ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆವರಣದ ಬಗ್ಗೆ ಒಂದು ಅನೌಪಚಾರಿಕ ಪತ್ರ

ನನ್ನ ತಂದೆ ಜಿ.ಎನ್. ಅಶೋಕ ವರ್ಧನ, ಮಂಗಳೂರಿನ ಅತ್ರಿ ಬುಕ್ ಸೆಂಟರ್ ಮಾಲಿಕ. ಭೈರಪ್ಪನವರ ಆವರಣ ಪುಸ್ತಕ ಬಿಡುಗಡೆಯಾಗಿ ಭಾರೀ ವ್ಯಾಪಾರ ನಡೆಸುತ್ತಿರುವ ಸಮಯದಲ್ಲಿ ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ. ಅವನ್ನು ಈ ಮೂಲಕ ನಿಮ್ಮೆಲ್ಲರ ಓದಿಗಾಗಿ ಸಂಪದಕ್ಕೆ ಸೇರಿಸುತ್ತಿದ್ದೇನೆ.

- ಅಭಯ ಸಿಂಹ.

ಪ್ರಿಯರೆ ನನಗೆ ಹೊಳೆದ ಕೆಲವು ಈಚಿನ ವಿಚಾರಗಳನ್ನು ಹೀಗೇ ಇನ್ನಷ್ಟು ಮಂದಿಯೊಂದಿಗೆ ಹಂಚಿಕೊಳ್ಳಬೇಕೆಂದು ತುಡಿತ ತೀವ್ರವಾದುದರಿಂದ ಎಂದಿನಂತೆ ಯಾವ ಔಪಚಾರಿಕ ಚೌಕಟ್ಟು, ಅಂತಿಮ ತೀರ್ಮಾನಗಳನ್ನು ಹೇರದೆ ನಿರೂಪಿಸುತ್ತೇನೆ. ಆದರೆ ಅವಶ್ಯ ನಿಮ್ಮ ಪ್ರತಿಕ್ರಿಯೆಗಳನ್ನು ಕಾದಿರುತ್ತೇನೆ. ಸಾಹಿತ್ಯಭಂಡಾರದಿಂದ ಆವರಣದ ಇಪ್ಪತ್ತೈದು ಪ್ರತಿ ಕೇಳಿದ್ದೆ. ಕನ್ನಡದಲ್ಲಿ ಎಂದೂ ಇಲ್ಲದ ಬಿಡುಗಡೆಯ ದಿನದ ಒತ್ತಡದಲ್ಲಿ ಐದನೇ ತಾರೀಕಿನಂದು ಬಂದ ಪ್ರತಿಗಳು ಮಾರಿಹೋಗುವುದನ್ನು ಕಂಡು ಆರರಂದು ಮತ್ತೆ ಐವತ್ತು ಪ್ರತಿಗಳಿಗೆ ಬೇಡಿಕೆ ಮಂಡಿಸಿದೆ. ಎಲ್ಲರಿಗೂ ತಿಳಿದಂತೆ `ಭಂಡಾರಿಗಳು' ಎರಡನೇ ಮುದ್ರಣವನ್ನು ಒಂಬತ್ತಕ್ಕೆ ಮುಗಿಸಿಕೊಟ್ಟರು.

ಏಕ್ ಕೋಚ್ ಕಿ ಮೌತ್

Bob Woolmer - Cricinfo
ಪಾಕಿಸ್ತಾನ ತಂಡದ ಕೋಚ್ [:http://content-ind.cricinfo.com/ci/content/player/22520.html|ಬಾಬ್ ವೂಲ್ಮರ್] ತೀರೇ ಹೋಗ್ಬಿಟ್ರಂತೆ. ನಿನ್ನೆ ಪಾಕಿಸ್ತಾನ ಐರಿಶ್ ತಂಡದ ವಿರುದ್ಧ ಸೋತಿತ್ತು. ವಾಪಸ್ ಮನೆಗೆ ಹೋಗೋದು ಇನ್ನೇನು ೯೯% ಖಚಿತವಾಗಿರುವ ಪಾಕಿಸ್ತಾನಕ್ಕೆ ತಂಡದ ಕೋಚು ಬಾಬ್ ವೂಲ್ಮರ್ ತೀರಿ ಹೋದದ್ದು ಕೂಡಿಕೊಂಡು ಈ ಸಲದ ವಿಶ್ವ ಕಪ್ ಮರೆಯಲಾಗದ ವ್ಯಸನವಾಗದೇ ಇರದು.

ನಿನ್ನೆ ಮ್ಯಾಚ್ ಮುಗಿದ ಬಳಿಕೆ "ಕ್ಷಮೆ ಕೇಳಿ" ಬಾಬ್ ವೂಲ್ಮರ್ "ಈ ಓಡಾಟ, ಕೊನೆ ಕಾಣದ ಹೋಟೆಲ್ ವಾಸ" "ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮಾಡಬೇಕಿರುವ ಈ ಕೆಲಸ, ನಿಜವಾಗಲೂ ಜೀವನ ಕಷ್ಟ ಮಾಡಿಬಿಡುತ್ತದೆ" ಎಂದಿದ್ದರಂತೆ.

ಭಾರತದ ಕಾನ್ಪುರದಲ್ಲಿ ಜನಿಸಿದ ಇವರು ಕೆಂಟ್ ತಂಡಕ್ಕೆ ಆಟವಾಡಲು ಪ್ರಾರಂಭಿಸಿದ್ದಂತೆ. ಅಲ್ಲಿಂದ ಮುಂದೆ ನಡೆದು ಇಂಗ್ಲೆಂಡ್ ತಂಡದ ಸದಸ್ಯರಾಗಿ ಆಸ್ಟ್ರೇಲಿಯದ ವಿರುದ್ಧ ಸಾಧಿಸಿದ ಐತಿಹಾಸಿಕ ಆಶಸ್ ಗೆಲುವು ಇವರ ಜೀವನದ ಪ್ರಮುಖ ಮೈಲಿಗಲ್ಲುಗಳು. ಈ ಮಧ್ಯೆ ಇವರು ಯಾವಾಗಲೂ [:http://content-ind.cricinfo.com/ci/content/current/story/285973.html|"ರೆಬೆಲ್" ಆಗಿದ್ದುದು] ಕಂಡುಬರುತ್ತದೆ.

ಒಟ್ಟಿನಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ - ಈ ದೇಶಗಳ ಕೋಚ್ ಕೆಲಸ ಕಷ್ಟದ ಕೆಲಸವೇ. ವೂಲ್ಮರ್ ಕೊಲ್ಲಲ್ಪಟ್ಟರೋ ಅಥವ ಸಹಜ ಸಾವು ಅವರನ್ನು ಹುಡುಕಿಕೊಂಡು ಬಂತೋ ಅದು ಕ್ರಿಕೆಟ್ ನಂಟಿನಿಂದಲೇ ಆದದ್ದು ಎಂಬುದು ಜನಮನದಲ್ಲುಳಿಯುವ ಸಂಗತಿ.

ಚಿತ್ರ ಕೃಪೆ: [:http://cricinfo.com|ಕ್ರಿಕ್ ಇನ್ಫೊ]

ಎಲ್ಲಾ ಸಂಪದಿಗರಿಗೂ ’ಶ್ರೀ ಸರ್ವಜಿತ್ ಸಂವತ್ಸರ” ದ ಹಾರ್ದಿಕ ಶುಭಾಶಯಗಳು !

ಆತ್ಮೀಯ ಸಂಪದಿಗರೆ,

"ಶ್ರೀ ಸರ್ವಜಿತ್ ಸಂವತ್ಸರ"ವು ನಿಮ್ಮ ಬಾಳಿನಲ್ಲಿ ನವಉತ್ಸಾಹ, ಸಂತೋಷ, ಸಮಾಧಾನ ಸಂತೃಪ್ತಿಯನ್ನು ತಂದುಕೊಡಲಿ. ಈ ವರ್ಷ ಚಾಂದ್ರಮಾನ ರೀತಿ ಚೈತ್ರ ಶುಕ್ಲ ಪ್ರತಿಪತ್ ತಾ. ೧೯-೦೩-೨೦೦೭ ನೇ ಸೋಮವಾರದ ದಿನ ಆಚರಿಸಲಾಗುವುದು.

ಸೌರಮಾನ ರೀತಿ, ಸೂರ್ಯನು ನಿರಯಣ ಮೇಷ ರಾಶಿ ಪ್ರವೇಶಿಸುವ ಪುಣ್ಯ ಕಾಲದ ದಿನ, ತಾ. ೧೪-೦೪-೨೦೦೭ ನೇ ಶನಿವಾರವೂ ಯುಗಾದಿಹಬ್ಬವನ್ನು ಆಚರಿಸಬಹುದು.

ಪ್ರಾತಃಕಾಲದಲ್ಲಿ ಅಭ್ಯಂಜನದ ನಂತರ, ಹೊಸ ವರ್ಷದ ಪಂಚಾಂಗವನ್ನು ಪರಮಾತ್ಮನ ಬಳಿ ಇಟ್ಟು ಶ್ರೀ ಮಹಾಗಣಪತಿಯ ಪೂಜೆಯಿಂದ ಪ್ರಾರಂಭಿಸಿ, ಕುಲದೇವತಾರ್ಚನೆಯನ್ನು ನಡೆಸಬೇಕು.
ಬೇವು-ಬೆಲ್ಲಗಳ ಸೇವನೆ, ಮತ್ತು ’ಪಂಚಾಂಗ ಶ್ರವಣ” ಈ ದಿನದ ಪ್ರಮುಖ ಕಾರ್ಯಗಳು. ಇದನ್ನು ಇಷ್ಟ ಜನರ ಸಮ್ಮುಖದಲ್ಲಿ ಮಾಡಬೇಕು.

ಸಾಯಂಕಾಲ ದೇವಸ್ಥಾನಕ್ಕೆ ಹೋಗಿ ಬಂದನಂತರ, ’ಪಾಡ್ಯ” ದ ಚಂದ್ರನ ದರ್ಶನಮಾಡಿ ಹಿರಿಯರಿಗೆ ನಮಸ್ಕಾರಮಾಡಿ ಅವರ ಆಶೀರ್ವಾದ ಪಡೆಯಬೇಕು. ಚಿಕ್ಕ ರೇಖೆಯಂತಿರುವ ಚಂದ್ರನ ದರ್ಶನ ಕೆಲವೊಮ್ಮೆ ಕಷ್ಟವಾದರೆ, ಅದರ ಮುಂದಿನ ದಿನವಾದರೂ ’ಚಂದ್ರನ ದರ್ಶನ” ಅತ್ಯಾವಶ್ಯಕ. ಒಂದು ವೇಳೆ ’ಗಣೇಶನ ಹಬ್”ದ ದಿನದಂದು ಅಚಾತುರ್ಯದಿಂದ ಚಂದ್ರನ ದರ್ಶನವಾಗಿದ್ದರೆ, "ಉಗಾದಿಯ ಚಂದ್ರ ದರ್ಶನ" ದಿಂದ ’ಮಿಥ್ಯಾಪವಾದ’ದ ಪರಿಹಾರ ಸಿಗುತ್ತದೆ.

ಸರ್ವರಿಗೂ ಮಂಗಳವಾಗಲಿ. ಶುಭಮಸ್ತು.

ವಿಶ್ವಕಪ್ ಕ್ರಿಕೆಟ್ ಜ್ವರ:ಇಳಿದೀತೇ?

ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾ ದೇಶ ಭಾರತದ ವಿರುದ್ಡ ಐದು ವಿಕೆಟ್ ಜಯಗಳಿಸಿ,ದಾಖಲೆ ಮಾಡಿದೆ.ಇದರೊಂದಿಗೆ ನಮ್ಮ ಕ್ರಿಕೆಟ್ ಪ್ರೇಮಿಗಳ "ಕ್ರಿಕೆಟ್ ಜ್ವರ" ಇಳಿದಿರಬಹುದು.

LG ಅಂದರೆ ಏನು?

ಇಲೆಕ್ಟ್ರಾನಿಕ್ ವಸ್ತುಗಳ ತಯಾರಕ ಕಂಪೆನಿ LG ಗೊತ್ತಲಾ? LG ಅಂದರೆ ಏನು ಎಂದು ನನಗಂತೂ ಗೊತ್ತಿರಲಿಲ್ಲ. ಮೊನ್ನೆ ಅಂಗಡಿಯೊಂದರಲ್ಲಿ LG ಆಂದರೆ life is good ಎಂದು ನೋಡಿದೆ. ಇವರ ಉತ್ಪನ್ನಗಳು ಕೈಕೊಡದೆ ಕೆಲಸ ಮಾಡಿದರೆ LG ಆಗಬಹುದು!