ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯೋಗ್ಯರಿಗಿಲ್ಲ ಪುರಸ್ಕಾರ!!!

  • ನಮ್ಮ ಕನ್ನಡ ಸಾಹಿತ್ಯದ ಒಂದು ದುರಂತದ ಸಂಗತಿಯೆಂದರೆ,ಯಾರು ಯೋಗ್ಯರೋ,ಅತ್ತ್ಯುತ್ತಮ ಸಾಹಿತಿಗಳೋ ಅವರಿಗೆ ರಾಜ್ಯಮಟ್ಟದಲ್ಲಾಗಲಿ,ರಾಷ್ತ್ರಮಟ್ಟದಲ್ಲಾಗಲಿ,ಪ್ರಶಸ್ತಿ-ಪುರಸ್ಕಾರಗಳು ದೊರಕುವುದಿಲ್ಲ.ಬಹುಶಃ ಇಂದು ರಾಜಕೀಯ ಪ್ರಭಾವವಿಲ್ಲದೆ ಯಾವುದೇ ಪ್ರಶಸ್ತಿಗಳು ದೊರಕುವುದಿಲ್ಲ.ದುರಾದೃಷ್ಟವಶಾತ್ ಇದರಿಂದ ಅನೇಕ ಉತ್ತಮ ಸಾಹಿತಿಗಳು ವಂಚಿತರಾಗುತ್

ಯಮದೇವನ ಒಕ್ಕಲು -- ಬೇ೦ದ್ರೆ..ಯವರ ಕವನ

ಯಮದೇವನ ಒಕ್ಕಲು ಬೇ೦ದ್ರೆ..

ಕೋಣವೇರಿ ಬರುವ ಯಮಾ
ಎಲ್ಲಿ ಇಲ್ಲೊ ಸ೦ಯಮ
ಕಾಮಕಿಲ್ಲ ಅ೦ತವು
ಅ೦ತೆಯೇನೊ
ಅ೦ದರೇನೊ
ಈ ಎದೆಗಳು ಯಾರವೂ
ಇನ್ನೂನೂ ಆರವು.

ಬೇಕು ಬೇಕು ಎನುತಿದೆ
ಸುಟ್ಟರೂನೂ ಬೇಯವು
ಅ೦ತೆಯೇನೊ
ಆದರೇನೊ
ಸತ್ತರೂನೂ ಸಾಯವು
ಸಾವಿನಾಚೆ ಹಾಯವು

ಭೂತಕಾಲ ದೆವ್ವವು
ಬಲಿ ಬೇಡುವದೆ೦ದಿಗು
ಅ೦ತೆಯೇನೊ
ಆದರೇನೊ
ಯುದ್ದ ಇಹುದು ಎ೦ದಿಗೂ
ಕಾಲ ಸ೦ಧಿ ಸ೦ಧಿಗೂ

ಪ್ರತಿಕ್ರಿಯೆ ಮೇಲೆ ಕ್ಲಿಕ್ಕಿಸಿದಾಗ, ಅದೇ ಕಾಣಿಸಿಕೊಳ್ಳುವ ಹಾಗೆ ಮಾಡಲು ಸಾಧ್ಯವಿಲ್ಲವೇ?

ಸಂಪದದ ಪುಟದಲ್ಲಿ ಕಾಣಿಸಿಕೊಳ್ಳುವ ಪ್ರತಿಕ್ರಿಯೆ ಮೇಲೆ ಕ್ಲಿಕ್ಕಿಸಿದಾಗ,ಅದು ಆರಂಭದ ಬರಹಗಳಲ್ಲೇ ನಿಂತು ಬಿಡುತ್ತದೆ.ಎರಡನೇ,ಮೂರನೇ ಪುಟದ ಪ್ರತಿಕ್ರಿಯೆಗೆ ಮೊದಲಿನಿಂದ ಹುಡುಕಬೇಕಾಗುತ್ತದೆ. ಯಾವ ಪ್ರತಿಕ್ರಿಯೆ ಮೇಲೆ ನಾವು ಕ್ಲಿಕ್ಕಿಸುತ್ತೇವೋ ಅದೇ ಪ್ರತಿಕ್ರಿಯೆ ನಮ್ಮೆದುರು ಕಾಣಿಸಿಕೊಳ್ಳುವ ಹಾಗೆ ಮಾಡಲು ಬಂದರೆ,ಅಂತಹ ಸೌಲಭ್ಯ ಒದಗಿಸಿಕೊಡಿ.

ದೃಶ್ಯ ೧

ನಮೋ ಭಗವತೇ ಶ್ರೀರಾಮಕೃಷ್ಣಾಯ ||
ಚಂದ್ರಹಾಸ
(ನಾಟಕ)
ಆದಿರಂಗಂ

ದೃಶ್ಯ ೧

[ಕುಂತಳನಗರದ ಒಂದು ಬೀದಿ. ಚಂದ್ರಹಾಸನೇ ಮೊದಲಾದ ಮೂವರು ಹುಡುಗರು ಧೂಳಾಟವಾಡುತ್ತಿರುವರು.]

೧ನೆ ಬಾಲಕ:- ನಾನೊಂದು ಹಣ್ಣು ಬರೆದೆನು; ನೋಡಿ!
೨ನೆ ಬಾಲಕ:- ನೋಡಿಲ್ಲಿ ನಾನೊಂದು ಹಕ್ಕಿಯನು ಕೆತ್ತಿಹೆನು; ಹಾರುತಿದೆ!
ಹಾರಿಹೋಗುವ ಮುನ್ನ ಬನ್ನಿ; ನೋಡಿ!
ಚಂದ್ರ:- ಸುಭಟನೋರ್ವನು ಬಿಲ್ಲು ಬಾಣಂಗಳನು ಪಿಡಿದು ಕದನಕೈದುವ ಚಿತ್ರವನು ಕೆತ್ತಿಹೆನು! ನೋಡಿ!
೧ನೆ:- ಎಲ್ಲಿ? ಎಲ್ಲಿ?
೨ನೆ:- ನನಗು ತೋರಿಸು; ಎಲ್ಲಿ?
ಚಂದ್ರ:- ಹೆದರದಿರಿ! ಹಣ್ಣು ಹಕ್ಕಿಗಳೆಂದು ತಿಳಿಯದಿರಿ!

(ಬಂದು ನೋಡುವರು)

೨ನೆ:- ಅವನ ಬೆನ್ನಿನ ಮೇಲೆ ತೂಗಾಡುತಿಹುದೇನು?
ಚಂದ್ರ:- ಬತ್ತಳಿಗೆ! ನಿನ್ನ ಹಕ್ಕಿಯದೆಲ್ಲಿ?
೧ನೆ:- ಹೋಯಿತದು ಹಾರಿ ನಿನ್ನ ಸುಭಟನ ಕಂಡು
೨ನೆ:- ಹಣ್ಣೆಲ್ಲಿ?
ಚಂದ್ರ:- ಹಸಿದ ತಿರ ತಿಂದು ತೇಗಿದಳೆಂದು ತೋರುವುದು! ಕೇಳಣ್ಣ ಕೋಗಿಲೆಯು ಹಾಡುತಿದೆ ಮಾಮರದ ತಳಿರಲ್ಲಿ!

[ಎಲ್ಲರೂ ಕೋಗಿಲೆಯನ್ನು ಅನುಕರಿಸುತ್ತಾ ಮಳಲಲ್ಲಿ ಆಡಲಾರಂಭಿಸುವರು. ಚಂದ್ರಹಾಸನಿಗೆ ಒಂದು ಸಾಲಗ್ರಾಮ ಶಿಲೆ ಸಿಕ್ಕುವುದು. ಚಂದ್ರಹಾಸನು ಹಿಗ್ಗಿ] ಸಿಕ್ಕೆತೆನಗೊಂದೊಡವೆ! [ಎದ್ದುನಿಂತು ಬಾಯಲ್ಲಿ ಬಚ್ಚಿಟ್ಟೂಕೊಳ್ಳುವನು]

೧ನೆ:- ಏನಿದು?
೨ನೆ:- ನೋಡೋಣ! (ಚಂದ್ರಹಾಸನು ತೋರಿಸುತ್ತಾ)
ಚಂದ್ರ:- ಬಟ್ಟಗಲ್ಲಿಂಟು ವರ್ತುಳದಿಂದೆ ಚೆಲ್ವಾಗಿ ಪುಟ್ಟುವದೆ ಪೊಸತು! ಕಟ್ಟೆಸಕದಿಂದ ಕಾಣಿಸುತಿಹುದು ರಮಣೀಮಾಗಿ!
೨ನೆ:- ಗೋಲಿಯಾಟಕೆ ಸೊಗಸು!
೧ನೆ:- ಪೂಜಿಸುವರೀತೆರದ ಕಲ್ಲೊಂದ ನಮ್ಮ ಮನೆಯಲ್ಲಿ. ಸಾಲಗ್ರಾಮ
ವೆಂದದನು ಕರೆಯುವರು. ದೇವರಲ್ಲಿಹನಂತೆ.
(ಚಂದ್ರಹಾಸನು ಮರಳಿ ಬಾಯಲ್ಲಿಡುವನು) ಎಂಜಲಾಗುವುದದಕೆ!
ಚಂದ್ರ:- ಇಡಲೆನಗೆ ತಾವಿಲ್ಲ [ದೂರ ನೋಡಿ] ಯಾರವರು ಮಾರದೊಳು ಬರುತಿಹರು?
೨ನೆ:- ತಿಳಿಯದೆ? ದುಷ್ಟಬುದ್ಧಿ.
ಚಂದ್ರ:- ಯಾರವನು?
೧ನೆ:- ನಮ್ಮ ರಾಜ್ಯದ ಮಂತ್ರಿ.
ಚಂದ್ರ:- ಅವನ ಸಂಗಡ ಬರುವ ಬಾಲಕರದಾರು?
೨ನೆ:- ಮದನನೆಂಬುವನೊಬ್ಬ ಮಂತ್ರಿಸುತ. ಮಂತ್ರಿಸುತೆ ಗಾಲವನ ಕೈಹಿಡಿದು ಬಹ ವಿಷಯೆ.
ಚಂದ್ರ:- (ಕೈತೋರಿಸಿ) ಅವನಾರು?
೧ನೆ:- ಗಾಲವನು ರಾಜರ ಪುರೋಹಿತನು. ಕೈತೋರಬೇಡ, ಕೆಡುಕಾಗುವುದು.

[ದುಷ್ಟಬುದ್ಧಿ. ಬಾಲಕನಾದ ಮದನ. ಬಾಲೆಯಾದ ವಿಷಯೆ ಪುರೋಹಿತನಾದ ಗಾಲವ ಇವರು ಬರುವರು. ಬಾಲಕರು ಹಿಂಜರಿವರು. ಗಾಲವನು ನಿಂತು ಚಂದ್ರಹಾಸನನ್ನು ಎವೆಯಿಕ್ಕದೆ ನೋದುತ್ತಾ ನಿಲ್ಲುವನು]

ದುಷ್ಟ:- ಗಾಲವ ಪುರೋಹಿತರೆ ನಿಂತೇನ ನೋಡುವಿರಿ?
ಗಾಲವ:- (ತೋರಿಸುತ್ತಾ) ನೋಡಲ್ಲಿ ಮಣ್ಣಾಟವಾಡುತಿಹ ಬಾಲಕರ ಗುಂಪಿನೊಳು ತಾರೆಗಲ ನಡುವೆಯಿಹ ಹಿಮಕರನ ಹೋಲುತಿಹ ಬಾಲಕನು ನಿಂತಿಹನು!
ದುಷ್ಟ:- ಅದರಲ್ಲಿ ಅತಿಶಯವದೇನು?
ಗಾಲವ:- ಆರ ಸುತನೀತರುಣ?
ಎಲ್ಲಿಂದ ಬಂದಿಹನು?
ದುಷ್ಟ:- ಈಪರಿಯೊಳೆನಿತಿಲ್ಲ ಅನಾಥರಾಗಿಹ ಬಾಲರೀ ಮಹಾಪುರದಲ್ಲಿ! ಎತ್ತಣವ ನಾರಸುತನೆಂದರಿಯೆ. ರಾಜಕಾರ್ಯದೊಳಗಿಹ ನಮಗೇತಕಿದರ ಚಿಂತೆ?
ಗಾಲವ:- ಹಾಗಲ್ಲ ನೋಡವನ; ರಾಜಚಿಹ್ನೆಗಳೆಂತು ಶೋಭಿಪವು ಮೈಯಲ್ಲಿ. ಮೊಗದ ಕಾಂತಿಯ ನೋಡು!
ಎಂದಿರ್ದೊಡಂ ಚಾರು ಲಕ್ಷಣದೊಳೋ ಪೊಳಲ್ಗೀ ಕುಂತಳಾಧೀಶನಾಳ್ವ ನಮ್ಮೀ ಪೊಡವಿಗೊಡೆಯನಹ ನೀತನಂ ನೀನಿರಿಸಿಕೊಂಡು ರಕ್ಷಿಪುದು.
ದುಷ್ಟ:- (ಚಿಂತಿಸಿ) ಕರೆದವನ ಕೇಳೋಣ. ಯಾರೆಂದು?

[ಗಾಲವನು ಕೈಸನ್ನೆಯಿಂದ ಚಂದ್ರಹಾಸನನ್ನು ಕರೆಯುವನು. ಚಂದ್ರಹಾಸನು ವಿಸ್ಮಯದಿಂದ ಬಳಿಗೆ ಬರುವನು. ಮದನ, ವಿಷಯೆ ಇಬ್ಬರೂ ಹತ್ತಿರಕ್ಕೆ ಹೋಗುವರು.]

ಮಗುವೆ, ನೀನಾರವಂ?
ಚಂದ್ರ:- ನಾನರಿಯೆ!
ಗಾಲವ:- ನಿನ್ನ ಹೆಸರೇನು?
ಚಂದ್ರ:- ನನಗದೂ ಗೊತ್ತಿಲ್ಲ.
ಗಾಲವ:- ನಿನ್ನ ಪಿತನಾರು? ನಿನ್ನ ಹೆತ್ತವಳಾರು?
ಚಂದ್ರ:- ನಾನೊಂದನರಿಯೆ.
ಗಾಲವ:- ನಿನಗುಣಿಸನಿಕ್ಕುವರದಾರು?
ಚಂದ್ರ:- ನನ್ನಜ್ಜಿ!
ಗಾಲವ:- ಯಾರಾಕೆ? ಎಲ್ಲಿಹಳು?
ಚಂದ್ರ:- (ದೂರ ಕೈತೋರಿಸಿ) ಅಲ್ಲಿಹಳು!
ದುಷ್ಟ:- ಗಾಲವರೆ, ಈಗಿರಲಿ, ಆಮೇಲೆ ನೋಡೋಣ ಬನ್ನಿ ಹೊತ್ತಾಯ್ತು, ರಾಜಕಾರ್ಯಕ್ಕೆ. ಬಾಲಕನೆ ಬಹಳ ಸಂತಸವಾಯ್ತು ನಿನ್ನ ನೋಡಿ! ಹೋಗು ನಿನ್ನಜ್ಜಿಗಿದನರಹು.

[ಚಂದ್ರಹಾಸನು ತೆರಳುವಾಗ ವಿಷಯೆಯು ಕೈಲಿದ್ದ ಹೂವೊಂದನ್ನು ಕೊಡುವಳು. ಎಲ್ಲರೂ ಹೋಗುವರು. ಚಂದ್ರಹಾಸನು ಮಾತ್ರ ನಿಲ್ಲುವನು. ಉಳಿದಿಬ್ಬರು ಬಾಲಕರು ಹತ್ತಿರಕ್ಕೆ ಓಡಿಬಂದು ಜೂವನ್ನು ನೋಡಿ]

೧ನೇ:- ಯಾರಿತ್ತರೀಹೂವ?
ಚಂದ್ರ:-ವಿಷಯೆ.
೨ನೇ: ರನ್ನದಲಿ ಕೆತ್ತಿದುದು!
೧ನೇ: ಬಾರಣ್ಣ ಕೇಳಿಲ್ಲ ಅಮ್ಮ ಕೂಗುವಳು.

[ಹೊರಡುವರು. ಚಂದ್ರಹಾಸನು ಹೂವನ್ನೂ ಸಾಲಿಗ್ರಾಮವನ್ನೂ ನೋಡುತ್ತ ನಿಲ್ಲುವನು]
(ಪರದೆ ಬೀಳುವುದು)

ಚಂದ್ರಹಾಸ (ನಾಟಕ)

ರಂಗಭೂಮಿ ಗ್ರಂಥಮಾಲೆ

ಚಂದ್ರಹಾಸ

(ನಾಟಕ)

ಲೇಖಕರು

ಶ್ರೀ| ಕೆ ವಿ ಪುಟ್ಟಪ್ಪ, ಎಂ ಎ

(ಕುವೆಂಪು)
ಮೈಸೂರು.

ಪ್ರಕಾಶಕರು
ರಂಗಭೂಮಿ ಕಾರ್ಯಾಲಯ,
ಮನೆವಾರ್ತೆಪೇಟೆ, ಬೆಂಗಳೂರು ಸಿಟಿ

ಮುದ್ರಣಕಾರರು
ಬಿ. ಶ್ರೀನಿವಾಸಯ್ಯಂಗಾರ್,
ಮನೆವಾರ್ತೆಪೇಟೆ, ಬೆಂಗಳೂರು ಸಿಟಿ

ಟಾಲ್ಸ್‌ಟಾಯ್ ಕಥೆ: ಕ್ರೂಟ್ಸರ್ ಸೊನಾಟಾ

ಕೋರಿಕೆ: ಇದು ಟಾಲ್ಸ್‌ಟಾಯ್ ಬರೆದ ಒಂದು ನೀಳ್ಗತೆ. ಸುಮಾರು ೩೦ ವರ್ಷಗಳಿಂದ ಕಾಡಿದ ಕಥೆ. ಈಗ ಅನುವಾದ ಮಾಡಿದ್ದೇನೆ. ಇದರಲ್ಲಿನ ಪಾತ್ರಗಳು ಕನ್ನಡದಲ್ಲಿ ಮಾತಾಡಿದರೆ ಹೇಗೆ ಮಾತಾಡಬಹುದೋ ಹಾಗೆ ಅನುವಾದದ ಭಾಷೆ ಇರಬೇಕೆಂದು ನನ್ನ ಆಸೆ. ಇದು ಸುದೀರ್ಘ ಕಥೆ. ವಾರಕ್ಕೆ ಎರಡು ಬಾರಿ ಮುಂದುವರೆಸುವೆ. ಓದುಗರು ದಯವಿಟ್ಟು ಎಲ್ಲಿ ಭಾಷೆ ಕೃತಕವಾಯಿತು ಅನ್ನುವುದನ್ನು ಸೂಚಿಸಿದರೆ ಕೃತಜ್ಞ.
ಕ್ರೂಟ್ಸರ್ ಸೊನಾಟಾ ಎಂಬುದು ಸಂಗೀತಕಾರ ಬೆಥೊವೆನ್‌ನ ಒಂದು ರಚನೆ. ತೀರ ಉದ್ದೀಪಕವಾದ, ನುಡಿಸಲು ಕಷ್ಟವಾದ ರಚನೆ ಅನ್ನುತ್ತಾರೆ. ಟಾಲ್ಸ್‌ಟಾಯ್ ಮದುವೆಯ ಸಂಬಂಧದಲ್ಲಿ ಹುಟ್ಟುವ ಅಸೂಯೆ, ಪ್ರೀತಿಯ ಸಾವು, ಮನುಷ್ಯಮನಸ್ಸಿನ ಸುಪ್ತ ಆಲೋಚನೆ ಇವನ್ನೆಲ್ಲ ಅಚ್ಚರಿಯಾಗುವಷ್ಟು ಅದ್ಭುತವಾಗಿ ಹಿಡಿದಿರುವ ಲೇಖಕ. ಸಾಹಿತ್ಯದಲ್ಲಿ ಗಂಭೀರ ಆಸಕ್ತಿ ಇರುವವರು ದಯವಿಟ್ಟು ತಾಳ್ಮೆಯಿಂದ ಈ ಕಥೆಯನ್ನು ಓದಿ ಪ್ರತಿಕ್ರಿಯೆ ತೋರಬೇಕೆಂದು ಕೋರಿಕೆ. ಇಗೋ ಮೊದಲನೆಯ ಅಧ್ಯಾಯ:

ಹೆಜ್ಜೆ ಮೂಡದ ಹಾದಿ..

ಮಾಯಾಲೋಕವನ್ನು ತ್ಯಜಿಸಿ ಮತ್ತ್ಯಾವ ಲೋಕಕ್ಕೆ ಪಯಣ ಬೆಳೆಸಿದ ತೇಜಸ್ವಿ ಸಾವಿನ ಆಚೆಗಿರುವ ಸತ್ಯವನ್ನು ಇಷ್ಟು ಹೊತ್ತಿಗೆ ಆವಗಲೇ ತಿಳಿದು ಕೊ೦ಡು , "ಸಾವು ಅ೦ದರೆ ಹೆದರ್ ಬೇಡರೋ !!! ಈ ಸಾವಿನ ಸತ್ಯವೇನೆ೦ದು ಬರೆದು ಒ೦ದು ಪುಸ್ತಕ Publish ಮಾಡ್ತೀನ. ಆದರೆ ಕಲರ್ ಚಿತ್ರಗಳು ಇರೋದಿಲ್ಲಾ." ಅ೦ತಾ ತಮ್ಮ ಪೆನ್ನು ಹುಡುಕುತ್ತಿರುತ್ತಾರೆ. ಆದರೆ ಸಾವಿನಾಚೆಯ "ಈ ಲೋಕದಲ್ಲಿ ಕನ್ನಡವಿಲ್ಲಾ..ಅದೇ ಬೇಜಾರು" ಅನ್ನುತ್ತಿರಬಹುದು.

ನಾನು ನಾಡಿಗ್ ಮತ್ತು ಸ೦ಗಡಿಗರೊ೦ದಿಗೆ ಅವರ ಮನೆಗೆ ಹೋದಾಗ ಘ೦ಟೆ ಸುಮಾರು ಎರಡಾಗಿತ್ತು. ಬ೦ದದ್ದು ಹೋಗುವ ಬಗ್ಗೆ ಅದು ಇದು, ಹರಟೆ ಹತ್ತು ನಿಮಿಷ. ಐದು ನಿಮಿಷದಲ್ಲಿ River Interlinking ನಿ೦ದ ಪ್ರಾರ೦ಭವಾಯಿತು .ಆಮೇಲೆ ನಾನು ನನ್ನ ಕೆಲವು Photos ತೋರಿಸಿದೆ. ಆ Photoಗಳು ನಮ್ಮ ಬೆ೦ಗಳೂರಿನ ಕೂಲಿಕಾರರ ಚಿತ್ರವಾಗಿತ್ತು. ಚಿತ್ರವನ್ನು ನೋಡುತ್ತಾ "ಅಲ್ಲಾ ಈಗ ತಿ೦ಗಳಿಗೆ ಐನ್ನೂರ್ ರೂಪಾಯಿ ಟೋಮಾಟೊ ಮತ್ತು ತರಕಾರಿ ಬೆಳೆದುಕೊ೦ಡು ಕಡೂಬಡತನದಲ್ಲಿ ಜೀವಿಸುವ ರೈತನಿಗೆ ಯಾರಾದರೂ ಲಕ್ಷ ಕೊಟ್ಟು ನೆಲ ಬಿಡು ಅ೦ದರೆ ಬೇಡ ಅನ್ನೋಕ್ಕಾಗುತ್ತೇನು ?? ಈ ಸಮಸ್ಯೆಗೆ ನನಗೆ ದಾರಿ ಕಾಣಿಸ್ತಿಲ್ಲಾ.
ಆದರೆ ನೀವುಗಳು ಪರಿಹಾರ ಹುಡುಕಬೇಕು. ಯಾವುದೇ ಸಮಸ್ಯೆಗೆ ಉತ್ತರ ಸಿಗೋದಿಲ್ಲಾ ಅ೦ದರೆ ಆಗೋಲ್ಲಾ.ಉತ್ತರ ಹುಡುಕಬೇಕು".
ದನಿಯಲ್ಲಿ ಒಬ್ಬ ಯುವಕನನ್ನು ಚಾಲೆ೦ಜ್ ಮಾಡುವ ಧಾಟಿಯಿತ್ತು.