ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರಾರ್ಥನೆ

ಮಂಜು ಮಾಲಿನಿ

ತುಂಬಿರುವೆ ನನ್ನ

ಮನವ ನೀ

ಕನಸು-ಕನವರಿಕೆಯಲ್ಲು

ಕಾಂಬೆ ನೀ

ಕಲಕಿದೆ ನನ್ನ ಮನದ

ಕೊಳವ ನೀ

ಮೊಡಿಸಿದೆ ಮನದಾಸೆ ನೀ

ಮೌನದಲ್ಲಿದ್ದು ಮನಕೆ

 ನೋವ ತುಂಬಿ ನನ್ನ

ಜೀವ ಹಿಂಡುವೆ ಏಕೆ ನೀ

ಬಂದು ನನ್ನ ಬಾಳ ಬೆಳಗಿಸು

ಇದು ನನ್ನ ಹೃದಯದ

ಪ್ರಾರ್ಥನೆ

-ವೆಂ ಕೃ  ಬಿ ಎಂ ಎಸ್ ಸಿ ಇ

ಆಶಯ ಗೆಳೆಯ/ಗೆಳತಿ ಯರಿಗೆ

ಹುಚ್ಚೆದ್ದು ಕುಣಿವ ಹುಚ್ಚು

ಮನಸಿನ ಬಾವನೆ ಗಳಿಗೆ ನಿನ್ನ

ಹೃದಯದ ಬಾಗಿಲು ಮುಚ್ಚಿರಲಿ

ಅಚ್ಚು ಮೆಚ್ಚಿನ ಶುಚಿತ್ವದ

ಮನಸಿನ ಬಾವನೆಗಳಿಗೆ ನಿನ್ನ

ಹೃದಯದ ಬಾಗಿಲು ಸದಾ ತೆರೆದಿರಲಿ ಎಂದು ಆಶಿಸುತ್ತೇನೆ

*ನನ್ನ ಸ್ವಪ್ನ ಸುಂದರಿ*

*ನನ್ನ ಸ್ವಪ್ನ ಸುಂದರಿ*

ಕಣ್ಮುಚಿದರೆ ಬರುವಳು

ಮನದ ಮನೆಯೊಳಗೆ

ಕುಣಿದು ನಲಿವಳು

ನನ್ನ ಸ್ವಪ್ನ ಸುಂದರಿ

ನನ್ನವಳು

ಚಲುವೆಯರಲ್ಲಿ ಚಲುವೆ

ರಂಬೆ ಅಪ್ಸರೆಯ ನಾಚಿಸುವಳು

ಪರಿಮಳ ತುಂಬಿದ ಪಾರಿಜಾತ

ನನ್ನ ಸ್ವಪ್ನ ಸುಂದರಿ

ನನ್ನವಳು

ಮಾತು ಕನ್ನಡ ಕಸ್ತೂರಿ

ಮಾತಿನಿಂದಲೇ ಮಾಡಿದಳು

ನನ್ನ ಮನಸೂರೆ ವಯ್ಯಾರದ ನೀರೆ

"ಯಾರೀಕೆ" (ನನ್ನ ಕನಸಿನ ಕೋಮಲೆ)

"ಯಾರೀಕೆ"  (ನನ್ನ ಕನಸಿನ ಕೋಮಲೆ)

ನೀಲಿ ಬಾನಿನ ನವ ಚಂದ್ರಿಕೆ

ಯಾಕೆ ಬಂದಳೋ ಭೂಮಿಗೆ

ಯಾಕೆ ಕಂಡಳೋ ಕಣ್ಣಿಗೆ

ಮಾತನಾಡಿಸೋ ಮುನ್ನ

ಮನವ ಸೇರಿದಳು (ಚಿನ್ನ) ನನ್ನ

ನೂರು ದೀವಿಗೆ ಬೆಳಕು ಅವಳು

ಉಟ್ಟಿಹ ಸೀರೆಯೊಳಗಿನ ಮಿಣುಕು

ನೂರು ತಾರೆಗೂ ಅಣಕು ಅವಳ ಮೈ ಮಾಟದ ಬೆಡಗು

ಯಾರು ನೋಡದಾ ಚಲುವೆ ಜಾರಿ ಬಂದಳು ಹೊತ್ತು ಒಲವೆ

ಪಾನ(ಕ) ಸಮಾರಾಧನೆ

ಶ್ರೀರಾಮ ನವಮಿಯ ದಿನದಂದು ಎಲ್ಲೆಲ್ಲೂ ಪಾನಕ-ಕೋಸಂಬರಿ ವಿತರಣೆ ನಡೆಯಿತು. ಈ ಸುದ್ದಿ ದಿನಪತ್ರಿಕೆ, ರೇಡಿಯೋ/ಟಿ.ವಿ. ವಾರ್ತೆ ಇವುಗಳಲ್ಲಿ ಎಲ್ಲ ಬಿತ್ತರಗೊಂಡಿದ್ದೇನೋ ಸರಿ. ಆದರೆ, ಇದೇ ದಿನ ಸಂಜೆಯ ವೇಳೆಗೇ ಪಾನ(ಕ) ಸಮಾರಾಧನೆ ಹೆಚ್ಚೇ ನಡೆಯುತ್ತಿತ್ತು. ಎಂದಿನಂತೆ ಬಾರು-ರೆಸ್ಟೋರಂಟುಗಳ ನಂಟಿನಲ್ಲಿ ಪಾನ ಸಮಾರಾಧನೆ ಅವ್ಯಾಹತವಾಗಿ ನಡೆಯುತ್ತಿತ್ತು.

ಕನ್ನಡ ರ೦ಗದಲ್ಲಿನ ರಾಮಾಯಣ

ಮೈಸೂರಿನ ರಂಗಾಯಣದ ಆವರಣ ಮತ್ತು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣ ನನ್ನನ್ನು ಬಹಳವಾಗಿ ಸೆಳೆಯುವ ತಾಣಗಳು. ಇಂದಿನ ಅಬ್ಬರದ ದಿನಗಳಲ್ಲಿ ಇಲ್ಲಿ ಒಂದಿಷ್ಟು ಹೊತ್ತು ಕಳೆದರೆ ವಿಶಿಷ್ಟವಾದ ಅನುಭವ ನನ್ನದಾಗುತ್ತದೆ. ನಿರಂತರವಾಗಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳು ನನ್ನೊಳಗೆ ಸಂವಾದಿಯಾಗಿ ನಿಲ್ಲಬಲ್ಲವು. ನಾನು ಮತ್ತು ನನ್ನಂಥವರು ಈ ಕಾಲಘಟ್ಟದಲ್ಲಿ ಅದ್ಯಾವುದೋ ಆವರಣದೊಳಕ್ಕೆ ಸಿಲುಕಿ ಗೊಂದಲ ಹಾಗು ಅಗತ್ಯವಾಗಿರಬಹುದಾದ,ಅನಗತ್ಯವಾಗಿರಬಹುದಾದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಕೊನೆಗೆ ಕಾಡಹರಟೆಗೆ ಬಂದು ಮುಕ್ತಾಯಗೊಳಿಸುವ ಸಂದರ್ಭದಲ್ಲಿ ಗಂಭೀರರಾಗಿ ಆತಂಕಗೊಳ್ಳುವುದೂ ಇದೆ.

ನಿರಂತರ, ಕೆಲಬಾರಿ ಅನಗತ್ಯ ಅನ್ನಬಹುದಾದ ಆತಂಕ ಮತ್ತು ದಿನನಿತ್ಯದ ಜಂಜಾಟದ,ಗುದ್ದಾಟದ ಬದುಕಿನ ನಡುವೆ ಆಹ್ಲಾದ,ಆಸ್ವಾದಿಸುವ ಕ್ಷಣಗಳನ್ನು ಮೊನ್ನೆ ರವೀಂದ್ರ ಕಲಾಕ್ಷೇತ್ರದ ಆವರಣ ನನಗೆ ಒದಗಿಸಿಕೊಟ್ಟಿತ್ತು. ನೀನಾಸಂ ಮರು ತಿರುಗಾಟದ 'ಕನ್ನಡ ರಾಮಾಯಣ'ನಾಟಕ ಪ್ರದರ್ಶನ ಇತ್ತೀಚಿಗಿನ ಒಂದು ಅದ್ಭುತ ರಂಗ ಸಂವಹನ.ಮನಸ್ಸು ಮತ್ತು ಬುದ್ಧಿಯನ್ನು ಚುರುಕಾಗಿಸಿದ ಈ ಪ್ರದರ್ಶನ ಕನ್ನಡ ರಂಗಭೂಮಿಯಲ್ಲಿನ ಬದಲಾವಣೆ,ಹೊಸ ಅಲೆಯ ಅನ್ವೇಷಣೆಯ ನಡುವೆ ತನ್ನ ತಾಕತ್ತನ್ನು ತೆರೆದಿಟ್ಟಿತ್ತು.

ಹೊಸ ವಿಷಯ ವಸ್ತುವನ್ನು ತೆಗೆದುಕೊಂಡು ಅದನ್ನು ಪ್ರಸ್ತುತಪಡಿಸುವುದು ಸವಾಲು. ಆದರೆ ಜನಮಾನಸದಲ್ಲಿ ನಿತ್ಯ ನಿರಂತರವಾಗಿ ಕಾಡುವ ತುಂಬ ಹಳೆಯದಾದ,ಆಯಾ ಕಾಲದಲ್ಲಿ ಮತ್ತೆ ಮತ್ತೆ ಪ್ರಸ್ತುತವಾಗುವ ರಾಮಾಯಣ ಮಹಾಕಾವ್ಯವನ್ನು ರಂಗರೂಪಕ್ಕಿಳಿಸಿಯೂ ಕಾವ್ಯಾತ್ಮಕತೆಗೆ ಧಕ್ಕೆ ಬರದ ರೀತಿಯಲ್ಲಿ ಅದನ್ನು ವಿಜೃಂಭಿಸುವಂತೆ ಮಾಡಿದ ವೆಂಕಟರಮಣ ಐತಾಳರ ಅದ್ಭುತ ಪ್ರತಿಭೆ ನೋಡುಗರನ್ನು ಆವರಿಸಿತ್ತು.

ಕುವೆಂಪುರವರ ಶ್ರೀ ರಾಮಾಯಣ ದರ್ಶನಂ, ಕುಮುದೇಂದ್ರ ರಾಮಾಯಣ, ಪಾರ್ಥಿ ಸುಬ್ಬನ ಯಕ್ಷಗಾನ ಪ್ರಸಂಗ,..ಹೀಗೆ ಮಹಾ ಮಹಾ ಗ್ರಂಥಗಳನ್ನೆಲ್ಲ ತೆರೆದು, ನೋಡಿ,ಆಯ್ಕೆ ಮಾಡಿ,ಅಳೆದು-ತೂಗಿ,ಬೆಸೆದು ಕಲ್ಪಿಸಿಕೊಂಡು ರಂಗಕ್ಕೆ ತಂದು ನಮ್ಮ ಮನಸ್ಸು ತುಂಬಿಕೊಳ್ಳುವಂತೆ ಮಾಡಿ ಅಪೂರ್ವ ಅನುಭವವನ್ನು ಪ್ರೇಕ್ಷಕರು ತಮ್ಮದಾಗಿಸಿಕೊಳ್ಳುವಂತೆ ರೂಪಿಸಿದ ಐತಾಳರಿಗೆ ತುಂಬು ಧನ್ಯವಾದಗಳು.

ಜೀವದ ಜೀವವಾದವಳಿಗೆ

ನನ್ನ ಬದುಕಿಗೆ

ಹಸಿರಾದವಳು ನೀನು

ನನ್ನ ಉಸಿರಿಗೆ

ಮಲ್ಲೆ ಮಲ್ಲಿಗೆ ಪರಿಮಳ

ಸುರಿದವಳು ನೀನು

ನನ್ನ ಕನಸಿಗೆ ಬಣ್ಣ

ಬಳಿದವಳು ನೀನು

ನನ್ನ ಜಡನಡಿಗೆಗೆ

ಚೈತನ್ಯ ತಂದವಳು

ನೀನು

ನನ್ನ ಜೀವದ ಜೀವಕ್ಕೀಗ

ವಿರಸದ ವಿಷವ ಸುರಿದು

ಹೋಗುವೆಯಾ.....?

ನೀನು ನನ್ನ ಮರೆತು

ಬದುಕಲಿಚ್ಚಿಸುವೆಯಾ...?

-ಕೃಷ್ಣಮೊರ್ತಿ ಅಜ್ಜಹಳ್ಳಿ

ಏನು ಫಲ ಮತ್ತು ಜೀವನ ಎರಡು ಕವನಗಳು

ಏನು ಫಲ 

ಹೆತ್ತ ತಾಯ್ತಂದೆ ಗಳ ಚಿತ್ತವ ನೋಯಿಸಿ

ನಿತ್ಯ ಧಾನವ ಮಾಡುವ ಮಕ್ಕಳಿದ್ದೇನು ಫಲ

ಸ್ನಾನ ಪಾನಕೆ ಒದಗುವ ಜಲ ತಾ

ಕಾನನದಲ್ಲಿದ್ದರೇನು ಫಲ

ಗುಟ್ಟು -ಕ್ಷಮಾ  ಗುಣ ವಿಲ್ಲದ ಹೆಣ್ಣಲ್ಲಿ

ಸೌಂದರ್ಯ-ಸಿರಿ ತಾನಿದ್ದೇನು ಫಲ

ಸತ್ಯ,ಶ್ರದ್ದೆ ಇಲ್ಲದ ಶರಣನು

ಸಾವಿರ ಜಪವನು ಮಾಡಿದರೇನು ಫಲ

ಮುಕ್ತಿ ಮಾರ್ಗವ ಕೊಡುವಾ ಶ್ರೀಹರಿಯ

ರಾಮಾಯಣದೊಳಗೆ ಮತ್ತೊಮ್ಮೆ ಹೊಕ್ಕಾಗ...

ನೀನಾಸ೦ ನಾಟಕ ಎ೦ದರೆ ಮೊದಲಿನಿ೦ದಲೂ ಅದೇನೋ ಹುಚ್ಚು, ಆಕರ್ಷಣೆ, ಅಭಿಮಾನ... ಒ೦ದು ಕಾಲದಲ್ಲಿ ಮ೦ಗಳೂರಿನಲ್ಲಿ ಪ್ರಸಿದ್ಢವಾಗಿದ್ದ ತುಳು ನಾಟಕಗಳ ಕ್ಯಾಸೆಟ್ ಗಳು ಕೇಳಿ ಕೇಳಿ ನಾಟಕ ಎ೦ದರೆ ಇಷ್ಟೇನಾ ಅ೦ದುಕೊ೦ಡು ಬಿಟ್ಟು ಬಿಟ್ಟಿದ್ದ ನನಗೆ, ವರುಷಕ್ಕೊಮ್ಮೆ ಬರುತ್ತಿದ್ದ ನೀನಾಸ೦ ತಿರುಗಾಟ ಹೊಸ ಲೋಕ ತೆರೆದು ಕೊಟ್ಟಿತ್ತು...

ನಾವು ಪೌರ್ವಾತ್ಯರು

ಉಡುಪಿಯ ಅಷ್ಟಮಠದ ಸ್ವಾಮೀಜಿಯೊಬ್ಬರು ಅಮೆರಿಕದ ಮಧ್ವಸಂಘದವರ ಆಹ್ವಾನದ ಮೇರೆಗೆ ಅಲ್ಲಿಗೆ ಹೋದಾಗ ಅವರು ಕಂಡ ಹಿಂದೂಅಮೆರಿಕ ಹೇಗಿತ್ತೆಂಬುದನ್ನು “ತರಂಗ” ವಾರಪತ್ರಿಕೆಯ ಸಂದರ್ಶನವೊಂದರಲ್ಲಿ ಸಾದ್ಯಾಂತ ವಿವರಿಸಿದ್ದಾರೆ. 14 ಜೂನ್,1998 ರ ಈ ಹಳೆಯ ಸಂಚಿಕೆ ಅದ್ಹೇಗೋ ನನ್ನ ಮನೆಯಲ್ಲಿ ಇತ್ತೀಚೆಗೆ ನನ್ನ ಗಮನ ಸೆಳೆಯಿತು..