ದತ್ತ ಪೀಠ-ಕೋಮು ಸೌಹಾರ್ದದತ್ತ ..
ರಾಜ್ಯದಿಂದ ಬಹಳಷ್ಟು ಜನ ಮಾಲೆ ಧರಿಸಿ 'ಅಯ್ಯಪ್ಪ'ದರ್ಶನಕ್ಕೆ ಕೇರಳಕ್ಕೆ ಹೋಗುವರು.ವರ್ಷದಿಂದ ವರ್ಷಕ್ಕೆ 'ಓಂ ಶಕ್ತಿ'ಗೆ ಹೋಗುವ ಹೆಂಗಸರೂ ಜಾಸ್ತಿಯಾಗುತ್ತಿದ್ದಾರೆ.ಹೀಗೇ ನಮ್ಮಲ್ಲೂ 'ದತ್ತಮಾಲೆ'ಧರಿಸಿ ಬಾಬಾ ಬುಡಾನ್ ಗಿರಿಗೆ ಹೋಗುವ ವ್ರತ ಸುರುಮಾಡಿದ್ದಾರೆ.ಇದಕ್ಕೇ ಉತ್ತಮ ಸವಲತ್ತು ನೀಡಿ ಬಾಕಿ ರಾಜ್ಯಗಳಿಂದ ನಮ್ಮಲ್ಲಿಗೆ ಭಕ್ತರು ಬರುವಂತೆ ಮಾಡಬಹುದಲ್ವಾ?
ಬಾಬಾಬುಡಾನ್ ಗಿರಿ ಬಹಳ ಸುಂದರ ಸ್ಥಳ.ಆ ಊರಿನ ಹಿಂದೂ-ಮುಸ್ಲಿಂ ಪ್ರಮುಖರು ಸೇರಿ,ದತ್ತ ಜಯಂತಿಯನ್ನು ಎರಡೂ ಧರ್ಮದವರಿಗೂ ಒಪ್ಪಿಗೆಯಾಗುವಂತೆ ಹೇಗೆ ಆಚರಿಸುವುದೆಂದು ತೀರ್ಮಾನಿಸಲಿ.
ಆ ಪ್ರದೇಶವನ್ನು ಸ್ವಚ್ಚಗೊಳಿಸಿ ಭಕ್ತರಿಗೆ,ಪ್ರವಾಸಿಗಳಿಗೆ ಉಳಕೊಳ್ಳಲು ವ್ಯವಸ್ಥೆ,ಉತ್ತಮ ರಸ್ತೆ ಸಂಪರ್ಕ,ಕಿಡಿಗೇಡಿಗಳಿಂದ ತೊಂದರೆಯಾಗದಂತೆ ಪೋಲೀಸ್ ಬಂದೋಬಸ್ತು,ಸರಕಾರ ನೀಡಲಿ.
ತಮ್ಮ ಸಹ ಸಾಹಿತಿಗಳು,ಸಹೋದರರೊಂದಿಗೇ ಸೌಹಾರ್ದದಿಂದಿರದ 'ಸೌಹಾರ್ದ ಸಮಿತಿ'ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ.
ಪಕ್ಷಗಳು ಕೋಮುಗಲಭೆಯಾಗುವುದನ್ನು ನಿರೀಕ್ಷಿಸುತ್ತಿದೆ.ಅದಕ್ಕೆ ಅವಕಾಶ ನೀಡದೇ ದತ್ತಪೀಠ,ಸಮಾಧಿ ಎರಡನ್ನೂ ಭಕ್ತಿಯಿಂದ ನಮಿಸೋಣ.ಹಿಂದೂ-ಮುಸ್ಲಿಂ ಏಕತೆಗೆ ಜಯವಾಗಲಿ.
ದತ್ತ ಮತ್ತು ಬಾಬಾ ನವರು ಎಲ್ಲರಿಗೂ ಸದ್ಬುದ್ಧಿಯನ್ನು ನೀಡಲಿ