ರಾಜ ಮಾರ್ಗ
ಬರಹ
ರಾಜ ಮಾರ್ಗ
ಇಲ್ಲ, ರಾಜಮಾರ್ಗ ಮುಚ್ಚಲೂ ಇಲ್ಲ
ಅದು ಪ್ರತಿಬಂದಿತವೂ ಅಲ್ಲ
ಅದು ಹಾಗೆಯೇ ಇದೆ, ಸುವಿಹಾರಿ, ಚೇತೋಹಾರಿ
ಗಮ್ಯದ ತನಕ ಸುದೃಢ ಘನ ಗಂಭೀರ
ಆದರೆ ಕ್ರ ಮಿಸರು ಅದರಲಿ ಹಲವರು
ಅವರೋ ತಾವೇ ಕಿರುದಾರಿ ಹುಡುಕುವರು
ಅಲೆದಲೆದು ಬಳಲಿ ಗಮ್ಯವ ತಲುಪದವರು
ಸೋತು ಕೈ ಕೈ ಹಿಸುಕಿ ಮರುಗುವರು
ಆದರೂ ರಾಜಮಾರ್ಗ ಇನ್ನೂ ಹಾಗೆಯೇ ಇದೆ
ಸುವಿಹಾರಿ ಚೇತೋಹಾರಿ ಘನ ಗಂಭೀರದೆ
ಕಾಯುತಲಿದೆ ಅದು ಒಯ್ಯಲು ತೀರಕೆ
ಸೋತು ಬಳಲಿ ಬರುವರೆಲ್ಲರ ಗಮ್ಯಕೆ