ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜೀವದ ಜೀವವಾದವಳಿಗೆ

ನನ್ನ ಬದುಕಿಗೆ

ಹಸಿರಾದವಳು ನೀನು

ನನ್ನ ಉಸಿರಿಗೆ

ಮಲ್ಲೆ ಮಲ್ಲಿಗೆ ಪರಿಮಳ

ಸುರಿದವಳು ನೀನು

ನನ್ನ ಕನಸಿಗೆ ಬಣ್ಣ

ಬಳಿದವಳು ನೀನು

ನನ್ನ ಜಡನಡಿಗೆಗೆ

ಚೈತನ್ಯ ತಂದವಳು

ನೀನು

ನನ್ನ ಜೀವದ ಜೀವಕ್ಕೀಗ

ವಿರಸದ ವಿಷವ ಸುರಿದು

ಹೋಗುವೆಯಾ.....?

ನೀನು ನನ್ನ ಮರೆತು

ಬದುಕಲಿಚ್ಚಿಸುವೆಯಾ...?

-ಕೃಷ್ಣಮೊರ್ತಿ ಅಜ್ಜಹಳ್ಳಿ

ಏನು ಫಲ ಮತ್ತು ಜೀವನ ಎರಡು ಕವನಗಳು

ಏನು ಫಲ 

ಹೆತ್ತ ತಾಯ್ತಂದೆ ಗಳ ಚಿತ್ತವ ನೋಯಿಸಿ

ನಿತ್ಯ ಧಾನವ ಮಾಡುವ ಮಕ್ಕಳಿದ್ದೇನು ಫಲ

ಸ್ನಾನ ಪಾನಕೆ ಒದಗುವ ಜಲ ತಾ

ಕಾನನದಲ್ಲಿದ್ದರೇನು ಫಲ

ಗುಟ್ಟು -ಕ್ಷಮಾ  ಗುಣ ವಿಲ್ಲದ ಹೆಣ್ಣಲ್ಲಿ

ಸೌಂದರ್ಯ-ಸಿರಿ ತಾನಿದ್ದೇನು ಫಲ

ಸತ್ಯ,ಶ್ರದ್ದೆ ಇಲ್ಲದ ಶರಣನು

ಸಾವಿರ ಜಪವನು ಮಾಡಿದರೇನು ಫಲ

ಮುಕ್ತಿ ಮಾರ್ಗವ ಕೊಡುವಾ ಶ್ರೀಹರಿಯ

ರಾಮಾಯಣದೊಳಗೆ ಮತ್ತೊಮ್ಮೆ ಹೊಕ್ಕಾಗ...

ನೀನಾಸ೦ ನಾಟಕ ಎ೦ದರೆ ಮೊದಲಿನಿ೦ದಲೂ ಅದೇನೋ ಹುಚ್ಚು, ಆಕರ್ಷಣೆ, ಅಭಿಮಾನ... ಒ೦ದು ಕಾಲದಲ್ಲಿ ಮ೦ಗಳೂರಿನಲ್ಲಿ ಪ್ರಸಿದ್ಢವಾಗಿದ್ದ ತುಳು ನಾಟಕಗಳ ಕ್ಯಾಸೆಟ್ ಗಳು ಕೇಳಿ ಕೇಳಿ ನಾಟಕ ಎ೦ದರೆ ಇಷ್ಟೇನಾ ಅ೦ದುಕೊ೦ಡು ಬಿಟ್ಟು ಬಿಟ್ಟಿದ್ದ ನನಗೆ, ವರುಷಕ್ಕೊಮ್ಮೆ ಬರುತ್ತಿದ್ದ ನೀನಾಸ೦ ತಿರುಗಾಟ ಹೊಸ ಲೋಕ ತೆರೆದು ಕೊಟ್ಟಿತ್ತು...

ನಾವು ಪೌರ್ವಾತ್ಯರು

ಉಡುಪಿಯ ಅಷ್ಟಮಠದ ಸ್ವಾಮೀಜಿಯೊಬ್ಬರು ಅಮೆರಿಕದ ಮಧ್ವಸಂಘದವರ ಆಹ್ವಾನದ ಮೇರೆಗೆ ಅಲ್ಲಿಗೆ ಹೋದಾಗ ಅವರು ಕಂಡ ಹಿಂದೂಅಮೆರಿಕ ಹೇಗಿತ್ತೆಂಬುದನ್ನು “ತರಂಗ” ವಾರಪತ್ರಿಕೆಯ ಸಂದರ್ಶನವೊಂದರಲ್ಲಿ ಸಾದ್ಯಾಂತ ವಿವರಿಸಿದ್ದಾರೆ. 14 ಜೂನ್,1998 ರ ಈ ಹಳೆಯ ಸಂಚಿಕೆ ಅದ್ಹೇಗೋ ನನ್ನ ಮನೆಯಲ್ಲಿ ಇತ್ತೀಚೆಗೆ ನನ್ನ ಗಮನ ಸೆಳೆಯಿತು..

A quick brown fox... -ಕನ್ನಡದಲ್ಲಿ

ಗಣಕ ಬಳಸುವವರೆಲ್ಲ ಒಮ್ಮೆಯಾದರೂ ಗಮನಿಸಿರಬಹುದಾದ ಒಂದು ವಾಕ್ಯವಿದೆ. ಅದು A quick brown fox jumps over the lazy dog. ಇದರಲ್ಲಿ ಇಂಗ್ಲಿಷ್ ಭಾಷೆಯ ಎಲ್ಲ ಅಕ್ಷರಗಳಿವೆ. ಅಂತಹುದೇ ವಾಕ್ಯ ಕನ್ನಡಕ್ಕೆ ಬೇಡವೇ? ಇಗೋ ಈಗ ಅದೂ ಸಿದ್ಧವಾಗಿದೆ. ಹೆಚ್ಚಿನೆ ಮಾಹಿತಿಗೆ [http://vishvakannada.com/node/359|ಇಲ್ಲಿ ಕ್ಲಿಕ್ಕಿಸಿ].

ಸಿಗೋಣ,
ಪವನಜ

ಸಂಪದದಲ್ಲಿ ಬದಲಾವಣೆ

ಸಂಪದದ ಯುಗಾದಿ ಬದಲಾವಣೆ ನಂತರ ಪುಟ ಹೆಚ್ಚು ಬಳಕೆದಾರಸ್ನೇಹಿಯಾಗ ಬಹುದೆಂದು ನಿರೀಕ್ಷಿಸಿದವರಿಗೆ ನಿರಾಶೆಯಾಗಿರಬಹುದು. ಚಿತ್ರಗಳನ್ನು ಸೇರಿಸಲು,ಕೊಂಡಿಗಳನ್ನು ನೀಡಲು ಹಿಂದೆ ಲಭ್ಯವಿದ್ದ ಸಾಧನಗಳು ಈಗ ಮಾಯವಾಗಿವೆ. ಈಗೇನಿದ್ದರೂ ಟ್ಯಾಗ್‍ಗಳ ಬಳಕೆ ಮಾಡಬೇಕು. ನೀವಿದನ್ನು ಗಮನಿಸಿದ್ದೀರಾ?ನಿಮ್ಮ ಪ್ರತಿಕ್ರಿಯೆಯಿದೆಯೇ?

ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು

ಇಂಗ್ಲಿಸಿನಲ್ಲಿ ಐದು ಸ್ವರಗಳಿವೆ ಅಲ್ಲವೇ,

a,e,i,o,u

ಇವು ಕನ್ನಡದ ಅ,ಎ,ಇ,ಒ, ಮತ್ತು ಉ ಗಳಿಗೆ ಸಮನಾದವು. ಆದರೆ ಕನ್ನಡದಲ್ಲಿ ಎಳೆದು ಆಡಲು ಇನ್ನೊಂದು ಬಗೆಯ ಸ್ವರಗಳು ಬರುತ್ತವೆ. ಹ್ರುಸ್ವ ಮತ್ತು ದೀರ್ಘ ಅಂತಾರಲ್ಲ, ಅದು.

ಅ-ಆ,ಇ-ಈ,ಉ-ಊ,ಎ-ಏ,ಒ ಮತ್ತು ಓ. ಒಟ್ಟು ಹತ್ತಾಯ್ತು. ಉಳಿದ ಐ,ಔ,ಅಂ ಮತ್ತು ಅಃ ಗಳನ್ನು ವೆಂಜನಗಳನ್ನು ಬಳಸಿಯೇ ಬರೆಯಬಹುದು. ಅಯ್, ಅವ್, ಅಮ್, ಮತ್ತು ಅಹ.

ಉಡುಗೊರೆಯೊಂದಾ ತಂದ ಎನ್ನಯ ಮನದಾನಂದ ... (ರಾಗ ಮೋಹನ - ಭಾಗ ೩)

ಕಳೆದ ಕಂತಿನಲ್ಲಿ ಮೋಹನ ರಾಗದ ಬಗ್ಗೆ ಸ್ವಲ್ಪ ಹೇಳಿದ್ದೆ. ಈ ಕಂತಿನಲ್ಲಿ ಇನ್ನು ಕೆಲವು ಮಧುರ ಗೀತೆಗಳೊಂದಿಗೆ ಮೋಹನದ ಮೋಹದಲ್ಲಿ ಬೀಳೋಣ. ಕಳೆದ ಬಾರಿ ಬರೀ ರಾಗದ ಆರೋಹಣ ಅವರೋಹಣವನ್ನು ಮಾತ್ರ ಕೊಟ್ಟಿದ್ದೆ. ವೈಭವ ಅವರು ಅಷ್ಟೇ ಸಾಕೇ ರಾಗವನ್ನು ಗುರುತಿಸಲು ಎಂದು ಕೇಳಿದ್ದರು. ನಿಜವಾಗಿ ಹೇಳಿದರೆ. ಅಷ್ಟೇ ಸಾಲದು. ಹಾಗಾಗಿ, ಈ ಬಾರಿ ಆ ವಿಷಯವನ್ನು ಸ್ವಲ್ಪ ಹೇಳುವೆ.

ತಲೆಯೊಳಗೊಂದು ನಿಮ್ಮದೇ ಅರ್ಥಕೋಶ

ಭಾರತೀಯ ರಂಗಭೂಮಿಯಲ್ಲಿ ಹೆಗ್ಗುರುತು ಮೂಡಿಸಿ ಹೋದ ಬಿ.ವಿ.ಕಾರಂತರು ಪದದ ಅರ್ಥದ ಬಗ್ಗೆ ಮಾತನಾಡುತ್ತಾ "ಅರ್ಥಕೋಶದಲ್ಲಿನ ಅರ್ಥಗಳು ನಾಟಕಮಾಡುವವರಿಗೆ ಏನೇನೂ ಸಾಲದು" ಎಂದು ಹೇಳುತ್ತಿದ್ದರು. ನಾಟಕದಲ್ಲಿ ಪದಗಳನ್ನು ಹೇಳುವಾಗ ಅದರ ತದ್ವಿರುದ್ಧವಾದ ಅರ್ಥ ಬರುವ ಹಾಗೆ ಹೇಳಬಹುದು. ಅಷ್ಟೇ ಅಲ್ಲ, ನೇರಾರ್ಥ, ತದ್ವಿರುದ್ಧಾರ್ಥದ ನಡುವೆ ಹತ್ತು ಹಲವಾರು ವಿವಿಧಾರ್ಥಗಳನ್ನೂ ಪದಗಳಿಗೆ ತುಂಬಬಹುದು. ಮತ್ತು ಮೂಲಾರ್ಥದಲ್ಲಿ ಇಲ್ಲದ ಅರ್ಥವನ್ನು ನುಡಿಯ ರೀತಿಯಲ್ಲಿ ಮತ್ತು ನುಡಿಯ ಸಂದರ್ಭದಲ್ಲಿ ಆರೋಪಿಸಬಹುದು. ಹಾಗಾಗಿ ನಟರಿಗೆ ಪದದ ಅರ್ಥ ಎನ್ನುವುದು ಪ್ರತಿನಿತ್ಯ ಎದುರಿಸಬೇಕಾದ ಒಂದು ಚಲನಶೀಲ ಅಂಶ.
ಕುರ್ತುಕೋಟಿಯವರು ತಮ್ಮ ಪ್ರಬಂಧ ಒಂದರಲ್ಲಿ ಸ್ವಾತಂತ್ಯ್ರ ಎಂಬ ಪದಕ್ಕೆ ಹೇಗೆ ಅರ್ಥ ಬದಲಾವಣೆಯಾಗುತ್ತಿದೆ ಎಂದು ನಿರೂಪಿಸುತ್ತಾರೆ. ಸ್ವಾತಂತ್ಯ್ರಪೂರ್ವದಲ್ಲಿ ಆ ಪದಕ್ಕಿದ್ದ ಅರ್ಥಕ್ಕೂ, ನಂತರ ಪ್ರತಿದಶಕದಲ್ಲೂ ಅದರ ಅರ್ಥ ಬದಲಾಗತ್ತಿರುವುದನ್ನು ನಮ್ಮ ಅವಗಾಹನೆಗೆ ತರುತ್ತಾರೆ. ಮತ್ತೊಂದು ಕಡೆ, "ಬಂಗಾರ" ಒಂದು ವಸ್ತುವಿಗಿಂತ ಅದರ ಮೂಲಸತ್ವಕ್ಕಿರುವ ಪದ ಎಂದು ಹೇಳುತ್ತಾರೆ. ಪದದ ಅರ್ಥಪಲ್ಲಟವಾಗುವುದು ಒಂದು ಭಾಷಾ ಸಮುದಾಯದ ಬೆಳವಣಿಗೆಯಲ್ಲಿ ಅನಿವಾರ್ಯವೇನೋ. ಹಾಗೆಯೇ ಆ ಪಲ್ಲಟಗಳನ್ನು ಗಮನಿಸುವುದು ಕೂಡ ಆ ಸಮುದಾಯದ ಬಗ್ಗೆ ನಮಗೆ ಹೊಳಹುಗಳನ್ನು ಕೊಡುತ್ತದೆ.
ಸುಮಾರು ಎರಡು-ಮೂರು ವರ್ಷದ ಕೆಳಗೆ ಆಸ್ಟ್ರೇಲಿಯಾದ ಸರ್ಕಾರಿ ರೇಡಿಯೋ 'ಎಬಿಸಿ'ಯಲ್ಲಿ ಕಾಲ್‌ಬ್ಯಾಕ್ ಕಾರ್ಯಕ್ರಮವನ್ನು ಕೇಳುತ್ತಿದೆ. ಅಂದು "ಜೇಡರಬಲೆ" ಎಂಬ ಪದದ ಬಗ್ಗೆ ಮಾತುಕತೆ ನಡೆದಿತ್ತು. "ಕಾಬ್‌ವೆಬ್‌" ಮತ್ತು "ಸ್ಪೈಡರ್‌ ವೆಬ್‌" ಎರಡೂ ಒಂದೇ ವಸ್ತುವಿಗೆ ಸಂಬಂಧಪಟ್ಟಿದ್ದರೂ ಯಾವ ಯಾವ ಸಂದರ್ಭದಲ್ಲಿ ಅವುಗಳನ್ನು ಉಪಯೋಗಿಸುತ್ತೀರ ಎಂಬುದು ಚರ್ಚಾ ವಿಷಯವಾಗಿತ್ತು. ಹಲವಾರು ಜನರು ಕರೆಮಾಡಿ ತಮ್ಮ ವಿಚಾರಗಳನ್ನು ಹೇಳುತ್ತಿದ್ದರು. ಮನೆಯ ಹೊರಗಿದ್ದರೆ ಸ್ಪೈಡರ್‌ವೆಬ್‌, ಒಳಗಿದ್ದರೆ ಕಾಬ್‌ವೆಬ್‌ ಎಂದು ಕೆಲವರು ಹೇಳಿದರೆ, ಅದಕ್ಕೆ ತದ್ವಿರುದ್ಧವಾದ ಅರ್ಥದಲ್ಲಿ ಬಳಸುತ್ತೇವೆ ಎಂದು ಇನ್ನು ಕೆಲವರು ಹೇಳುತ್ತಿದ್ದರು. ಕಾಬ್‌ ಎಂಬುದು ಚಕ್ರದ ಪದವಾದ್ದರಿಂದ ಸ್ಪೈಡರ್‌ವೆಬ್‌ ಅದು ಚಕ್ರದ ರೂಪದಲ್ಲಿಲ್ಲದಾಗ ಎಂದು ಕೆಲವರು ಹೇಳಿದರು. ಧೂಳು ಹಿಡಿದಿದ್ದರೆ ಕಾಬ್‌ವೆಬ್‌ ಇಲ್ಲದಿದ್ದರೆ ಸ್ಪೈಡರ್‌ವೆಬ್‌. ಜೇಡ ಇನ್ನೂ ಅಲ್ಲಿದ್ದರೆ ಸ್ಪೈಡರ್‌ ವೆಬ್‌ ಇಲ್ಲದಿದ್ದರೆ ಕಾಬ್‌ವೆಬ್‌ ಎಂದು ಉಪಯೋಗಿಸುತ್ತೇವೆ ಎಂದು ಕೆಲವರು ವಿವರಿಸಿದರು. ಮರಗಿಡಗಳಂಥ ಪ್ರಾಕೃತಿಕ ಪರಿಸರದಲ್ಲಿದ್ದರೆ ಸ್ಪೈಡರ್‌ವೆಬ್‌, ಕುರ್ಚಿ, ಮೇಜು, ಕಿಟಕಿಯಂಥ ಮಾನವ ನಿರ್ಮಿತ ವಸ್ತುಗಳಿಗೆ ಕಟ್ಟಿದರೆ ಕಾಬ್‌ವೆಬ್‌ ಎಂದು ಇನ್ನು ಕೆಲವರು ಅರ್ಥೈಸಿದರು.
ಒಟ್ಟಾರೆ, ಇದು ಯಾವ ಪದಕ್ಕೆ ಯಾವ ಅರ್ಥ ಸರಿ ಯಾವುದು ತಪ್ಪು ಎಂಬ ಚರ್ಚೆ ಆಗಿರಲಿಲ್ಲ. ಒಂದು ರೀತಿಯಲ್ಲಿ ನೋಡಿದರೆ ಅದರ ಬಗ್ಗೆ ಚರ್ಚೆಯೇ ಬೇಕಾಗಿರುವುದಿಲ್ಲ. ಅರ್ಥಕೋಶ ತೆಗೆದು ನೋಡಿಬಿಟ್ಟರೆ ಸಾಕು. ಆದರೆ ಯಾರಿಗೆ ಯಾವಾಗ ಯಾವ ಪದಕ್ಕೆ ಯಾವ ಅರ್ಥ ಸರಿಯೆನಿಸುತ್ತದೆ ಎಂಬುದನ್ನು ಹೇಳುತ್ತಾ ಜತೆಜತೆಗೆ ಕಾರ್ಯಕ್ರಮ ನಡೆಸಿಕೊಡುವವ ಯಾಕೆ ಅವರಿಗೆ ಹಾಗೆನಿಸುತ್ತದೆ ಎಂದು ಮಾತನಾಡಿಸುತ್ತಾ ಅವರ ಜೀವನದ ಮತ್ತು ಭಾವನೆಗಳ ವಿವರವನ್ನು ಹೇಳುವಂತೆ ಪ್ರೇರೇಪಿಸುತ್ತಿದ್ದ. ಹಾಗಾಗಿ ಆ ಕಾರ್ಯಕ್ರಮ ಪದಗಳ ಬಗ್ಗೆಯಾದರೂ ನಿಜವಾಗಿಯೂ ಬದುಕುಗಳ ಬಗ್ಗೆಯೇ ಆಗಿತ್ತು!

ನನ್ನ ಮೆಚ್ಚಿನ ಪುಸ್ತಕ

ನಾನು ಓದಿದ ಹಲವಾರು ಪುಸ್ತಕಗಳ ಪೈಕಿ ನನ್ನ ಮೇಲೆ ಸತ್ಪರಿಣಾಮ ಬೀರಿದ್ದು ಶ್ರೀ ಪರಮಹಂಸ ಯೋಗಾನಂದರ "ಯೋಗಿಯ ಆತ್ಮಕತೆ". Autobiography of a Yogi ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ಪ್ರಕಟಗೊಂಡ ಈ ಪುಸ್ತಕ 60 ವರ್ಷಗಳ ನಂತರವೂ ವಿಶ್ವದಾದ್ಯಂತ ಪ್ರಸಿದ್ದವಾಗಿದೆ. ಬಹುತೇಕ ಎಲ್ಲಾ ಭಾರತೀಯ ಹಾಗು ವಿಷ್ವದ ಪ್ರಮುಖ ಭಾಷೆಗಳಿಗೆ ಅನುವಾದಗೊಂಡಿದೆ.