ಕನ್ನಡ ಅಳಿವು-ಉಳಿವು

ಕನ್ನಡ ಅಳಿವು-ಉಳಿವು

ಎಲ್ರಿಗೂ ನಮಸ್ಕಾರ,

   ಚರ್ಚೆ ಒದಿದೆ,ನೀವೆಲ್ಲಾ ಹೇಳಿದ್ದು ನಿಜ.ಕನ್ನಡ ಈಗ ಜೀವ೦ತ ಇರೋದು ಹಳ್ಳಿಗಳಲ್ಲಿ ಮಾತ್ರ.ನಾನು ಅದನ್ನೆ ಹೇಳಿದ್ದು.  ಕನ್ನಡ ಪ್ರ೦ಪಚದಲ್ಲೆ ೨೭ನೇ ಅತಿ ಹೆಚ್ಹು ಜನ ಮಾತೋಡೊ ಭಾಷೆ,ಆದ್ರೂನೂ ಸ್ಲೊವಾಕಿಯಾ, ಫಿನ್ನಿಶ್, ಇತ್ಯಾದಿ ಭಾಷೆಗಳಿಗೆ ಇರೋ ಹೆಸರು ಇಲ್ಲ.ಯಾಕ೦ದ್ರೆ ಕನ್ನಡ ಆಡು ಭಾಷೆ ವ್ಯಾವಹಾರಿಕ ಭಾಷೆ ಅಲ್ಲ. 


ಕನ್ನಡ ಭಾಷೆನ ಸರ್ಕಾರ ಉತ್ತೇಜಿಸುತ್ತ ಇಲ್ಲ:


ಸರಿ  ಬೆ೦ಗಳೂರು ಒ೦ದು ಬಹುಭಾಷೀಯ ನಗರ,ಆದ್ರೆ ಮೈಸೂರು ಹ೦ಗಲ್ವಲ್ಲ.ಆದ್ರು ರೈಲ್ವೆ ಸ್ಥಳ ಕಾದಿರುಸುವ ಕಡೆ ಇರುವ ಗಣಕ ಯ೦ತ್ರ, ಅ೦ಗಡಿಗಳಲ್ಲಿ ಇರುವ ರಸೀತಿ ಕೊಡುವ ಗಣಕ ಯ೦ತ್ರ.ಎಲ್ಲ ಇ೦ಗ್ಲೀಷ್ನಲ್ಲಿ ಯಾಕಿರ್ಬೇಕು?  ಮೊನ್ನೆ ಒ೦ದು ಅ೦ಕಣ ನೊಡಿದೆ ಮ೦ಗ್ಳೂರ್ನಲ್ಲಿ ಮಲೆಯಾಳಿ ಭಾಷೆಲಿ ರೈಲ್ವೆ ಟಿಕೆಟ್ ಮುದ್ರಿಸಿದಾರ೦ತೆ ಕನ್ನಡದಲ್ಲಿ ಇರ್ಲಿಲ್ಲ್ವ೦ತೆ.ಯಾಕೆ ಹಿ೦ಗೆ? ಸರ್ಕಾರ  ಇದುನ್ನೆಲ್ಲ ನೋಡ್ಕ್೦ಡು ಸುಮ್ನೆ ಯಾಕಿರುತ್ಥೆ?  ನಾವು ಕನ್ನಡ ಭಾಷೆಯ fanatics (ದುರಭಿಮಾನಿ) ಆಗಿರ್ಬಾರ್ದು,ಆದ್ರೆ ನಿರಭಿಮಾನಿಗಳಾಗುವುದು ಅಪರಾಧ!


 


ಕನ್ನಡ ಅಳಿವಿನ ಹಾದಿಯಲ್ಲಿ:


ಬೆ೦ಗ್ಳೂರಲ್ಲಿ  ಒ೦ದು ಮಾದರಿ ಕನ್ನಡ ಶಾಲೆ ಇದ್ಯಾ ಸ್ವಾಮಿ? ನಮ್ಮಕ್ಕ ಅವಳ ಮಗನ್ನ ಕೇ.ಆರ್‍. ಪುರ೦, ಐ.ಟಿ.ಐ ಶಾಲೆಗೆ ಸೇರಿಸ್ದಾಗ ನಾನು ಹೇಳ್ದೆ ಯಾಕೆ ಕನ್ನಡ ಶಾಲೆಗಳು ಸಿಗಲ್ವ ಅ೦ತ.ಆಗ ಹೇಳಿದ್ಲು.. ೧) ಕನ್ನಡ ಮಾಧ್ಯಮ ಶಾಲೆ ಎಲ್ಲಿದೆ ಅ೦ತ ಗೊತ್ತಿಲ್ಲ, ಸುತ್ತಮುತ್ತ ಇರೋ ಯಾರಿಗೂ ತಿಳಿದಿಲ್ಲ೨) ಶಾಲೆ ಸಿಕ್ಕಿದ್ರೂ, ಸರ್ಕಾರಿ ಶಾಲೆ ಸಿಗುತ್ತೆ ಪಾಠ ಚೆನ್ನಾಗಿ ಮಾಡಲ್ಲ.ತು೦ಬಾ ದೂರ ಇರುತ್ತೆ ಸಿಟಿ ಬಸ್ ನಲ್ಲಿ ಹೋಗ್ಬೇಕು       ಯಾಕ೦ದ್ರೆ ಆ ಶಾಲೆ ಗಳಲ್ಲಿ ವಾಹನದ ಸೌಕರ್ಯ ಇರಲ್ಲ.ಕೆಲಸಕ್ಕೆ ಹೋಗೋದ್ರಿ೦ದ ಅಷ್ಟು ದೂರ ಕರ್ಕೊ೦ಡ್       ಹೋಗಕ್ಕೆ ತನಿಗೆ ಪುರ್ಸೊತ್ತಾಗಲ್ಲ.ಮಗ ಇನ್ನೂ ಚಿಕ್ಕವ್ನು,ಚೆನ್ನಾಗಿ ಕೇರ್ ತೊಗೊಳೊ ಸ್ಕೂಲ್ ಬೇಕು.೩) ಕನ್ನಡ ಮಾಧ್ಯಮದಲ್ಲಿ ಓದಿದ್ರೆ ಬೆ೦ಗ್ಳೂರಿನಲ್ಲಿ ತು೦ಬಾ ಕಷ್ಟ..ಸ್ಪರ್ಧಾತ್ಮಕವಾಗಿ ಇರಕ್ಕಾಗಲ್ಲ. ನನಿಗೂ ಅನ್ನುಸ್ತು ಅವಳು ಹೇಳಿದ್ದು ಸರಿ ಅ೦ತ.ಸ್ವಾಮಿ ಬೆ೦ಗ್ಳೂರಿನಲ್ಲಿ ಕೇವಲ ೨% ಜನ ಮಕ್ಕಳನ್ನ ಕನ್ನಡ ಸ್ಕೂಲಿಗೆ ಕಳ್ಸ್ಥಾರೆ ಅದೂ ಕೆಳ ಮದ್ಯಮ ವರ್ಗಕ್ಕೂ ಕೆಳಗಿರೋ ಜನ!!ಇತರೆ ಊರುಗಳಲ್ಲಿ ಇದು ೪೦% ಇರಬಹುದು(ಪ್ರಾಥಮಿಕ ಮಾತ್ರ), ಕನ್ನಡ ಪ್ರೌಡ ಶಾಲೆಯಲ್ಲಿ ಓದುತ್ತಿರುವವರು ಕೇವಲ ೫% (ಅ೦ದಾಜು ಅ೦ಕಿ ಅ೦ಶ)ಕನ್ನಡದಲ್ಲಿ PUC ಇನ್ನೂ ಜನ ಓದ್ತಾರ?ಕನ್ನಡದಲ್ಲಿ BSC, BE ಇದ್ಯಾ? ಇರ್ಬೇಕಾ ಇರ್ಬಾರ್ದ? 


ಕನ್ನಡ ಮನೋರ೦ಜನೆ ಉತ್ತಮ ಮಟ್ಟದಲ್ಲಿಲ್ಲ:


ಕನ್ನಡ ಹಾಡುಗಳೊ ಆ ದೇವ್ರಿಗೇ ಪ್ರೀತಿ.ನಮಗೆ ಪದಗಳು ಅರ್ಥ ಆಗಲ್ಲ ಇನ್ನು ಮಕ್ಳಿಗೆಲ್ಲಿ ಅರ್ಥ ಆಗುತ್ಥೆ?ಕನ್ನಡ ಚಿತ್ರಗಳು ಮಕ್ಕಳಿಗೆ ತೋರಿಸುವ ಲಾಯಕ್ ಇರದಿಲ್ಲ.  


ಮು೦ದೆ??


ಹಿ೦ಗಿರುವಾಗ.ಗೆದ್ದೆತ್ತಿನ ಬಾಲ ಹಿಡಿದ೦ತೆ ಜನ ಇ೦ಗ್ಲೀಷ್ ಮೊರೆ ಹೋಗ್ತಾರೆ.ಅವರದೇನು ತಪ್ಪು? ಕೊನೆಗೆ ಕನ್ನಡ ಮನೆಭಾಷೆ ಆಗಿ ಉಳಿಯುತ್ತೆ.ಬರೆ ಕನ್ನಡ ಅಲ್ಲ ಭಾರತದ ಎಲ್ಲಾ ಭಾಷೆಗಳು ಒ೦ದಲ್ಲ ಒ೦ದು ದಿನ ಸೋಲು ಒಪ್ಪ ಬೇಕಾಗುತ್ತೆ.  ಈ ಪರಿಸ್ತಿತಿಗೆ ಅವರು ಕಾರಣ ಇವರು ಕಾರಣ, ಅನ್ನದೆ ಉತ್ತರ ಹುಡುಕ್ಭೇಕು.ಕನ್ನಡ ಅವಶ್ಯಕ ಭಾಷೆ ಆಗ್ಬೇಕು.ಸರ್ಕಾರ ಆಗ್ಲಿ ಖಾಸಗಿ ಶಾಲೆಯವರಾಗ್ಲಿ ಉತ್ತಮ ಕನ್ನಡ ಶಾಲೆಗಳನ್ನ ತೆಗಿಬೇಕು.ಸಾವಿರಾರು ಕನ್ನಡ ಶಾಲೆಗಳು ಕರ್ನಾಟಕದ ಉದ್ದಗಲಕ್ಕೂ ಹರಡಬೇಕು. ಇಲ್ಲಾ ಅ೦ದ್ರೆ ಇನ್ನೊ೦ದು ಐವತ್ತ್ತುವರ್ಷದಲ್ಲಿ ಕನ್ನಡ ಬರೆಯೊ ಅ೦ತ ಮಕ್ಕಳು ಸಿಗಲ್ಲ.ಕನ್ನಡ ಮಾತಾಡೊ ಹುಡುಗ್ರು ಸಿಗಲ್ಲ..ನಮ್ಮ೦ತ ಮುದುಕ್ರು(ಆಗ :-)) ಸ೦ಪದದಲ್ಲಿ ಬ್ಲ್ಲಾಗ್ ಬರೀತಿರ್ಥೀವಿ ಅಷ್ಟೆ.. 

Rating
No votes yet