ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗೂಗಲ್ ಮೈಲಿನಲ್ಲಿ (ಜಿ-ಮೈಲ್) ನೀವಿದನ್ನು ಗಮನಿಸಿದ್ದೀರಾ?

     ಗೂಗಲ್ ಮೈಲಿನಲ್ಲಿ (ಜಿ-ಮೈಲ್) ಅಳಿಸಿದ ಪತ್ರಗಳನ್ನು ಹಾಕುವ "ಕಸದ ಬುಟ್ಟಿ"ಯನ್ನು (ಟ್ರಾಶ್ ಫೋಲ್ಡರ್!) ಒಮ್ಮೊಮ್ಮೆ ಭೇಟಿ ನೀಡಿ, ಅದನ್ನು ಗಮನಿಸುವುದು ನನ್ನ ಅಭ್ಯಾಸ. "ಇದೇನಪ್ಪ, ಇದೂ ಒಂದು ಅಭ್ಯಾಸವೇ?" ಅಂತ ಹುಬ್ಬೇರಿಸಬೇಡಿ. ಸರಿಯಾಗಿ ಗಮನಿಸದಿದ್ದಲ್ಲಿ, ಅದನ್ನೊಮ್ಮೆ (ಟ್ರಾಶ್ ಫೋಲ್ಡರ್ ಒಳಗೆ ಹೋಗಿ) ಗಮನಿಸಿ. ಅಳಿಸಿದ ಪತ್ರಗಳ ಪಟ್ಟಿಯ ಮೇಲೆ ಒಂದಷ್ಟು "ಪುನರ್ಬಳಕೆಯ ಬಗ್ಗೆ ಮಾಹಿತಿಗಳು" ಆಗಾಗ ಮೂಡಿ ಬರುತ್ತಿರುತ್ತವೆ. ಕೆಲವೊಂದು ಅಂಶಗಳು ನಿಜಕ್ಕೂ ನಮ್ಮನ್ನು "ಹೌದಾ?" ಅಂತ ಚಿಂತಿಸುವಂತೆ ಮಾಡುತ್ತವೆ. ಇದು ಗೂಗಲ್ ಅವರ "ಪರಿಸರ ಕಾಳಜಿ"ಯನ್ನು ಮೂಡಿಸುವ ಪ್ರಯತ್ನಗಳಲ್ಲಿ ಒಂದಂತೆ.

ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ?

ಹೇಗಿದ್ದರೂ, ಈ ಶಿರ್ಷಕೆಯ ಅಡಿಯಲ್ಲಿ ಏಕೆ 'ಚರ್ಚೆ' ಶುರು ಮಾಡಬಾರದು ಎನ್ನಿಸಿತು.

ನಿನ್ನೆ ನಾನು 'ತ್ರಿವಿಕ್ರಮ ಹೆಜ್ಜೆಗಳು 'ಎಂಬ ಅತ್ಯಂತ ಸೊಗಸಾದ ಪುಸ್ತಕ ಓದುತ್ತಿದ್ದೆ. ಅದರಲ್ಲಿ ಮೊದಲನೆಯ ಲೇಖನವೇ, ನಮ್ಮ ಪೂಜ್ಯ,ಶ್ರೀ.ಡಾ.ಸರ್.ಎಂ.ವಿಶ್ವೇಶ್ವರಯ್ಯನವರದು !

ಪಾಬ್ಲೊ ಪಿಕಾಸೊ

ಯಾರು "ಇದು ಸಾಧ್ಯ" ಎಂದು ಆಲೋಚಿಸುತ್ತಾರೋ, ನಂಬುತ್ತಾರೋ ಅವರು ಆ ಕೆಲಸವನ್ನು ಸಾಧ್ಯವಾಗಿಸಿ ತೋರಿಸುತ್ತಾರೆ. "ಇದು ಸಾಧ್ಯವಿಲ್ಲ" ಎಂದು ಚಿಂತಿಸುವವರು ಖಂಡಿತ ಆ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಇದು ಪ್ರಕೃತಿ ನಿಯಮ.

ಹೆನ್ರಿ ಫೋರ್ಡ್

ಕುಂದು-ಕೊರತೆ ಅಥವಾ ತಪ್ಪುಗಳನ್ನು ಕಂಡುಹಿಡಿಯಬೇಡಿ; ಬದಲಾಗಿ ಆ ತಪ್ಪುಗಳನ್ನು ಸರಿಪಡಿಸುವ ವಿಧಾನವನ್ನು ಕಂಡುಹಿಡಿಯಿರಿ. ಯಾರು ಬೇಕಾದರೂ ಸುಲಭವಾಗಿ ತಪ್ಪುಗಳನ್ನು ಕಂಡುಹಿಡಿಯಬಹುದು.

ಹೆನ್ರಿ ಫೋರ್ಡ್

ತನ್ನಿಂದ ಯಾವ ಕೆಲಸವನ್ನು ಸಾಧಿಸಲು ಅಸಾಧ್ಯವೆಂದು ಅಂದುಕೊಂಡಿರುತ್ತೇವೆಯೋ, ಆ ಕೆಲಸವನ್ನು ಮಾಡಬಹುದು ಎಂದು ಕಂಡುಕೊಳ್ಳುವುದೇ ನಮ್ಮ ಜೀವನದ ಅತಿ ದೊಡ್ಡ ಆವಿಷ್ಕಾರ.

ಕರ್ನಾಟಕ ಕ್ರಿಕೆಟ್ - ೫

ಮಿಥುನ್ ಬೀರಾಲ: ಆರಂಭಿಕ ಆಟಗಾರನಾಗಿ ೬೦ರ ದಶಕದ ಕೊನೆಯಲ್ಲಿ ಮತ್ತು ೭೦ರ ದಶಕದ ಆರಂಭದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಮಾಜಿ ರಣಜಿ ಆಟಗಾರ ರಘುನಾಥ್ ಬೀರಾಲ ಇವರ ಮಗನೇ ಮಿಥುನ್. ಸಾಧಾರಣ ಮಟ್ಟದ ಆರಂಭಿಕ ಆಟಗಾರನಾಗಿರುವ ಮಿಥುನ್, ತನ್ನ ಚೊಚ್ಚಲ ರಣಜಿ ಪಂದ್ಯವನ್ನಾಡಿದ್ದು ೧೯೯೯-೨೦೦೦ ಋತುವಿನಲ್ಲಿ. ತನ್ನ ನೈಜ ಪ್ರತಿಭೆಯ ಬಲಕ್ಕಿಂತಲೂ ಹೆಚ್ಚಾಗಿ ತಂದೆಗೆ ಕೆ.ಎಸ್.ಸಿ.ಎ ಯಲ್ಲಿರುವ 'ಇನ್-ಫ್ಲುಯನ್ಸ್' ನಿಂದ ತಂಡಕ್ಕೆ ಬಂದವರು ಮಿಥುನ್. ಆಯ್ಕೆಗಾರರು ಎಡವಿದ್ದೇ ಇಲ್ಲಿ. ಪ್ರತಿಭೆಯುಳ್ಳ ಆಟಗಾರರಾದ ಸುಧೀಂದ್ರ ಶಿಂದೆ ಮತ್ತು ಶ್ಯಾಮ್ ಪೊನ್ನಪ್ಪ ಇವರುಗಳು ಮತ್ತಷ್ಟು ಕಾಯುವಂತಾಯಿತು.

ಸಿಪಾಯಿ ದಂಗೆ-II

ಬೊಗಳೂರು, ಜ.17- ಪೊಲೀಸ್ ಠಾಣೆ ಧ್ವಂಸ ಮಾಡಿದ ಸುದ್ದಿಯನ್ನು ತಡವಾಗಿ ಸಮರ್ಥಿಸಿಕೊಂಡಿರುವ ಸಂಬಂಧಪಟ್ಟ ಸೈನಿಕರು, ತಮ್ಮ ಪೂರ್ವಜರು ಕೂಡ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಸಿಡಿದೆದ್ದು ಪ್ರತಿಭಟನೆ ನಡೆಸಿದ ಘಟನೆಯನ್ನು ಉಲ್ಲೇಖಿಸಿದ್ದಾರೆ. (bogaleragale.blogspot.com)

ಶಾಲಾ ಮಕ್ಕಳಿಗೆ ಮೊಟ್ಟೆ ಕೊಡಬೇಕೇ?ಹಾಲನ್ನೇ?

egg

ಶಾಲಾ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಸಾಕು ಎನ್ನುವ ಪರಿಕಲ್ಪನೆ ಬದಲಾಗುತ್ತಿದೆ. ಬಡ ಮಕ್ಕಳಿಗೆ ಮಧ್ಯಾಹ್ನದೂಟ ಕೊಡಬೇಕು.ಜತೆಗೆ ಪೌಷ್ಟಿಕ ಆಹಾರವಾಗಿ ಮೊಟ್ಟೆಯನ್ನೋ ಹಾಲನ್ನೋ ನೀಡಬೇಕು ಎನ್ನುವ ಯೋಚನೆ ನಮ್ಮ ರಾಜಕಾರಣಿಗಳದ್ದು.ಇದನ್ನೆಲ್ಲಾ ಕೊಡಲು ಸರ್ಕಾರಕ್ಕೆ ಸಾಧ್ಯವೇ? ಅದು ಕಾರ್ಯಸಾಧ್ಯವೇ ಎಂದವರು ತಲೆ ಕೆಡಿಸಿಕೊಳ್ಳುತ್ತಿಲ್ಲ.ಆರಂಭಿಸಿ ಹೆಸರು ಮಾಡಿಕೊಳ್ಳುವ ಹಂಚಿಕೆ ಅವರದು. ಈ ಬಗ್ಗೆ ನಿಮಗೇನಿಸುತ್ತದೆ?