ಹಾಗೆ ಸುಮ್ಮನೆ

ಹಾಗೆ ಸುಮ್ಮನೆ

ನಾನು ಸ್ಕೂಲಿನಲ್ಲಿ ಹಾಗು ಕಾಲೇಜಿನಲ್ಲಿದ್ದಾಗ ಕವಿತೆ /ಕತೆ ಅಥವ ಅಂಥದ್ದೇನೊ ಬರೆಯುತ್ತಿದ್ದೆ. ಅದನ್ನು ಸ್ನೇಹಿತರಿಗೆ ತೋರಿಸಿ ಹೆಮ್ಮೆ ಪಟ್ಟುಕೊಳ್ಳುತಿದ್ದೆ.
ಒಮ್ಮೆ ನಮ್ಮ ಕಾಲೇಜಿಗೆ ಅ.ರಾ . ಮಿತ್ರ ಹಾಗು ಸಿದ್ದಲಿಂಗ ಪಟ್ಟಣಶೆಟ್ಟಿಯವರು ಬಂದಾಗ ಅವರಿಗೆ ನನ್ನ ಒಂದು ಕವನ ತೋರಿಸಿ ಅವರಿಂದ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡಾಗಲಂತೂ ನನಗೆ ಆಕಾಶವೆ ಕೈಗೆಟುಕಿದಷ್ಟು ಖುಶಿ. ನಾನೇನೋ ದೊಡ್ಡ ಕವಿಯತ್ರಿ ಆದಂತೆ ಸಂಭ್ರಮ .
ಆದರೆ ಬಾಳ ದೋಣಿ ನನಗೆ ಕಂಪ್ಯೂಟರ್ ಎಂಬ ಮಾಯ ದ್ವೀಪಕ್ಕೆ ಕರೆದೊಯ್ದಿತು.
ಅದರು ಆಗೊಮ್ಮೆ ಈಗೊಮ್ಮೆ ಕೆಲವು ಸಾಲು ಬರೆಯುತ್ತೇನೆ .
ಅದನ್ನು ಓದುವವರ ತಲೆ ನೋವು ಬರದಂತೆ ನಿಮ್ಮ ಮುಂದೆ ಇಡುವ
ಪುಟ್ಟ ಪ್ರಯತ್ನವೇ ಈ ನನ್ನ ಬ್ಲಾಗ್

Rating
No votes yet