ವರಸಿದ್ಧಿವಿನಾಯಕ ವ್ರತ.
ವರಸಿದ್ಧಿವಿನಾಯಕ ವ್ರತ :
ಭಾದ್ರಪದ ಶುಕ್ಲ ಚತುರ್ಥೀ ಮದ್ಯಾನ್ಹ ವ್ಯಾಪಿನಿ ಮತ್ತು ಯಾಮದ್ವಯವ್ಯಾಪಿನಿಯಿರುವದಿನ, [೧೫, ಶುಕ್ರವಾ
ರ, ಸೆಪ್ಟೆಂಬರ್, ೨೦೦೭ ] ಆಚರಿಸತಕ್ಕ ವ್ರತ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯನ್ನು ಪ್ರಾಣಪ್ರತಿಷ್ಠಾಪನಾ ಪುರುಸ್ಸರ ಪೂಜಿಸಿ, ಮೋದಕಗಳನ್ನೂ, ನೈವೇದ್ಯಮಾಡಿ, ಸ್ಯಮಂತಕೋಪಾಖ್ಯಾನ ಕಥೆಯನ್ನು ಶ್ರವಣಮಾಡಬೇಕು. ಸಕಲ ಕಾರ್ಯಗಳೂ, ನಿರ್ವಿಘ್ನವಾಗಿ ನೆರವೇರಲೂ, ವಿದ್ಯಾಪ್ರಾಪ್ತಿಗಾಗಿಯೂ ಇಷ್ಟಾರ್‍ಥ ಸಿದ್ಧಿಗೂ ಈ ವ್ರತ ಪ್ರಸಿದ್ಧವಾಗಿದೆ. ಸಾಮಾನ್ಯವಾಗಿ, ಪ್ರತಿಮನೆಯಲ್ಲೂ ಗಣಪತಿಮೂರ್ತಿಯನ್ನು ತಂದು, ಆರಾಧಿಸುವ ಪದ್ಧತಿ ಕರ್ನಾಟಕದಲ್ಲಿದೆ.
ಮುಂಬೈ ನಲ್ಲಿ ಗಣೇಶೋತ್ಸವಗಳು :
ದೇಶದ ಎಲ್ಲೆಡೆ ಗಣಪತಿ ಪೂಜೆ ನಡೆಯುತ್ತಿದ್ದರೂ ಮಹಾರಾಷ್ಟ್ರದ ಗಣಪತಿಯದೇ ಒಂದು ವಿಶಿಷ್ಠ ಸ್ಥಾನ. ಸಹಸ್ರಾರು ಗಣಪತಿಗಳ ಪೆಂಡಾಲುಗಳನ್ನು ಈಗಾಗಲೇ ರಚಿಸಿದ್ದು, ಈ ವರ್ಷವೂ ವಿಜೃಂಭಣೆಯಿಂದ ಪೂಜೆಯನ್ನು ಮಾಡಲಾಗುತ್ತದೆ. ಮಹಾರಾಷ್ಟ್ರದ ಜನತೆಗೆ ಈ ವರ್ಷ, ಬಹಳ ಸಂಭ್ರಮ. ಕಾರಣ, ಮೊದಲನೆಯದಾಗಿ ಮಹಾರಾಷ್ಟ್ರದ ಮಣ್ಣಿನಮಗಳಾದ ಶ್ರೀಮತಿ ಪ್ರತಿಭಾಪಾಟೀಲ್ ರಾಷ್ಟ್ರಾಧ್ಯಕ್ಷೆಯಾಗಿರುವುದು. ಇನ್ನೊಂದು ಮರಾಠೀಜನರ ಆಶೋತ್ತರಗಳನ್ನು ಬಿಂಬಿಸಲು ಹೋರಾಡುತ್ತಿರುವ ಶಿವಸೇನಾ, ಮುಂಬೈ ನಗರಪಾಲಿಕೆಯ ಆಡಳಿತವನ್ನು ಸತತವಾಗಿ ಮುಂದಿನ ೫ ವರ್ಷಗಳವರೆಗೆ ನಿರ್ವಹಿಸುವಲ್ಲಿ ಮುಂದಾಳಾಗಿರುವುದು. ಶರದ್ ಪವಾರ್ ಮುಂತಾದ ರಾಜಕೀಯ ನೇತಾಗಣ, ಕೇಂದ್ರದಲ್ಲಿ ಪ್ರಮುಖ ಪಾತ್ರವಹಿಸಿರುವುದು.
ಒಟ್ಟಿನಲ್ಲಿ ರಾಜಕೀಯ, ಕೃಷಿ, ಉದ್ಯಮ, ಸಿನಿಮಾರಂಗಗಳಲ್ಲಿ ದೇಶದಲ್ಲೇ ಮಂಚೂಣಿಯಲ್ಲಿರು ರಾಜ್ಯ- ಮಹಾರಾಷ್ಟ್ರ. ಇದು ಸಹಜವಾಗಿಯೇ ಮರಾಠೀ ಜನರಿಗೆ, ಮುಂಬೈಕರರಿಗೆ ಹೆಮ್ಮೆತರುವಂತಹವಿಷಯ. ಸಾರ್ವಜನಿಕ ಗಣಪತಿ ಉತ್ಸವ, ಲೋಕಮಾನ್ಯ ತಿಳಕರಕಾಲದಿಂದ ಅತ್ಯಂತ ಪ್ರಮುಖ ಸಾರ್ವಜನಿಕ ಉತ್ಸವದ ರೂಪದಲ್ಲಿ ರೂಪಗೊಂಡ ಬಗೆ, ಸರ್ವವಿದಿತವಾಗಿದೆ. ಅಂತಹ ಪ್ರಥಮ ಗಣಪತಿಉತ್ಸವವನ್ನು, ಮುಂಬೈನ ಕೇಶವ್ಜೀ ನಾಯಕ್ ಚಾಲ್ ನಲ್ಲಿ ೧೮೯೩ ರಲ್ಲಿ ಪ್ರಾರಂಭಮಾಡಿದವರು ಸ್ವತಃ ತಿಳಕರೇ.
ಯಾವ ಆಡಾಂಬರವೂ ಇಲ್ಲದ ಸರಳ ಶೈಲಿಯ ಈ ೨.೫ ಮೀಟರ್ ಎತ್ತರದ್ದು. ಪೂಜೆಯನ್ನೂ ವಿಧಿವತ್ತಾಗಿ ನೆರವೇರಿಸುವುದು, ಇಲ್ಲಿಯ ವೈಶಿಷ್ಟ್ಯ. ವಿನೋದ್ ಸತ್ಪುತೆ ಮತ್ತು ಅವರ ವೃಂದದವರು, ಇದೇ ಅಳತೆಯ ಮೂರ್ತಿಯನ್ನೇ ದಶಕಗಳಿಂದ ಆರಾಧಿಸುತ್ತಾಬಂದಿದ್ದಾರೆ. ಲಿಕರ್ ವ್ಯಾಪಾರಿಗಳ ದೇಣಿಗೆಯನ್ನು ಅವರು ಮುಟ್ಟುವುದೂ ಇಲ್ಲ. ಚಲನಚಿತ್ರ ಪ್ರಪಂಚದವರನ್ನೂ ಅವರು ಸ್ವಲ್ಪ ದೂರದಲ್ಲಿಟ್ಟಿದ್ದಾರೆ. ೧೯೩೨ ರಲ್ಲಿ ರೂಪಿಸಿಕೊಂಡ ಕಾನೂನಿನಂತೆ, ಆ ಗಲ್ಲಿ ಯ ಚಾಲುಗಳಲ್ಲಿ ವಾಸಿಸುವ ಹಿತ-ಮಿತವಾದ ಸದಸ್ಯರ ಒಡನಾಟದೊಂದಿಗೆ ಸದ್ದುಗದ್ದಲವಿಲ್ಲದೆ ಗಣಪನ ಆರಾಧನೆ ನಡೆಯುತ್ತದೆ. ಮ್ಯೂಸಿಕ್ ಡೈರೆಕ್ಟರ್ ಆನಂದ್ಜೀ, ಹೇಗೋ ಈ ಸದಸ್ಯರಜೊತೆಗೆ ಸೇರಿಕೊಂಡಿದ್ದಾರೆ. ಅವರೂ ಸಂಘದ ನಿಯಮಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸುತ್ತಿದ್ದಾರೆ.
- Read more about ವರಸಿದ್ಧಿವಿನಾಯಕ ವ್ರತ.
- 1 comment
- Log in or register to post comments