ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನನ್ನ ಮೊದಲ ಕವಿತೆ..............

'' ಆ ಬಾನ ಚಂದಿರನ ಕುರಿತು ನನಗೊಂದು ಕವಿತೆ ಬರೆಯುವ ಆಸೆ, ಅದರೇನು ಮಾಡಲಿ ಬರೆಯಲು ಕುಳಿತಾಗಲೆಲ್ಲಾ ಅಮವಾಸ್ಯೆ.......!!!!!"

 

ನಾಗರರಾಜ್ ಎಮ್ ಎಮ್

MY KANNADA BLOG : http://mmnagaraj.wordpress.com

ಕನ್ನಡ ಪದಗೊಳ್

ನನಗೆ ಇಶ್ಟವಾದ ಹಾಡು 

 ಕನ್ನಡ ಪದಗೊಳ್ 
ಬರೆದವರು:   ಜಿ.ಪಿ. ರಾಜರತ್ನಂ

 

ಯೆಂಡ ಯೆಡ್ತಿ ಕನ್ನಡ ಪದಗೊಳ್
ಅಂದ್ರೆ ರತ್ನಂಗ್ ಪ್ರಾಣ
ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ
ತಕ್ಕೊ! ಪದಗೊಳ್ ಬಾಣ!

ಬಗವಂತ್ ಏನ್ರ ಬೂಮಿಗ್ ಇಳದು
ನನ್ತಾಕ್ ಬಂದಾಂತ್ ಆನ್ನು;
ಪರ್ ಗಿರೀಕ್ಸೆ ಮಾಡ್ತಾನ್ ಔನು-
ಬಕ್ತನ್ ಮೇಲ್ ಔನ್ ಕಣ್ಣು !

ಭರ್ತೃಹರಿಯ ಸುಭಾಷಿತತ್ರಿಶತಿ - ಒಂದು ಅವಲೋಕನ

ಭಾರತೀಯ ಸಾಹಿತ್ಯದಲ್ಲಿ ಸಂಸ್ಕೃತ ಸಾಹಿತ್ಯ ಅತಿ ಪುರಾತನವಾದದ್ದು. ಅತಿ ಮುಂಚೆಯಿಂದಲೇ ಸಂಸ್ಕೃತ ಕಾವ್ಯದಲ್ಲಿ ಸುಭಾಷಿತ ಎಂಬ ಪ್ರಕಾರ ಬೆಳೆದು ಬಂದಿದೆ. ರಾಮಾಯಣ, ಮಹಾಭಾರತಗಳಲ್ಲೂ, ನಂತರ ಬಂದ ಭಾಸ-ಕಾಳಿದಾಸಾದಿಗಳ ನಾಟಕ ಹಾಗೂ ಮಹಾಕಾವ್ಯಗಳಲ್ಲಿಯೂ ಸುಭಾಷಿತಗಳ ಗುಂಪಿಗೆ ಸೇರಬಹುದಾದಂತಹ ಅನೇಕ ಶ್ಲೋಕಗಳು ಕಂಡು ಬರುತ್ತವೆ. ಸುಭಾಷಿತಕ್ಕೆ ಅಕ್ಷರಶಃ ಒಳ್ಳೆಯ ನುಡಿ ಎಂದು ಅರ್ಥ. ಎಷ್ಟೋ ಬಾರಿ ಒಗಟುಗಳು, ಚಮತ್ಕಾರೀ ಪದ್ಯಗಳು ಮುಂತಾದುವುಗಳನ್ನೂ ಸುಭಾಷಿತಗಳ ಗುಂಪಿಗೆ ಸೇರಿಸುವುದು ಉಂಟು. ಎಷ್ಟೋ ಸುಭಾಷಿತಗಳನ್ನು ಬರೆದವರು ಯಾರು ಎಂಬುದು ತಿಳಿಯದಿದ್ದರೂ, ಅವು ಶತಮಾನಗಳ ನಂತರವೂ ಬಳಕೆಯಲ್ಲಿರುವುದು ಗಮನಿಸಬೇಕಾದ ಸಂಗತಿ. ಅವುಗಳ ವಸ್ತು ಜಳ್ಳಾಗಿಲ್ಲದೇ, ಗಟ್ಟಿಯಾಗಿರುವುದು ಇದಕ್ಕೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.

ಐಪಿ ಟೆಲಿಪೋನಿ - ಹೊಸ ಅಲೆ

ವಿಓಐಪಿ (VOIP) ಅನ್ನುವ ಟೆಕ್ನಾಲಜಿ ಕೊಡುವ ಸವಲತ್ತುಗಳು ಕಂಪನಿಗಳು ಪಿಬಿಎಕ್ಸಗಳನ್ನು ಬಿಟ್ಟು ಐಪಿ ಟೆಲಿಫೋನಿಗೆ ಬರುತ್ತಿದ್ದಾರೆ.

ಪಿಬಿಎಕ್ಸಗಳ(ಸದ್ಯಕ್ಕೆ ಇರುವಂತ ಟೆಕ್ನಾಲಜಿಗಳ ) ತೊಂದರೆಗಳು:

"ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ...

ಸುಮಾರು ಒಂದೂವರೆ ವರ್ಷದ ಹಿಂದೆ ಸರಿಯಾಗಿ 111 ಪುಟಗಳ ಆ ಪುಸ್ತಕವನ್ನು ಕೈಯಲ್ಲಿ ಹಿಡಿದವನು ಬಹುಶಃ ನಾಲ್ಕೈದು ಗಂಟೆಗಳಲ್ಲಿ ಓದಿ ಮುಗಿಸಿರಬೇಕು. ಆ ಪುಟ್ಟ ಕಾದಂಬರಿಯ ಹೆಸರು "ವಲಸೆ ಹಕ್ಕಿಯ ಹಾಡು." 1995 ರಲ್ಲಿ ಮುದ್ರಣಗೊಂಡದ್ದದು. "ಸ್ವಾತಂತ್ರ್ಯ ಹೋರಾಟಗಾರರಲ್ಲಿಯೆ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ್ದ, ಎಂದೂ ಉತ್ಪ್ರೇಕ್ಷೆ ಮಾಡದೆ ಚಳವಳಿಯನ್ನು ನಿರ್ಲಿಪ್ತವಾಗಿ ನಿರೂಪಿಸುವ, ಹುಟ್ಟು ಹೋರಾಟಗಾರನಲ್ಲದ, ಚಳವಳಿ ಕಾಲದಲ್ಲಿ ದೇಶದ ಉದ್ದಗಲಕ್ಕೆ ಓಡಾಡಿದ ಪ್ರಯಾಣಿಕ"ನನ್ನು ಕಥಾನಾಯಕನಾಗಿ ಹೊಂದಿರುವ ಕಥೆ ಅದು. ಸ್ವಾತಂತ್ರ್ಯೋತ್ತರ ಭಾರತದ ಗ್ರಾಮೀಣ ರಾಜಕೀಯವನ್ನು, ಗ್ರಾಮೀಣ ಬದುಕನ್ನು, ಆ ಪುಟ್ಟ ಕಾದಂಬರಿಯಲ್ಲಿ ವಿಶ್ಲೇಷಿಸಿರುವ, ನಿರೂಪಿಸಿರುವ ರೀತಿ ಅದ್ಭುತವಾದದ್ದು. ಅದನ್ನು ಓದಿ ಮುಗಿಸಿದ ಮೇಲೆ ಆ ಲೇಖಕನೊಡನೆ ಆ ಕೂಡಲೆ ಮಾತನಾಡಬೇಕು ಎಂದು ಬಲವಾಗಿ ಅನ್ನಿಸಿಬಿಟ್ಟಿತು. ಅದಕ್ಕೆ ಮುಖ್ಯ ಕಾರಣ, "ಅರೆ, ನಾನು 'ನ್ಯಾಗಟಿ ಸಿಟಿ ಚಂದರ್' ಎಂದುಕೊಂಡಿದ್ದ ಈ ಲೇಖಕ ನಿಜವಾಗಲೂ ನಾಗತಿಹಳ್ಳಿಯಾತ," ಎನ್ನಿಸಿದ್ದು. ಹೌದು, ಆ "ವಲಸೆ ಹಕ್ಕಿಯ ಹಾಡು"ವಿನ ಕರ್ತೃ, ನಾಗತಿಹಳ್ಳಿ ಚಂದ್ರಶೇಖರ್.

ಆದರೆ, ಅಂದು ನಾಗತಿಹಳ್ಳಿಯವರ ಜೊತೆ ಮಾತನಾಡಲಾಗಲಿಲ್ಲ. ಬಹುಶಃ ಅದಾದ ಒಂದೆರಡು ತಿಂಗಳಿಗೆ ಅವರ "ಅಮೃತಧಾರೆ" ಸಿನಿಮಾ ಬಿಡುಗಡೆಯಾಯಿತು. ಅದು ಸಿಲಿಕಾನ್ ಕಣಿವೆಯ ಸ್ಯಾನ್ ಹೋಸೆಯಲ್ಲಿ ಬಿಡುಗಡೆಯಾಗುವಷ್ಟರಲ್ಲಿ ಕನ್ನಡದ ದಿನಪತ್ರಿಕೆಗಳಲ್ಲಿ ಅದರ ವಿಮರ್ಶೆಗಳು ಬಂದುಬಿಟ್ಟಿದ್ದವು. ಬಹುತೇಕ ವಿಮರ್ಶೆಗಳು ಅದನ್ನು ಅತ್ಯದ್ಭುತ ಚಿತ್ರ, ಮಹೋನ್ನತ ಚಿತ್ರ ಎಂದೆಲ್ಲ ಬಣ್ಣಿಸಿದ್ದ ನೆನಪು. ಅಷ್ಟೊತ್ತಿಗೆ ನನಗೆ ಕನ್ನಡ ಚಿತ್ರವಿಮರ್ಶೆಗಳ "ತಲೆಹಿಡುಕತನ"ದ ಪರಿಚಯ ಆಗಿತ್ತು. ದಟ್ಟದರಿದ್ರ ಸಿನಿಮಾದ ಪುಟಗೋಸಿ ಡೈಲಾಗ್‌ಗಳಿಗೆಲ್ಲ ಆಧ್ಯಾತ್ಮ, ನೈತಿಕತೆ, ಆದರ್ಶ ಮುಂತಾದ ಸಾರ್ವಕಾಲಿಕ ಗುಣಗಳನ್ನು ಆರೋಪಿಸಿ, ರಂಗುರಂಗಾಗಿ ಬರೆದು "ಪೇಯ್ಡ್" ಜಾಹಿರಾತನ್ನು ಚಿತ್ರವಿಮರ್ಶೆಯ ಹೆಸರಿನಲ್ಲಿ ಪ್ರಕಟಿಸುವುದನ್ನು ನೋಡಿದ್ದ ನನಗೆ "ಅಮೃತಧಾರೆ"ಯ ಬಗೆಗೂ ಸ್ವಲ್ಪ ಸಂದೇಹವಿತ್ತು. ಆದರೆ, ಯಾವಾಗ ನಾಗತಿಹಳ್ಳಿಯವರು, "ಈ ಚಿತ್ರಕ್ಕಾಗಿ ನನ್ನ ಪ್ರತಿಭೆಯನ್ನೆಲ್ಲ ಬಸಿದಿದ್ದೇನೆ," ಎನ್ನುವಂತಹ ಮಾತನ್ನು ಆಡಿದರೊ, ಈ ಚಿತ್ರವನ್ನು ನೋಡಲು ನಿಜಕ್ಕೂ ಎದುರು ನೋಡುತ್ತಿದ್ದೆ.

ತಾರಾ ಮತ್ತೆ ಕಿರುತೆರೆಗೆ ಯಾಕೆ ಬಂದಿರಬಹುದು?

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿ ತಾರಾ ತನ್ನ ನೈಜ ಭಾವಾನಾತ್ಮಕ ನಟನಾಕೌಶಲ್ಯದಿಂದ ಹೆಸರುವಾಸಿ. ಹಸೀನಾ, ಸೈನೈಡ್, ಕಾನೂರು ಹೆಗ್ಗಡಿತಿ ಮುಂತಾದ ಸಿನಿಮಾಗಳಲ್ಲಿ ಅವರು ಎಂಥಹ ನಟಿಯೆಂದು ನಮಗೆ ತೋರಿಸಿಕೊಟ್ಟಿದ್ದಾರೆ. ಸೈನೈಡ್ ನ ಆ ಪಾತ್ರವನ್ನು ಅಷ್ಟು ಚೆನ್ನಾಗಿ ಯಾರೂ ಮಾಡಲಾರರು. ಇಷ್ಟೇಲ್ಲಾ ಇದ್ರೂ ತಾರಾ ಯಾಕೆ ಮತ್ತೆ ಕಿರುತೆರೆಗೆ ಪ್ರವೇಶಿಸಿದ್ದಾರೆ.

ಹೊಗೆನಕಲ್ ಜಲಪಾತ

ಹೊಗೆನಕಲ್ ದಕ್ಷಿಣ ಭಾರತದ ನಯಾಗರ ಜಲಪಾತವೆಂದೇ ಪ್ರಸಿದ್ಧಿ.  ಕಾವೇರಿ ನದಿಯ ಅಗಲ-ವಿಸ್ತಾರಗಳ ವೈವಿಧ್ಯತೆ ನೋಡಿ ಕಣ್ ತಣಿಸಿಕೊಳ್ಳಬೇಕೆಂದರೆ, ಮೈಸೂರಿಗೆ ಸಮೀಪವಿರುವ ಶಿವನ ಸಮುದ್ರ ಮತ್ತು ಹೊಗೆನಕಲ್ ಜಲಪಾತದ ರುದ್ರ ರಮಣೀಯ ದೃಶ್ಯಗಳನೋಟಗಳು. [http://youthtimes.blogspot.com/2007/08/blog-post_30.html| ಇನ್ನಷ್ಟು ಚಿತ್ರ ಮತ್ತು ಲೇಖನ]

ದೀಪ

ನನ್ನ ಹತ್ತು ಹಲವು ಆಸಕ್ತಿಗಳಲ್ಲಿ ಛಾಯಾಗ್ರಹಣವೂ ಒಂದು. ಮೊನ್ನೆ ನನ್ನ ಗೆಳೆಯನ ಮಗನ ಹುಟ್ಟುಹಬ್ಬಕ್ಕೆ ಛಾಯಾಗ್ರಾಹಕನಾಗಿ ಹೋಗುವ ಅವಕಾಶ ಬಂತು. ಇನ್ನೇನು ತಡ? ನನ್ನ ಕ್ಯಾಮರಾ ಜೋಳಿಗೆಯನ್ನು ಹೆಗಲಲ್ಲಿ ಹಾಕಿ ಹೊರಟೆ.