ಹೆಸರು ಕೆಡಿಸಿ-ಹೆಸರುವಾಸಿಯಾಗಿ!!

ಹೆಸರು ಕೆಡಿಸಿ-ಹೆಸರುವಾಸಿಯಾಗಿ!!

೪೦ ವರ್ಷದಿಂದ ನಾನೂ ನಮ್ಮ ಕಂಪೆನಿಗೆ ಮಣ್ಣು ಹೊರುತ್ತಿದ್ದೇನೆ.
ನನಗಿಂತ ಸಣ್ಣವರೆಲ್ಲಾ ಬಾಸ್ ಗಳಾಗಿ ಬಂದು ಮೆರೆದು ಹೋದರು.ನಾನೂ ನಿವೃತ್ತನಾಗುವ
ಮೊದಲು 'ಬಾಸ್'ಖುರ್ಚಿ ಏರಬೇಕು.ಇದು ನನ್ನ ಆಸೆ ಅಲ್ಲ."ಐದು ಕೋಟಿ ಜನತೆಯ"(ಲ್ಲಿ ಒಬ್ಬರಾದ ನನ್ನಾಕೆಯ) ಆಸೆ.

ಯಡಿಯೂರಪ್ಪನವರು,ಅ'ಡಿ' ಒತ್ತು ಕೊಟ್ಟು,ಅಡ್ಡಿ ಆತಂಕಗಳನೆಲ್ಲಾ ನಿವಾರಿಸಿ ಮುಖ್ಯಮಂತ್ರಿಯಾದರು.ಇಷ್ಟು ಸುಲಭವೆಂದು ಗೊತ್ತಿದ್ದರೆ,ನಾನೂ ಕಂಪೆನಿ ಸೇರಿದ ಹೊಸದರಲ್ಲೇ ಮಾಡುತ್ತಿದ್ದೆ.
ಇಡೀ ಬೆಂಗಳೂರಲ್ಲಿ ಒಬ್ಬ,ಒಬ್ಬನೇ ಒಬ್ಬ ನ್ಯೂಮರಾಲಾಜಿಷ್ಟು ಸಿಗಬೇಕೆ?ಸಿಕ್ಕಿದವರೂ '೨-೩ತಿಂಗಳು ಬಿಟ್ಟು ಬನ್ನಿ.ಈವಾಗ ಬ್ಯುಸಿ'ಎಂದರು.
'ಎ'ಯಿಂದ 'z'ವರೆಗೆ ಯಾವುದಾದರೂ ಅಕ್ಷರ ಸೇರಿಸುವುದು,ಅಥವಾ ಬಿಡುವುದು.ಅಂಕಗಳನ್ನು ಕೂಡುವುದು,ಕಳೆಯುವುದು.ಜ್ಯೋತಿಷ್ಯದಷ್ಟು ಕಷ್ಟವಿಲ್ಲ ಬಿಡಿ.ನೋಟ್ ಬುಕ್ ಹಿಡಕೊಂಡು ಕುಳಿತೆ...
'ಗಾಣೇಶ'...'ಗಣ್ಣೇಶ'..'ಗಣ್ಣೈಶಾ'......
ತಥ್,ಇಷ್ಟು ಒಳ್ಳೆಯ ಗಣೇಶ ಹೆಸರನ್ನು ಹಾಳು ಮಾಡಲು ಹೊರಟಿದ್ದೇನಲ್ಲಾ.ರಾಜಕಾರಣಿಗಳು,ಸಿನೆಮಾದವರು,ಟಿ.ವಿ.ಯವರು ಬಿಡಿ.
ಮೊದಲೇ ಹೆಸರು ಕೆಡಿಸಿಕೊಂಡವರಿಗೆ, ಪುನಃ ಕೆಡಿಸಿಕೊಳ್ಳುವುದು ಕಷ್ಟವಿಲ್ಲ.
ಇದೇ ಹೆಸರಲ್ಲಿ 'ಬಾಸ್' ಆಗುವೆ.

Rating
No votes yet

Comments