ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾವೇರಿ ಪ್ರತಿಭಟನೆ ಮತ್ತು ಕರಾವಳಿ ಜಿಲ್ಲೆಗಳು

ಕಾವೇರಿ ನ್ಯಾಯ ಮಂಡಳಿಯ ತೀರ್ಪು ಬಂದ ನಂತರ 'ಕರ್ನಾಟಕಾದ್ಯಂತ ಪ್ರತಿಭಟನೆಗಳು ನಡೆದವು' ಆದರೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮಾತ್ರ ಇದಕ್ಕೆ ಸಂಬಂಧಿಸಿ ಏನೂ ನಡೆಯಲಿಲ್ಲ. ಸರಕಾರ ಪರೋಕ್ಷ ಬೆಂಬಲ ನೀಡಿದ್ದ ಬಂದ್ ನಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಭಾಗವಹಿಸಲಿಲ್ಲ. ಅರ್ಥಾತ್ ಯಾರೂ ಬಂದ್ ಮಾಡಲಿಲ್ಲ. ಇದೆಲ್ಲಾ ಏನನ್ನು ತೋರಿಸುತ್ತದೆ?

ಕರಾವಳಿ ಜಿಲ್ಲೆಗಳವರಿಗೆ ಕರ್ನಾಟಕದ ಹಿತದ ಕುರಿತು ಯಾವ ಕಾಳಜಿಯೂ ಇಲ್ಲವೇ?

ಈ ಮೊದಲು ವರ ನಟ ಡಾ.ರಾಜ್ ಕುಮಾರ್ ರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದಾಗಲೂ ಕರಾವಳಿ ಜಿಲ್ಲೆಗಳು ಹೆಚ್ಚು ಕಡಿಮೆ ಇಂಥದ್ದೇ ಪ್ರತಿಕ್ರಿಯೆಯನ್ನು ತೋರಿದ್ದವು. ಇದನ್ನು ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸಾ.ರಾ. ಗೋವಿಂದು ಅವರು ಕರಾವಳಿ ಜಿಲ್ಲೆಯ ಜನಗಳ ವರ್ತನೆಯನ್ನು ಖಂಡಿಸಿದ್ದರು. ಕಾವೇರಿ ವಿಷಯದಲ್ಲಿ ಕರಾವಳಿ ಜಿಲ್ಲೆಗಳ ಜನರು ತೋರಿಸಿದ ನಿರ್ಲಿಪ್ತ ಮನೋಭಾವವನ್ನೂ ಹಲವರು ಖಂಡಿಸಿದರು. ಆದರೆ ಇದು ಹಿಂದಿನಷ್ಟು ಸುದ್ದಿಯಾಗಲಿಲ್ಲ.

ಕರ್ನಾಟಕದ ಇತಿಹಾಸ ಮತ್ತು ರಾಜಕಾರಣದ ಕುರಿತು ಬಹಳ ಅಧ್ಯಯನ ನಡೆಸಿರುವ ಜೇಮ್ಸ್ ಮೇನರ್ ಕೂಡಾ ಒಮ್ಮೆ ಕರಾವಳಿ ಜಿಲ್ಲೆಗಳನ್ನು ಸೋಷಿಯಲೀ ಎಕ್ಸೆಂಟ್ರಿಕ್ ಡಿಸ್ಟ್ರಿಕ್ಟ್ಸ್ ಎಂದು ಹೇಳಿದ್ದರು. ಕರಾವಳಿ ಜಿಲ್ಲೆಗಳು ಕರ್ನಾಟಕದ ಮುಖ್ಯವಾಹಿನಿಯ ಜತೆಗೆ ಒಂದಾಗಿಲ್ಲ ಎಂಬುದನ್ನು ಈ ಎಲ್ಲಾ ಅಂಶಗಳು ಎತ್ತಿ ತೋರಿಸುತ್ತಿವೆ. ಆದರೆ ಇದರ ಕಾರಣಗಳು ಮೈನ್ ಲ್ಯಾಂಡ್ ಕರ್ನಾಟಕ ಎಂದು ಕರೆಯಬಹುದಾದ ಪ್ರದೇಶಗಳ ಸಾಮಾಜಿಕ ಮನಸ್ಥಿತಿಯಲ್ಲಿದೆ ಎಂದು ನನಗನ್ನಿಸುತ್ತದೆ.

ಅನುಭವಾಮೃತ

ಸುಲಿದ ಬಾಳೆಯ ಹಣ್ಣಿನಂದದಿ
ಕಳಿದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮುಕ್ತಿಯ
ಗಳಿಸಿಕೊಂಡರೆ ಸಾಲದೇ?

ಮೋಜು-ಗೋಜು: ಕಪ್ಪು ಕುಂಕುಮ...

ಮೊನ್ನೆ ಟಿವಿಯಲ್ಲಿ ಮಕ್ಕಳ ಕಾರ್ಯಕ್ರಮವೊಂದರಲ್ಲಿ ಇಂಗ್ಲೀಷಿನ ನಾಲಗೆ ತಿರುಚೊಂದು (ಟಂಗ್ ಟ್ವಿಸ್ಟರ್) ಬರುತ್ತಿತ್ತು. "ಬಿಟ್ಟಿ ಬಾಟ್ ಸಮ್ ಬಟರ್, ಬಟ್ ದ ಬಟರ್ ವಾಸ್ ಬಿಟ್ಟರ್..." ಹೀಗೆ ಸಾಗುತ್ತದೆ ಆ ಸಾಲು. ಆಗ ನನ್ನ ಗಮನ ಕನ್ನಡದಲ್ಲಿನ ನಾಲಗೆ ತಿರುಚುಗಳ ಬಗ್ಗೆ ಹರಿಯಿತು. ನನಗೆ ಕನ್ನಡದ ಎರಡು ಸರಳವಾದ, ಆದರೆ ಬಹಳ ಸೊಗಸಾದ ನಾಲಗೆ ತಿರುಚುಗಳು ಗೊತ್ತು.

೧. ಕಪ್ಪು ಕುಂಕುಮ, ಕೆಂಪು ಕುಂಕುಮ
೨. ಕಾಗೆ ಪುಕ್ಕ, ಗುಬ್ಬಿ ಪುಕ್ಕ

ಎಲ್ಲಿ, ಮೇಲಿನ ಸಾಲುಗಳಲ್ಲಿ ಯಾವುದಾದರೂ ಒಂದನ್ನು ವೇಗವಾಗಿ ಹೇಳಲು ಪ್ರಯತ್ನಿಸಿ. ನಿಧಾನವಾಗಿ ಹೇಳಿದರೆ ಏನೂ ಗಮ್ಮತ್ತಿರುವುದಿಲ್ಲ. ಸಾಧ್ಯವಾದಷ್ಟೂ ವೇಗವಾಗಿ ಹೇಳಬೇಕು. ಆದರೆ, ವೇಗ ಹೆಚ್ಚಿಸಬೇಕೆ ಹೊರತು ಪದಗಳು ಕಲಸಿಕೊಂಡು ಹೋಗಬಾರದು; ನಾಲಗೆ ತಡವರಿಸಬಾರದು. ಇದು ನಾಲಗೆ ತಿರುಚುಗಳ ಮೂಲ ನಿಯಮ. ಸುಮಾರು ಮೂರು ಅಥವ ನಾಲ್ಕನೇ ಸಾರಿ ವೇಗವಾಗಿ ಹೇಳುವಷ್ಟರಲ್ಲಿ ನಿಮ್ಮ ನಾಲಗೆ ಹೇಗೆ ತೊಡರಿಕೊಳ್ಳುತ್ತೆ ಅಂತ ನೀವೇ ಅನುಭವಿಸಿ, ಆನಂದಿಸಿ! ಅಂದಹಾಗೆ, ಈ ತಮಾಷೆಯ ನಾಲಗೆ ತಿರುಚಿನ ಆಟ ಹೇಗಿತ್ತು ಅಂತ ಹೇಳೋದನ್ನು ಮರೆಯದಿರಿ.

ಮೇಲಿನ ಸಾಲುಗಳು ನೋಡಲು ಎಷ್ಟು ಚಿಕ್ಕದಾಗಿ, ಸರಳವಾಗಿ ಕಂಡರೂ, ಅದರ ಪೂರ್ಣ ರೂಪ ನಮ್ಮ ಅರಿವಿಗೆ ಬರುವುದು ವೇಗವಾಗಿ ಹೇಳಿದಾಗ ಮಾತ್ರ.

ಆದರೆ, ಬೇಸರವಾಗುತ್ತಿರುವ ವಿಚಾರವೆಂದರೆ ನನಗೆ ಕನ್ನಡದಲ್ಲಿ ಈ ರೀತಿಯ ಒಂದೆರಡು ನಾಲಗೆ ತಿರುಚುಗಳು ಮಾತ್ರ ಗೊತ್ತು. ನಿಮ್ಮಲ್ಲಿ ಯಾರಿಗಾದರೂ ಇನ್ನೂ ಹಲವಾರು ಕನ್ನಡದ ನಾಲಗೆ ತಿರುಚುಗಳು ತಿಳಿದಿದ್ದಲ್ಲಿ, ದಯವಿಟ್ಟು ಹಂಚಿಕೊಳ್ಳುತ್ತೀರಾ?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೂ ನಾಯಿಯೂ

ಕೊನೆಗೂ ಬೆಂಗಳೂರು ಮಹಾನಗರ ಪಾಲಿಕೆಯು ನಾಯಿಗಳ ಮಹಾ ಮಾರಣ ಹೋಮಕ್ಕೆ ಸಜ್ಜಾಗಿದೆ.. ದುಃಖದ ವಿಷಯವೆಂದರೆ ಮನೇಕಾ ಗಾಂಧಿಯವರು ನಾಯಿಗಳನ್ನು ಸಾಯಿಸ ಬಾರದೆಂದು ಹೇಳಿದ್ದಾರೆ. ಅಂದರೆ ಮಕ್ಕಳ ಜೀವಕ್ಕಿಂತ ನಾಯಿಗಳ ಜೀವ ಅಮೂಲ್ಯವಾದದ್ದು. ಇಲ್ಲಿ ಮುಖ್ಯವಾಗಿ ನಾವು ಚಿಂತಿಸಬೇಕಾದ ವಿಷಯ ನಾಯಿಗಳು ಯಾಕೆ ಮಕ್ಕಳ ಮೇಲೆ ದಾಳಿ ಮಾಡುತ್ತಿವೆ? ಇಂದಿನ ನಗರ ಜೀವನದಲ್ಲಿ ಪ್ರಿಡ್ಜ ಸಂಕೃತಿಯಲ್ಲಿ ,ಕಸದ ತೊಟ್ಟಿ ಕಾಣೆಯಾಗುತ್ತಿರುವ ಈ ದಿನಗಳಲ್ಲಿ ಅವಕ್ಕೆ ಸಾಕಷ್ಟು ಆಹಾರ ಸಿಗುತ್ತಿಲ್ಲ. ಅಲ್ಲದೇ ನಗರ ಪಾಲಿಕೆಯವರೇ ಹೇಳುವಂತೆ ಮಾಂಸದ ಅಂಗಡಿಯವರು ಚುರು ಪಾರುಗಳನ್ನು ಬಿಸಾಡಿ ಅವನ್ನು ರಕ್ತಪಿಪಾಸುಗಳನ್ನಾಗಿ ಮಾಡಿರುವದು.

ನಮಸ್ತೆ

ನಮಸ್ಕಾರ,
ಸಂಪದವನ್ನು ತುಂಬಾ ಚೆನ್ನಾಗಿ ನಡೆಸುತ್ತಿರುವ ಆಡಳಿತ ವರ್ಗದವರಿಗೂ, ಪಾಲ್ಗೊಳ್ಳುತ್ತಿರುವ ಸಹೃದಯಿ ಮಿತ್ರರಿಗೂ ವಂದನೆಗಳು.

ವಿಶ್ವ ಗೋ ಸಮ್ಮೇಳನ -ಶ್ರೀ ರಾಮಚ೦ದ್ರಾಪುರ ಮಠ, ಹೊಸನಗರ,ಶಿವಮೊಗ್ಗ ಜಿಲ್ಲೆ

ಜಗದೊಳಿತಾಗಿ ಜಗನ್ಮಾತೆಯ ಜಾಗತಿಕ ಹಬ್ಬ "ವಿಶ್ವ ಗೋ ಸಮ್ಮೇಳನ" ಎಪ್ರೀಲ್  ತಿ೦ಗಳ 21 ರಿ೦ದ 29, 2007 ರವರೇಗೆ ಶ್ರೀ ರಾಮಚ೦ದ್ರಾಪುರ ಮಠ, ಶಿವಮೊಗ್ಗ ಜಿಲ್ಲೆ, ಕರ್ನಾಟಕ ಇಲ್ಲಿ  ಶ್ರೀಮಜ್ಜಗದ್ಗುರು ಶ೦ಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸ೦ಕಲ್ಪ ಮತ್ತು ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.

ಪುಸ್ತಕನಿಧಿ(೩) - ಪ್ರಾಣ ಹೋಗುವಾಗ ಪ್ರಾಣಾಯಾಮವೇ?

ಇದೇನು ಗಾದೇ ಮಾತು ಅಂದ್ಕೊಂಡ್ರಾ? ಅಲ್ಲ.
ಡಿಜಿಟಲ್ ಲೈಬ್ರರಿ ತಿರುವಿ ಹಾಕುವಾಗ ಒಂದು ಪುಸ್ತಕ ಸಿಕ್ಕಿತು . ವಿಷಯ ಗಂಭೀರವಾದದ್ದೇ. ಆದರೆ ಮೊದಲ ಕೆಲವು ಸಾಲು ನೋಡಿ ನಗು ತಡೆಯಲಿಕ್ಕಾಗಲಿಲ್ಲ.

ಕೆಲವು ಸುಭಾಷಿತಗಳು

ನಾನು ರೂಪಾಂತರಿಸಿದ (ಭಾಷಾಂತರ ಎನ್ನುವುದಕ್ಕಿಂತ ಇದು ಉತ್ತಮ ಪದವೇನೋ ಎಂಬುದು ನನ್ನ ಭಾವನೆ) ಕೆಲವು ಸಂಸ್ಕೃತ ಸುಭಾಷಿತಗಳು ಇಲ್ಲಿವೆ. ಓದಿ ನೋಡಿ, ಏನೆನಿಸಿತೋ ತಿಳಿಸಿ; ಕೆಲವು ಮೂಲ ಶ್ಲೋಕಗಳನ್ನೂ, ಕನ್ನಡ ಲಿಪಿಯಲ್ಲೇ ಸೇರಿಸಿದ್ದೇನೆ. ಇದು ದೇವನಾಗರಿಯಲ್ಲಿದ್ದರೆ ಒಳಿತೇನು? ತಿಳಿಸಿ. ಮಿಕ್ಕ ಶ್ಲೋಕಗಳನ್ನೂ ಒಂದೊಂದಾಗಿ ಸೇರಿಸುತ್ತೇನೆ.

----------------------------------------------------------------------------------------- 

ಉದ್ಯಮೇ ನ್ ಹಿ ಸಿದ್ಧ್ಯಂತಿ ಕಾರ್ಯಾಣಿ ನ  ಮನೋರಥೈಃ|

ನ  ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಸಂತಿ ಮುಕೇ ಮೃಗಾಃ||                                              

ಮನಕೆ ಬಂದ ಮಾತ್ರಕೆ
ಕಾರ್ಯಗತವಾದೀತೇ ?
ಮಲಗಿದ ಸಿಂಹದ ಬಾಯಿಗೆ
ಜಿಂಕೆ ಬಂದು ಬಿದ್ದೀತೇ ?
------------------------------------------------------------
ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ |                                                          ಯೋ ನ ದದಾತಿ ನ ಭುಂಕ್ತ್ತೇ ತಸ್ಯ ತೃತೀಯಾ ಗತಿರ್ಭವತಿ||

ಅನುಭವಿಸು ಇಲ್ಲ ದಾನ ಕೊಡು ಅಥವ
ವಿನಾಶವೆಂದು ಹಣಕಿದೆ ಮೂರು ಗತಿ
ಒಂದನೆಯದು ಎರಡನೆಯದೂ ಮಾಡದೆ
ಹೋದರೆ ಮೂರನೆ ಗತಿಯೇ ಪ್ರಾಪ್ತಿ
------------------------------------------------------------
ಇರಲಿ ಆಸಕ್ತಿ ಸಾಹಿತ್ಯ ಸಂಗೀತ
ಅಥವಾ ಇನ್ನಾವುದೋ ಕಲೆಯ ಮೇಲೆ
ಇಲ್ಲದೆ ಹೋದರೆ ಅವ ಪಶುವೇ ಸರಿ
ಬಾಲ ಕೊಂಬು ಎರಡಿಲ್ಲದೆಲೆ!
ಹುಲ್ಲನು ತಿನ್ನದೇ ಜೀವಿಸಬಲ್ಲವ
-ನೆಂಬುದೆ ಪುಣ್ಯ ಪ್ರಾಣಿಗಳಿಗೆ!

------------------------------------------------------------
ನೀಚರಿಗೆ ಮಾಡಿದುಪಕಾರ
ಆಗೇ ಆಗುವುದು ಅಪಕಾರ
ಹಾವಿಗೆ ಕುಡಿಸಿದ ಹಾಲು ಸಹ
ಆಗುವುದಲ್ಲವೆ ಘೋರ ವಿಷ
---------------------------------------------------------------
ಗುಣಗಳ ಗುಂಪಲಿ ಒಂದೇ ಕೊರತೆ
ಚಂದ್ರನ ಬೆಳಕಲಿ ಕಲೆಯಂತೆ
ಮುಚ್ಚೀತೆಂದ ಕವಿ ತಾ ಕಾಣನು
ಲೋಕದ ನಿಜರೂಪದ ಮೋರೆ;
ಸಾವಿರ ಗುಣಗಳ ಮುಚ್ಚಿ ಹಾಕದೆ
ಬಡತನವೆಂಬೊಂದು ಕೊರೆ ?

----------------------------------------------------------------

ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನ ಚ ದೃಶ್ಯತೇ

ಬಾಲೇ ತವ ಮುಖಾಂಬೋಜೇ ದೃಶ್ಯಮಿಂದೀವರದ್ವಯಂ

ಕಮಲದಲಿ ಕಮಲ ಹುಟ್ಟಿದುದ
ಕಾಣೆನು ಕೇಳೆನು ಎನ್ನದಿರು
ಓ ಗೆಳತೀ ನಿನ್ನೀ ಮುಖಕಮಲದಲಿ
ಜನಿಸಿರಲು ಕಣ್ಣೆಂಬ ಕಮಲವೆರಡು

ಕೇಳಿರಿ ಚಿಂತೆಗೂ ಚಿತೆಗೂ
ವ್ಯತ್ಯಾಸವಂತೂ ಬರಿ ಸೊನ್ನೆ
ಸುಟ್ಟರೆ ಚಿತೆ ಹೋದವನನ್ನು
ಚಿಂತೆ ಸುಟ್ಟೀತು ಇದ್ದವನನ್ನೆ

ದುಷ್ಟರ ಜೊತೆಯಲಿ ದ್ವೇಷವು ಬೇಡ
ಮಾಡದಿರು ನೀ ಅತಿ ಪ್ರೀತಿ
ಕೆಂಡವು ಬಿಸಿಯಲಿ ಕೈಯನು ಸುಡುವುದು
ತಣಿದಿದ್ದರೆ ಆಗುವುದು ಮಸಿ

ಹಲ್ಲು ಉಗುರು ಕೂದಲು ಮನುಜರು
ಇರಬೇಕಾದಲ್ಲೆ ಶೋಭಿಪರು
ಅದಕೆಂದೇ ಉತ್ತಮ ಜನರು
ತಮ್ಮ ಸ್ಥಾನವ ಬಿಡದಿಹರು

ಚೇಳಿನ ವಿಷವದು ಬಾಲದ ಕೊಂಡಿಲಿ
ನೊಣಕ್ಕದು ಬಾಯಲ್ಲೆಲ್ಲಾ
ಹಾವಿನ ಹಲ್ಲಲಿ ತುಂಬಿದೆ ಆ ವಿಷ
ಕೆಟ್ಟವನಿಗೋ ಮೈಯಲ್ಲೆಲ್ಲಾ

ಲಕ್ಷ್ಮಿಯು ಬಳಿಯಿದ್ದವನರಿಯನು
ಪ?ರಿಗಾಗುವ ವೇದನೆ
ಭೂಮಿಯ ಭಾರವ ಹೊತ್ತಿರೆ ಶೇಷನು
ಮಲಗಿಹ ನಾರಾಯಣ ಸುಮ್ಮನೆ

ಸ್ವಯಂಪ್ರಜ್ಞೆ ಇಲ್ಲದವನಿಗೆ
ಕಲಿಕೆ ಏನು ಮಾಡೀತು ?
ಕಣ್ಣೇ ಇಲ್ಲದ ಹುಟ್ಟುಕುರುಡಗೆ
ಕನ್ನಡಿಯಿಂದೇನಾದೀತು ?

ಪ್ರಿಯವಾಕ್ಯ ಪ್ರದಾನೇನೆ ಸರ್ವೇ ತುಷ್ಯಂತಿ ಮಾನವಾಃ

ಏತದ್ ತದೈವ ವಕ್ತವ್ಯಮ್, ವಚನೇ ಕಿಮ್ ದರಿತ್ರತಾ?

ಒಳ್ಳೆಯ ಮಾತನು ಕೇಳಲು
ಎಲ್ಲರು ಸಂತಸ ಹೊಂದುವರು
ಅದಕೇ ಅಂಥಾ ಮಾತನೆ ನೀ ನುಡಿ
ಬರೀ ಮಾತಿಗೇನು ಬಡತನವು

ಕಟ್ಟಿಗೆಯಲ್ಲಿಲ್ಲ ಅವನು
ಕಲ್ಲಲಿ ಮಣ್ಣಲಿ ಅವನಿಲ್ಲ
ಮನದಲಿ ಇಹನು ಆ ಜಗದೊಡೆಯನು
ಭಾವವೆ ಎಲ್ಲಕು ಕಾರಣವು

ಕಾಕಃ ಕೃಷ್ಣಃ ಪಿಕ: ಕೃಷ್ಣಃ ಕೋ ಭೇದಃ ಪಿಕ ಕಾಕಯೋಃ?

ವಸಂತ ಕಾಲೇ ಸಂಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ 

ಕಾಗೆಯು ಕಪ್ಪು ಕೋಗಿಲೆ ಕಪ್ಪು
ಎಲ್ಲಿದೆ ಏನಿದೆ ವ್ಯತ್ಯಾಸ ?
ವಸಂತಕಾಲವು ಬಂದಿರೆ ತಾನು
ಆಗುವುದು ಖಂಡಿತ ಭಾಸ

-ಹಂಸಾನಂದಿ

ಇ-ಲೋಕ-12 (2/3/2007)

ಸಂಶೋಧನಾ ಪ್ರಬಂಧಗಳನ್ನು ಮುಕ್ತವಾಗಿ ಲಭ್ಯವಾಗಿಸಲು ಹೋರಾಟ
 ಸಂಶೋಧನಾ ಚಟುವಟಿಕೆಗಳು ಸಾಕಷ್ಟು ಬಾರಿ ಸರಕಾರದ ಅನುದಾನದೊಂದಿಗೆ ನಡೆಯುತ್ತವೆ. ಆದರೆ ಅವುಗಳ ಫಲಿತಾಂಶಗಳನ್ನೊಳಗೊಂಡ ಸಂಶೋಧನಾ ಪ್ರಬಂಧಗಳು ಪ್ರಕಾಶಕರ ಮೂಲಕ ಚಂದಾದಾರರಿಗೆ ಲಭ್ಯವಾಗುವುದೇ ಹೆಚ್ಚು. ಚಂದಾದಾರರು ದುಬಾರಿ ವಾರ್ಷಿಕ ಶುಲ್ಕ ಪಾವತಿಸಬೇಕಾಗುತ್ತದೆ. ಸರಕಾರ ಅನುದಾನ ಪಡೆದು ನಡೆಸಿದ ಸಂಶೋಧನಾ ಚಟುವಟಿಕೆಗಳನ್ನು ಸರ್ವರಿಗೆ ಲಭ್ಯವಾಗಿಬೇಕಾದ್ದು ನ್ಯಾಯ. ಇದನ್ನು ಮುಕ್ತವಾಗಿ ಒದಗಿಸಬೇಕು ಎಂದು ತಗಾದೆ ಹೂಡಿ,ಯುರೋಪಿಯನ್ ಒಕ್ಕೂಟದ ಆಯೋಗದ ಮುಂದೆ ದಾವೆ ಹೂಡಲಾಗಿದೆ.ಆಯೋಗವು ಸಂಶೋಧನಾ ಪ್ರಬಂಧಗಳ ಮುಕ್ತ ಲಭ್ಯತೆಗೆ ಅನುವು ಮಾಡುವ ದೃಷ್ಟಿಯಿಂದ ಈಗಾಗಲೇ ನೂರು ಮಿಲಿಯನ್ ಡಾಲರಿನ ಕೋಶವನ್ನು ಸ್ಥಾಪಿಸಿದೆ.        ವಿಶ್ವವಿದ್ಯಾಲಯದ ಸಂಶೋಧಕರು ತಮ್ಮ ಸಂಶೋಧನಾ ಪ್ರಬಂಧಗಳನ್ನು ಖಾಸಗಿಯವರು ನಡೆಸುವ ನಿಯತಕಾಲಿಕಗಳಲ್ಲಿ ಪ್ರಕಟಿಸುತ್ತಾರೆ. ನಂತರ ಈ ನಿಯತಕಾಲಿಕಗಳನ್ನು ವಿಶ್ವವಿದ್ಯಾಲಯದವರು ದುಡ್ಡು ತೆತ್ತು ಖರೀದಿಸಬೇಕಾಗುತ್ತದೆ.ಇದು ಬಹಳ ವರ್ಷಗಳಿಂದಲೂ ನಡೆದು ಬಂದಿರುವ ಸಂಪ್ರದಾಯ.ಹಾಗೆಂದು ಸ್ವೀಡನ್‌ನ ಸಂಸ್ಥೆಯೊಂದು ಈಗಾಗಲೇ ತನ್ನ ಪ್ರಬಂಧಗಳನ್ನು ಮುಕ್ತವಾಗಿ ಒದಗಿಸುತ್ತದೆ. ಕೆನಡಾದ ಸಂಸ್ಥೆಯೊಂದೂ ತನ್ನ ಸಂಶೋಧನಾ ಪ್ರಬಂಧಗಳನ್ನು ಉಚಿತವಾಗಿ ನೀಡುತ್ತಿದೆ. ಆದರೆ ಹೆಚ್ಚಿನ ಕಡೆ ಸಂಶೋಧನಾ ಪ್ರಬಂಧಗಳನ್ನು ಸಂಶೋಧಕರು ದುಬಾರಿ ಶುಲ್ಕ ಪಾವತಿಸಿಯೇ ಪಡೆಯಬೇಕಾದ್ದು ವಿಪರ್ಯಾಸ.