"ಎಲ್ಲಿ, ಬೇಗ್ ಬೇಗ್ ಹೇಳಿ ಏಳಿ ಸಾರ್!"
ಅಮ್ಮನಿಗೆ ಹುಷಾರಿಲ್ಲದ ಕಾರಣ ಒಬ್ಬನೇ ಹತ್ತಿರದ ಒಂದು ಹೋಟೆಲಿಗೆ ತೆರಳಿ ರಾತ್ರಿಯ ಊಟ ಮಾಡಬೇಕಿತ್ತು. ಸ್ವಾತಂತ್ರ್ಯದಿನವನ್ನು ಬಾಯ್ಚಪಲ ಸ್ವಾತಂತ್ರ್ಯಕ್ಕೆ ಮುಡುಪಾಗಿಟ್ಟು ಹೊರಬಂದ ಬೆಂಗಳೂರು ಜನರ ಕಾರಣ ಇಂದು ಎಲ್ಲೆಲ್ಲಿಯೂ ಹೋಟೆಲುಗಳು "ಹೌಸ್ ಫುಲ್", ಸೀಟ್ಸ್ ಫುಲ್! ನಿಂತುಕೊಳ್ಳಲೂ ಜಾಗವಿಲ್ಲದಂತೆ.
ಹತ್ತಿರದ ಬನಶಂಕರಿಯಲ್ಲಿರುವ ನನ್ನ ನೆಚ್ಚಿನ ಒಂದು ಹೋಟೆಲಿಗೆ ಹೋದರೆ ಇದೇ ಪರಿಸ್ಥಿತಿಯಾಗಿತ್ತು. ಇಲ್ಲಿ ದೂರ ದೂರಕ್ಕೂ ೯.೪೫ರ ಸಮಯದಲ್ಲೂ ಊಟ ಸಿಗುವುದು ಇಲ್ಲೊಂದೇ ಕಡೆ. ಅಲ್ಲಿದ್ದ ವೇಯ್ಟರು ಸಾಹೇಬ "ಅಲ್ಲೊಂದು ಕಡೆ ಖಾಲಿ ಇದೆ ಸಾರ್" ಎಂದು ಇಬ್ಬರಾಗಲೇ ಕುಳಿತಿದ್ದ ನಾಲ್ಕು ಸೀಟಿನ ಮೇಜಿನ ಕಡೆ ಕೈ ತೋರಿಸಿದ. "ತೊಂದರೆಯಿಲ್ಲವಾ?" ಎಂದು ಸೌಜನ್ಯವಾಡಿ, ಕುಳಿತಿರುವವರಿಗೂ ಒಮ್ಮೆ ಅನುಮತಿ ಕೇಳಿ ಅದೇ ಸೌಜನ್ಯದಿಂದ ಕುಳಿತು ಮೆನು ಕೈಯಲ್ಲಿ ಹಿಡಿದದ್ದೇ ತಡ, ಹೊಸಬನಂತಿದ್ದ ಒಬ್ಬ ವೇಯ್ಟರ್ ಓಡಿ ಬಂದು "ಎಲ್ಲಿ ಬೇಗ್ ಬೇಗ್ ಹೇಳಿ ಏಳಿ ಸಾರ್!" ಅಂದುಬಿಡುವುದೆ?
- Read more about "ಎಲ್ಲಿ, ಬೇಗ್ ಬೇಗ್ ಹೇಳಿ ಏಳಿ ಸಾರ್!"
- 1 comment
- Log in or register to post comments