ಏನಂತೀರಾ?
ಕನ್ನಡದಲ್ಲಿ ’ಸ್ಲೇಟ್’ ಗೆ ಏನಂತೀರಾ?
ನಿಮಗಿದು ಗೊತ್ತೇ?
ಇಂದ,
ಗಿರೀಶ ರಾಜನಾಳ.
- Read more about ಏನಂತೀರಾ?
- 9 comments
- Log in or register to post comments
ಕನ್ನಡದಲ್ಲಿ ’ಸ್ಲೇಟ್’ ಗೆ ಏನಂತೀರಾ?
ನಿಮಗಿದು ಗೊತ್ತೇ?
ಇಂದ,
ಗಿರೀಶ ರಾಜನಾಳ.
ಅಂದಳು ಗೆಳತಿ,
ಕಾಣದ ದೇಶಕೆ ವಲಸೆ
ಹೋಗುವ ಯೋಜನೆ,
ಸದ್ಯದಲ್ಲೇ.. ಇದೆಯೆಂದು..
ಓ! ಕೂಲ್, ಅಭಿನಂದನೆಗಳು
ಬಡಬಡಿಸ ಹತ್ತಿತ್ತು ಬಾಯಿ,
ಎಲ್ಲೋ ಎದ್ದ, ಕ್ಷೀಣ ದನಿಯ,
ಮರೆಮಾಚಲೇನೋ ಎಂಬಂತೆ..
ನಿಯಂತ್ರಣ ತಪ್ಪಿದಂತೆ, ಒಂದೆ ಸಮನೇ
ಕುಲುಕುತಿದ್ದವು ಕೈಗಳು, ಒಳಗಿದ್ದ ನಡುಕದ,
ವಿಜೃಂಭಣೆಯೇನೋ, ಎಂಬಂತೆ..
ಸಂತಸ, ಹೆಮ್ಮೆ ಸೂಚಿಸುತ್ತಿತ್ತು ಮೊಗ,
ಎಂದೆಂದೂ ಕಾಣದ ಕಾಂತಿಯ..
ಏಕಾಂತದಲ್ಲೆಲ್ಲೋ.. ಕಾಡುವ ದನಿ..
ಯಾವುದೋ ಪಿಸುಮಾತು, ಮತ್ತಾವುದೋ ಸ್ವರ..
ಯಾರದೋ ಕೇಕೆ, ಮತ್ತಾರದೋ ಆಕ್ರಂದನ..
ಒಮ್ಮೆ, ಕಟ್ಟು ಬಿಚ್ಚಿದ ಅಶ್ವಗಳ ನಾಗಾಲೋಟದಂತೆ..
ಮತ್ತೊಮ್ಮೆ, ಯಾರೋ ಹಾಕಿದ ಲಯಬದ್ದ ತಾಳದಂತೆ..
ಎಷ್ಟೋ ಬಾರಿ.. ಮಲಗಿದ್ದಿದೆ, ಶಪಿಸಿ..
ಯಾವುದೀ ದರಿದ್ರ ದನಿಯೆಂದು..
ಬಹಳ ತಡವಾಯಿತೋ ಏನೋ.. ತಿಳಿದದ್ದು
ಈ ರೀತಿ ವರ್ತಿಸುವ ಹೃದಯ, ನನ್ನಲ್ಲೇ.. ಇದೆಯೆಂದು..
ಇನ್ನಾದರೂ ಸೋಲು..
ಇಷ್ಟೆಲ್ಲಾ ಆದ ಮೇಲೂ..
ಬಂದ ಭಾವನೆಗಳಿಗೆ ಬೇಲಿ ಹಾಕಿ
ಬಂಧಿಸಿದಾದ ಮೇಲೂ ..
ಆಸರೆಗಾಗಿ ತಡಕಾಡುತಿದ್ದ ಕರಗಳಾ..
ಕಟ್ಟಿ ಹಾಕಿದ ಮೇಲೂ...
ಸಜ್ಜನರಿಗಾದರೂ ಬಾಗಬೆಕಿದ್ದ ಶಿರವ..
ಧಿಕ್ಕರಿಸಿ ಮೆರೆವಂತೆ ಮಾಡಿದ ಮೇಲೂ..
ಒತ್ತರಿಸಿ ಬಂದ ಕಂಬನಿಯಾ..
ಕಣ್ಣೆವೆಗಳ ತೇವಕ್ಕೆ ಮಾತ್ರ, ಮೀಸಲಾಗಿಸಿದ ಮೇಲೂ..
ಇನ್ನಾದರೂ ಬಿಡುವೆಯ ನನ್ನ..
ಸಕಳೇಶ ಮಾದರಸನ ಈ ವಚನ ನನಗೆ ಸ್ವಲ್ಪವೂ ಅರ್ಥ ಆಗ್ಲಿಲ್ಲ. ದಯವಿಟ್ಟು ವಿವರಿಸುತ್ತೀರಾ?
ದೇವರೆದಾರಾವು ಏಳುವೆವಯ್ಯಾ, ದೇವ ಬಿದ್ದರಾವು ಬೀಳುವೆವಯ್ಯಾ,
ದೇವ ಸತ್ತಾರಾವು ಸಾವೆವಯ್ಯಾ, ದೇವ ಬದುಕಿದರಾವು ಬದುಕುವೆವಾಯ್ಯಾ,
ನಾ ಸತ್ತು , ದೇವ ಹಿನ್ದುಳಿದಡೆ ,
ಎನ್ನಿಂದ ಬಿಟ್ಟು ವ್ರತಗೇಡಿಗಳಾರು ಹೇಳಾ, ಸಕಲೇಶ್ವರದೇವಾ.
ಚಿಕಲ್ ಎನ್ನುವ ವಸ್ತುವಿನಿಂದ ತಯಾರಿಸಿದ ಚ್ಯೂಯಿಂಗ್ ಗಮ್ ನಿವಾರಿಸುವುದು ಕಠಿನ. ಈಗ ನೀರಿನಿಂದಲೂ ತೆಗೆದು ಹಾಕಬಲ್ಲ ಚ್ಯೂಯಿಂಗ್ ಗಮ್ಗಳು ಬಂದಿವೆ.
ಓದಿ ಸುಧೀಂದ್ರರ ಲೇಖನ...
ಮೈಕ್ರೋಸಾಫ್ಟೀಕರಣ ವಿರುದ್ದದ ಹೊರಾಟದ ಬಗ್ಗೆ The Hindu ಪತ್ರಿಕೆಯ ದನಿಯನ್ನ ಓದಲು ಕೆಳಕಂಡ ಕೊಂಡಿಯನ್ನ ಸಂಪರ್ಕಿಸಿ :
http://ismail.in/the-hindu-october-12-2007.pdf
ಇಂದು ನವರಾತ್ರಿಯ ಮೊದಲ ದಿನ. ದುಷ್ಟರ ಮುಂದೆ, ಒಳ್ಳೆಯ ಶಕ್ತಿ ವಿಜೃಂಭಿಸಿದ ದಿನವನ್ನು ನೆನೆಯಲು ನಾವು ಆಚರಿಸುವ ಹಬ್ಬ ನವರಾತ್ರಿ. ಹಳೆಯ ಮೈಸೂರಿನ ಕಡೆಯವರಿಗಂತೂ, ಅರಸರ ಕಾಲದಿಂದ ಬಂದಿರುವ ನಾಡಹಬ್ಬದ ಸಂಭ್ರಮ. ಮನೆಮನೆಯಲ್ಲೂ ಗೊಂಬೆಗಳ ಅಲಂಕಾರ. ಅಲ್ಲಲ್ಲಿ ಸಂಗೀತೋತ್ಸವಗಳು - ಹೀಗಾಗಿ ಧಾರ್ಮಿಕ ಕಾರಣಗಳಿಗಿಂತ, ಸಾಂಸ್ಕೃತಿಕ ಕಾರಣಗಳಿಗೆ ನವರಾತ್ರಿ ನನಗೆ ಮೆಚ್ಚುಗೆಯಾಗುವ ಹಬ್ಬ.
ಮೈಸೂರಿನಂತೆಯೇ, ವೈಭವದ ನವರಾತ್ರಿ ನಡೆಯುವ ಊರು ತಿರುವನಂತಪುರ. ಅಲ್ಲಿಯ ಪದ್ಮನಾಭದೇವಸ್ಥಾನದ ಪಕ್ಕದ ನವರಾತ್ರಿ ಮಂಡಪಂ ನಲ್ಲಿ, ಇನ್ನೂರಕ್ಕೂ ಹೆಚ್ಚು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಗೀತೋತ್ಸವದ ಆಚರಣೆ ಇದೆ. ಮಹಾರಾಜ ಸ್ವಾತಿ ತಿರುನಾಳ್ ( ಕ್ರಿ.ಶ. ರಿಂದ ಕ್ರಿ.ಶ. ) ಕರ್ನಾಟಕ ಸಂಗೀತದ ಪ್ರಮುಖ ವಾಗ್ಗೇಯಕಾರರಲ್ಲೊಬ್ಬರು. ಅವರು ನವರಾತ್ರಿಯ ಸಂದರ್ಭದಲ್ಲೇ ಹಾಡಬೇಕೆಂದು ರಚಿಸಿರುವ ಒಂಬತ್ತು ದೇವೀ ಪರವಾದ ಕೃತಿಗಳನ್ನು, ಈ ಸಂಗೀತೋತ್ಸವದಲ್ಲಿ ಪ್ರತಿ ದಿನ ತಲಾ ಒಂದು ಕೃತಿಯನ್ನು ವಿಸ್ತರಿಸಿ ಹಾಡಲಾಗುತ್ತೆ. ಈ ರಚನೆಗಳಿಗೆ ನವರಾತ್ರಿ ಕೃತಿಗಳೆಂದೇ ಕರೆಯಲಾಗುತ್ತೆ. ದಸರೆಯ ಮೊದಲ ದಿವಸ ಸಂಜೆ ಹಾಡುವ ಕೃತಿ ಶಂಕರಾಭರಣ ರಾಗದ ದೇವಿ ಜಗಜ್ಜನನಿ ಎಂಬುದು.
ಈ ಸಂದರ್ಭದಲ್ಲೇ, ನನಗೆ ಇಷ್ಟವಾದ ಕೆಲವು ರಚನೆಗಳನ್ನೂ ಸಂಗೀತಾಸಕ್ತರೊಂದಿಗೆ ಹಂಚಿಕೊಳ್ಳೋಣವೆನಿಸಿತು. ಪ್ರತಿ ದಿನ ಒಂದು ಕೃತಿಯ ಬಗ್ಗೆ ಸ್ಬಲ್ಪ ಮಾಹಿತಿಯನ್ನೂ, ಸಾಧ್ಯವಾದರೆ ಕೇಳಲು ಕೊಂಡಿಗಳನ್ನೂ ಕೊಡುವ ಇರಾದೆ ನನ್ನದು. ನವರಾತ್ರಿ ಆದ್ದರಿಂದ, ದೇವಿಯ ವಿವಿಧ ರೂಪಗಳ ( ಪಾರ್ವತಿ, ಸರಸ್ವತಿ, ದುರ್ಗೆ, ಇತ್ಯಾದಿ) ಬಗ್ಗೆ ಇರುವ ಕೃತಿಗಳಿವು ಅನ್ನುವುದನ್ನು ಬಿಟ್ಟರೆ, ಯಾವುದೇ ಕ್ರಮವನ್ನು ನಾನು ಅನುಸರಿಸುತ್ತಿಲ್ಲ.
ಬೆಂಗಳೂರಿನಿಂದ ಬಹಳ ವರ್ಷ ಹೊರಗಿದ್ದ ನನಗೆ ಕನ್ನಡ ಟಿ.ವಿ. ಸೀರಿಯಲ್ಗಳನ್ನು ನೋಡುವ ಅಭ್ಯಾಸವಿರಲಿಲ್ಲ. ಇತ್ತೀಚೆಗೆ ನಿವೃತ್ತ್ತ್ತನಾದ ಮೇಲೆ ಬಹಳ ಜನರ ಪ್ರಶಂಸೆ ಕೇಳಿ ಈ ಟೀವಿಯಲ್ಲಿ ಬರೋ “ಮಂಥನ” ದ ಕೆಲವು ಎಪಿಸೋಡ್ಗಳನ್ನು ನೋಡಿದೆ. ಹಿಂದಿನಿಂದಲೂ ನಾಟಕದ ಗೀಳು ಬೆಳೆಸಿಕೊಂಡಿದ್ದರಿಂದ ಸ್ವಾಭಾವಿಕವಾಗಿಯೆ ನನ್ನ ಮನಸ್ಸು ನಾಟಕದ ವಿಮರ್ಶೆ ಮಾಡತೊಡಗಿತು.
ಗಂಗಾವತಿ ಬೀಚಿ ಅವರಿಂದ ಕದ್ದಿದ್ದು.
ಅವಳು ರಸ್ತೆಯಲ್ಲಿ ಸಿಕ್ಕಳು.
ನನ್ನ ನೋಡಿ ನಕ್ಕಳು.
ನನಗೀಗ ಮೂರು ಮಕ್ಕಳು.