ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬಿ ಜಿ ಎಲ್ ರ ಪುಸ್ತಕಗಳು

೧೯೭೫ರಲ್ಲಿ ಪ್ರಕಟವಾದ ಬಿ ಜಿ ಎಲ್ ರವರ "ಕಾಲೇಜು ರಂಗ" ಪುಸ್ತಕಕ್ಕೆ ಕೀರ್ತಿನಾಥ ಕುರ್ತಕೋಟಿಯವರು ಮುನ್ನುಡಿ ಬರೆದಿದ್ದಾರೆ. ಈ ಮುನ್ನುಡಿಯಲ್ಲಿ

"ಕನ್ನಡದಲ್ಲಿ ಇವರು ಹೆಚ್ಚಾಗಿ ಬರೆದಿಲ್ಲ ಬರೆಯಬೇಕಾದದ್ದು ಬಹಳ ಇದೆ... [...] ...

ಸಂಗಾತಿ . . .

ಹೃದಯಕ್ಕೆ ಹತ್ತಾರು ಪ್ರಶ್ನೆಗಳ ಹಾಕಿ ಒಂಟಿಯಾಗಿ ಅಳುವ
ತನ್ನನ್ನೇ ತಡಕಾಡಿಕೊಳ್ಳುವ ನಿನ್ನ ಮನಸು -
ನನ್ನ ಒಂಟಿತನ - ಯಾಂತ್ರಿಕ ಜೀವನಕ್ಕೆ
ಹೊಸ ಚಿಲುಮೆಯಾಗಿ ಬಂದವನು ನೀನು !

ಮರುಭೂಮಿಯಲ್ಲಿ ಜಲ ಸಿಕ್ಕಂತೆನಿಸಿ
ಜೀವನ ಉತ್ಸಾಹವನ್ನು ಮತ್ತೆ ಪಡೆಯುತ್ತಿರುವೆ ನಾನು !
ತನಗಾಗಿ ಬದುಕಿ ಇತರರನ್ನೂ ಬದುಕಿಸುವ
ನಿನ್ನ ಜೀವನ ಮೌಲ್ಯ ,ಪ್ರತಿಪಾದನೆ . . .

ವೇದ ಸುಳ್ಳಾದ್ರೂ ಗಾದೆ ಸುಳ್ಳಾಗಕಿಲ್ಲವಂತೆ !!!

ನಮ್ಮ ಬಹಳ ಹತ್ತಿರವಾಗಿರುವ ಕಾವ್ಯ ಸಂಪ್ರದಾಯವೆಂದರೆ ಗಾದೆಗಳು. ಇಂದಿಗೂ ಗಾದೆ ಹೇಳ್ತಾ ಮಾತಡೋದು ನಮ್ಮಲ್ಲಿ ಹಲವರಲ್ಲಿರುವ ಹವ್ಯಾಸ. ಈ ಮೇಲಿನ ತಲೆಬರಹವೂ ಕೂಡ ಒಂದು ಗಾದೆಯೇ!!!  ಗಾದೆ ಮೇಲೆ ಗಾದೆ. :)

ಒಂದನೇ ತರಗತಿಯಿಂದ "ಇಂಗ್ಲಿಷ್" ಕಲಿಕೆ - ಒಂದು ಚಿಂತನೆ

ಇಂಗ್ಲಿಷರ ಗುಲಾಮಗಿರಿಯಿಂದ ಬಿಡುಗಡೆ ಹೊಂದಿದ ಭಾರತ "ಇಂಗ್ಲಿಷ್" ಭಾಷೆಯ ಗುಲಾಮಗಿರಿಯಿಂದ ಬಿಡುಗಡೆ ಹೊಂದಿರಲಿಲ್ಲ. ಸ್ವಾತಂತ್ರ್ಯ ಸಿಕ್ಕಿ ೬೦ ವರ್ಷದ ಬಳಿ ಬಂದರೂ, "ಇಂಗ್ಲಿಷ್" ಭಾಷೆಯ ಗುಲಾಮಗಿರಿಯ ಹಗ್ಗ ಕೊರಳನ್ನು ಬಿಗಿಯತೊಡಗಿದೆ.

ಪತ್ರಿಕೆಗಳಿಗೆ ದುರ್ದೆಸೆ ಬಂದಿದೆಯೇ?

ಮೊನ್ನೆ ಮಣಿಪಾಲದಲ್ಲಿ ನಡೆದ ಮುದ್ರಕರ ಸಮಾವೇಶದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಶ್ರೀ ಎಂ . ವಿ.

ಬೆತ್ತಲು ಸೇವೆ ಮತ್ತು ದಿಗಂಬರ ಮುನಿಗಳು

"ಶೀಲ, ಸಚ್ಚಾರಿತ್ರ್ಯಗಳಂಥ ವಿಷಯಗಳೂ ಅಷ್ಟೇ. ನಗ್ನತೆ ಎಂಬುದು ಸಾಮಾನ್ಯೀಕರಿಸಿ ನೋಡಿದಾಗ ಅಶ್ಲೀಲ. ಆದರೆ ಕೆಲವು ರಿಲಿಜಿಯಸ್ ಆದ ನಂಬಿಕೆಗಳ ಸಂದರ್ಭದಲ್ಲಿ ಅಶ್ಲೀಲವಲ್ಲ. ಆದರೆ ರೀಲಿಜಿಯಸ್ ಆಗಿದ್ದಾಗಲೂ ಅದು ಅಶ್ಲೀಲ ಎಂದು ವಾದಿಸಿದ ಉದಾಹರಣೆಗಳೂ ಇವೆ. ಇತ್ತೀಚೆಗೆ ಕರ್ನಾಟಕದಲ್ಲಿಯೇ ಇದಕ್ಕೆ ಸಂಬಂಧಿಸಿದ ವಿವಾದ ಉಂಟಾಯಿತು.

ದ್ವೀಪದ ಹಿಂದೆ ದೀಪವಿಲ್ಲ: ಖಾಸನೀಸರ ಕುರಿತೊಂದಿಷ್ಟು...

ಮಾಗಿಕಾಲದ ವಿಪರೀತ ಚಳಿಯಲ್ಲಿ ಅಶ್ವಾರೋಹಿಯೊಬ್ಬ ಹಿಮದಿಂದ ಹೆಪ್ಪುಗಟ್ಟಿದ ನೆಲದ ಗುಂಟ ಸರೋವರವೊಂದನ್ನು ಹುಡುಕಿಕೊಂಡು ಸಾಗುತ್ತಾನೆ. ಇದು ಕತೆ- ಕನಸು- ವಾಸ್ತವತೆ ಎಲ್ಲವನ್ನೂ ಕೂಡಿದ್ದು. ಸೃಷ್ಟಿಯೆಲ್ಲವೂ ಹಿಮಾಚ್ಛಾದಿತವಾಗಿದ್ದು ದಾರಿಯಲ್ಲಿ ಏನನ್ನೂ ಗುರುತಿಸಲಿಕ್ಕಾಗುವುದಿಲ್ಲ. ನಿರ್ಜನವಾದ ಈ ಪ್ರದೇಶದಲ್ಲಿ ತೆಳ್ಳಗಿನ ಹಿಮದ ಪದರಿನ ಮೇಲೆ ಕುದುರೆಯ ಖುರಪುಟದ ಸದ್ದೂ ಇಲ್ಲದೇ ಸಾಗಿರುವ ಈ ಕುದುರೆ ಸವಾರ ಕೊನೆಗೊಮ್ಮೆ ನೆರೆದಿದ್ದ ಜನರ ಚಿಕ್ಕ ಗುಂಪೊಂದನ್ನು ಗಮನಿಸಿ ಕುದುರೆಯನ್ನು ನಿಲ್ಲಿಸುತ್ತಾನೆ. ನೆರೆದಿದ್ದ ಜನ ಅವನನ್ನು ಸುತ್ತುಗಟ್ಟಿ, ತಬ್ಬಿಬ್ಬಾಗಿ ಒಬ್ಬ ಪವಾಡ ಪುರುಷನನ್ನು ನೋಡಿದಂತೆ ನೋಡುತ್ತಾರೆ. ತಾನು ಹುಡುಕುತ್ತಿರುವ ಸರೋವರವನ್ನು ಹೆಸರಿಸಿ `ಅದೆಲ್ಲಿ' ಎಂದು ಕೇಳುತ್ತಾನೆ. ನೆರೆದವರೆಲ್ಲಾ ಮೂಕವಿಸ್ಮಿತರಾದರು. ಅವರಲ್ಲೊಬ್ಬ ಹೇಳುತ್ತಾನೆ: `ನೀವು ಇದುವರೆಗೆ ಬಂದಿದ್ದೇ ಈ ಸರೋವರದ ಮೇಲಿಂದ. ಅದು ದಾರಿಯಲ್ಲ, ಮೇಲೆ ಕಾಣುವ ತೆಳ್ಳಗೆ ಹೆಪ್ಪುಗಟ್ಟಿದ ಹಿಮ'. ಅಶ್ವಾರೋಹಿ ಅವಾಕ್ಕಾದ. ತಾನು ಬಂದಿದ್ದು ನೀರಿನ ಮೇಲಿಂದ! ನಿಶ್ಚಿತವಾಗಿದ್ದ ಸಾವಿನ ಕಲ್ಪನೆಯನ್ನು ಅವನು ಸಹಿಸದಾದ. ಅದರಿಂದಾದ ಆಘಾತದಿಂದ ತತ್‌ಕ್ಷಣ ಅಲ್ಲಿಯೇ ಕುಸಿದು ಬಿದ್ದ.

(`ಅಶ್ವಾರೋಹಿ' ಕತೆಯಿಂದ)
***

ಚಾಮರಸ ಮತ್ತು ಬೇಂದ್ರೆ

ಈಗಿನ ದಿನಗಳಲ್ಲಿ ಈ ಎಬ್ಬರು ಕವಿಗಳ ಕೃತಿಗಳನ್ನು ಓದುತ್ತಿದ್ದೇನೆ. ಆಗ ಓದುವಾಗ ನನಗೆ ಇವರಿಬ್ಬರಲ್ಲಿ ಬಹಳ ಸಾಮ್ಯತೆ ಕಂಡುಬಂತು. ಇದನ್ನು ಗಮನಿಸುತ್ತಾ ಓದಿದರೆ ಇನ್ನು ಖುಶಿ ಸಿಗುತ್ತೆ ಅಂತ ಒಂದೇ ಸಮನೆ ಇಬ್ಬರನ್ನು ಓದುತ್ತಾ ಇದ್ದೀನಿ.

ಮೊದಲಿಗೆ, ಇಬ್ಬರ ಪದ್ಯಗಳು ಕಿವಿಗೆ ರಾಚುವಂತೆ ಇವೆ. ಬೇರೆಯವರು ಓದುವುದನ್ನು ಅಥವಾ ನೀವೆ ಓದುತ್ತಿದ್ದರೆ ಕೇಳುವುದಕ್ಕೆ ಹಿತವೆನಿಸಿ ನಿಮ್ಮ ಗಮನವನ್ನು ಸೆಳೆಯುತ್ತದೆ. ಅಂದರೆ ಶ್ರವಣತೆಗೆ ಒತ್ತು ಕೊಡಲಾಗಿದೆ. ಇದೇ ಈ ಇಬ್ಬರ ಪದ್ಯಗಳ ಜೀವಾಳ.

ಉದಾ: ಚಾಮರಸನ ಪ್ರಭುಲಿಂಗಲೀಲೆಯ ಈ ಸಾಲುಗಳ ನೋಡಿ

"ಉಣಿಸುವುಣಿಸೆಂದೆಂಬರೆಲ್ಲರು |

ವುಣಿಸನುಂಬುದನಿಂದು ಕಂಡೆವು |

ದಣಿಸಿದಿರಿ ನೀವಾದೊಡೆಮ್ಮನು ಭಕ್ತ ನಿಮ್ಮಾಣೆ ||

ಅಣಕವಲ್ಲಿದು ನರಸುರೋರಗ |

ರೆಣಿಕೆಯೊಳು ನಿನಗಾರು ಸರಿ ಕಾ |

ರಣಕಳಾತ್ಮಕ ನೀನೆಲೈ ಬಸವಣ್ಣ ಕೇಳೆಂದ "

ಇದು ಅಲ್ಲಮನು ಬಸವಣ್ಣನ ಮನೆಗೆ ಬಂದಾಗ ಬಸವಣ್ಣನು ಅವನನ್ನು ಸತ್ಕರಿಸುವ ರೀತಿ ಕಂಡು ಅಲ್ಲಮನು ಹೇಳುವ ಮಾತು.

ಇಲ್ಲಿ ಪ್ರತಿ ಸಾಲಿನ ಎರಡನೆ ಸಾಲಿನ ಅಕ್ಕರಗಳು 'ಣ','ಣಿ' ಇಂದ ಕೂಡಿದೆ. ಚಾಮರಸನು ಈ ರೀತಿ ಪ್ರಯೋಗ ಉದ್ದಕ್ಕೂ ಮಾಡಿದ್ದಾನೆ. ಇದರಿಂದಲೇ ಇದು ಗಮಕಿಗಳಿಗೆ ಹತ್ತಿರವಾಗಿರಬಹುದು. ಈ ರೀತಿಯ ಚೆಲುವಾದ ಸಾಲುಗಳು ಬೇಕಾದಷ್ಟಿವೆ.

ಇನ್ನು ಬೇಂದ್ರೆಯವರು ಶಬ್ದಗಳ ಸೊಗಡನ್ನು ಹೀರಿ ಬೆಳೆದ ಕೆಲವೇ ಕೆಲವರಲ್ಲಿ ಒಬ್ಬರು. ಮಡಿವಂತಿಕೆಗೆ ಮಣೆ ಹಾಕದೆ ಯಾವುದೇ ಪದಗಳ ಪ್ರಯೋಗಕ್ಕೆ ಹಿಂಜರಿಯದೆ ಶಬ್ದ ಸೌಂದರ್ಯವನ್ನು ನಮಗೆ ಅವರ ಪದ್ಯಗಳಲ್ಲಿ 'ಉಣಿ'ಸುತ್ತಾರೆ. ನನಗಂತೂ ಮೆಚ್ಚಿನ ಕವಿ ಇವರೇ.

"ಒಂದೇ ಬಾರಿ ನನ್ನ ನೋಡಿ

ಮಂದನಗಿ ಹಾಂಗ ಬೀರಿ

ಮುಂದ ಮುಂದ ಮುಂದ ಹೋದ

ಹಿಂದ ನೋಡದ ಗೆಳತಿ"