ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

"ಆರ್ಕುಟ್" ಎಂಬ ಮಾಯಾ ಜಾಲ!

"ಹೇಯ್, ನಿಂಗೆ ಸ್ಕ್ರ್ಯಾಪ್ ಮಾಡ್ತೀನಿ.. ", "ನನ್ನ ಸ್ಕ್ರ್ಯಾಪ್ ಬುಕ್ ನೋಡು".. "ನಿನ್ನ ಹೊಸ ಟೆಸ್ಟಿಮೊನಿ ಸಖತ್ತಾಗಿದೆ.. ಯಾರೋ ಅವನು ಬರೆದಿದ್ದು?", "ಅಲ್ಬಮ್ ಅಪ್‍ಡೇಟ್ ಮಾಡೋ", "ನನ್ನನ್ನ ಫ್ರೆಂಡ್ ಲಿಸ್ಟ್ ಗೆ ಸೇರಿಸ್ಕೋ".. ಏನಿದು ವಿಚಿತ್ರವಾಗಿದೆ ಅಂತೀರಾ?

ಉಯಿಲು

ಉಯಿಲು

ನಾ ಸತ್ತಾಗ ಪ್ರಿಯೆ, ನನಗಾಗಿ
ದುಃಖದ ರಾಗ ಎಳೆಯಬೇಡ
ಗುಲಾಬಿ ಹೂ ನೆಡದಿರು ಸಮಾಧಿಗೆ
ಅದರಲ್ಲಿ ಮುಳ್ಳು ಇರುತ್ತದೆ.
ನನ್ನ ಮೇಲೆ ಹಸಿರು ಹುಲ್ಲಾಗಿರು
ಇಷ್ಟವಿದ್ದರೆ ಹುಲ್ಲ ಮೇಲಿನ
ಹನಿಯ ಬಿಂದುವಾದರೂ ಆಗು
ಮನಸ್ಸಿನಲ್ಲಿ ಬಿಡುವಿದ್ದಲ್ಲಿ ಒಮ್ಮೆ ನನ್ನ ನೆನೆ
ಆದರೆ ನೆನೆದು ಒದ್ದೆಯಾಗಬೇಡ ಸದಾ
ನಿನ್ನ ಕನಸಾಗುವೆನು ನಾ

"ಆರ್ಕುಟ್" ಎಂಬ ಮಾಯಾ ಜಾಲ!

"ಹೇಯ್, ನಿಂಗೆ ಸ್ಕ್ರ್ಯಾಪ್ ಮಾಡ್ತೀನಿ.. ", "ನನ್ನ ಸ್ಕ್ರ್ಯಾಪ್ ಬುಕ್ ನೋಡು".. "ನಿನ್ನ ಹೊಸ ಟೆಸ್ಟಿಮೊನಿ ಸಖತ್ತಾಗಿದೆ.. ಯಾರೋ ಅವನು ಬರೆದಿದ್ದು?", "ಅಲ್ಬಮ್ ಅಪ್‍ಡೇಟ್ ಮಾಡೋ", "ನನ್ನನ್ನ ಫ್ರೆಂಡ್ ಲಿಸ್ಟ್ ಗೆ ಸೇರಿಸ್ಕೋ".. ಏನಿದು ವಿಚಿತ್ರವಾಗಿದೆ ಅಂತೀರಾ?

ಮುಂಗಾರು ಮಳೆಯ ಗಣೇಶ್ (ಎಂ. ಎನ್. ಸಿ. ಕಂಪನಿಯಲ್ಲಿ)

ಈ ಮೇಲ್ ನಲ್ಲಿ ಕಂಡದ್ದು -

ಮುಂಗಾರು ಮಳೆಯ ಗಣೇಶ್ (ಎಂ. ಎನ್. ಸಿ. ಕಂಪನಿಯಲ್ಲಿ)

GANESH'S DIALOUGE (IF WORKING IN MNC)........................

Nim trainingu, nim projectu, nim MAT, nim onsite, ee biknaasi Appraisalu, aa
SUPERVISORS baiguLa, aa Targetsu, aa team meetingsu, adarajji customer phone

maado saddu ella mix aagi nan career alle repairy maadakkaagde iro asTu

gaaya maaDide kaNri...

Nangottagoythu kanri nange Hike sigalla antha... bitkotbitte kaNri... Katte

thara duDadu Associate of the Year aniskalodakkintha obba decent individual

performer aagi idbitre saaku annisbittide kaNri.. Aadre ond vishya tilkolli

ವಿಮಾನಯಾನದಲಿ ಮೋಡಗಳು (ಏಕ-ಅನೇಕ)

ಬಣ್ಣವಾಗಿ ರೇಖೆಯಾಗಿ,
ಹಾಳೆ ನೂರು ಚಿತ್ರವಾಗಿ,
ಕಲ್ಲು-ಮಂದಿರ-ಶಿಲ್ಪವಾಗಿ,
ಹೊಮ್ಮಿದೆಲ್ಲೆಡೆ ಲಲಿತವಾಗಿ

ಜ್ವಾಲೆಯಾಗಿ ಶಿಖರವಾಗಿ,
ಅಲೆ-ಸಾಗರ-ತೀರವಾಗಿ,
ದಾರಿ-ದ್ವೀಪ-ಖಂಡವಾಗಿ,
ಕಂಡಕಂಡೆಡೆ ಲೋಕವಾಗಿ

ಹುಟ್ಟುತಿದೆ ಕಟ್ಟುತಿದೆ
ಕರಗಿ ಮತ್ತದೆ ಮರಳುತಿದೆ,
ಮುಗಿಲು ಬದಲು ಭಾವ;
ಅಲ್ಲಿ ಲವ, ಇಲ್ಲಿ ವಿಭವ!

ನಿರ್ಜೀವ ದೇವರು ..!?ರಾಮ,ರಾಮಾ...

ಮಗು ಕಾಣಲಿಲ್ಲ ಎಂದರೆ ಮೊದಲು ಮನೆಯಲ್ಲಿ ಹುಡುಕಿ, ಬೀದಿಯಲ್ಲಿ ಹುಡುಕಿ,ನಂತರ ಪೋಲೀಸ್/ಪೇಪರ್/ಟಿ.ವಿ.ಗೆ ಕಳೆದು ಹೋದ ಬಗ್ಗೆ ದೂರು/ವರದಿ ಕೊಡುವರು. ಅದೇ ತರಹ ದೇವರಿಲ್ಲ ಎನ್ನುವ ಮೊದಲು ದೇವರನ್ನು ಹುಡುಕುವ ಪ್ರಯತ್ನ ಮಾಡಿರಬೇಕು.

ನಕಾಶೆ ನೋಡುವುದರಲ್ಲಿ ನಾರಿಯರು ಹಿಂದೆ?

"ನಮ್ಮ ನಿತ್ಯಬಳಕೆಯ ಮ್ಯಾಪ್‍ಗಳನ್ನೆಲ್ಲ ರಚಿಸಿದವರಾರು? ಹೆಚ್ಚಾಗಿ ಗಂಡಸರೇ. ಸಿವಿಲ್ ಇಂಜನಿಯರಿಂಗ್, ಸರ್ವೆಯಿಂಗ್, ಬ್ಲೂಪ್ರಿಂಟಿಂಗ್ ಇವೆಲ್ಲ ಹೆಚ್ಚಾಗಿ ಗಂಡುಕ್ಷೇತ್ರಗಳೇ ತಾನೆ?

ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು

ಜಾಣ ಜಾಣೆಯರ "ಲಂಕೇಶ್ ಪತ್ರಿಕೆ"ಯಲ್ಲಿ ಲಂಕೇಶರು ನೀಲು ಅನ್ನೋ ಹೆಸರಿನಡಿ ಪದ್ಯಗಳನ್ನು ಬರೀತಿದ್ದರು. ನಾನಂತೂ ಅವುಗಳನ್ನಷ್ಟೇ ಓದಿ ಪತ್ರಿಕೆ ಮುಚ್ಚಿಡುತ್ತಿದ್ದ ದಿನಗಳಿದ್ದವು! ಇತ್ತೀಚೆಗೆ ನೀಲುಗಳು ಎಂಬ ಕೇಶವ ಕುಲ್ಕರ್ಣಿಯವರ ಬ್ಲಾಗಿನಲ್ಲಿ "ಹೈಕುಗಳ ಮಾದರಿಯಲ್ಲೇ ಕೆಲವೇ ಕೆಲವು ಸಾಲುಗಳಲ್ಲಿ ಕಾವ್ಯ ಬರೆದದ್ದು ಲಂಕೇಶ್, ನೀಲು ಹೆಸರಿನಲ್ಲಿ. ಕನ್ನಡದಲ್ಲಿ ಅಂಥ ಕಾವ್ಯ ಪ್ರಕಾರಕ್ಕೆ 'ನೀಲುಗಳು' ಎಂದು ನಾಮಕರಣ ಮಾಡಬಹುದೇ?" ಎಂದು ತಮ್ಮ ಒಂದೆರಡು ಕನ್ನಡದ ಹಾಯಿಕುಗಳನ್ನು "ನೀಲುಗಳು" ಎಂದು ಕರೆದಿದ್ದರು. ನೋಡಿ ತುಂಬಾ ಸಂತೋಷವಾಯಿತು. ಹೌದು, "ನೀಲುಗಳು" ಒಂದು ಕಾವ್ಯ ಪ್ರಕಾರವಾಗಬೇಕು ಅಂತ ಅನಿಸಿತು. ಅದಕ್ಕೆ ನೀಲು ಪದ್ಯಗಳ ಜಾಡಿನಲ್ಲೇ ಬರೆಯಬೇಕು ಅಂತ ಅನಿಸಿತು. ಇದು ನನ್ನ ಮೇಲಿನ ಲಂಕೇಶರ ಪ್ರಭಾವ ಅಂತಲೇ ಇಟ್ಕೊಳ್ಳಿ. ಹಾಗಾದರೆ ಲಂಕೇಶರ ಪದ್ಯಗಳು ಪ್ರಕಟವಾಗಿವೆಯೆ ಎಂದು ಹುಡುಕಿದಾಗ "ನೀಲು ಕಾವ್ಯ" ಅಂತ ಪ್ರಕಟವಾಗಿದೆ ಅಂತ ಪತ್ರಿಕೆಯಲ್ಲಿ ಓದಿದೆ. ತುಂಬಾ ಸಂಭ್ರಮದಿಂದ ತರಿಸಿಕೊಂಡು "ರೆಫೆರ್‍" ಮಾಡಲು ತೊಡಗಿದ್ದೇನೆ! ಈ ಸಂಪುಟದಲ್ಲಿ ಲಂಕೇಶರು 1981-1984 ರವರೆಗೆ ಬರೆದವುಗಳು ಮಾತ್ರ ಇವೆ. ಮುನ್ನುಡಿಯಲ್ಲಿ ಕಿ.ರಂ.ನಾಗರಾಜರು "ವಾರಕ್ಕೆ ಸರಾಸರಿ ಇಪ್ಪತ್ತು ಸಾಲುಗಳಂತೆ ಇಪ್ಪತ್ತು ವರ್ಷಗಳ ತುಂಬ ಹಬ್ಬಿಕೊಂಡಿದ್ದು"..."ಸುಮಾರು ಹದಿನೆಂಟು ಸಾವಿರ ಸಾಲುಗಳ" ಬರಹ ಇರಬಹುದೆಂದು ಅಂದಾಜು ಹಾಕುತ್ತಾರೆ ಮತ್ತು "ಈ ಕಾಲಮಾನದಲ್ಲಿ ನಮ್ಮ ಆಸುಪಾಸಿನಲ್ಲಿ ಇಷ್ಟು ವ್ಯಾಪಕವಾದ ಕಾವ್ಯ ರಚನೆಯಾದದ್ದು ಅಪರೂಪ" ಎಂದು ಅಭಿಪ್ರಾಯಪಡುತ್ತಾರೆ.ಮುಖಪುಟ

ತಮ್ಮ ಪತ್ರಿಕೆಯಲ್ಲಿ ಲಂಕೇಶರು "ಟೀಕೆ-ಟಿಪ್ಪಣಿ" ಎಂದು ಬರೆಯುತ್ತಿದ್ದರು. ಅದು ಈಗಾಗಲೇ ಪುಸ್ತಕರೂಪದಲ್ಲಿ ಹೊರಬಂದಿದೆ. ಅದು ಕೂಡ ಒಂದು ಪ್ರಜ್ಞಾವಂತ ಮನಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಅವುಗಳನ್ನು ಲಂಕೇಶರ ಬ್ಲಾಗ್ ಅನ್ನಬಹುದು. ಆದರೆ ಅದಕ್ಕಿಂತ, ತುಂಬಾ ಭಿನ್ನವಾಗಿ, ಕಲಾತ್ಮಕವಾಗಿ, ಕಾವ್ಯಮಯವಾಗಿ "ನೀಲು" ಮೂಲಕ ಲಂಕೇಶರು ಮಾತಾಡಿದ್ದಾರೆ. ಕೆಲವು ಸಲ ತಮ್ಮ ಸ್ವಂತ ಅನಿಸಿಕೆಯನ್ನೂ ನೀಲುವಿನ ಮಾತಿನ ಚೂಪಿಗೆ ಒಡ್ಡಿದ್ದಾರೆ, ಟೀಕಿಸಿಕೊಂಡಿದ್ದಾರೆ ಎನ್ನುವುದು ನನ್ನೊಬ್ಬನ ಅನಿಸಿಕೆ ಇರಲಾರದು . ಲಂಕೇಶರು ತಮ್ಮನ್ನು ತಾವು ಮೀರುತ್ತಿದ್ದ ರೀತಿಯದು ಎಂದು ಬಗೆಯುತ್ತೇನೆ. ಹಾಗಾಗಿಯೇ "ನೀಲು" ಎಂಬ ತಮ್ಮ ಮತ್ತೊಂದು ಬದಿಯನ್ನು ಮುಖ್ಯವಾಗಿ ತಮ್ಮನ್ನು ತಾವು ಮೀರುವ ತಂತ್ರವಾಗಿ ಲಂಕೇಶರು ಬಳಸಿದ್ದಾರೆ. ಅದಕ್ಕೇ ನನಗೆ "ನೀಲು" ಪದ್ಯಗಳೂ ಒಂದು ರೀತಿಯ ನಿಯತಕಾಲಿಕ ಬ್ಲಾಗ್‌ನಂತೆ ಕಾಣುತ್ತದೆ. ಇತ್ತೀಚೆಗೆ ನಾನು ನನ್ನ ಬ್ಲಾಗುಗಳಿಗೆ ಬೇರೆ ಬೇರೆ ರೂಪಕೊಡುವ ಪ್ರಯತ್ನಪಟ್ಟಿದ್ದೇನೆ. ಆ ಪ್ರಯತ್ನಕ್ಕೂ, ಕೇಶವ ಕುಲಕರ್ಣಿಯವರ "ನೀಲುಗಳು" ಎಂಬ ತಲೆಪಟ್ಟಿಗೂ, ಲಂಕೇಶರ "ನೀಲು ಕಾವ್ಯ"ದ ಪ್ರಕಟಣೆಗೂ ಒಂದು ರೀತಿಯ ಯೋಗಾಯೋಗ ಸಂಬಂಧವಿದೆಯೇ ಎಂದು ಅಚ್ಚರಿಪಡುತ್ತಿದ್ದೇನೆ.