ಅಗಲಿಕೆ
ಅಂದಳು ಗೆಳತಿ,
ಕಾಣದ ದೇಶಕೆ ವಲಸೆ
ಹೋಗುವ ಯೋಜನೆ,
ಸದ್ಯದಲ್ಲೇ.. ಇದೆಯೆಂದು..
ಓ! ಕೂಲ್, ಅಭಿನಂದನೆಗಳು
ಬಡಬಡಿಸ ಹತ್ತಿತ್ತು ಬಾಯಿ,
ಎಲ್ಲೋ ಎದ್ದ, ಕ್ಷೀಣ ದನಿಯ,
ಮರೆಮಾಚಲೇನೋ ಎಂಬಂತೆ..
ನಿಯಂತ್ರಣ ತಪ್ಪಿದಂತೆ, ಒಂದೆ ಸಮನೇ
ಕುಲುಕುತಿದ್ದವು ಕೈಗಳು, ಒಳಗಿದ್ದ ನಡುಕದ,
ವಿಜೃಂಭಣೆಯೇನೋ, ಎಂಬಂತೆ..
ಸಂತಸ, ಹೆಮ್ಮೆ ಸೂಚಿಸುತ್ತಿತ್ತು ಮೊಗ,
ಎಂದೆಂದೂ ಕಾಣದ ಕಾಂತಿಯ..
ಸೂಸುತಿದ್ದವು ಕಂಗಳು, ಮನದಲ್ಲೆದ್ದ ಜ್ವಾಲೆಯ.,
ಸಾಕ್ಷಿಯೇನೋ, ಎಂಬಂತೆ..
ನನಗೂ, ಇದೆಲ್ಲದಕ್ಕೂ.. ಸಂಭಂಧವೇ..
ಇಲ್ಲ್ವವೆಂಬಂತೆ ಮರುಗುತಿತ್ತು ಮನ,
ಅಗಲಿಕೆಯ ಕಹಿಸತ್ಯವ, ನುಂಗಲೆಂಬಂತೆ..
Rating