ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಾತು ತಪ್ಪದವ ಮೊದಲ ಕಲ್ಲು ಎಸೆಯಲಿ.

ಭೃಷ್ಟಾಚಾರ ನಿರ್ಮೂಲನೆ,ಸ್ವಚ್ಛ ಆಡಳಿತ,ರೋಟಿ,ಕಪ್ಡಾ,ರೋಡ್,ಮಕಾನ್,ಗರೀಬೀ ಹಟಾವೊ,....ಇತ್ಯಾದಿ,ಇತ್ಯಾದಿ.ಎಷ್ಟೊಂದು ಬಣ್ಣಬಣ್ಣದ ಮಾತುಗಳನ್ನು 'ಜನತೆಗೆ' ಕೊಟ್ಟ ಕಾಂಗ್ರೆಸ್, ಬಿ.ಜೆ.ಪಿ.,ಪಕ್ಷಗಳ ದೊಡ್ಡದೊಡ್ಡ ಲೀಡರುಗಳು ತಮ್ಮ ತಮ್ಮ ಮಾತು ಉಳಿಸಿಕೊಂಡಿದ್ದಾರೆಯೆ?

ಮುಗಿಲು

ಮುಗಿಲು

ಬಾನು-ಆಗಸ-ಮುಗಿಲು
ನಿನಗಿದೆ ಹೆಸರಲೂ ವಿವಿಧತೆ, ನಿನ್ನ ಗುಣದಂತೆ...
ಯಾರು ಬಣ್ಣ ತುಂಬುವರೋ ನಿನಗೆ
ನಸು ಕೆಂಪು-ತುಸು ಹಳದಿ-ತಿಳಿ ನೀಲಿ
ರಾತ್ರಿಯಾಗಲು ನೀನಾಗುವೆ, ಬೆಳ್ಳಿ ಚುಕ್ಕಿಯ ರಂಗೋಲಿ...

ಕ್ಷಣ ಕ್ಷಣವು ಹೊಸ ರಂಗು
ಅದೇನು ಚತುರ ಕಲೆ! ಸದಾ ಮಾಡುವೆ ದಂಗು!

ದಿನ ದಿನವು ಬಗೆ ಬಗೆಯ ಚಿತ್ತಾರ
ಯಾರದಿದು ಅದ್ಭುತ ಚಮತ್ಕಾರ?

ಚೀನಾದಲ್ಲಿ ಜೀವಿಸಲು ಕಾರಣಗಳೆ ಇಲ್ಲವಂತೆ ?!

"ಚೀನಾವನ್ನು ಸುತ್ತು ಹಾಕಿಕೊಂಡು ಬಂದರೆ ಅಲ್ಲಿ ಬದುಕಲು ಕಾರಣಗಳೇ ಇಲ್ಲ ಎನ್ನುವುದು ನಮಗೆ ಸ್ಪಷ್ಟವಾಗುತ್ತದೆ." ಹೀಗೆಂದು ಸಾರಾಸಗಟಾಗಿ ಬರೆದ ವಾಕ್ಯವನ್ನು ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯ ಮೊದಲ ಪುಟದಲ್ಲಿ ನೋಡಿ ನಿಜಕ್ಕೂ ಗಾಬರಿಯಾಯಿತು. 132 ಕೋಟಿ ಜನರ, ಜನಸಂಖ್ಯೆಯ ದೃಷ್ಟಿಯಿಂದ ಪ್ರಪಂಚದಲ್ಲಿಯೆ ಅತಿ ದೊಡ್ಡ ದೇಶವಾದ ಚೀನಾದ ಅಷ್ಟೂ ಜನರನ್ನು ಕಾರಣಗಳಿಲ್ಲದ ಬದುಕುತ್ತಿರುವ ಜನ ಎಂದು ಭಾವಿಸುವುದು ಕೇವಲ ಅಮಾನವೀಯ ಮಾತ್ರವಲ್ಲ ಜೀವವಿರೋಧಿಯೂ ಸಹ, ಅಲ್ಲವೆ?

ರವೀಂದ್ರ ಭಟ್ಟ ಎನ್ನುವವರು ಪ್ರಜಾವಾಣಿಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರು. ಆಗಸ್ಟ್‌ನಲ್ಲಿ ಕರ್ನಾಟಕದ ಶಾಸಕರ ಎರಡು ತಂಡಗಳು

ಶ್ವೇತ ಸುಂದರಿ

ನನ್ನ ಶ್ವೇತಸುಂದರಿಯ ಬಗ್ಗೆ ಕನ್ನಡದಲ್ಲಿ ಒಂದು ಪ್ರಾಡಕ್ಟ್ ರಿವ್ಯೂ (ಉತ್ಪನ್ನ ವಿಮರ್ಶೆ?) ಬರೆಯಬೇಕೆಂದುಕೊಂಡಿದ್ದ ನನ್ನ ಕನಸು ಇನ್ನೂ ಈಡೇರಿಲ್ಲ. ಅವಳ ಕೆಲವು ಚಿತ್ರಗಳನ್ನು ತೆಗೆಯಬೇಕೆಂಬ ಕನಸು ಅವಳು ನನ್ನವಳಾದ ಸುಮಾರು ೬ ತಿಂಗಳ ಬಳಿಕ ಈಡೇರಿದೆ!.

ಸ್ವಾಭಿಮಾನ

ಇನ್ನಾದರೂ ಸೋಲು..
ಇಷ್ಟೆಲ್ಲಾ ಆದ ಮೇಲೂ..

ಬಂದ ಭಾವನೆಗಳಿಗೆ ಬೇಲಿ ಹಾಕಿ
ಬಂಧಿಸಿದಾದ ಮೇಲೂ ..

ಆಸರೆಗಾಗಿ ತಡಕಾಡುತಿದ್ದ ಕರಗಳಾ..
ಕಟ್ಟಿ ಹಾಕಿದ ಮೇಲೂ...

ಸಜ್ಜನರಿಗಾದರೂ ಬಾಗಬೆಕಿದ್ದ ಶಿರವ..
ಧಿಕ್ಕರಿಸಿ ಮೆರೆವಂತೆ ಮಾಡಿದ ಮೇಲೂ..

ಒತ್ತರಿಸಿ ಬಂದ ಕಂಬನಿಯಾ..
ಕಣ್ಣೆವೆಗಳ ತೇವಕ್ಕೆ ಮಾತ್ರ, ಮೀಸಲಾಗಿಸಿದ ಮೇಲೂ..

ಇನ್ನಾದರೂ ಬಿಡುವೆಯ ನನ್ನ..

ನ್ಯೂಜಿಲೆಂಡನಲ್ಲಿ ಕನ್ನಡದ ಪತಾಕೆ...

ನ್ಯೂಜಿಲೆಂಡನಲ್ಲಿ ಕನ್ನಡದ ಪತಾಕೆ...

ಇವತ್ತಿನ ಪ್ರಜಾವಾಣಿಯಲ್ಲಿ ಬಂದಿರುವ ಕನ್ನಡ ಸುದ್ದ್ದಿಓದಿ..ಖುಷಿ ಆಯ್ತು..
ತಮಿಳರು, ತೆಲುಗರು ತಮ್ಮ ತಮ್ಮ ನುಡಿಗಳನ್ನು ಹಾಗು ತಮ್ಮ ಜನರನ್ನು ಬೇರೆ ಬೇರೆ ದೇಶಗಳಲ್ಲಿ ಗಟ್ಟಿಯಾಗಿ ನೆಲೆಸಿದ್ದಾರೆ..
ಅಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗಿ ನೆರವಾಗ್ತಾರೆ.. ಆವಾಗಾವಗ ಔತಣಕೂಟಗಳನ್ನೂ ಏರ್ಪಡಿಸುತ್ತಾರೆ..

ತಡಿಮಗ ತಡಿಮಗ (ಜೋಗಿ ಹಾಡಿನ Remix ಅಣಕವಾಡು)

ತಡಿಮಗ ತಡಿಮಗ ತಡಿಮಗ ತಡಿಮಗ ಬಿಡಬೇಡ ಸೀಟ್ನಾ
ಕಾ0ಗ್ರೆಸ್ , ಬಿ.ಜೆ.ಪಿ ಯಾರೆ ಬಡ್ಕೊ0ಡ್ರು ಕೊಡಬೇಡ ಗಮ್ನಾ

ಈ ಪಾಲಿಟಿಕ್ಸಗೆ ಬ0ದಮೇಲೆ ಹೀಗೇನಾ ಅಪ್ಪಾ
ಮೋಸದಿ0ದ ನೀ ಸಿ.ಎಮ್ ಮಾಡ್ದೆ ಅದು ನನ್ ತಪ್ಪ

ಮಗ ಯಾರ್ನೂ ನ0ಬಬೇಡ
ಮಗ ಪ್ರೆಸ್ನೋರ್ನ ಬೈಯ್ಯಬೇಡ
ಒಬ್ನೆ ಪ್ರೆಸ್ ಮೀಟ್ ಮಾಡಬೇಡ
ಮಾಡಿ ಏನೇನೊ ಹೇಳಬೇಡ
ಹೇಳಿ ಹಗರಣದಲ್ಲಿ ಸಿಗಬ್ಯಾಡ
ಸಿಕ್ಕಿ ಹಾಳಾಗಬ್ಯಾಡ ಲೇಯ್

ಲಾಲಿ

ಲಾಲಿ

ಬಾ ಬಾರೋ ಚಿನ್ನ, ಇನ್ನೆಷ್ಟು ಆಡುವೇ?
ಬೇಡವೆ ಆಟಕೆ ಪುರುಸೊತ್ತು?
ಬೇಡವೆ ಆಟಕೆ ಪುರುಸೊತ್ತು, ನನ್ನ ಚಿನ್ನ?
ನಿದ್ದೆ ಮಾಡುವ ಹೊತ್ತು ಈಗಾಯ್ತು...||

ಬೆಳಗಿಂದ ನೀನು ಎಷ್ಟೊಂದು ಆಡಿದೆ,
ದಣಿವಿಲ್ಲವೇನೋ ನನ್ನ ರಾಜ
ದಣಿದಿಲ್ಲವೇನೋ ನನ್ನ ಮುದ್ದು ರಾಜಣ್ಣ
ನಿದ್ದೆ ಮಾಡುವ ಹೊತ್ತು ಈಗಾಯ್ತು...||

ನಾಳೆ ಆಡುವೆಯಂತೆ, ತೀಟೆ ಮಾಡುವೆಯಂತೆ,
ನಿದ್ದೆಯ ಮಾಡೋ ಬಂಗಾರ
ನಿದ್ದೆಯ ಮಾಡೋ ಬಂಗಾರ - ದಮ್ಮಯ್ಯ
ಮಲಗುವ ಹೊತ್ತು ಈಗಾಯ್ತು...||

ಕಥೆಗಾರ

ದೂರದಿಂದ ಕೋಗಿಲೆಯ ಇಂಚರ "ಕುಹೂ, ಕುಹೂ" ಎಂದು ಕೇಳಿಸುತ್ತಿದ್ದರೆ, ಕಥೆಗಾರ ತನ್ನಷ್ಟಕ್ಕೆ ಆಡಿಕೊಳ್ಳುತಿದ್ದ "ಅದು ನನ್ನ ಹುಡುಗಿಯ ಕೊರಳ ದನಿಯಂತಿದೆಯಲ್ಲ!" ಇದೇನು ಹೊಸದಾಗಿರಲ್ಲಿಲ್ಲ ಕಥೆಗಾರನ ಪರಿಸರಕ್ಕೆ. ಉತ್ತರವಿಲ್ಲದ ಪ್ರಶ್ನೆಗಳನ್ನು ಕೂಡಿಸಿ ಸೇರಿಸುವುದರ ಜೊತೆಗೆ, ಜಗತ್ತಿನಲ್ಲಿ ನಡೆವ ಎಲ್ಲಾ ಸುಂದರವಾದ ಆಗುಹೋಗುಗಳನ್ನು ತನ್ನ ಮನದನ್ನೆಯ ಜೊತೆಗೆ ಹೋಲಿಸಿಕೊಳ್ಳುವುದು ಅವನಿಗೆ ದಿನನಿತ್ಯದ ರೂಡಿಯಾಗಿತ್ತು. ಕೋಗಿಲೆಯ ಗಾನ ನಿಂತರೂ ಅವನಿನ್ನೂ ಅವನ ಕಲ್ಪನಾಲೋಕದಿಂದ ಹೊರಬಂದಿರಲಿಲ್ಲ. ನಡೆದು ಬಂದ ದಾರಿಯತ್ತ ದಾಪುಗಾಲು ಹಾಕುತ್ತ ಅವನ ಮನಸ್ಸು ಹಿಂದೆ ಹಿಂದೆ ನಾಗಾಲೋಟವನಿಕ್ಕುತಿತ್ತು.

ಕಥೆಗಾರ, ಅದೊಂದೇ ಅವನಿಗಿದ್ದ ಸದ್ಯದ ಪರಿಚಯ. ತೀರಾ ಬಿಳಿಯಲ್ಲದ್ದಿದ್ದರೂ ಹೊಳಪಾದ ಬಣ್ಣ, ನೀಳ ತೋಳು, ಆಕರ್ಷಕವೆನ್ನುವಂತಿದ್ದ ಮುಖ, ಒಳಗಿಳಿದಿದ್ದ ಕಣ್ಣು ಹಾಗೂ ಬಹಳಷ್ಟು ಕಥೆಗಾರರಂತೆ ಅವನಿಗೂ ಒಂದಿಷ್ಟು ಕುರುಚಲು ಗಡ್ಡ. ಮನೆಯ ಒಳ ಹೊಕ್ಕರೆ ತನ್ನ ಕೋಣೆಯಲ್ಲಿನ ಪುಸ್ತಕ, ಪೆನ್ನು ಮತ್ತು ಕನಸಿನ ಜೊತೆ ಅವನ ಬದುಕು. ಕೋಣೆಯ ಹೊರ ನಡೆದರೆ, ಅಮ್ಮ, ಅಪ್ಪ, ತಂಗಿ ಮತ್ತು ಮನೆಯ ನಾಯಿಮರಿಯ ಜೊತೆ ಒಂದಿಷ್ಟು ಹರಟೆ, ಪ್ರೀತಿಯ ಒಡನಾಟ. ಮನೆಯ ಹೊರಬಿದ್ದರೆ ಮನೆಯಿಂದ ಒಂದಷ್ಟು ದೂರದಲ್ಲಿದ್ದ ಗುಡ್ಡದತ್ತ ಪಯಣ, ಅಲ್ಲಿನ ಕೆರೆಯ ತಡಿಯೊಲ್ಲಿಂದಿಷ್ಟು ಕನಸು ಕಟ್ಟುವ, ಭಾವನೆಗಳ ಅಳೆದು ನೋಡುವ ಪ್ರವೃತ್ತಿ.

ಪಾಪು ಮತ್ತು ಚಂದಮಾಮ

ಪಾಪು ಮತ್ತು ಚಂದಮಾಮ
**************

ಅಮ್ಮಾ ನಂಗೆ ತಿನ್ನಿಸ್ತೀಯಾ ನೀನು ಮಮ್ಮೂನಾ?
ತೋರಿಸ್ತೀಯಾ ಮೇಲೆ ನಗುವ ಚಂದಮಾಮನ್ನಾ?

ಚಂದಮಾಮ ಮಮ್ಮು ತಿನ್ನಲು ಹಠ ಮಾಡ್ತಾನಾ?
ಆಗ ಅವನಿಗೆ ತೋರಿಸುವುದು ಯಾವ ಮಾಮನ್ನಾ?

ಕಾಣಿಸಲ್ಲ ಯಾಕೆ ಅವನ ಕಣ್ಣು ಕಿವಿ ಕೈ ಕಾಲು?
ತುಳಿವನೇ ಅವನು ನನ್ನ ಹಾಗೆ ಪುಟ್ಟ ಸೈಕಲ್ಲು?

ಆಡಲಿಕ್ಕೆ ಬರುವನೇ ಅವನು ನನ್ನ ಸಂಗಡ?