ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ರಾಜ ಮಾರ್ಗ

ರಾಜ ಮಾರ್ಗ

ಇಲ್ಲ, ರಾಜಮಾರ್ಗ ಮುಚ್ಚಲೂ  ಇಲ್ಲ

ಅದು ಪ್ರತಿಬಂದಿತವೂ ಅಲ್ಲ

ಅದು ಹಾಗೆಯೇ ಇದೆ, ಸುವಿಹಾರಿ, ಚೇತೋಹಾರಿ

ಗಮ್ಯದ ತನಕ ಸುದೃಢ ಘನ ಗಂಭೀರ

ಆದರೆ ಕ್ರ ಮಿಸರು ಅದರಲಿ ಹಲವರು

ಅವರೋ ತಾವೇ ಕಿರುದಾರಿ ಹುಡುಕುವರು

ಅಲೆದಲೆದು ಬಳಲಿ ಗಮ್ಯವ ತಲುಪದವರು

ಸೋತು ಕೈ ಕೈ ಹಿಸುಕಿ ಮರುಗುವರು

ಆದರೂ ರಾಜಮಾರ್ಗ ಇನ್ನೂ ಹಾಗೆಯೇ ಇದೆ

ಸುವಿಹಾರಿ ಚೇತೋಹಾರಿ  ಘನ ಗಂಭೀರದೆ

ಕಾಯುತಲಿದೆ ಅದು ಒಯ್ಯಲು ತೀರಕೆ

ಸೋತು ಬಳಲಿ ಬರುವರೆಲ್ಲರ ಗಮ್ಯಕೆ

ಪ್ರಹರಿ

ಪ್ರಹರಿ


ಅರಿವಿಲ್ಲದವನೆಡೆಗೆ ಎಸೆಯದಿರಿ ಹೂವುಗಳ


ಕಲ್ಲಾಗಿ ನಾನಿಹೆನು ಮರೆತಂತೆ ನೆನಹುಗಳ


ಕಾರ್ಗಿಲ್ನ ಅಘಾತ ಮರೆಸಿತ್ತು ಅರಿವುಗಳ


ಕರಟಿಸಿ ಕದಿರೊಡೆದ ಭಾವನೆಯ ಚಿಗುರುಗಳ


 


ಪ್ರಹರಿಯಾದ ನನ್ನಾಸೆ ಅರಳಿತ್ತು ಆಗೊಮ್ಮೆ


ಟಿಸಿಲೊಡೆದ ಭಾವನೆಯ ಚಿಗುರುಗಳ ಕಡೆಗೊಮ್ಮೆ


ಹಸಿರುನೆಲ ತಿಳಿನೀಲದಂಬರದ ರಕ್ಷೆಯಲಿ


ತನ್ನವರ ಸ್ಥಿರನೆಲೆಯ ಸುಖನಗೆಯ ಕಕ್ಷೆಯಲಿ


 


ಸುಡುಸುಡುವ ಬಿಸಿಲಿರಲಿ ಮೈಕೊರೆವ ಚಳಿಯಿರಲಿ


ಬಸಿದ ಕಣ್ಣೀರಿರಲಿ ಹರಿದ ಕೆನ್ನೀರಿರಲಿ


ನೊವಿರಲಿ ನಲಿವಿರಲಿ ತನ್ನವರ ನೆನಪಿನಲಿ

ಆಶಾ ದೀಪ

ಆಶಾ ದೀಪ

ಕಾಡಿನಾಚೆಯಾ ಊರ ಹೊರಗಿನಾ
ಆಸೆ ಹೊತ್ತ ಹಿರಿದಾದ ಕನಸಿನಾ
ಮರುಕು ಬಿದ್ದ ಹಳೆ ಗುಡಿಯ ಬದಿಗಿನಾ
ಪುಟ್ಟದಾದ ಒಂದು ಮಿಣುಕು ದೀಪ ನಾ

ಅರಿವಿದೆ ಮನಸ್ಸಿಗೆ ಸತ್ಯದತ್ತಲೂ
ಹರಡಿದೆ ಕತ್ತಲು ನನ್ನ ಸುತ್ತಲೂ
ಬೀಸುವ ಗಾಳಿಯು ಭರದೆ ಮುತ್ತಲೂ
ಸನಿಹದೆ ಬದುಕಿನ ಸಂಜೆಗತ್ತಲೂ

ಬಾಣಲೆ ಬೆಂಕಿ

ಕರ್ನಾಟಕದ "ವಚನಭ್ರಷ್ಟತೆ", "ಮಾನ-ಅವಮಾನ", "ಗೌರವ-ಅಗೌರವ" ಗಳ ಹುಡುಗಾಟದ ಅಭದ್ರತೆಯಿಂದ ನಾನು ನೇರ ಬಂದಿಳಿದದ್ದು ಆಸ್ಟ್ರೇಲಿಯಾದ ಚುನಾವಣಾ ಪ್ರಚಾರದ ಕೂಗಾಟ, ಹಾರಾಟದ ನಡುವಿಗೆ.

ಮಾಧ್ಯಮಗಳು ಏಕೆ ಹೀಗೆ??

ಅಮಿತಾಬ್ ಬಚ್ಚನ್ ಆಸ್ಪತ್ರೆ ಸೇರಿದಾಗ ಹೆಚ್ಚು ಕಡಿಮೆ ೨೪ ತಾಸು ಟಿ.ವಿ. ನಲ್ಲಿ ಅದೇ ಸುದ್ದಿ...
ಪತ್ರಿಕೆಗಳಲ್ಲೂ ಅದೇನೇ...
ನಮ್ಮ ಮಾಜಿ ಪ್ರಧಾನಿ ವಾಜಪೇಯಿಯವರೂ ಆಸ್ಪತ್ರೆಗೆ ಸೇರಿದ್ದರೂ, ಯಾವ ಸುದ್ದಿ ವಾಹಿನಿಯೂ/ಪತ್ರಿಕೆಗಳೂ ಇದರ ಬಗ್ಗೆ ಬಿತ್ತರಿಸಲಿಲ್ಲ...
ಏಕೆ ಹೀಗೆ? ದೇಶವ್ಯಾಪಿ ಮಾಧ್ಯಮದ ಲಾಬಿಯೇ???

--ಶ್ರೀ

ಹಳೇ ಗಂಡನ ಪಾದವೇ ಗತಿ !

ಹಳೇ ಗಂಡನ ಪಾದವೇ ಗತಿ ! ಅನ್ನುವ ಗಾದೆ ಮಾತನ್ನು ನೀವು ಕೇಳಿರಬೇಕು . ಇದಕ್ಕೇನಾದರೂ ಹಿನ್ನೆಲೆ , ಉದಾಹರಣೆ ಇರಬೇಕಲ್ವೇ ? ನಮ್ಮ ಸಮಾಜದಲ್ಲಂತೂ ಹೊಸ ಗಂಡ , ಹಳೆ ಗಂಡ ಅಂತೆಲ್ಲ ಇರುತ್ತಿರಲಿಲ್ಲ ಅಲ್ಲವೇ ? ( ಈಗಿನ ಮತ್ತು ಇನ್ನು ಮುಂದಿನ ಕತೆ ಬೇರೆ !)

ನಕ್ಕೋತ , ಹಾಡಿಕೋತ , ಕುಣಕೋತ .......(ಧಾರವಾಡ ಕನ್ನಡ - ೫)

ನಕ್ಕೋತ , ಹಾಡಿ(ಡ)ಕೋತ , ಕುಣಕೋತ ....... ಅಂದರೆ ನಗುತ್ತ , ಹಾಡುತ್ತ , ಕುಣಿಯುತ್ತ

ಅದೇ ರೀತಿ ಹೋಡಕೋತ , ಅನಕೋತ ( ಅಂದುಕೊಳ್ಳುತ್ತ ) , ಅಂಜಿಕೋತ , ಬೈಕೋತ , ಎಳಕೋತ , ಬಿಡಿಸಿಕೋತ , ಝಾಡಿಸಿಕೋತ , ಮಾಡಿ(ಡ)ಕೋತ ಇತ್ಯಾದಿ !

ಆತ್ಮವಿಶ್ವಾಸ ಮತ್ತು ಅಹಂಕಾರ

ಆತ್ಮವಿಶ್ವಾಸ ಮತ್ತು ಅಹಂಕಾರದ ಮದ್ಯೆ ಇರುವ ತೆಳುವಿನ ಪದರ ಏನು ? ಈಗ ನನ್ನ ಬಗ್ಗೆ ನನ್ನಲ್ಲಿ ಆತ್ಮ ವಿಶ್ವಾಸವಿದೆ.ಅದನ್ನು ವ್ಯಕ್ತಪಡಿಸಿದರೆ ಅಹಂಕಾರವೇ? ಸುಮ್ಮನೆ ಕುಳಿತರೆ ಬೇರೆ ಜನ ಅವಕಾಶವನ್ನು ಕಸಿದುಕೊಳ್ಳುವ ಕಾಲ ಇದು.. ನಮ್ಮ ಬಗ್ಗೆ ಈಗ ನಾವೇ ಹೇಳಬೇಕಾಗಿರುವ ಕಾಲದಲ್ಲಿ , ಆತ್ಮ ವಿಶ್ವಾಸ ಮತ್ತು ಅಹಂಕಾರದ ಮದ್ಯೆ ತೆಳು ಪದರವನ್ನು ಹೇಗೆ ಗುರುತಿಸುವುದು?