ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಣೆಕಟ್ಟುಗಳು ಪರಿಸರಕ್ಕೆ ಮಾರಕವೆ?

ಇತ್ತೀಚಿನ ನನ್ನ ಪ್ರವಾಸಗಳಿಂದ ಈ ಪ್ರಶ್ನೆ ನನ್ನನ್ನು ಕಾಡುತ್ತಿದೆ. ನಮಗೆ ಅಣೆಕಟ್ಟುಗಳಿಂದಾಗುವ ಪ್ರಯೋಜನಗಳ ಬಗ್ಗೆ ಗೊತ್ತಿದೆ. ಆದರೆ ಅದರಿಂದ ಪರಿಸರ ಹಾಗು ಅಣೆಕಟ್ಟಿನ ಆಯಕಟ್ಟು ಪ್ರದೇಶದ ಜನರ ಜೀವನದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಬಹುಶಃ ನಮಗೆ ಅಷ್ಟು ಅರಿವಿಲ್ಲವೇನು ಅಂತನ್ನಿಸುತ್ತದೆ. ಈ ಜಲಾಶಯಗಳ ಹಿಂಭಾಗದಲ್ಲಿ ಕಾಡಿದ್ದರೆ ಅಲ್ಲಿರುವ ಹಸಿರು ನೀರಿನಿಂದ ಆವೃತವಾಗಿ ಬದುಕಲು ಆಗದೆ, ಸಾಯಲು ಆಗದೆ ನರಳುತ್ತಿದೆಯೇನೊ ಅಂತನ್ನಿಸುತ್ತದೆ(ನೀವು ಈ ಚಿತ್ರ ನೋಡಿದರೆ ಗೊತ್ತಾಗುತ್ತದೆ). ಕಾಡು ಪ್ರಾಣಿಗಳ ಜೀವನಕ್ಕೆ ಇದರಿಂದ ವ್ಯತಿರಿಕ್ತ ಪರಿಣಾಮಗಳಾಗುತ್ತದೆ. ಒಟ್ಟಿನಲ್ಲಿ ಪರಿಸರದಲ್ಲಿ ಅಸಮತೋಲನವುಂಟಾಗುತ್ತದೆ.

ಇದರಿಂದಾಗುವ ದೀರ್ಘಾವಧಿ ಪರಿಣಾಮಗಳ ಸ್ವರೂಪ ಏನೆಂದು ನನಗೆ ಗೊತ್ತಿಲ್ಲದಿದ್ದರೂ ಅದು ಒಟ್ಟಿನಲ್ಲಿ ಒಳ್ಳೆಯದಲ್ಲ ಎಂದು ಮಾತ್ರ ಹೇಳಬಲ್ಲೆ. ಇನ್ನು ಅಲ್ಲಿನ ಕೆಲವು ಹಳ್ಳಿಗಳು ಮುಳುಗುತ್ತವೆ. ಇನ್ನು ಕೆಲವು ಅತಂತ್ರ ಸ್ಥಿತಿ ತಲುಪಿ, ಹೊರ ಜಗತ್ತಿನ ಎಲ್ಲ ಸಂಪರ್ಕಗಳನ್ನು ಕಡಿದು ಕೊಳ್ಳಬೇಕಾಗುತ್ತದೆ. ಯಾರು ಆ ಹಳ್ಳಿಗಳ ನಾಗರಿಕ ಸೌಲಭ್ಯಗಳನ್ನು ಒದಗಿಸುವ ಗೋಜಿಗೆ ಹೋಗುವುದಿಲ್ಲ. ( ಉದಾ: ದೇವಕಾರ(ಕದ್ರಾ ಹಿನ್ನೀರಿನಲ್ಲಿರುವ ಹಳ್ಳಿ), ಲಿಂಗನಮಕ್ಕಿ ಜಲಾಶಯದ ಹತ್ತಿರ ಇರುವ ಹಳ್ಳಿಗಳು...ಇಲ್ಲಿನ ಜನರು ಪಕ್ಕದಲ್ಲೆ ಉತ್ಪಾದನೆಯಾದರೂ ಇನ್ನು ವಿದ್ಯುತ್ ಮುಖ ನೋಡಿಲ್ಲ)

ನಮ್ಮ ಪರಿಸರವನ್ನು ನಾವು ಮುಂದಿನ ಪೀಳಿಗೆಗೆ ಒಳ್ಳೆ ಸ್ಥಿತಿಯಲ್ಲಿ ನೀಡುವುದು ನಮ್ಮ ಜವಾಬ್ದಾರಿಯಲ್ಲವೆ ? ಪ್ರಗತಿಗೆ ವಿದ್ಯುತ್ ಬೇಕು ..ಆದರೆ ಪ್ರಗತಿಯ ಹೆಸರಿನಲ್ಲಿ ಪರಿಸರಕ್ಕೆ ಧಕ್ಕೆ ಬೇಡ ಅಲ್ಲವೆ? ನಾವು ಪರಿಸರಕ್ಕೆ ಹಾನಿ ಮಾಡದೆ ವಿದ್ಯ್ಯುತ್ ಉತ್ಪಾದಿಸಲು ಹಲವು ತಂತ್ರಙ್ನಾನಗಳಿವೆ (ಸೌರ,ಗಾಳಿ) ಆದರೂ ಅದನ್ನು ನಾವು ಕಾರ್ಯಗತ ಮಾಡುವುದರಲ್ಲಿ ಹಿಂದೆ ಇದ್ದೇವೆ..ಅಲ್ಲವೆ?

ಕನ್ನಡದಲ್ಲೊಂದು ಸರ್ವ ಅಕ್ಷರಗಳ ವಾಕ್ಯ ಇದೆಯೇ?

ಪ್ರೀತಿಯ ಕನ್ನಡ ಮಿತ್ರರೆ ಮತ್ತು ಕನ್ನಡದ ಅಭಿಮಾನಿಗಳೆ,

ಕನ್ನಡ ಅಕ್ಷರಮಾಲೆಯಲ್ಲಿರುವ ಎಲ್ಲ (ಸ್ವರ ಮತ್ತು ವ್ಯಂಜನ) ಅಕ್ಷರಗಳನ್ನು ಉಪಯೋಗಿಸಿದ ಒಂದು ವಾಕ್ಯ ಕನ್ನಡದಲ್ಲಿ ಇದೆಯೇ?

"ಉಪ್ರಕಪ್ರಟೈ" ಪತ್ರಿಕೆಯೂ, ನನ್ನ ಸ್ನೇಹಿತನ ಡಿಸ್‌ಕ್ಲೈಮರ್ರೂ

ಇದೇನು, ಇಷ್ಟು ವಿಚಿತ್ರವಾದ ತಲೆಬರಹ (ಅಥವಾ ತಲೆಹರಟೆ ಬರಹ) ಅಂತ ಅಂದುಕೊಳ್ಳುತ್ತಿದ್ದೀರಾ? ಹಾಗೇನೂ ಇಲ್ಲ. ಚಿಕ್ಕದಾಗಿ-ಚೊಕ್ಕದಾಗಿ ಹೇಳುತ್ತೀನಿ, ಕೇಳುವಂಥವರಾಗಿ.
ಕಳೆದ ತಿಂಗಳು ನನ್ನ ಸ್ನೇಹಿತನೊಬ್ಬ ಒಂದು "ಅಲ್ಲಗಳೆಯುವಿಕೆ" (ಅದೇ ಸ್ವಾಮಿ disclaimerಉ) ಬರೆಯಲು ಹೋಗಿ ಬಹಳ ಪೀಕಲಾಟಕ್ಕೆ ಸಿಗಿಹಾಕಿಕೊಂಡು, ನಮ್ಮೆಲ್ಲರ ನಗೆಪಾಟಲಿಗೆ ಗುರಿಯಾದ. ಅವನ ಪೇಚಾಟವೇ ನನಗೆ ಒಂದು ಲೇಖನಕ್ಕೆ ಸರಕಾಯಿತು ಅನ್ನೋದು ಬೇರೆ ವಿಷಯ. ಈ ಬಗ್ಗೆ ಬರೆಯೋಣ ಅಂತ ಹೊರಟ ನನಗೆ ಅದರಲ್ಲಿ ಬಳಸೋದಕ್ಕೆ ಒಂದು ಪತ್ರಿಕೆಯ ಹೆಸರು ಬೇಕಾಗಿತ್ತು. ಯಾವುದೇ ಪತ್ರಿಕೆಯನ್ನು ಸುಮ್ಮನೆ "ಉದಾಹರಣೆಗೆ" ಅಂತ ಹೆಸರಿಸಿದರೂ ಜನ "ಅದನ್ನೇ ಯಾಕೆ ಉದಾಹರಿಸಬೇಕು? ಇದನ್ನು ಯಾಕೆ ಸೂಚಿಸಬಾರದು" ಅಂತ ಹೇಳಬಹುದು. ಅದೂ ಸರಿ ಅನ್ನಿ, ಅವರವರ ಭಾವ-ಭಕ್ತಿ! ಅದಕ್ಕೆ ನಾನೇ ಒಂದು ಹೊಸ ಪತ್ರಿಕೆ ಪ್ರಾರಂಭಿಸಿದ್ದೀನಿ. ಮೊನ್ನೆ ತಾನೇ ಪ್ರಾರಂಭವಾಗಿದೆ. ಇದರ ಸಂಪೂರ್ಣ "ಕಾಪಿರೈಟ್"ಗೆ ಅರ್ಜಿ ಕೂಡ ಹಾಕೋಣ ಅಂತ ಯೋಚಿಸುತ್ತಿದ್ದೀನಿ; "ಹೆತ್ತವರಿಗೆ ಹೆಗ್ಗಣ ಮುದ್ದು" ನೋಡಿ. ನನ್ನ ಪತ್ರಿಕೆಯ ಹೆಸರು "ಉದಯ ಪ್ರಭ ಕರ್ನಾಟಕ ಪ್ರಜಾ ಟೈಮ್ಸ್" ಅಂತ! ಅದರ ಸಂಕ್ಷಿಪ್ತ ರೂಪವೇ "ಉಪ್ರಕಪ್ರಟೈ". ಹೇಗಿದೆ ಹೆಸರು? ಆಕಸ್ಮಾತ್, ಈ ಹೆಸರಿನದ್ದೂ ಒಂದು ಪತ್ರಿಕೆ ಕರುನಾಡಿನ ಯಾವುದಾದರೂ ಮೂಲೆಯಲ್ಲಿ ಇದ್ದಲ್ಲಿ, ನಮೋನ್ನಮಃ, ತಪ್ಪಾಯಿತು, ದಯವಿಟ್ಟು ಒಪ್ಪಿಸ್ಕೋಬೇಕು. ಇದಿಷ್ಟೂ ನನ್ನ ಮಾತು; ಇನ್ನು ಮುಂದೆ ನನ್ನ ಸ್ನೇಹಿತನ ಕಥೆ ಕೇಳುವಿರಂತೆ, ಬನ್ನಿ.

ನನ್ನ ಸ್ನೇಹಿತ ಒಬ್ಬ ಉದಯೋನ್ಮುಖ ಬರಹಗಾರ. ಅವನ ಹೆಸರು, ಊರು, ಕೇರಿ ಈ ಮೂರರ ತಂಟೆಯೂ ನಮಗೆ ಬೇಡ. ಆತ ನಮ್ಮ "ಉಪ್ರಕಪ್ರಟೈ" ಪತ್ರಿಕೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಕೆಲವೊಂದು ವಿಚಾರಗಳ ಬಗ್ಗೆ "ವಸ್ತುನಿಷ್ಠ"ವಾಗಿ ಟೀಕಿಸಿ ಬರೆಯಬೇಕು ಅಂತ ಅಂದುಕೊಳ್ಳುತ್ತಾನೆ. ಆದರೆ "ಉಪ್ರಕಪ್ರಟೈ" ಸಿಕ್ಕಾಪಟ್ಟೆ ಜನಪ್ರಿಯ ಪತ್ರಿಕೆ. ಅದರ ಬೆಂಬಲಿಗ ಅಭಿಮಾನಿಗಳ ಪಟ್ಟಿಯಲ್ಲಿ ಕನಿಷ್ಠ ಹತ್ತು ಹೆಸರಾಂತ ಸಾಹಿತಿಗಳು/ಚಿಂತಕರಿದ್ದಾರೆ. ಹಾಗೆಯೇ ಅದನ್ನು ಟೀಕಿಸುವವರ ಪಟ್ಟಿಯಲ್ಲಿ ಕೂಡ ಒಂಭತ್ತು ಹೆಸರಾಂತ ಸಾಹಿತಿಗಳು/ಚಿಂತಕರಿದ್ದಾರೆ ಅನ್ನೋದೂ ನಿಜ!

ನೆದೇರ್ಲಂಡ್ಸ್ ಚಲನಚಿತ್ರೋತ್ಸವ - ಕನ್ನಡ ಸಿನೆಮಾ

ಎಲ್ಲರಿಗೂ ನಮಸ್ಕಾರ, ನಾನು ಸತೀಶ್ ಸಿ ವಿ - ಕೆಲವು ತಿಂಗಳುಗಳಿಂದ ಸಂಪದ ಸದಸ್ಯನಾಗಿದ್ದೇನೆ. ಆದರೆ ಸಂಪದದಲ್ಲಿ ಬರೆಯುವುದಕ್ಕೆ ಆಗಿರಲಿಲ್ಲ.

ರಸ್ಕಿನ್ ಬಾಂಡ್ ಪುಸ್ತಕ - funny side up

ರಸ್ಕಿನ್ ಬಾಂಡ್ ಪುಸ್ತಕಗಳು ತಿಳಿ ಹಾಸ್ಯದಲ್ಲಿ ಇರುತ್ತವೆ. ಅನೇಕ ಸಲ ಮಕ್ಕಳಿಗಾಗಿ ಬರೆದಿರುತ್ತಾರೆ. ಭಾಷೆಯೂ ಸರಳ ; ಒಂದು ರೀತಿ ಖುಷಿ ಕೊಡುತ್ತದೆ. ಒಂದನ್ನಾದರೂ ಓದಿ ನೋಡಿ.

*ಜಾನಪದಶೈಲಿಯ ಹಳ್ಳಿಯ ಹಾಡು*

*ಪ್ರೇಮಿಗಳ ಹಾಡು*

ಮಾಡಿಮ್ಯಾಲೆನಿಂತುಕೊಂಡು ಮಲ್ಗೆಹೂವಮುಡ್ದುಕೊಂಡು
||ಮೆಲ್ಲಮೆಲ್ಲಗೆ ನಡಿಯೋಳೆ ಮುದ್ದಾದಮೊಗದವಳೆ ನೀನಾರೆ||

ಕಾಂguess ಸತ್ಯಾಗ್ರಹದ ವಿರುದ್ಧ ಬಿಜೆಪಿ ಸತ್ಯಾಗ್ರಹ !

ಬೊಗಳೂರು, ಜ.31- ಗಾಂಧೀಜಿ ಪ್ರಣೀತ ಸತ್ಯಾಗ್ರಹದ ಶತಮಾನೋತ್ಸವವನ್ನು ಪಕ್ಷಕ್ಕೆ ಸೀಮಿತಗೊಳಿಸಿ ಆಚರಿಸಿದೆ ಎಂದು ವಿರೋಧಿಗಳಿಂದ ಶ್ಲಾಘನೆಗೆ ಕಾರಣವಾಗಿರುವ ಕಾಂguess, ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. [http://bogaleragale.blogspot.com/]