ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಳೆ ಮರದಲ್ಲಿ ...? ಕಸಿ ಮಾಡಿ ನೋಡುವ..!

ಹಳೆ ಮರದಲ್ಲಿ ...! ಕಸಿ ಮಾಡಿ ನೋಡುವ..!

ಇದು ನಿವೇನಾದರು ಕೃಷಿ ಕ್ಷೇತ್ರದಲ್ಲಿ ಕೆಲ್ಸ ಮಾಡ್ತಿದೀರಿ, ಅಂತ ತಿಳಿದ್ ಕೂಡ್ಲೆ ಶ್ರೀ ಶ್ಯಾಮಸುಂದರ ಭಟ್ಟರು, ತಕ್ಷಣ ಕೇಳುವ ಮೊದಲ ಪ್ರಶ್ನೆ !

ಈ ಜೂನ್ ೭, ೨೦೦೭ ರ 'ತುಷಾರ' ಸಂಚಿಕೆಯಲ್ಲಿ, ಕೃಷಿಗಾಗಿಯೇ ಮೀಸಲಾದ, ನೀವು ತಪ್ಪದೆ ಓದಲೇ ಬೇಕಾದ ಲೇಖನವಿದು :

ಭೈರಪ್ಪ v/s ಅನಂತಮೂರ್ತಿ: ಯಾರು ದೊಡ್ಡವರು?

ಅನಂತಮೂರ್ತಿಯವರ "ಋಜುವಾತು" ಐನೂರು ಪ್ರತಿ ಕೂಡಾ ಖರ್ಚಾಗಿಲ್ಲ. ಭೈರಪ್ಪನವರ "ಆವರಣ" ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಪ್ರತಿ ಖರ್ಚಾಗಿದೆ. ಅನಂತಮೂರ್ತಿ ಭೈರಪ್ಪನವರಲ್ಲಿ ಯಾರು ದೊಡ್ದವರು ಎನ್ನುವ ದಾಟಿಯ ಚರ್ಚೆಗೆ ವಿದಾಯ ಹೇಳೋಣ. ಮೌಲಿಕ ವಿಚಾರ ವಿನಿಮಯ ನಡೆಯಬೇಕು ಎನ್ನುವ "ನೂರೆಂಟು ಮಾತು" ಅಂಕಣ ಬರಹ ಇಲ್ಲಿದೆ. ಓದಿ:

೪ ಹಂತಗಳು

೪ ಹಂತಗಳು

ಮನುಜ ೪ ಹಂತಗಳಲ್ಲಿ ಬೆಳಿತಾನಂತೆ.

೧. ನಾನು ಚನ್ನಾಗಿಲ್ಲ, ಜಗತ್ತು ಚನ್ನಾಗಿಲ್ಲ.
೨. ನಾನು ಚನ್ನಾಗಿಲ್ಲ, ಜಗತ್ತು ಚನ್ನಾಗಿದೆ
೩. ನಾನು ಚನ್ನಾಗಿದ್ದಿನಿ, ಜಗತ್ತು ಚನ್ನಾಗಿಲ್ಲ,
೪. ನಾನು ಚನ್ನಾಗಿದ್ದಿನಿ, ಜಗತ್ತು ಚನ್ನಾಗಿದೆ...

ಬೆಳದಿಂಗಳ ಬಾಲೆ ಚಿತ್ರದಲ್ಲಿ ರೇವಂತ್ ಅಭಿಲಾಷ ಗೆ ಹೇಳುವ ಮಾತಿದು, ಜೇಮ್ಸ ಅನ್ನು ಉದ್ದೇಶಿಸಿ....

ಅನಂತಮೂರ್ತಿಯವರು ಮಾತನಾಡಬಾರದೆ?

ನಿನ್ನೆ ದಿನಾಂಕ ೨೯ರ ಸಂಜೆ ಕನ್ನಡದ ಒಬ್ಬ ಖ್ಯಾತ ಸಾಹಿತಿ, ವಿಮರ್ಶಕರೊಬ್ಬರಿಗೆ ಒಂದು ಪತ್ರಿಕೆಯವರು ಫೋನ್ ಮಾಡಿ, ಆವರಣ ಕುರಿತು ಅನಂತಮೂರ್ತಿಯವರು ಆಡಿದ ಮಾತುಗಳ ಬಗ್ಗೆ ತಮ್ಮ ಪ್ರತಿಕ್ರಿಯೆ ಏನು ಅಂತ ಕೇಳಿದರು. ಆ ವ್ಯಕ್ತಿ ತಕ್ಷಣವೇ "ನನಗೆ ನೀವು ಅವರ ಭಾಷಣದ ಪೂರ್ಣ ಪಠ್ಯ ಒದಗಿಸಿದರೆ ನಾನದನ್ನ ಓದಿ ನನ್ನ ಅಭಿಪ್ರಾಯ ತಿಳಿಸಬಹುದೇ ಹೊರತು ಪತ್ರಿಕಾ ವರದಿಯ ಆಧಾರದ ಮೇಲೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ" ಅಂತ ಹೇಳಿದರು.

ರಾತ್ರಿ ಸಂಪದದಲ್ಲಿ ಮುಖ್ಯವಾಗಿ ಎರಡು ಬ್ಲಾಗ್‌ಗಳಲ್ಲಿ "ಅನಂತಮೂರ್ತಿಯವರ ಉಪದ್ವ್ಯಾಪಿತನ ಅತಿಯಾಯಿತು" ಅಂತ ಒಬ್ಬರು, "ಆವರಣದ ಬಗ್ಗೆ ಅನಂತಮೂರ್ತಿಯ ಅಸಂಬದ್ಧ ಪ್ರಲಾಪಗಳು" ಅಂತ ಇನ್ನೊಬ್ಬರು ಚಿಕ್ಕದಾಗಿ ಬರೆದರು. ವಾಸ್ತವವಾಗಿ ಇವರ ಬ್ಲಾಗ್‌ನಲ್ಲಿ ಅನಂತಮೂರ್ತಿಯವರ ಭಾಷಣದ ಯಾವ ನಿರ್ದಿಷ್ಟ ಅಂಶಗಳ ಕುರಿತೂ ಉಲ್ಲೇಖವಿಲ್ಲ. ಅಲ್ಲದೆ ಬ್ಲಾಗ್ ಬರೆದವರಾದರೂ, ಇವರಿಗೆ ಪ್ರತಿಕ್ರಿಯೆ ಬರೆದವರಾದರೂ ಅನಂತಮೂರ್ತಿಯವರ ಭಾಷಣವನ್ನು ತಾವೇ ಖುದ್ದಾಗಿ ಮತ್ತು ಸರಿಯಾಗಿ ಕೇಳಿದ್ದರೆ, ಅಥವಾ ಅದರ ಪೂರ್ತಿ ಪಠ್ಯವನ್ನಾದರೂ ಓದಿದ್ದರೆ ಎಂಬುದು ಅನುಮಾನ.

"ಅನಂತನ ಅವಾಂತರ"

ನಮಸ್ತೆ ಗೆಳೆಯರೆ,ಕಳೆದ ೨ ದಿನಗಳಿಂದ ಸಾಹಿತ್ಯ ಜಗತ್ತಿನಲ್ಲಿ ಮತ್ತೊಂದು ವಿವಾದ!!! ಒನ್ಸ್ ಅಗೈನ್ ಅನಂತಮೂರ್ತಿಯವರ ‍ಕೃಪಾಪೋಷಿತ!! ಬಹುಶಃ ಬಹುದಿನಗಳಿಂದ ಯಾವುದೇ ಸುದ್ದಿಯನ್ನು ಮಾಡಲಾಗದೆ ಒದ್ದಾಡಿರಬಹುದಾದ ಮೂರ್ತಿಗಳು ಶೂನ್ಯದ ಮೂಲಕವೆ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಭೈರಪ್ಪನವರಿಗೆ ಕಾದಂಬರಿ ಬರೆಯಲು ಬರುವುದಿಲ್ಲವೇ?

"ಉದಯವಾಣಿ"ಯಲ್ಲಿ ಇಂದು ಈ ವಿಷಯದ ಬಗ್ಗೆ ಮತ್ತೂರು ಕೃಷ್ಣಮೂರ್ತಿ ಬರೆದಿದ್ದಾರೆ.ನಿಮ್ಮ ಅನಿಸಿಕೆಯನ್ನೂ ಬರೆಯುವಿರಾ?
http://68.178.224.54/udayavani/showstory.asp?news=1&contentid=420458&lang=2

ಹಿತನುಡಿ

ಭೂಮಿಯ ಮೇಲಿನ ಪ್ರತಿಯೊಂದು ವಸ್ತುವೂ ಸಕ್ಕರೆ ಮರಳುಗಳ ಮಿಶ್ರಣವೇ. ಬುದ್ದಿಶಾಲಿಯಾದ ಇರುವೆಯಂತೆ ಸಕ್ಕರೆಯನ್ನು ಮಾತ್ರ ಗ್ರಹಿಸಿ ಮರಳು ಕಣಗಳನ್ನು ಬಿಟ್ಟುಬಿಡಬೇಕು.

ಕ್ರೈಸ್ತ ಕೋಲಾಟದ ಪದಗಳು

(ಹಾಸನ ಜಿಲ್ಲೆಯ ಶೆಟ್ಟಿಹಳ್ಳಿಯು ಇದೀಗ ಹೇಮಾವತಿ ಜಲಾಶಯದಲ್ಲಿ ಮುಳುಗಿಹೋದಿದೆ. ಕನ್ನಡ ಕ್ರೈಸ್ತರ ಪ್ರಾಚೀನ ಊರಾಗಿತ್ತು. ಅದರ ಪುನರ್ವಸತಿಯ ಊರಾದ ಜ್ಯೋತಿನಗರದಲ್ಲಿ ಈ ಕೋಲಾಟದ ಪದಗಳನ್ನು ದಾಖಲಿಸಲು ನೆರವಾದ ಕೋಲಾಟದ ತಂಡದವರಿಗೆ ಧನ್ಯವಾದಗಳನ್ನು ಸೂಚಿಸುತ್ತಾ ಇಲ್ಲಿ ಪ್ರಕಟಿಸುತ್ತಿದ್ದೇನೆ.