇ
ಜಪಮಣಿ-ಪಾರಮಾರ್ಥ ಸುತ್ತಿಕೊಳ್ಳುವುದನ್ನು
ತಪ್ಪಿಸಲಾದೀತೆ?

ಹತ್ತೊಂಬತ್ತು ನೂರಾ ಮೂವತ್ತೊಂದರಲ್ಲಿ ಬರೆದ ಒಂದು ಹಿಂದು-ಮುಸ್ಲಿಮ್ ಹೊತ್ತಗೆ

ಇದು ೧೯೩೧ರಲ್ಲಿ ಬರೆದದ್ದು, ಕತೆಯು ಮುಸ್ಲೀಮ್ ಅರಸರ ಆಳ್ವಿಕೆಯ ಹೊತ್ತಿನದು, ಇಲ್ಲಿಂದ ಇಳಿಸಿಕೊಂಡು ಓದಿ ನೋಡಿ.

 http://www.mykannada.net/gopalnarayan-allaahoo

ಈ ಹೊತ್ತಗೆ ಮುಸ್ಲೀಮ್ ಆಳ್ವಿಕೆಯ ಬಗ್ಗೆ ತುಸು ಬೆಳಕು ಚೆಲ್ಲೀತು.

ನಿಮ್ಮ ಸಲಹೆ/ಅಭಿಪ್ರಾಯಗಳನ್ನು ನಮಗೆ ಕಳುಹಿಸಿ

'ಸಂಪದ'ದ ಹೊಸ ಆವೃತ್ತಿಯನ್ನು ಹೊರತರುವತ್ತ ಈಗಿನಂತೆ ಹಿನ್ನೆಲೆಯಲ್ಲಿ ಕೆಲಸ ನಡೆದಿದೆ. ಈ ಸಮಯದಲ್ಲಿ ಸಂಪದವನ್ನು ಉತ್ತಮಪಡಿಸುವಲ್ಲಿ ನೀವೂ ಪಾಲ್ಗೊಳ್ಳಬಹುದು.

ಸಂಪದದಲ್ಲಿ ಏನೇನು ಬದಲಾವಣೆಗಳನ್ನು ಬಯಸುವಿರಿ? ಸಂಪದದಲ್ಲಿ ನೀವು ಮುಂದೆ ಏನು ನೋಡಬಯಸುತ್ತೀರಿ? ಈಗಿರುವುದರಲ್ಲಿ ಯಾವುದು ಇಷ್ಟವಾಗಿದೆ? ಯಾವುದು ರೇಜಿಗೆಯಾಗಿದೆ?
ನಿಮ್ಮ ಸಲಹೆ ಅಭಿಪ್ರಾಯಗಳನ್ನು [:http://sampada.net/contact|ಇ-ಮೇಯ್ಲ್ ಮೂಲಕ ಕಳುಹಿಸಿ].

ಸೂಕ್ತವಾದವುಗಳನ್ನು ಗಮನದಲ್ಲಿಟ್ಟುಕೊಂಡು 'ಸಂಪದ'ದ ಹೊಸ ಆವೃತ್ತಿಯಲ್ಲಿ ಸೇರಿಸಿ ಹೊರತರುವ ಪ್ರಯತ್ನವನ್ನು ಮಾಡಲಾಗುವುದು. ಹೊಸ ಯೋಜನೆಗಳಿಗಿಂತ ಇರುವುದನ್ನು ಉತ್ತಮಪಡಿಸುವತ್ತ ಹೆಚ್ಚಿನ ಗಮನವಿಡುತ್ತಿದ್ದೇವಾದರೂ ಹೊಸ ಯೋಜನೆ ಕುರಿತ ಸಲಹೆಗಳು ಹಾಗೂ ವಿಚಾರಗಳೂ ಸ್ವಾಗತ.