ಭಾರತದ ಚಕ್ರವರ್ತಿ ಪಟ್ಟಕ್ಕೇರಿದ ಒಬ್ಬನೇ ಕನ್ನಡಿಗ ನಮ್ಮ ರಟ್ಟಕೂಟರ ದೊರೆ ಜಗತ್ತುಂಗ ಗೋವಿಂದರಸ

ಭಾರತದ ಚಕ್ರವರ್ತಿ ಪಟ್ಟಕ್ಕೇರಿದ ಒಬ್ಬನೇ ಕನ್ನಡಿಗ ನಮ್ಮ ರಟ್ಟಕೂಟರ ದೊರೆ ಜಗತ್ತುಂಗ ಗೋವಿಂದರಸ

ಈ ಹಿಂದೆ ಮುಳಿಯ ತಿಮ್ಮಪ್ಪಯ್ಯನವರ ನೆಗೞ್ಚುಗಳ(http://sampada.net/blog/12/07/2007/4913) ಬಗ್ಗೆ ಬರೆದಿದ್ದೆ.

ಅವರ 'ಕವಿರಾಜ ಮಾರ್ಗ ವಿವೇಕ ಭಾಗ ೧' ಓದಿದಾಗ ಈ ವಿಶಯ ತಿಳಿಯಿತು.

ಕ್ರಿ..793-813 ರ ವರೆಗೆ ಜಗತ್ತುಂಗನ ಆಳುವಿಕೆ ಇತ್ತು. ಸುಮಾರು ಒಂಬತ್ತನೆಯ ನೂರೇಡಿನಿಂದ ತನ್ನಾಳಿಕೆಯ ಕಡೆಯವರೆಗೆ ಹಿಮಗಿರಿಯಿಂದ ಹಿಡಿದು ಲಂಕಾದವರೆಗೂ ಇರುವ ಭಾರತ ಬುವಿಗೆ ಚಕ್ರವರ್ತಿಯಾಗಿದ್ದನು. ಮೌರ್ಯಕುಳದ ಅಶೋಕನನ್ನು ಚಕ್ರವರ್ತಿ ಎನ್ನುತ್ತಾರೆ. ಅವನು ತೀರ ಹೋರಾಟಗಾರನು ಹೌದು. ಆದರೆ ಅವನ ಒಡೆತನ ದೊರೆತುದ್ದುದು ದರ್ಮ ಹರಡಿಕೆಯಿಂದಲೇ ಹೊರತು ತೋಳುಬಲದಿಂದಲ್ಲ. ನಮ್ಮ ಗೋವಿಂದರಸನ ಒಡೆತನ ತೋಳುಬಲದಿಂದಲೇ ಒದಗಿದುದೆಂಬುದನ್ನು ಶಾಸನಗಳು ಸಾರಿ ಸಾರಿ ಹೇಳುತ್ತವೆ. .ಎಸ್ ಅಳ್ತೇಕರರು(ಮರಾಟಿ ಸಂಶೋಧಕ)ತಮ್ಮ "Rashtra Kutas and their Times" ಎಂಬ ಹೊತ್ತಗೆಯಲ್ಲಿ ಇದನ್ನು ಪುರಾವೆಗಳೊಂದಿಗೆ ತೋರಿಸ್ಕೊಟ್ಟಿದ್ದಾರೆ.

ಹೀಗೆ ಪುರಾವೆಗಳಿಂದ ತೋರಿಸಲ್ಪಟ್ಟ ಹಿಂದೂಸ್ತಾನ್ದ ಚಕ್ರವರ್ತಿತ್ವವು ನಮ್ಮ ಕನ್ನಡ ವೀರ ಜಗತ್ತುಂಗನೊಬ್ಬನಿಗೇ ದಕ್ಕಿತೆಂಬುದನ್ನು ಕನ್ನಡಿಗರು ಕೇಳಿ ಹುರುಪೇರಬೇಡವೆ?

ಈ ಜಗತ್ತುಂಗನ ಮಗನೇ ನಮ್ಮ ನ್ರುಪತುಂಗ. ನ್ರುಪತುಂಗನೇ ಕನ್ನಡಿಗರ ಹೆಮ್ಮೆಯ ನೆಗೞ್ಚು 'ಕವಿರಾಜಮಾರ್ಗ' ನೆಗೞಲು ಮುಕ್ಯ ಓಸುಗರ/ಕಾರಣ.

Rating
No votes yet

Comments