ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಲ್ಲನಲ್ಲೂಂದು ಕೋರಿಕೆ..

ಪ್ರತೀ ದಿನ ಪ್ರತೀ ಕ್ಷಣ ನಿನ್ನ ನೆನಪು ಕಾಡುತ್ತಿದೆ
ನಿನ್ನ ಧ್ವನಿ ಕೇಳಲು ಮನ ಕಾತುರದಿಂದ ಕಾಯುತ್ತಿದೆ
ಕ್ಷಣ ಕ್ಷಣವು ನಿಮಿಷದ ಹಾಗೆ ಭಾಸವಾಗುತ್ತಿದೆ
ಪ್ರತೀ ನಿಮಿಷ ಘಂಟೆಗಳೆನ್ನಿಸುತ್ತಿದೆ
ದಿನಗಳು ಯುಗಗಳೆನ್ನಿಸುತ್ತಿದೆ
ನಿನ್ನ ಸ್ವರ ಕೇಳದ ದಿನ ಬರಿ ಶೂನ್ಯ
ನಿನ್ನ ದನಿ ಕೇಳಿದ ದಿನ ಧನ್ಯ
ಮೂಗಿಯ ಚಳಿಯಲ್ಲೂ ನಿನ್ನ ನೆನಪು ನನ್ನನು ಬೆಚ್ಚಗಿಟ್ಟಿದೆ
ನಿನ್ನ ಪ್ರೀತಿ ಮನ ತುಂಬಿ ತನು ತುಂಬುತ್ತದೆ
ಹೇ ಗೆಳೆಯ ಅರಿಯೆಯ ನೀನು ನನ್ನ ಮನದಾಳದ ಮಾತಾ?
ತಿಳಿಯೆಯ ನನ್ನ ತಳಮಳವ ?
ಆದರು ಏಕೆ ಕಾಡಿಸುವೆ ನನ್ನ?

'ಕನ್ನಡ ಪುಸ್ತಕ ಮಾರಾಟ ಮಳಿಗೆ' ಉದ್ಘಾಟನಾ ಸಮಾರಂಭ- ಮುಂಬೈನಲ್ಲಿ !

ಮೇಲೆ ಹೇಳಿದ ಸಮಾರಂಭ ಮತ್ತು 'ವಾಚನಾಭಿರುಚಿ ಕಮ್ಮಟ'ಮುಂಬೈನ ಮಾಟುಂಗಾದಲ್ಲಿರುವ ಮೈಸೂರ್ ಅಸೋಸಿಯೇಷನ್ ನ ಭವ್ಯ ಆಂಗಣದಲ್ಲಿ ಈ ತಿಂಗಳ ೨೩ ಮತ್ತು ೨೪ ರಂದು ನಡೆಯಲಿದೆ. ಈಗಾಗಲೇ ಸದಸ್ಯರಿಗೆ 'ಕರೆಯೋಲೆ' ಕಳಿಸಿದ್ದಾಗಿದೆ. ಆದರೆ ಇದರ ಉಪಯೋಗವನ್ನು ಮುಂಬೈನ ಎಲ್ಲ ಕನ್ನಡಿಗರೂ ಪಡೆಯಬಹುದು !

ಅರಣ್ಯ ನಾಶ ಮಾಡಿದ ಮಗು ಮೇಲೆ ಕೇಸು

ಬೊಗಳೂರು, ಡಿ.21- ಯಾರಾದರೂ "ಹೋದ ಜನ್ಮದ ಪಾಪದ ಫಲ" ಇದು ಅಂತೆಲ್ಲಾ ಬೊಗಳೆ ಬಿಡುವುದರ ಹಿಂದಿನ ಕಳಕಳಿಗೆ ಪುಷ್ಟಿ ದೊರೆತಿದ್ದು, ಆದರೆ ಇಷ್ಟು ಬೇಗನೆ ಶಿಕ್ಷೆಯಾಗುತ್ತದೆ ಎಂಬುದು ಯೋಚನೆಗೆ ನಿಲುಕದ ಸಂಗತಿಯಾಗಿತ್ತು. (bogaleragale.blogspot.com)

ಕನ್ನಡ ವಿಶ್ವಕೋಶಕ್ಕೆ ನಿಮ್ಮ ಕಾಣಿಕೆ

ಮಾನ್ಯರೆ,

ಕನ್ನದ ವಿಶ್ವಕೋಶ (http://kn.wikipedia.org/wiki)ಈಗ ೪೨೦೦ಕ್ಕೂ ಅಧಿಕ ಲೇಖನಗಳನ್ನು ಹೊಂದಿದೆ. ಈ ವಾರ, ಕರ್ನಾಟಕದ ಜೀವನದಿ ಕಾವೇರಿಯ ಮೇಲಿನ ಲೇಖನವನ್ನು ಸಂಸ್ಕರಿಸಲಾಗುತ್ತಿದೆ. ಬನ್ನಿ ನೀವು ಬಾಗವಹಿಸಿ ಕನ್ನದ ವಿಶ್ವಕೋಶ ಬೆಳೆಯಲು ನೀವೂ ಸಹಕರಿಸಿ.

ಮೈಸೂರಿನ ಬಹುರೂಪಿ: Culture - Agriculture

ಬಹುರೂಪಿ: ಸಂಸ್ಕೃತಿ - ಕೃಷಿ ಸಂಸ್ಕೃತಿ ಸಮ್ಮೇಳನದಲ್ಲಿ ಡಾಕ್ಟರ್ ಸುಭಾಷ್ ಪಾಳೇಕರ್ ಅಧ್ಯಕ್ಷತೆಯಲ್ಲಿ ನಡೆದ ವಿಚಾರಸಂಕಿರಣ ನನ್ನ ಕುತೂಹಲವನ್ನು ಕೆರಳಿಸಿತ್ತು. ಡಾಕ್ಟರ್ ಪಾಳೇಕರ್ ಮತ್ತು ರಾಜಾಸ್ಥಾನದ ರಾಜೇಂದರ್ ಸಿಂಗ್ ಕೂಡ ಉಪಸ್ಥಿತರಿದ್ದದ್ದು ವಿಚಾರಸಂಕಿರಣಕ್ಕೆ ವಿಶೇಷ ಮೆರಗು ತಂದಿತ್ತು. ಸಮ್ಮೇಳನದಲ್ಲಿ ಬಹಳಷ್ಟು ರಸವತ್ತಾದ ಸಂಗತಿಗಳು ಕಂಡುಬಂತು.ಆದರೆ ಹಲವು ಕಾರಣಗಳಿಂದಾಗಿ ಕೆಲವು ಸೂಕ್ಷ್ಮವಿಚಾರಗಳು ಚರ್ಚೆಗೆ ಬರಲಿಲ್ಲ. ಅದೀನೇ ಇರಲಿ, ಇದು ಸಮ್ಮೇಳನದ ನಂತರ ಮನಸ್ಸಿಗೆ ಒಂದು ಯೋಚನೆ.

ವಿ.ಸೂ: ಇಲ್ಲಿ ರೈತ ಅಂದರೆ ಅಷ್ಟೋ ಇಷ್ಟೋ ಓದಿರುವ, ತಕ್ಕ ಮಟ್ಟಿಗೆ ಅನುಕೂಲತೆಗಳನ್ನು ಪಡೆದುಕೊಂಡು, ರೈತ ಶಿಬಿರ, ರೈತ ಸಂಘಟನೆ ಮುಂತಾದವುಗಳಲ್ಲಿ ಪಾಲ್ಗೊಳ್ಳುವಂತಹಾ ರೈತ. ಕಡಿಮೆ ಭೂಮಿಯಿದ್ದು (ಕೆಲವೊಮ್ಮೆ ಭೂಮಿಯೂ ಇಲ್ಲದೇ), ಓದು ಬರಹ ತಿಳಿಯದೇ, ಗ್ರಾಮ ಕುಗ್ರಾಮಗಳಲ್ಲಿ ಕಳೆದುಹೋಗಿರುವ, ವಿನಾಕಾರಣ ಸಂಕಷ್ಟವನ್ನನುಭವಿಸುತ್ತಿರುವವರು ಈ ಮೇಲಿನ ಪಂಗಡವರಿಗಿಂತ ಸಂಖ್ಯೆಯಲ್ಲಿ ಹೆಚ್ಚೇ. ಅವರಿಗೆ ಸ್ವಂತದ ಧ್ವನಿ ಹೋಗಲಿ, ಸಹಾಯ ಯಾಚಿಸಲೂ ಧ್ವನಿಯಿಲ್ಲ. ದುರಾದೃಷ್ಟವಶಾತ್ ಈ ಲೇಖನ ಅವರ ಬಗ್ಗೆಯಲ್ಲ. ಆದರೆ ಅವರ ಜೀವನವನ್ನು ನೇರವಾಗಿ ಬದಲಾಯಿಸುವ ಶಕ್ತಿಯುಳ್ಳ ಮೊದಲಿನ ಅಲ್ಪಸಂಖ್ಯಾತ ರೈತರ ಬಗ್ಗೆ.

ಕಾಡುತ್ತಿರುವ ಹಾಡು

೧) ರತ್ನಮಾಲ ಪ್ರಕಾಶ್ ಹಾಡಿರುವ ನಾನಳಿದ ಮೇಲೆನ್ನ - ಬರೆದವರು ಕುವೆಂಪು.
ರತ್ನಮಾಲಾ ಪ್ರಕಾಶ್ ಮನಸ್ಸು ಕರಗುವಂತೆ ಹಾಡಿದ್ದಾರೆ. ಒಳ್ಳೆಯ ಹಾಡು.

ಸಾಹಿತ್ಯ ಸಮ್ಮೇಳನದ ಹೊಸ್ತಿಲಿಗೊಂದು ಆಶಯ ಕವನ.

ನಾಳಿನಿಂದ ಕನ್ನಡ ಸಾಹಿತ್ಯ ಸಮ್ಮೇಳನ, ಶಿವಮೊಗ್ಗೆಯಲ್ಲಿ. ಆ ಸಂದರ್ಭದಲ್ಲೊಂದು ಆಶಯ ಕವನ, ಕನ್ನಡಕ್ಕಾಗಿ.

ಜಾರಕಾರಣಿಗಳ ಆಘ್ರಾಣ ಸಾಮರ್ಥ್ಯದ ಗುಟ್ಟು

ಬೊಗಳೂರು, ಡಿ.20- "ಕುಸುಮ ಗಂಧದ ಒಳಗೊ ಗಂಧದೊಳು ಕುಸುಮವೋ, ಕುಸುಮ ಗಂಧಗಳೆರಡೂ ಆಘ್ರಾಣದೊಳಗೊ" ಎಂಬ ದಾಸರ ಶಂಕೆಗೆ ಪರಿಹಾರ ದೊರೆಯುವ ದಿನಗಳು ಸಮೀಪಿಸಿವೆ. (bogaleragale.blogspot.com)