ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾವು ನಗುವ ಹಾಗೆ.

ದೇಶ ಹೇಗಿದೆ ನೋಡಿ
ನಾವು ಕಟ್ಟಿದ ಹಾಗೆ
ಬದುಕು ಸಾಗಿದೆ ಬನ್ನಿ
ನಾವು ನಗುವ ಹಾಗೆ.
 
ಎಲ್ಲರೂ ಮತ ಹಾಕುವುದೇ ಒಂದಾಗಿ ನಗಲಿಕ್ಕಾಗಿ
ಅಳುತ ಕುಳಿತರೆ ಒಬ್ಬರೇ ಯಾರೂ ಜತೆಗಿಲ್ಲ ಬಿಡಿ.
 
ನಗುವಿನಲ್ಲೂ ನೂರಾರು ಬಗೆ
ಮಗುವಿನ ಮುಗ್ದ ನಗೆ
ಮಹಾಮಹಿಮರ ಸ್ನಿಗ್ಧ ನಗೆ
ಭಗವದ್ಗೀತೆಯ ಬೋಧಕ ಶ್ರೀ ಕೃಷ್ಣನ ಮನಮೋಹಕ ನಗೆ

ಕೆಲವು ಹೊಸ ಕನ್ನಡ ಚಿತ್ರಗೀತೆಗಳು

ನನಗೆ ಚಲನಚಿತ್ರ ನೋಡೋ ಗೀಳು ಅಷ್ಟಾಗಿ ಇಲ್ಲದಿದ್ದರೂ, ಹಾಡುಗಳನ್ನು (ಕನ್ನಡ) ಕೇಳುವ ವಿಪರೀತ ಹುಚ್ಚು ಇದೆ. ಒಂದು ಹಾಡಿನಲ್ಲಿ ನಾನು ಗಮನಿಸುವುದು ಟ್ಯೂನ್ ಮಾತ್ರ. ಸಾಹಿತ್ಯಕ್ಕೆ ನಾನು ಯಾವಾಗಲೂ ಒತ್ತು ಕೊಟ್ಟಿಲ್ಲ. ಟ್ಯೂನೇ ಡಬ್ಬಾ ಇದ್ದರೆ, ಸಾಹಿತ್ಯ ಎಷ್ಟೇ ಚೆನ್ನಾಗಿದ್ದು ಏನುಪಯೋಗ?

ನನ್ನ ಬ್ಲಾಗ್ ನಲ್ಲಿ ಚಿತ್ರ ಸೇರ್ಪಡೆಗೆ ಅನುಮತಿ ಕೋರಿಕೆ

ಮಾನ್ಯರೆ,

ನನ್ನ ಬ್ಲಾಗ್ ನಲ್ಲಿ ಚಿತ್ರ ಸೇರ್ಪಡಿಸಲು ದಯವಿಟ್ಟು ಅನುಮತಿ ನೀಡಿ. ನನ್ನ ಜವಾಬ್ಧಾರಿಯುತ ನಡವಳಿಕೆಯ ಬಗ್ಗೆ ನಿಮಗೆ ಭರವಸೆ ನೀಡಿತ್ತಿದ್ದೇನೆ. ವಂದನೆಗಳು

-thewiseant

ನೀರು-ನೀರವತೆ-ನಗ್ನತೆ

ಸಂಜೆ,ಮುಸ್ಸಂಜೆಯ ಸಮಯ. ವಿಪರೀತ ಧಗೆ. ಬಗೆ ಬಗೆಯ ಸಸ್ಯವನ್ನು ರಾಶಿ,ರಾಶಿಯಾಗಿ ತನ್ನೊಡಲಲ್ಲಿ ಇಟ್ಟುಕೊಂಡ ಆ ಬೆಟ್ಟದ ಇಳಿಜಾರಿನಲ್ಲಿ ಇಳಿದಿಳಿದು ಹೋದೆ.ಹಸಿರು ಉಡುಗೆಯುಟ್ಟ ಎದುರಿಗಿನ ಬೆಟ್ಟದ ಕಲ್ಲಂಚಿನಿಂದ ಝರಿ,ಝರಿಯಾಗಿ ಆತುರದಿಂದ ಜರಿ ಜರಿದು ತೊರೆಯಾಗಿ ಹರಿ ಹರಿದು ಹೋಗುತ್ತಿದ್ದ ಚಿಕ್ಕಹಳ್ಳ...ಗೂಡಿಗೆ ಮರಳಿದ್ದ ಹಕ್ಕಿಗಳ ಚಿಲಿಪಿಲಿಯ ಹೊರತಾಗಿ ಅಲ್ಲೆಲ್ಲ ನಿಶ್ಯಬ್ದ..ಕಪ್ಪು ಕಪ್ಪು ಕಲ್ಲು ಹಾಸುಗಳು..ಬಿಸಿಲಿಗೆ ಅಷ್ಟಿಷ್ಟು ಕಾದವುಗಳು.

ಬೀಸುಗಾಲು ಹಾಕುತ್ತ ಹತ್ತಿ,ಗುತ್ತಿ ಹೋದ ನಾನು ಅ೦ತಿಮವಾಗಿ ಒಂದು ಬಂಡೆಯ ಮೇಲೆ ಕುಳಿತೆ.ಸಹಜವಾಗಿ ನೀರಿಗಿಳಿದವು ನನ್ನೆರಡು ಕಾಲುಗಳು..ತಂಪೆಂದರೆ ತಂಪಾದ ನೀರು ಅದು. ಕಾಲುಗಳಿಗೆ ಸವರಿಕೊಂಡು ಹೋಗುತ್ತಿದ್ದ ತಣ್ಣನೆಯ ನೀರು ನನಗೆ ಕಾಲವನ್ನೇ ಮರೆಸಿತ್ತು.
ಬೆಳದಿಂಗಳು ಆವರಿಸಿತ್ತು.ಅಲ್ಲಿ ಯಾರೂ ಇರಲಿಲ್ಲ ನನ್ನೊಬ್ಬನ ಹೊರತಾಗಿ.ಪ್ರಕೃತಿ ಮತ್ತು ಅದು ಎಲ್ಲ ಮನುಷ್ಯರನ್ನು ಸೃಷ್ಟಿಸಿದ್ದ ಹಾಗೆ ಸೃಷ್ಟಿಸಿದ್ದ ನಾನು.

ನೋವಲ್ಲಿ ಹುಟ್ಟುವ ಕವಿತೆ...

Our sweetest songs are those that tell of saddest thoughts...
- Percy Bysshe Shelley

ನೋವಲ್ಲಿ ಹುಟ್ಟುವ ಕವಿತೆಗೆ
ಅದೇನು ಶಕ್ತಿ...
ಅರಳಿ ನಳನಳಿಸುತ್ತದೆ...
ಜಗವ ಘಮಿಸುತ್ತದೆ...
ನೋವು ಹೀರುತ್ತದೆ...
ಸ೦ಗಾತಿಯಾಗುತ್ತದೆ...
ಸಾ೦ತ್ವನವಾಗುತ್ತದೆ...
ಮನವ ಬೆಳಗುತ್ತದೆ...
ಅಮೃತವಾಗುತ್ತದೆ...
ಅಮರವಾಗುತ್ತದೆ...

( ಇದು ಕವಿತೆಯಲ್ಲ :-) )

ಹಿತನುಡಿ

ಜಗತ್ತು ನಮ್ಮ ಪೂರ್ವಜರು ನಮಗೆ ಕೊಟ್ಟ ಬಳುವಳಿಯಲ್ಲ... ಬದಲಾಗಿ, ನಮ್ಮ ಮಕ್ಕಳಿಂದ ನಾವು ಕಸಿದುಕೊಳ್ಳುತ್ತಿರುವ ಸೊತ್ತು...

ಧರ್ಮಾಂಧತೆಯ ಬಗ್ಗೆ

ಈ ಲೇಖನವನ್ನು ಒಂದು ವಾರ ಮುಂಚೆಯೇ ಬರೆದು ನನ್ನ ಬ್ಲಾಗ್ಸ್ಪಾಟ್ ಬ್ಲಾಗಿನಲ್ಲಿ ಹಾಕಿಕೊಂಡಿದ್ದೆ. ಆ ಹೊತ್ತಿನಲ್ಲಿ ಸಂಪದ ವಾದವಿವಾದಗಳಿಂದ ತುಂಬಿ ಹೋಗಿತ್ತು. ಅದಕ್ಕೆ ಮತ್ತೊಂದು ವಾದವೇಕೆ ಅಂತ ಸುಮ್ಮನಿದ್ದೆ. ಆದರೆ, ನಿನ್ನೆ ವಿಜಯಕರ್ನಾಟಕದಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದ ಮತ್ತೊಂದು ಲೇಖನ (ಮಾಳವಿಕ ಲಿಖಿತ) ಪ್ರಕಟಗೊಂಡದ್ದು ಓದಿ ಕಿರಿಕಿರಿಯಾಯಿತು. ಅದಕ್ಕೆ ಸಂಪದದಲ್ಲಿ ಈ ವಿಚಾರವಾಗಿ ಚರ್ಚ ಸಧ್ಯಕ್ಕೆ ನಡೆಯದೇ ಇರುವುದನ್ನು ಕಂಡು ಇಲ್ಲಿ ಹಾಕುತ್ತಿದ್ದೇನೆ.

ಇತ್ತೀಚೆಗೆ ವಿಜಯಕರ್ನಾಟಕದಲ್ಲಿ, ಹಿಂದೆ ಮುಸ್ಲಿಮರು ಮಾಡಿದ್ದ ಕೃತ್ಯಗಳ ಚರ್ಚೆ, ಆ ಕೋಮಿನ ವಿಚಾರಧಾರೆಯ ಬಗ್ಗೆಯ ಮೌಲಿಕ ನಿರ್ಧಾರಗಳನ್ನು ಮೊದಲೇ ತೆಗೆದುಕೊಂಡು ಬರೆದಿರುವಂತಹ ಹಲವು ಲೇಖನಗಳು ಮೇಲಿಂದ ಮೇಲೆ ಬರುತ್ತಿರುವಂತೆ ತೋರುತ್ತದೆ, ಅಥವ ಅವುಗಳು ಬಂದಾಗ ಜನರು ಇಷ್ಟಪಟ್ಟು ಓದುವುದೇ ಕಾರಣವೇನೋ, ಹಲವು ಜನರ ಬಾಯಿಯಲ್ಲಿ ಈ‌ ವಿಷಯ ಕೇಳಬರುತ್ತಲೇ ಇದೆ. ದು:ಖಕರ ಸಂಗತಿಯೆಂದರೆ, ಹತ್ತಿರವಾಗಿರುವ ಹಲವು ಜನರು ಈ‌ ವಾದಕ್ಕೆ ಮಾರು ಹೋಗಿ, ನೈಸ್ ವನ್ ಅಂತಾನೋ, ಸರಿಯಾಗಿಯೇ ಹೇಳ್ತಾನೆ ಅಂತಾನೋ ಹೊಗಳಿ ಗರ್ವದಿಂದ ತಮ್ಮ ನಿಲುವನ್ನೇ ಬದಲಿಸಿಕೊಳ್ಳುತ್ತಿರುವುದು, ಅದಕ್ಕಿಂತಲೂ ಹೆಚ್ಚಾಗಿ ಇತರರಿಗೂ‌ ಬಲವಂತವಾಗಿ ಈ‌ ಲೇಖನಗಳನ್ನು ಉಣಿಸುತ್ತಿರುವುದು.

ಗೂಗಲ್ ನವರಿಂದ ಹೊಸ ತಂತ್ರಜ್ಞಾನ!!

ಗೂಗಲ್ ನವರು ಏನಾದರೊಂದು ಹೊಸತು ಮಾಡುತ್ತಲೇ ಇರುತ್ತಾರೆ. ಈ ಬಾರಿಯಂತೂ ಬೇರೆ ಯಾರೂ ಯೋಚನೆ ಮಾಡಲಾಗದಂತಹ ತಂತ್ರಜ್ಞಾನ ಹೊರತಂದಿದ್ದಾರೆ. ಬ್ರಾಡ್‍ಬ್ಯಾಂಡ್ ಅತ್ಯಂತ ತುಟ್ಟಿಯಾಗಿರುವ ಈ ಕಾಲದಲ್ಲಿ ಬಿಟ್ಟಿ internet ಕೊಡುವುದು ಆಶ್ಚರ್ಯ. ಅದೂ ಎಲ್ಲರ (ಪಾಶ್ಚಾತ್ಯ) ಮನೆಗಳಲ್ಲಿ ಇರುವ ಸಲಕರಣೆ ಉಪಯೋಗಿಸಿ!!